ಹಲ-ಕೆಲವರಂತೂ ಗುರುಗಳ ನಿಂದೆ ಮಾಡುವ ಮಹಾಪುರುಷರೂ ಇರುತ್ತಾರೆ. ಅವರ ಆ ಅನಿಷ್ಟ ಶಬ್ದ ಕಿವಿಯ ಮೇಲೆ ಬಿದ್ದು ಸುಮ್ಮನೇ ಯಾರಬಗ್ಗಾದರೂ ದ್ವೇಷ, ಸುಮ್ಮನೇ ಶ್ರೀಗುರುವಿನ ವಿಷಯದಲ್ಲಿ ಶಂಕೆ ಉತ್ಪನ್ನವಾಗಿ ಸಾಧಕನ ಉಜ್ವಲ ಭೂಮಿಕೆ ಮಲಿನವಾಗಹತ್ತುತ್ತದೆ.

((ಶ್ರೀ ಶಂಕರ ಪಂಡಿತ ಸಜ್ಜನಗಡ, ಅವರಿಗೆ ಬರೆದ ಪತ್ರದ ಎರಡನೆಯ ಭಾಗ)

—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

ಯಾರ ಕಡೆಯಾದರೂ ಹೋಗಿ ಕುಳಿತರೆ ಅಂದರೆ ಹರಟೆ, ಅವರಿವರ ಸುದ್ದಿ-ಸಮಾಚಾರ. ಹಲ-ಕೆಲವರಂತೂ ಗುರುಗಳ ನಿಂದೆ ಮಾಡುವ ಮಹಾಪುರುಷರೂ ಇರುತ್ತಾರೆ. ಅವರ ಆ ಅನಿಷ್ಟ ಶಬ್ದ ಕಿವಿಯ ಮೇಲೆ ಬಿದ್ದು ಸುಮ್ಮನೇ ಯಾರಬಗ್ಗಾದರೂ ದ್ವೇಷ, ಸುಮ್ಮನೇ ಶ್ರೀಗುರುವಿನ ವಿಷಯದಲ್ಲಿ ಶಂಕೆ ಉತ್ಪನ್ನವಾಗಿ ಸಾಧಕನ ಉಜ್ವಲ ಭೂಮಿಕೆ ಮಲಿನವಾಗಹತ್ತುತ್ತದೆ. ಮನಸ್ಸಿನ ಏಕಾಗ್ರತೆಯ ಅಭ್ಯಾಸ ಕಡಿಮೆಯಾಗಹತ್ತುತ್ತದೆ.

RELATED ARTICLES  ಬೈಕ್ ಅಡ್ಡಗಟ್ಟಿ ಹಣದೋಚಿ ಪರಾರಿ : ಶಿರಸಿಯಲ್ಲಿ ಮತ್ತೆ ದರೋಡೆ

‘ನನ್ನಂತೆಯೇ ಮಾಡುವೆ ತತ್ಕಾಲ!’

ಅತ್ಯಂತ ಕೆಳಸ್ಥರದ ಮನುಷ್ಯನಿಂದ ಆ ಬ್ರಹ್ಮರೂಪ ಸದ್ಗುರುವರೆಗಿನ ಎಲ್ಲ ಭೂಮಿಕೆಯ ಜನರಲ್ಲಿ ಈ ಸಾಮರ್ಥ್ಯ ಇರುತ್ತದೆ.

ಆದುದರಿಂದ ಪೂರ್ಣತ್ವಕ್ಕೆ ಮುಟ್ಟಿದ ವಿಭೂತಿಯ ಹೊರತು, ಸಾಧಕರೊಂದಿಗೂ ಅತಿಸಲಿಗೆ ಮಾಡಬಾರದು. ನಾಲ್ಕಾರು ಜನ ಸಾಧಕರು ಆತ್ಮವಿಚಾರ ಮಾಡುತ್ತ ಎಲ್ಲಿಯಾದರೂ ಕುಳಿತುಕೊಳ್ಳುತ್ತಿದ್ದರೂ ಸಹ, ಅವರು ಬೇಕಾದರೆ ಶ್ರವಣಕ್ಕೆ ಹೋಗಿ ಕುಳಿತುಕೊಳ್ಳಬೇಕು. ಅದಕ್ಕಿಂತಲೂ, ಯಾರ ಚಿತ್ತೇಕಾಗ್ರತೆ ಧ್ಯೇಯಸ್ಥಾನದಲ್ಲಿ ಆಗುತ್ತದೆಯೋ, ಅವರು, ಚಿತ್ತವನ್ನು ಧ್ಯೇಯಸ್ಥಾನದಲ್ಲಿ ವಿಲೀನ ಮಾಡಿ ನಿರ್ವಿಕಲ್ಪದ ಅಭ್ಯಾಸವನ್ನೇ ಹೆಚ್ಚಿಸುತ್ತಾ ಹೋಗಬೇಕು. ಅಂತವರಿಗೆ ಶ್ರವಣದ ಅವಶ್ಯಕತೆಯೂ ಇಲ್ಲ. ನಾವು ನಮ್ಮ ಅಭ್ಯಾಸ ಮತ್ತು ಉಳಿದಿಕೊಂಡಿರುವ ಸ್ಥಳ ಇದರ ಹೊರತು, ಅತ್ಯಂತ ಆವಶ್ಯಕ ಕೆಲಸದ ಹೊರತು, ಉಳಿದೆಡೆ ಎಲ್ಲೂ ಹೋಗಬಾರದು. ಬೇಕೆಂದೆನಿಸಿದರೆ ಜ್ಞಾನಪ್ರಧಾನ ಗ್ರಂಥವನ್ನು ಸ್ವಲ್ಪ ಹೊತ್ತು ಓದಬೇಕು. ಅದರಲ್ಲೂ ನಮ್ಮ ಅಭ್ಯಾಸಕ್ಕೆ ಅನುಕೂಲವಾಗಿರುವ ವಿಷಯವನ್ನೇ ಆರಿಸಿಕೊಂಡು ಓದಬೇಕು. ಯಾವುದೇ ಚಿಂತನ ಮಾಡದೇ, ಯಾವುದೇ ವಿಷಯವನ್ನು ನೆನಪಿಸಿಕೊಳ್ಳದೇ, ಯಾವುದೇ ವ್ಯಕ್ತಿ ಅಂತಃಶ್ಚಕ್ಷುವಿನ ಮುಂದೆ ಬರದಂತೆ, ಯಾವುದೇ ನೆನಪು ಆಗದಂತೆ, ವ್ಯಕ್ತಿಶೂನ್ಯ, ನಿರ್ವಿಕಲ್ಪವಾಗಿರುವ ಅಭ್ಯಾಸ ಏಕಾಂತದಲ್ಲಿದ್ದು ಅಹರ್ನಿಶಿ ಮಾಡಬೇಕು. ಶಂಕೆ -ಕುಶಂಕೆ – ಆಶಂಕೆ ಇವೆಲ್ಲ ವ್ಯರ್ಥ ಕಲ್ಪನೆಗಳು. ನಮ್ಮ ಕೇವಲ ಜ್ಞಾನಮಾತ್ರ, ಸ್ವತಃಸಿದ್ಧ, ಆನಂದರೂಪವು ಸದಾ ನಿರ್ವಿಕಲ್ಪ, ನಿವೃತ್ತಿಕ ಇದೆ ಎಂದು ಯಾವುದೇ ವೃತ್ತಿ ಏಳದಂತೆ ನಮ್ಮಲ್ಲೇ ಇದ್ದು, ಯಾವಾಗಲೂ ಅದ್ವಿತೀಯ, ನಿಷ್ಪ್ರಪಂಚ, ನಿರ್ವಿಕಲ್ಪ, ಸ್ವಯಂಪ್ರಕಾಶದ ಒಂದು ಆನಂದರೂಪವಾಗಿ ಸಮಾಧಿಯಲ್ಲಿರಬೇಕು.

RELATED ARTICLES  ಸೃಷ್ಟಿಯು ಹೇಗೆ ಆಯಿತು? (ಸದ್ಗುರು ಶ್ರೀಧರ ಸಂದೇಶ)

(ಈ ಪತ್ರದ ಮೂರನೆಯ ಭಾಗ ಮುಂದುವರಿಯುವದು)