ಸಂಚಿತ, ಪ್ರಾರಬ್ಧ ಮತ್ತು ಆಗಾಮಿ ಹೀಗೆ ಕರ್ಮಗಳ ಮೂರುಪ್ರಕಾರವಿವೆ.

(ಮಾತೋಶ್ರೀ ಜಾನಕೀದೇವಿಯವರಿಗೆ ಬರೆದ ಪತ್ರದ ಎರಡನೆಯ ಭಾಗ)

—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

ಜನ್ಮ-ಮರಣದ ಮೇಲೆ ವಿಜಯಗಳಿಸಿ ‘ಗುರುಪ್ರಸಾದೇನ ಮುಕ್ತೋ ಭವತಿ ಪಾರ್ವತಿ’ ಎಂಬ ಶ್ರೀಶಂಕರನು ಪಾರ್ವತಿಗೆ ಹೇಳಿದ ಮಾತಿನಿಂದ, ಮೋಕ್ಷಾನಂದ ಸೌಭಾಗ್ಯ ಗುರುಪ್ರಸಾದದಿಂದ ಪ್ರಾಪ್ತವಾಗುತ್ತದೆ ಎಂಬುದೇ ಸ್ಷಷ್ಟವಾಗುತ್ತದೆ. ಅನನ್ಯ ಭಕ್ತಿಯಿಂದ ಮಾಡಿದ ಗುರುಸೇವೆ ಪರಮಾನಂದರೂಪದ ದಿವ್ಯಫಲ ಕೊಡುತ್ತದೆ. ಜೀವನಮುಕ್ತನ ದೇಹ ಮಹಾಸಾಗರದಲ್ಲಿ ಬಿದ್ದ ಹಿಮಗಡ್ಡೆಯಂತೆ ಕರಗಿ, ಆನಂದರೂಪಿ ಮಹಾಸಾಗರದಲ್ಲಿ ಕೂಡಿ ಹೋಗುತ್ತದೆ. ಅದರ ನಂತರ ದೇಹಭಾವ ನಷ್ಟವಾಗಿ ಅವನು ಆನಂದಪರಬ್ರಹ್ಮರೂಪ ಪರಬ್ರಹ್ಮನೇ ಆಗುತ್ತಾನೆ.

RELATED ARTICLES  ಮತ್ತೊಮ್ಮೆ ಅನಂತಕುಮಾರ ಹೆಗಡೆಯೇ ಅಭ್ಯರ್ಥಿ ?

‘ಕ್ಷೀಯಂತೇ ಚಾಸ್ಯ ಕರ್ಮಾಣಿ ತಸ್ಮಿನ್ ದೃಷ್ಟೇಚ ಪಾರ್ವತಿ’ ಜ್ಞಾನಿ ಮನುಷ್ಯನ ಸಂಚಿತ, ಪ್ರಾರಬ್ಧ ಎಲ್ಲಾ ಕರ್ಮಗಳು ನಷ್ಟವಾಗಿ ಆತನು ಪುನಃ ಜನ್ಮಕ್ಕೆ ಬರುವದಿಲ್ಲ. ಬ್ರಹ್ಮಸಾಕ್ಷಾತ್ಕಾರದ ನಂತರ

‘ನ ಪುನರಾವರ್ತತೇ| ನ ಪುನರಾವರ್ತತೇ|’

‘ಪುನರ್ನಾಭಿಜಾಯತೇ| ಪುನರ್ನಾಭಿಜಾಯತೇ|’

ಆತ್ಮಜ್ಞಾನಿ ಪುನಃ ಮೃತ್ಯುಲೋಕದಲ್ಲಿ ಬರುವದಿಲ್ಲ. ಅವನು ಯಾವುದೇ ಲೋಕದಲ್ಲಿ ಪುನಃ ಜನ್ಮ ತೆಗೆದುಕೊಳ್ಳುವದಿಲ್ಲ ಎಂಬುದನ್ನು ಸ್ಪಷ್ಟ ಮಾಡಲೆಂದೇ ವೇದಗಳು ಅದರ ಪುನರುಚ್ಛಾರ ಮಾಡಿವೆ.

‘ಪರೇವ್ಯಯೇ ಸರ್ವ ಏಕೀ ಭವಂತಿ’ ಜ್ಞಾನಿ ಮನುಷ್ಯನ ಪ್ರಾಣಾದಿ ಎಲ್ಲವೂ ಆ ಅವಿನಾಶಿ ಆನಂದದಲ್ಲಿ ಏಕರೂಪವಾಗಿ ಇಲ್ಲವಾಗುತ್ತವೆ, ಹೀಗೆ ಶ್ರುತಿವಚನವಿದೆ.

RELATED ARTICLES    ಅಮ್ಮ ನಿನ್ನ ಎದೆಯಾಳದಲ್ಲಿ...

ಸಂಚಿತ, ಪ್ರಾರಬ್ಧ ಮತ್ತು ಆಗಾಮಿ ಹೀಗೆ ಕರ್ಮಗಳ ಮೂರುಪ್ರಕಾರವಿವೆ. ಅನೇಕ ಜನ್ಮಗಳಿಗೆ ಕಾರಣೀಭೂತವಾಗುವ ಕರ್ಮಗಳಿಗೆ ‘ಸಂಚಿತ’ ಎನ್ನುತ್ತಾರೆ. ಒಂದೇ ಜನ್ಮದಲ್ಲೇ ನೂರಾರು ಜನ್ಮಗಳಿಗೆ ಕಾರಣೀಭೂತವಾಗುವ ಕರ್ಮ ಮತ್ತು ಸಂಕಲ್ಪ ಜೀವಿ ಮಾಡುತ್ತಿರುತ್ತಾನೆ. ಅದರಲ್ಲೇ ಈ ಜನ್ಮಕ್ಕೆ ಕಾರಣೀಭೂತವಾಗಿರುವ ಕರ್ಮಕ್ಕೆ ‘ಪ್ರಾರಬ್ಧ’ ಎಂದು ಹೇಳುತ್ತಾರೆ ಮತ್ತು ಮುಂದಿನ ಅನೇಕ ಜನ್ಮಗಳಿಗೆ ಕಾರಣೀಭೂತವಾಗುವ ಈ ಜನ್ಮದ ಕರ್ಮಗಳಿಗೆ ‘ಆಗಾಮಿ’ ಎಂದು ಹೇಳುತ್ತಾರೆ.

(ಈ ಪತ್ರದ ಮೂರನೆಯ ಭಾಗ ಮುಂದುವರಿಯುವದು)