ಸಮಸ್ಥ ಜನರ ಪ್ರಯೋಜನಕ್ಕಾಗಿಯೇ ಶ್ರೀಸಮರ್ಥರು ರಾಮತಾರಕಮಂತ್ರದ ಉಪದೇಶ ಬರೆದಿಟ್ಟು ಹೋಗಿದ್ದಾರೆ’ …‘ಆಸನವು ಬೇಕಿಲ್ಲ| ವ್ರತ-ಉಪವಾಸವಿದಕಿಲ್ಲ||’

(ಶ್ರೀ ಕನೈಯಾಲಾಲ ಆಸಾವಾ ಸೋನಗಾಂವ ಇವರಿಗೆ ಬರೆದ ಪತ್ರ)

—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

                             ||ಶ್ರೀರಾಮ ಸಮರ್ಥ|                                     

                                    ಗಿರಿನಾರ ಮಹರ್ಷಿ ಗುರುಕುಲ, ಬ್ರಹ್ಮಚರ್ಯಾಶ್ರಮ

                                                          ಜುನಾಗಡ, ಕಾಠೇವಾಡ

                                                           ವೈಶಾಖ, ಶು|| ೩

         ‘ಅಂತರಂಗದ ಭಾವದಂತೆ| ಅಂತರಂಗದ ದೇವನಂತೆ|

                      ‘ದೃಢಭಾವದಲಿರಲು ದೇವ ನಿಶ್ಚಯ|’      — ಶ್ರೀಸಮರ್ಥ

                            ‘ಭಾವೇ ಹಿ ವಿದ್ಯತೇ ದೇವಃ|’

ಚಿ. ಕನೈಯಾಲಾಲನಿಗೆ ಆಶೀರ್ವಾದ,

ನಿಮ್ಮ ಪತ್ರ ತಲುಪಿತು. ಶ್ರೀಸಮರ್ಥ ಕೃಪೆಯಿಂದ ನಾವು ಸುಖರೂಪವಾಗಿದ್ದೇವೆ. ನೀವೂ ಶ್ರೀಸಮರ್ಥ ಕೃಪೆಯಿಂದ ಸಹಕುಟುಂಬ ಸುಖರೂಪವಾಗಿರುವಿರೆಂದು ವಿಶ್ವಾಸ ಇಟ್ಟಿಕೊಂಡಿದ್ದೇನೆ. ಶ್ರೀಸಮರ್ಥರ ಪೂರ್ಣ ಕೃಪೆ ನಿಮ್ಮ ಕುಟುಂಬದ ಮೇಲಿರಲಿ.

ಶ್ರೀತಾರಕ ಮಂತ್ರದ ತೀವ್ರ ಉತ್ಕಟತೆ ನಿಮ್ಮ ಪತ್ರದಲ್ಲಿ ಕಂಡುಬಂತು. ಯಾವುದೇ ಆದರೂ ಬಹಳ ತೀವ್ರ ಇಚ್ಛೆಯಾದರೆ ಮನಸ್ಸಿಗೆ ಚಟಪಟಿಕೆಯ ಸ್ಥಿತಿಯಾಗುತ್ತದೆ. ಯಾವಾಗಲೂ ಮನಸ್ಸು ಆಕಡೆ ಎಳೆಯುತ್ತದೆ. ಮನಸ್ಸಿಗೆ ಅದೇ ಸೆಳೆತ ಹತ್ತಿರುವದರಿಂದ ಶಾಂತಿ – ಸಮಾಧಾನ ಸಿಗುವದಿಲ್ಲ.

ಜೇಣೇಂ ಜಾಳಿಲಾ ಕಾಮ ತೋ ರಾಮ ಧ್ಯಾತೋ| …………………

RELATED ARTICLES  ಬಾಳನೌಕೆ

………………………………………. ಪಾವಿಜೇ ತಾತ್ಕಾಲ||

                                     — ಶ್ರೀಸಮರ್ಥ ಇಪ್ಪತ್ತೊಂದನೇ ಸಮಾಸ

‘ಸಮಸ್ಥ ಜನರ ಪ್ರಯೋಜನಕ್ಕಾಗಿಯೇ ಶ್ರೀಸಮರ್ಥರು ರಾಮತಾರಕಮಂತ್ರದ ಉಪದೇಶ ಬರೆದಿಟ್ಟು ಹೋಗಿದ್ದಾರೆ.’

ಶ್ರೀಸಮರ್ಥರು ತಮ್ಮ ನಿರ್ವಾಣದ ವೇಳೆಯ ಅತಿ ಕೊನೆಯ ಬೇಡಿಕೆಯನ್ನು ಪ್ರಭು ಶ್ರೀರಾಮನ ಮುಂದೆ ಹೀಗೆ ಇಟ್ಟಿದ್ದಾರೆ,

‘ನಿನ್ನಪ್ಪಣೆಯಂತೆ ಪರಮಾರ್ಥ| ಯಥಾರ್ಥದಲಿ ಗೈದೆ ನಾ ತಿಳಿದುಕೋ||

ಈಗೊಂದೇ ಬೇಡಿಕೆ ದೇವ| ಕೃಪೆಯಿಟ್ಟು ನಡೆಸು ನೀನು||

ಯಾರಿಗಿದೆ ನಿನ್ನ ದರುಶನದಿಚ್ಛೆ | ಅವರ ಮನದಿಚ್ಛೆ ಪೂರೈಸೋ||’

ಅದಕ್ಕೆ ಪ್ರಭು ಶ್ರೀರಾಮಚಂದ್ರ ಉತ್ತರ ಕೊಡುತ್ತಾರೆ,

‘ಇದು ನನ್ನ ವಚನ ಪ್ರಿಯನೇ| ದರುಶನವ ಕೊಡುವೆನವನಿಗೆ|

ಮಾಡುತಿದ್ದರು ಸಂಸಾರ ಕಾರ್ಯಗಳ| ಪೂರ್ಣಗೊಳಿಸಲಿ ಜಪಸಂಖ್ಯೆ ಮಾತ್ರ||’

ಈ ಜಪಸಂಖ್ಯೆ ಮಾತ್ರ ಹದಿಮೂರು ಕೋಟಿಯದು.  

ಜಪಸಂಖ್ಯೆ ಬಹುವಾಯಿತೆಂದು ಶ್ರೀಸಮರ್ಥರ ಮನಸ್ಸಿನಲ್ಲಿ ಶಂಕೆ ಬರಬಹುದೆಂದು ಅರಿತ ಪ್ರಭು ಶ್ರೀರಾಮಚಂದ್ರ ಮುಂದೆ ಎನ್ನುತ್ತಾರೆ,

‘ಆಸನವು ಬೇಕಿಲ್ಲ| ವ್ರತ – ಉಪವಾಸವಿದಕಿಲ್ಲ||’

ಹೀಗೆ ರಾಮಜಪದ ಸುಗಮತೆ ಸ್ಪಷ್ಟವಾಗಿ ಹೇಳಿ ತಿಳಿಸಿದ್ದಾರೆ.

‘ಅಖಂಡಿತ ಭೇಟಿ ರಘುರಾಜ ಯೋಗೂ| ಮನಾ ಸಾಂಡಿರೇ ಮೀಪಣಾಚಾ ವಿಯೋಗೂ|’

‘ಸಮರ್ಥಾ ತಯಾ ಕಾಯ ಉತ್ತೀರ್ಣ ವ್ಹಾವೇ| ಸದಾಸರ್ವದಾ ನಾಮ ಬಾಚೇ ವದಾವೇ|’

RELATED ARTICLES  ದೇಶದಲ್ಲೇ ಅತಿ ಎತ್ತರದ ದೈತ್ಯ ಅವಳಿ ಕಟ್ಟಡ ಕೊನೆಗೂ ನೆಲಸಮ

ಹಾಗಾಗಿ, ಅಖಂಡ ನಾಮಸ್ಮರಣ ಮುಖದಲ್ಲಿ ಇಟ್ಟಿರಬೇಕು. ದರ್ಶನದ ಕಾಮನೆಯನ್ನಾದರೂ ಯಾಕಿಡಬೇಕು? ಅದರಿಂದಲೇ ಮನಸ್ಸು ಅಶಾಂತವಾಗುತ್ತದೆ.

ನಭೀ ವಾವರೇ ಜೋ ಅಣುರೇಣು ಕಾಹೀ| ……………….

………………………………… ತಯಾ ವ್ಯಾಪಕೂ ವ್ಯರ್ಥ ಕೈಸೇ ಮ್ಹಣಾವೇ|ಯಾವುದೇ ಕಾಮನೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಆನಂದದಿಂದ ಯಾವಾಗಲೂ ನಾಮಸ್ಮರಣ ಮಾಡಬೇಕು.

ಶ್ರೀಗಳ ಸಮಾಧಿಯಿಂದ ಅನುಗ್ರಹ ತೆಗೆದುಕೊಳ್ಳುವ ಒಂದು ಸರ್ವೋತ್ಕೃಷ್ಟ ಪದ್ಧತಿಯೂ ಇದೆ. ‘ಶುಭಂ ಚ ಶೀಘ್ರಂ’ ಎಂಬ ವಾಕ್ಯದಂತೆ ಮನಸ್ಸಿನಲ್ಲಿ ಬಂದರೆ ನಿಶ್ಶಂಕೆಯಿಂದ ಮಾಡಬೇಕು. ನಾನೂ ಕೂಡಾ ಶ್ರೀಚರಣದ ಅಡಿಭಾಗದಲ್ಲಿದ್ದೇನೆ. ಚಿ. ದಿನಕರನಿಗೆ ಕೇಳಿದರೆ ಅವನು ಇದರ ವಿಧಾನದ ಮಾಹಿತಿ ಕೊಡುತ್ತಾನೆ. ಬಹಳಿಷ್ಟು ಜನ ಪ್ರತಿವರ್ಷ ಈ ರೀತಿ ಅನುಗ್ರಹ ತೆಗೆದುಕೊಳ್ಳುತ್ತಾರೆ.

‘ಹೇಗಾದರೂ ಮುಂದೆ ದೂಡಿ ಬಿಡುತ್ತಾರೆ’ ಎಂಬ ಭಾವನೆ ಮಾತ್ರ ಮಾಡಬಾರದು. ಅಂತಃಕರಣದಲ್ಲಿ ಈ ರೀತಿ ತಿಲಮಾತ್ರವೂ ಇಲ್ಲ. ಹೇಗೆ ಸರಿಯೆನಿಸುತ್ತದೆಯೋ ಹಾಗೆ ಮಾಡಿ. ಯಾವುದಕ್ಕೂ ಆಗ್ರಹವಿಲ್ಲ.

                * ‘ಯೇಥೇ ಸಾಕ್ಷ ಆಪುಲೇ ಮನ|’

                      ‘ಪ್ರಸನ್ನೋ ಬ್ರೂಯಾತ್ ಶ್ರೀಭಗವಾನ ಸಮರ್ಥ’

*ಮೊದಲನೆಯ ದಶಕದ ನಾಲ್ಕನೆಯ ಶ್ರೀಗುರುಸ್ಥವನದ ಸಮಾಸ ಶಕ್ಯವಾದಲ್ಲಿ ಸ್ನಾನವಾದ ಮೇಲೆ ಹೇಳಬೇಕು.

                                              ಶ್ರೀಧರ