ವಂದನೆನನ್ನವರೇ….
ವಾರಕ್ಕೊಮ್ಮೆ ತೀರಿದ ನೆನಪುಗಳ ಬೇರು ಕೆದಕಿ ಚಿಗುರಿಸಲು ಹರಸುತ್ತಿದ್ದೀರಿ.
ಐದನೆತ್ತಿ..ಮಳ್ಳಿಕೇರಿ ಶಾಲೆ..ನಮಗೆ ಬೇಗ ಹೊಂದಿತು
ನನ್ನ ಹುಟ್ಟು ಗುಣಕ್ಕೆ ಹೇಳಿ ಮಾಡಿಸಿದ ಶಾಲೆ..ಕೆಳಗೆ ನೋಡಿದರೆ ದೊಡ್ಡ ಕಂದಕ..ದಾಸ ಪೈ ಅಂಗಡಿ. ಮೇಲೆ ಹತ್ತಿದರೆ ಎತ್ತರದ ದರೆ..ಎತ್ತರದ ಗೋವೇ ಮರ.
ಒಂದುಕಡೆ ಅರಣ್ಯ ಇಲಾಖೆ ನಾಕೆ.. ಇನ್ನೊಂದು ಕಡೆ ಗಾಳಿಮನೆ..ಇರುವ ನಾಲ್ಕು ಗುಂಟೆಯಲ್ಲಿ..ಕಳೆದ ಐವತ್ತು ವರ್ಷಗಳಿಂದ..ವನಮಹೋತ್ಸವ ನಡೆಯುತ್ತಲೇ ಇದೆ..ಈಗಲೂ ನಾವು ನೆಟ್ಟ ಮೇ ಪ್ಲವರ್ ಗಿಡ ..ಮರವಾಗಿ ಮರೆ ನೀಡುತ್ತಿದೆ.ದಿನಾಲೂ ಮನೆಯಿಂದ ಹೂವು ಕೊಯ್ದು ತರುತ್ತಿದ್ದೆವು..ಗಾಂಧಿ..ಶಾರದೆ..ಪೋಟೋಕ್ಕೆ ನಾವು ತಂದ ಹೂವೇ ಆಗಬೇಕು..ಅದಕ್ಕೆ ಒಬ್ಬರಿಗಿಂತ ಒಬ್ಬರು ಮೊದಲು ಬರುತ್ತಿದ್ದೆವು..ಕೆಲವುಸಲ..ಬೇರೆ ಹುಡುಗರು ಮುಡಿಸಿದ ಹೂವನ್ನು ತೆದುಹಾಕಿ ನಾವು ಮುಡಿಸಿದ್ದಿದೆ.ಹೆಡಮಾಸ್ತರ ಟೇಬಲ್ ಮೇಲೆ ಹತ್ತುವ ಅವಕಾಶ ಹುವಿನ ಹೆಳೆಯಲ್ಲಿ ಸಿಗುತ್ತಿತ್ತು..ಆಗ ಒಂದು ಸಲ..ಹೆಡಮಾಸ್ತರರ ಖುರ್ಚಿಯ ಮೇಲೆ ಕುಳಿತು..ನಾವೇ ಅವರಂತೆ ನಟಿಸುವುದು ರೂಢಿ.
ಒಮ್ಮೆ ನನ್ನ ಚಡ್ಡಿಯ ಬದಿಯ ಕಿಸೆ ಕನ್ನಾಗಿತ್ತು..ಅದರಲ್ಲಿ ಒಂದು ಸೀಟಿ..ನಾಲ್ಕಾಣೆ..ಇತ್ತು..ಖುರ್ಚಿಯಲ್ಲಿ ಕುಳಿತಾಗ ಅಲ್ಲೇ ಬಿದ್ದು..ಯಾರದು ಎಂದು ಕೇಳಿ ಹೇಳಿದಾಗ..ನಂದು ಎಂದೆ..ವಿಚಾರಣೆಯಲ್ಲಿ..ಸಿಕ್ಕಿಬಿದ್ದೆ..ಮತ್ತೆ ಗಾಂದಿಗೆ ಹೂವು ಹಾಕಲೇ ಇಲ್ಲ..ಇನ್ನು ಸೀಟಿ ಹೇಗೆ ಬಂತು ಎನ್ನ ಬಹುದು..ಹಳೆಯ ಚಪ್ಪಲು..ಪ್ಲಾಸ್ಟಿಕ್ಕ ತೆಗೆದುಕೊಳ್ಳಲು ಊರೂರಿಗೆ ಎಲ್ಲಿಂದಲೋ ಹೆಂಗಸರು ಬರುತ್ತಿದ್ದರು..ನಾವು ಅಲ್ಲಿ ಇಲ್ಲಿ ಬಿದ್ದ ಚಪ್ಪಲಿ ಹೆಕ್ಕಿ ಹಿಂಡಲ್ಲಿ ಮುಚ್ಚಿಟ್ಟು..ಮಾರಿ..ಸೀಟಿ.. ಪುಗ್ಗೆ..ತೆಗೆದು ಕೊಳ್ಳುತ್ತಿದ್ದೆವು.
ಸೀಟಿ ಒಳಗಿದ್ದ..ಕಾಳು ನೋಡಲು ಸೀಟಿ ಒಡೆದು ಬೈಸಿಕೊಂಡಿದ್ದಿದೆ.ಶಾಲೆಮೇಲಿನ ಗೇರುಬೀಜಕ್ಕೆ ನಾವೇ ಒಡೆಯರು..ಗೇರುಬೀಜ ಅಗುವಾಗ..ನಮಗೆ ಗಳಗಿಗೊಮ್ಮೆ ಒಂದಕ್ಕೆ ಬರುವುದು..ಮಳೆಗಾಲ ಬಂದರೆ ಗೋವೆಬೆರೆ ಹುಡುಕುವುದು..ಕಿಸೆಯಲ್ಲೇ ತುರುಕುವುದು..ತೊಡೆಗೆಸೊನೆತಾಗಿ ಅಯಿ ಮೀಸಿಕೊಡುವಾಗ ತೊಡೆ ಗೆಡಿಸಲು ಕೊಡುತ್ತಿರಲಿಲ್ಲ
ಯಾಕೆಂದರೆ ತೊಡೆ ಗೇರು ಸೊನೆಯಿಂದ ಕಾಯಮ್ ಸುಟ್ಟಿರುತ್ತಿತ್ತು.ಮಳ್ಳಿಕೇರಿ ಶಾಲೆಯಲ್ಲಿ..ನಾವು ಬರುವಾಗ ಇದ್ದ ಪವಾರ ಮಾಸ್ತರು..ವರ್ಗ ವಾದರು..ಅವರು ಹೇಳಿಕೊಟ್ಟ ‘ಕರುಣಾಳು ಬಾ ಬೆಳಕೆ’ ಇಂದೂ ಮರೆತಿಲ್ಲ.
ಅವರು ಪ್ರತಿ ಶುಕ್ರವಾರ ಶಾರದಾ ಪೂಜೆ ಶುರುಮಾಡಿದರು..ಮದ್ಯಾನ್ಹ ಮೂರುಗಂಟೆಗೆ..ಭಜನೆ ಮಾಡಿ..ಬಿಸ್ಕೀಟ ಹಂಚುತ್ತಿದ್ದರು.
ಪ್ರತಿವಾರ ಒಬ್ಬೊಬ್ಬರ ಪಾಳಿ..ಈಗ ಇದೆಯೋ ತಿಳಿಯದು..ಆದರೆ ನಮಗೆ ಪವಾರ ಮಾಸ್ತರು ಮರೆಯುವುದಿಲ್ಲ.ನಂತರ ಬಟ್ಟ ಮಾಸ್ತರು..ಕೂಜಳ್ಳಿ ಅಕ್ಕೋರು ಭಂಡಾರ್ಕರ ಮಾಸ್ತರು..ವೀಣಕ್ಕೋರು ನಮಗೆ ಕಲಿಸಿದವರು..ಆರನೆತ್ತಿಗೆ ಹಿಂದಿ ಬಂತು..ನಮಗೆ ಅದು ಸಾಯಬ್ರ ಭಾಷೆ ಎನಿಸುತ್ತಿತ್ತು..ನಮ್ಮನೆಗೆ ಹಾಲಿಗೆ ಬರುವ ಸಾಯಬ್ರ ಹತ್ತಿರ ನಮಗೆ ಮಾತಾಡುವ ಚಟ.ಯಹ ಕಿತಾಬ ಹೈ..ಯಹ ಕಲಮ್ ಹೈ..ಯಹ ದೌತಿ ಹೈ.ಎಂದು ಹೇಳುವಾಗ ಅಯಿ..ಹಾಲು ಚಂಬು ಹಿಡಿದು ಬಾಗಿಲಲ್ಲಿ ಅಡಗಿ ಕೇಳಿ ಖುಷಿ ಪಡುತ್ತಿದ್ದದ್ದು ಈಗ ಅರ್ಥವಾಗುತ್ತದೆ.ಅಗ ನಮಗೆ ಗಂಡುಹೆಣ್ಣು ಬೇಧ ಅಷ್ಟೊಂದು ಅರ್ಥವಾಗುತ್ತಿರಲಿಲ್ಲ..ಅಷ್ಟುದಿನ ಒಟ್ಟಿಗೆ ಒಂದಕ್ಕೆ ಹೊಯ್ಯಲು ಹೋಗುವ ನಮಗೆ ವೀಣಕ್ಕೋರು..ಬೇರೆ ಮಾಡಿದರು.
ಅದರ ನಂತರ ಜಯಶ್ರಿ..ಪೂರ್ಣ..ಇವರೆಲ್ಲ..ಬೇರೆಕಡೆ ಜಾಗ ಮಾಡಕೊಂಡರು..ಕದ್ದು ನೋಡಿದರೂ ವೀಣಕ್ಕೋರು ಹೊಡೆಯುತ್ತಿದ್ದರು..ಅದು ಯಾಕೆಂದು ಅಗ ತಿಳಿಯುತ್ತಿರಲಿಲ್ಲ.ಮಳೆಗಾಲದಲ್ಲಿ ಶಾಲೆಗೆ ತಟ್ಟಿ ಕಟ್ಟುತ್ತಿದ್ದರು..ಕೊಡೆ ..ಕೊಪ್ಪೆ..ಮರಸಣಗೆ ಎಲೆ..ಅಗೆಲ್ಲ ಉದ್ದ ಕೊಡೆ..ಅದನ್ನು ತಿರುಗಿಸುವುದೇ ಒಂದು ಆಟ.ಕೊಡೆ ಕಳ್ಳರು ಇದ್ದರು..ಕದ್ದ ಕೊಡೆಯ ಕಾವು ಮುರಿದು ಕೆಲವುದಿನ ತಡೆದು ತರುತ್ತಿದ್ದರು..ಕೊನೆಗೆ ಹೆಸರು ಬರೆಯುವ ಪದ್ದತಿ ಬಂತು..ಹೊನ್ನಾವರದಲ್ಲಿ ವಿ ಆರ್ ಕಾಮತರ ಹತ್ತಿರ ಕೊಡೆ ಕೊಂಡು..ಎ ಕೆ ಶೆಟ್ಟರ ಮನೆಗೋಗಿ ಹೆಸರು ಬರೆಸಿ ಬರುತ್ತಿದ್ದರು.ಅಗೆಲ್ಲ ಪಾಸು ನಪಾಸು ಇತ್ತು..ಕೋಲು ಬಡಿಗೆಯಿತ್ತು..ಗೋದಿಕಡಿ ಉಪ್ಪಿಟ್ಟು ಇತ್ತು..ಶಾಲೆಯೆಂಬ ಭಕ್ತಿ..ಮಾಸ್ತರ ಭಯವಿತ್ತು.
ಇಂದು ಊಟ..ಬಟ್ಟೆ..ಹಾಲು..ಪ್ರತ್ಯೇಕ ವ್ಯವಸ್ಥೆಗಳಿವೆ..ಅದರೆ ಹೆಣ್ಣು ಮಕ್ಕಳಿಗೆ..ಸುರಕ್ಷತೆ ಕಡಿಮೆ..ಒಟ್ಟಿಗೆ ಕಲಿತಾಗ ಹೆಣ್ಣುಮಕ್ಕಳಿಗಿದ್ದ ಸುರಕ್ಷತೆಯಿಲ್ಲ..ಮನಸ್ಸು ಕೆಟ್ಟ ಮನುಷ್ಯ..ವ್ಯವಸ್ಥೆಗಳಿಂದ ರಕ್ಷಣೆ ಕೊಡಲು ಸಾದ್ಯವೆ…
ನಮಸ್ಕಾರ.
…….ತಿಗಣೇಶ ಮಾಗೋಡು.