ಎಲ್ಲರಿಗೂ ನಮಸ್ಕಾರ..ಕ್ಷಮಿಸುವಿರೆಂದೇ ನಂಬಿ..ಬರೆಯುವೆ..’ಹದಿ’ ಪ್ರಾರಂಭವೇ ಹಾಗೆ..ತೊಡಕಾಯಿತು..ಯಾಕೆಂದರೆ ನಿಮ್ಮ ಕಣ್ಣು ತಪ್ಪಿಸಿ..ಸಂಸಾರದೊಡನೆ ದೇವಳದರ್ಷನ ಮಾಡಿ ಬಂದೆ..ಎಲ್ಲ ಪಾಪಗಳೂ..ಪರಿಹಾರವಾದವು..ಇಂದಿನಿಂದ” ಪಾಪದ ಹೊಸಲೆಕ್ಕ..”
ನಮ್ಮ ಪುಸ್ತಕದ ಬಗ್ಗೆ ಹೇಳಲೇ ಇಲ್ಲ..ಅಗಸನಿಂದ ನಮ್ಮ ಅಕ್ಷರ ಯಾತ್ರೆ ಪ್ರಾರಂಭ..ಅರಸನಾಗಲೇ ಇಲ್ಲ.
ಅಗಸ..ಆನೆ ..ಇಲಿ..ಈಶ..ಉಳಿ..ಊಟ..ಋಷಿ..ಎತ್ತು..ಏಣಿ..ಐರಾವತ..ಒಲೆ..ಓಲಗ..ಔಷಧ.ಅಂಗಿ..ಇದನ್ನು ಬರೆದವರು..ಈಗನಿಸುತ್ತದೆ ಎಷ್ಟು ಚೆಂದ ಎಂದು..
ಕ್ರಮವಾಗಿ…ಶ್ರಮ..ದೊಡ್ಡ ಪ್ರಾಣಿ..ಸಣ್ಣಪ್ರಾಣಿ..ದೇವರು..ಆಯುಧ.. ಆಹಾರ..ಧ್ಯಾನ..ಅಡಿಗೆ..ವಾದ್ಯ..ಆರೋಗ್ಯ..ಬಟ್ಟೆ..ಹೀಗೆ ಬದುಕಿನ ಸಮಗ್ರ ಕಲ್ಪನೆ ನಮಗೆ ವರ್ಣಮಾಲೆಯ ಪ್ರಾರಂಭದಲ್ಲೇ ಬರುತ್ತಿತ್ತು..ಇಂದು ಅರ್ಥವಿಲ್ಲದ ರಗಸದ ಮಕ್ಕಳ ಶಿಕ್ಷಣ ಕ್ರಮವನ್ನೇ ಹಾಳುಕೆಡವಿದೆ.
ಇರಲಿ ಬಿಡಿ..ಅದು ನಮ್ಮ ಮಕ್ಕಳ ಕರ್ಮ..ಶಿಕ್ಷಣತಜ್ಞರ ಮರ್ಮ.
ಐದನೆತ್ತಿಗೆ ಇಂಗ್ಲಿಷ ಬಂತು..ಮನೆಯಲ್ಲಿ ಸಂಭ್ರಮ..ನಾವೇ ಆಗ ಹಿರಿಯರು..ಯಾಕೆಂದರೆ ಅಯಿಗೆ ಅಪ್ಪಂಗೆ Abcd ಬರದು..ನಾವು ಬರೆದ ಅಕಾರವೆ ಖರೆ.ಆಗೆಲ್ಲ ತಿದ್ದಲೇ ಬೇಕು..ಪಾಟಿಯಮೇಲೆ ಒಂದುಕಡೆ ಒಂದೇ ಅಕ್ಷರ..ತಿದ್ದಿತಿದ್ದಿ..ಹಗ್ಗದಷ್ಟು ದಪ್ಪವಾಗುತ್ತಿತ್ತು..ಅಳಚಿದ ಮೇಲೆ ಮತ್ತೆ ಯಥಾಪ್ರಕಾರ. ನಮಗೆ m..w. P..q. U..v. ಇಂಥ ಅಕ್ಷರ ಬರಲು..ಹತ್ತು ನುಕ್ಕಿಬರ್ಲು ಹೊಡಿಯಾಗಿದೆ..
ವೀಣಕ್ಕೋರು ಒಂದು ಉಪಾಯ ಮಾಡಿ..ಮೊದಲು I..love..you..ಕಲಿಸಿದರು..ಅದನ್ನು ನಂಬಿ..ಇಂಗ್ಲಿಷ..ಚೆಂದವೆಂದು ನಂಬಿ ಇಂಗ್ಲಿಷ ಬರೆದದ್ದೇ ಬರದದ್ದು..ಯಾರ್ಯಾರಿಗೆಲ್ಲ ಐ ಲವ್ ಯು..ಎಂದೆವು..ಅದರೆ ಹಾಗಂದರೇನು ನಮ್ಮ ಹತ್ತಿರವೇ ಕೇಳುತ್ತಿದ್ದರು.ಕೆಲವು ಇಂಗ್ಲೀಷ ಬೈಗುಳ ಕಲಿತೆವು..ಅದೂ ಬೇಗ.
ನಮಗೆ ಮನೆಯಲ್ಲಿ ಕನ್ನಡ ಓದಲು ಕೊಡುತ್ತಲೇ ಇರಲಿಲ್ಲ..ಏಕ್ದಮ್ ಇಂಗ್ಲಿಷ ಓದು ಎನ್ನುತ್ತಿದ್ದರು..ಇಂಗ್ಲಿಷಗೆ ಬಿದ್ದ ಮಾರ್ಕ್ಸ…ಆಯಿಗೆ ಹೆಮ್ಮೆ.
ಬೆಂಗಳೂರಿನಿಂದ ಕುಟ್ಣಮಾವ ಬಂದಾಗ..ನಾವು ಎಲ್ಲಾ ಇಂಗ್ಲೀಷ ಹಾಡು ಹೇಳಿದ್ದೇ ಹೇಳಿದ್ದು.. ಹಾಟ್..ಕ್ರಾಸ್ ಬನ್ಸ..ಹಾಡನ್ನು ಸಾವಿರ ಸಲ ಹೇಳಿದ್ದು ನೆನಪಿದೆ..ಯಾವ ನೆಂಟರು ಬಂದರೂ..ಯಾವ ನೆಮಟರ ಮನೆಗೆ ಹೋದರೂ..ಮಾಣಿ..ಹುಷಾರೆಂದು ತೋರಿಸಲು..ಇದೇ ಹಾಡು..ಅದೂ ಮುಷ್ಟಿಕಟ್ಟಿ ನೆಟ್ಟಗೆ ನಿಂತು.ಯಾರು ನೆಂಟರು ಬಂದರೂ..ಮೈ ನೇಮ್ ಈಸ್ ಗಣೇಶಾ..ಫಾದರ್ ನೇಮೀಸ್ ತಿಮ್ಮಣ್ಣ..ಮದರ್ ನೇಮ್ ಈಸ್..ಸರಸ್ವತಿ..ಹೇಳಲೇ ಬೇಕು. ಆಯಿ.. ಮೈ ನೇಮ್ ಈಸ್ ಸರಸ್ವತಿ ಎನ್ನವವರೆಗೆ ಹತ್ತಿರವೇ ಕಣ್ಣರಳಿಸಿ ನಿಂತಿರುವ ಚಿತ್ರ ಇನ್ನೂ ನೆನಪಿದೆ..ಅಂದು ಪ್ರಾರಂಭವಾದ ಇಂಗ್ಲಿಷ ದಾಳಿ..ಇಂದು ಜನಾಂಗ..ನಮ್ಮ ಕನ್ನಡ ಶಾಲೆಗಳನ್ನೇ ನುಂಗಿದೆ..ಪೆಡಂಭೂತವಾಗಿ…ನಾಲಿಗೆ ಕನ್ನಡ ಮರೆಯುತ್ತಿದೆ..ತಾಯಿ..ತಾಯ್ನುಡಿ..ಅನಾಥಪ್ರಜ್ಞೆ ಅನುಭವುಸುತ್ತಿದೆ..ಭಾಷೆಯೊಂದಿಗೆ..ವೇಷ..ಸಂಸ್ಕೃತಿ..ಮರೆಯಾಗಿದೆ…..ನಮಸ್ಕಾರ.
ತಿಗಣೇಶ ಮಾಗೋಡು..