ಸಾಧಕನು ಸಾಧನೆಯ ಹೊರತಾಗಿ ಒಂದು ಕ್ಷಣವನ್ನೂ ಹಾಳುಮಾಡಬಾರದು. ಕಳೆದು ಹೋದ ಕ್ಷಣ ಏನೇ ಮಾಡಿದರೂ ತಿರುಗಿ ಪಡೆಯಲು ಶಕ್ಯವಿಲ್ಲ. ಆಯುಷ್ಯದಲ್ಲಿ ಒಂದು ಕ್ಷಣವನ್ನೂ ಸುಮ್ಮನೇ ಗೊಡ್ಡು ಹರಟೆಯಲ್ಲಿ ಕಳೆಯಬಾರದು.

(ಶ್ರೀ ಶಂಕರ ಪಂಡಿತ ಸಜ್ಜನಗಡ, ಅವರಿಗೆ ಬರೆದ ಪತ್ರ)

—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

                                ||ಶ್ರೀರಾಮ ಪ್ರಸನ್ನ ||

ಚಿ. ಶಂಕರ ಪಂಡಿತನಿಗೆ ಆಶೀರ್ವಾದ,

ಮಗಾ,

ಮೋಕ್ಷಸಂದೇಶ ಇನ್ನೊಮ್ಮೆ ಓದು. ಅದರಲ್ಲಿ ಸಾಧನೆಗಳನ್ನು ಕೊಟ್ಟದ್ದಿದೆ. ಸಾಧಕನು

‘ಅಖಂಡ ಏಕಾಂತ ಸೇವೆಯಲ್ಲಿರಬೇಕು| ಅಭ್ಯಾಸವನ್ನೂ ಮಾಡುತ್ತಿರಬೇಕು|’

‘ಯಾರಿಗೆ ಏಕಾಂತ ರುಚಿಸಿತೋ| ಎಲ್ಲವೂ ಮೊದಲೇ ಅರಿವಾಗುವದವನಿಗೆ|’

‘ಏಕಾಂತದ ಹೊರತು ಜೀವಿಗೆ| ಬುದ್ಧಿಯೆಂತು|’

ಈ ರೀತಿ ಏಕಾಂತದ ಮಹಿಮೆ ಶ್ರೀಸಮರ್ಥರು ಬಹಳ ಹಾಡಿದ್ದಾರೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

‘ಏಕಾಂತೇ ಸುಖಾಸ್ಯತಾಂ ಪರತರೇ ಚೇತಃ ಸಮಾಧೀಯತಾಮ್’

ಅತಿ ಮೆಚ್ಚುಗೆಯಿಂದ ಏಕಾಂತದಲ್ಲಿದ್ದು ಪರಮಾನಂದಸ್ವರೂಪದ ಸ್ಥಳದಲ್ಲಿ ಯಾವಾಗಲೂ ಸಮರಸವಾಗಿರಬೇಕು. ಯಾವುದೇ ತರದ ವೃತ್ತಿಯ ಸ್ಪಂದ ಆಗಲಿಕ್ಕೆ ಕೊಡಬಾರದು ಎಂದು ಶ್ರೀಮದ್ ಶಂಕರಾಚಾರ್ಯರೂ ಹೇಳಿದ್ದಾರೆ.

‘ಜನಕೃಪಾ ನೈಷ್ಠುರ್ಯಮುತ್ಸೃತಾಮ್’

ಸಾಧಕನಿಗೆ – ತಾನು ಎಲ್ಲರೊಂದಿಗೆ ಒಳ್ಳೆಯವನಾಗಿರಬೇಕು, ಒಳ್ಳೆಯತನ ಗಳಿಸಬೇಕು, ಎಲ್ಲರ ಇಷ್ಠದವನಾಗಿರಬೇಕು – ಈ ರೀತಿ ಒಂದು ಭಾವನೆ ಉತ್ಪನ್ನವಾಗಿ,

ಒಲುಮೆ ಸಂಪಾದಿಸಬೇಕೆಂದು ಅವರ ಹತ್ತಿರ ಹೋಗುವದು, ಇವರ ಹತ್ತಿರ ಹೋಗುವದು, ಅವರ ಸಂಗಡ ಮಾತನಾಡುವದು, ಇವರ ಸಂಗಡ ಮಾತನಾಡುವದು, ಹೀಗೆ ಮಾಡಲಿಕ್ಕೆ ಹತ್ತುತ್ತಾನೆ. ಜನರಿಗೆಂದು ಸಾಧಕನು ಏನೂ ಮಾಡಬಾರದು. ಜನಕೃಪೆಯನ್ನು ಗಳಿಸುವ ತವಕ ಇಟ್ಟುಕೊಳ್ಳಬಾರದು. ಮತ್ತು ಅದರಂತೆ ಯಾರಿಗೂ ಯಾವಾಗಲೂ ದುರ್ವಚನದಿಂದ ನಿಷ್ಠುರನೂ ಆಗಬಾರದು. ಎಲ್ಲರೊಂದಿಗೂ ಕೆಲಸಕ್ಕೆ ಆವಶ್ಯಕವಿದ್ದಷ್ಟು ಸ್ವಲ್ಪ ಆದರೆ ಸವಿ ಮಾತನಾಡಬೇಕು. ಕೆಲಸವಿಲ್ಲದಿದ್ದಾಗಲೂ ಎಲ್ಲರೊಂದಿಗೂ ಚೆನ್ನಾಗಿ ಇರಬೇಕು. ಆದ್ದರಿಂದಲೇ ಅಲ್ಲಿ ಇಲ್ಲಿ ಎಂದು ಸುಮ್ಮನೇ ತಿರುಗುತ್ತಿರಬಾರದು. ಯಾರೊಡನೆಯೂ ಹೆಚ್ಚಿನ ಪ್ರೀತಿ ಹಚ್ಚಿಕೊಳ್ಳಲು ಹೋಗಬಾರದು. ಯಾರಿದಾದರೂ ಪಕ್ಷ ಹಿಡಿದು ಮತ್ಯಾರಿದಾದರೂ ದ್ವೇಷ ಮಾಡಬಾರದು. ದ್ವೇಷ ಮತ್ತು ಪ್ರೇಮ ಯಾರಲ್ಲೂ ಇಡಬಾರದು. ಯಾರಿದೂ ಅತಿ ಪರಿಚಯ ಇಡಬಾರದು. ಅವರ ಗುಣಕ್ಕಿಂತ ಅವರ ದೋಷವೇ ಹೆಚ್ಚು ನಾಟುತ್ತದೆ. ಸಾಧನೆಯ ಹೊರತು ಇನ್ನಾವದೂ ಮಾತನಾಡಬಾರದು; ವಿಚಾರವನ್ನೂ ಮಾಡಬಾರದು. ಆತ್ಮರೂಪದ್ದೊಂದೇ ವಿಚಾರ ಇರಬೇಕು. ಸಾಧಕನು ಸಾಧನೆಯ ಹೊರತಾಗಿ ಒಂದು ಕ್ಷಣವನ್ನೂ ಹಾಳುಮಾಡಬಾರದು. ಕಳೆದು ಹೋದ ಕ್ಷಣ ಏನೇ ಮಾಡಿದರೂ ತಿರುಗಿ ಪಡೆಯಲು ಶಕ್ಯವಿಲ್ಲ. ಆಯುಷ್ಯದಲ್ಲಿ ಒಂದು ಕ್ಷಣವನ್ನೂ ಸುಮ್ಮನೇ ಗೊಡ್ಡು ಹರಟೆಯಲ್ಲಿ ಕಳೆಯಬಾರದು.

RELATED ARTICLES  ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ - 2)

(ಈ ಪತ್ರದ ಎರಡನೆಯ ಭಾಗ ಮುಂದುವರಿಯುವದು)