ಧರ್ಮಕಾರ್ಯಕ್ಕಾಗಿ ಈಶ್ವರೀ ಆದೇಶ ಪಡೆಯುವ ಮಾರ್ಗದಲ್ಲಿ ಓಡುತ್ತಾ ಹೊರಟಿದ್ದೇನೆ. ಕಲಿಯ ಅಶ್ವಬಲವೇ ನನ್ನ ಬೆನ್ನಹಿಂದೆ ಬಿದ್ದಿದೆ.
(ಶ್ರೀ ಶಂಕರ ಪಂಡಿತ ಸಜ್ಜನಗಡ, ಅವರಿಗೆ ಬರೆದ ಪತ್ರ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

||ಶ್ರೀರಾಮ ಸಮರ್ಥ||
ಬುಧವಾರ, ಕಾರ್ತೀಕ, ವ|೨ ಶ. ೧೮೮೮
೩೦-೧೧-೧೯೬೬ ಸಾಯಂ- ೫ ಗಂಟೆ
ಹೋಶಂಗಾಬಾದ
ಚಿ. ಶಂಕರ ಪಂಡಿತನಿಗೆ ಆಶೀರ್ವಾದ,
ಮಗಾ,
ನಿನ್ನ ಪತ್ರ ಓದಿದೆ. ಧರ್ಮಕಾರ್ಯಕ್ಕಾಗಿ ಈಶ್ವರೀ ಆದೇಶ ಪಡೆಯುವ ಮಾರ್ಗದಲ್ಲಿ ಓಡುತ್ತಾ ಹೊರಟಿದ್ದೇನೆ. ಕಲಿಯ ಅಶ್ವಬಲವೇ ನನ್ನ ಬೆನ್ನಹಿಂದೆ ಬಿದ್ದಿದೆ. ಕಲಿಗೆ ಬಹಳ ಬಲಿಷ್ಟರ ಸಹಾಯ ಇದೆ. ತಮ್ಮ ವಿರುದ್ಧ ಪ್ರಯತ್ನ ಮಾಡುತ್ತಿರುವ ನನ್ನನ್ನು ಇಡಲೇಬಾರದು ಎಂಬ ತ್ವೇಷ ಅವರ ಮನಸ್ಸಿನಲ್ಲಿದೆ. ಎಲ್ಲ ಸ್ಥಿರ-ಸ್ಥಾವರ ಆಗುವವರೆಗೆ ನಿಮಗೆ ಎಲ್ಲಿ ಅನುಕೂಲವಿರುವದೋ ಅಲ್ಲಿ ಉಳಿದುಕೊಳ್ಳಿ. ನಾನು ಹಣ ಕಳುಹಿಸಿ ಕರೆಸಿಕೊಳ್ಳುತ್ತೇನೆ.
ಬಂದ ಎಲ್ಲರಿಗೂ ಇದೇ ಸಂದೇಶವಿದೆ. ನನಗೆ ಒಂದೊಂದು ಅಕ್ಷರ ತೋರಿಸಿ ಬರೆಯಿಸಿ ಕೊಳ್ಳಬೇಕಾಗುತ್ತದೆ. ಇನ್ನೆಲ್ಲಾ ಸಮಕ್ಷಮ. ಆಶೀರ್ವಾದ,
ಶ್ರೀಧರ

RELATED ARTICLES  ಗುರಿ ಮತ್ತು ನೀರು ಅಕ್ಕ ತಂಗಿಯರು