muralidhar 2

ಮನುಷ್ಯ ಜೀವನದಲ್ಲಿ ನಾನಾ ತರಹದ ಅನುಭವವನ್ನು ಪಡೆದಿರುತ್ತಾನೆ. ದುಷ್ಟರನ್ನು ಕಂಡರೆ ದೂರ ಸರಿಯುವುದು, ಹಿರಿಯರು, ಗುರುಗಳು, ಗಣ್ಯವ್ಯಕ್ತಿಗಳು ಮಂತ್ರಿಗಳು ಎದುರಿಗೆ ಬಂದರೆ ಗೌರವದಿಂದ ಅವರಿಗೆ ದಾರಿ ಕೊಟ್ಟು ಪಕ್ಕಕ್ಕೆ ಸರಿಯುವುದು, ಯಾವುದಾದರೂ ಸ್ಪರ್ಧೆಗಳಲ್ಲಿ ಎದುರಾಳಿಗಳನ್ನು ಎದುರಿಸಲಾಗದೆ ಹಿಂದೆ ಸರಿಯುವುದು, ಇವೆಲ್ಲಾ ಮನುಷ್ಯನ ಜೀವನದಲ್ಲಿ ನಡೆಯುವ ಘಟನೆಗಳು.

ಇದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಇದನ್ನು ನಾಲ್ಕು ವಿಧದಲ್ಲಿ ವಿಂಗಡಿಸಬಹುದು. ಮೊದಲನೆಯದಾಗಿ ಉದ್ದೇಶ್ಯ ಪೂರ್ವಕವಾಗಿ, ಎರಡನೆಯದಾಗಿ ಅನಿವಾರ್ಯದಿಂದ, ಮೂರನೆಯದಾಗಿ ಇನ್ನೊಬ್ಬರ ದಬ್ಬಾಳಿಕೆಯಿಂದ ನಾಲ್ಕನೆಯದಾಗಿ ಬೇರೊಬ್ಬರ ಮೇಲಿನ ಗೌರವದಿಂದ ಪಕ್ಕಕ್ಕೆ ಸರಿಯುತ್ತೇವೆ.

ಮನುಷ್ಯ ಹುಟ್ಟಿದ ಮೇಲೆ ತನ್ನದೇ ಆದ ಅನೇಕ ಜವಾಬ್ದಾರಿ ಕೆಲಸಗಳನ್ನು ಹೊಂದಿರುತ್ತಾನೆ ಜೊತೆಗೆ ಕೆಲವು ಕರ್ತವ್ಯಗಳನ್ನೂ ಸಹ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇರುತ್ತದೆ. ಆದರೆ ಇವೆಲ್ಲವನ್ನೂ ನಿಭಾಯಿಸಲು ಆಗದೆ ಅಥವಾ ಬೇಜವಾಬ್ದಾರಿಯಿಂದ ದುರುದ್ದೇಶದಿಂದ ಉದ್ದೇಶಪೂರ್ವಕವಾಗಿ ದೂರ ಸರಿದರೆ ಅಥವಾ ಹಿಂದೆ ಸರಿಯುವುದುಂಟು. ಮನುಷ್ಯನಿಗೆ ಜೀವನದಲ್ಲಿ ಕರ್ತವ್ಯ ಪ್ರಜ್ಞೆ ಅತಿ ಮುಖ್ಯ. ತನಗೆ ಲಾಭ ಇಲ್ಲವೆಂದು ತನ್ನ ಕರ್ತವ್ಯದಿಂದಲೇ ವಿಮುಖನಾದರೆ ಇದರಿಂದ ಮನುಷ್ಯ ಜೀವನದಲ್ಲಿ ಏನನ್ನೂ ಸಾಧಿಸಲಾರ.

ಕುಟುಂಬದಲ್ಲಿ ತನ್ನ ಸಂಸಾರವನ್ನು ನೋಡಿಕೊಳ್ಳುವುದು ಮೂಲ ಕರ್ತವ್ಯವಾಗಿದ್ದು, ತನ್ನ ಹೆತ್ತವರು, ಪತ್ನಿ ಮಕ್ಕಳು ಎಲ್ಲರ ಆಶೋತ್ತರಗಳನ್ನು ಸಾಧ್ಯವಾದಷ್ಟು ಪೂರೈಸಬೇಕಾಗಿರುವುದು ಸಂಸಾರ ಹೊಂದಿದವರ ಆದ್ಯ ಕರ್ತವ್ಯ. ತನ್ನ ಕರ್ತವ್ಯವನ್ನು ಮರೆತು ಸಂಪಾದಿಸಿದ ಎಲ್ಲಾ ಹಣವನ್ನು ದುಂದುವೆಚ್ಚ ಮಾಡಿ, ಮನೆಯನ್ನು ಸರಿಯಾಗಿ ನೋಡಿಕೊಳ್ಳದೇ ಇರುವುದು ಉದ್ದೇಶಪೂರ್ವಕವಾಗಿ ದೂರಸರಿದಂತೆ ಆಗುತ್ತದೆ. ಹೆತ್ತವರಿಗೆ ವಯಸ್ಸಾಗಿದ್ದರೆ ಅವರನ್ನು ನೋಡಿಕೊಳ್ಳಲು ಮನಸ್ಸು ಮಾಡದೆ ವೃದ್ದಾಶ್ರಮಕ್ಕೆ ಬಿಡುವುದು, ತನ್ನ ಮಕ್ಕಳಿಗೆ ಸರಿಯಾದ ವಿಧ್ಯಾಭ್ಯಾಸ ಕೊಡಿಸುವುದರಲ್ಲಿ ಉದಾಸೀನತೆ ತೋರುವುದು ಇವೆಲ್ಲವೂ ಉದ್ದೇಶಪೂರ್ವಕವಾಗಿ ತನ್ನ ಕರ್ತವ್ಯದಿಂದ ಹಿಂದೆ ಸರಿದಂತೆ ಆಗುತ್ತದೆ. ಅದೇರೀತಿ ಹೆತ್ತವರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ, ಕಾಲ ಕಾಲಕ್ಕೆ ಅವರ ಅವಶ್ಯಕತೆಗೆ ತಕ್ಕಂತೆ ಸ್ಪಂದಿಸಿ, ಅವರ ಬೇಕು ಬೇಡಗಳನ್ನು ನೋಡಿಕೊಳ್ಳುವುದು ಹೆತ್ತವರ ಕರ್ತವ್ಯ. ಇದರಿಂದ ದೂರಸರಿದರೆ ಮಕ್ಕಳು ಎಲ್ಲದರಿಂದಲೂ ವಂಚಿತರಾಗಿ ಜೀವನದಲ್ಲಿ ಬಹಳ ಕಷ್ಟ ಪಡಬೇಕಾದ ಸನ್ನಿವೇಶ ಉಂಟಾಗುತ್ತದೆ.

ಮಕ್ಕಳು ಶಾಲೆಯಲ್ಲಿ ವಿದ್ಯೆ ಕಲಿಯಲು ಬಂದಾಗ, ಶಿಕ್ಷಕರು ಸರಿಯಾದ ವಿದ್ಯೆಯನ್ನು ಹೇಳಿ ಒಳ್ಳೆಯ ಮಾರ್ಗದಲ್ಲಿ ನಡೆಯಲು ಮಾರ್ಗದರ್ಶನ ನೀಡುವುದು ಶಿಕ್ಷಕರ ಕರ್ತವ್ಯ. ಅದನ್ನು ನಿಭಾಯಿಸದೆ ತನಗೆ ಸಂಬಳ ಬರುತ್ತದೆ ಯಾರು ಕಲಿತರೆಷ್ಟು? ಬಿಟ್ಟರೆಷ್ಟು? ಎಂದು ತನ್ನ ಪಾಡಿಗೆ ತಾನಿದ್ದು, ಉದ್ದೇಶಪೂರ್ವಕವಾಗಿ ವಂಚಿಸಿದರೆ ಅಥವಾ ಕರ್ತವ್ಯದಿಂದ ವಿಮುಖರಾದರೆ, ಮಕ್ಕಳಿಗೆ ದ್ರೋಹಬಗೆದಂತೆ ಆಗುತ್ತದೆ. ಇದರಲ್ಲಿ ಮಕ್ಕಳು ಮಾತ್ರ ಬಲಿಪಶುಗಳಾಗುತ್ತಾರೆ. ಚೆನ್ನಾಗಿ ಓದಿ ದೊಡ್ಡ ಹುದ್ದೆಯಲ್ಲಿ ಸೇರುವುದರಿಂದ ವಂಚಿತರಾಗುತ್ತಾರೆ. ಶಿಕ್ಷಕರು ತಮ್ಮ ಜವಾಬ್ದಾರಿಯಿಂದ ವಿಮುಖರಾಗದೆ ಮಕ್ಕಳಿಗೆ ಒಳ್ಳೆ ವಿದ್ಯೆ ಬುದ್ದಿ ಹೇಳಿಕೊಟ್ಟರೆ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಿದಂತೆ ಆಗುತ್ತದೆ.

ಮಕ್ಕಳೂ ಸಹ ವಿದ್ಯೆಯನ್ನು ಕಲಿತು, ಕೆಲಸಕ್ಕೆ ಸೇರಿದ ನಂತರ ಹೆತ್ತವರ ಅಪೇಕ್ಷೆಯಂತೆ ಅಥವಾ ತನ್ನಿಷ್ಟದಂತೆ ವಿವಾಹವಾಗಿ, ತನ್ನ ಪಾಡಿಗೆ ತಾನು ಸಂಸಾರ ಮಾಡಿಕೊಂಡು ಹೆತ್ತವರನ್ನು ನೋಡದೆ ಉದ್ದೇಶಪೂರ್ವಕವಾಗಿ ದೂರ ಮಾಡಿದರೆ ಆಗ ಹೆತ್ತವರು ಮಕ್ಕಳಿದ್ದೂ ಸಹ ತಬ್ಬಲಿಗಳಾಗುತ್ತಾರೆ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ರಾಜಕೀಯಕ್ಕೆ ಬಂದಾಗ ಎದುರಾಳಿಯು ಭಲಾಡ್ಯರಾಗಿದ್ದು, ಇವರನ್ನು ಸೋಲಿಸಲೇಬೇಕೆಂದು ಬೇರೆಯವರಿಗೆ ಬೆಂಬಲ ನೀಡಿ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುವುದುಂಟು. ಅಥವಾ ಒಂದು ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಲ್ಲಿ, ತಮ್ಮ ಮೇಲಿನವರ ಒತ್ತಾಯಕ್ಕೆ ಮಣಿದು ಸ್ಪರ್ಧೆಯಿಂದ ಹಿಂದೆ ಸರಿಯಬಹುದು. ಇದರಿಂದ ಸಮಾಜಕ್ಕೆ ಏನೂ ಲಾಭವಾಗಲೀ ನಷ್ಟವಾಗಲೀ ಆಗುವುದಿಲ್ಲ. ಲಾಭ ನಷ್ಟ ಆಗುವುದು ರಾಜಕೀಯ ಕ್ಷೇತ್ರದಲ್ಲಿದ್ದವರು ಮಾತ್ರ ಲಾಭ ನಷ್ಟದ ಲೆಕ್ಕಾಚಾರ ಹಾಕುತ್ತಾರೆ. ಸಾಮಾನ್ಯ ಜನಗಳಿಗೆ ಯಾರು ಗೆದ್ದರೇನು ಬಿಟ್ಟರೇನು? ಅವರಿಗೆ ತಮ್ಮ ಊರಿನ ಸಮಸ್ಯೆಗಳನ್ನು ಬಗೆ ಹರಿಸುವಂತಹವರು ಬಂದರೆ ಸಾಕು ಎನ್ನುತ್ತಾರೆ. ಕೆಲವರಿಗೆ ಮಾತ್ರ ನಮ್ಮ ನಾಯಕರು ಬರಬೇಕು ಎಂಬ ಹಂಬಲ ಇರುತ್ತದೆ. ಆದ್ದರಿಂದಲೇ ಏನಾದರೂ ಮಾಡಿ ಎದುರಾಳಿಗಳನ್ನು ಮಣಿಸಲು ನಾನಾ ತಂತ್ರಗಳನ್ನು ಹೂಡುತ್ತಾರೆ. ಎದುರಾಳಿಗಳು ಉದ್ದೇಶಪೂರ್ವಕವಾಗಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಬಹುದು. ಅಥವಾ ಸ್ಪರ್ಧಿಯೇ ತನಗೆ ಇರುವ ಬೆಂಬಲವನ್ನು ನೋಡಿ, ಗೆಲ್ಲುವುದು ಅಸಾಧ್ಯವೆಂದು ತಿಳಿದಾಗ ಅಥವಾ ಹಣದ ಕೊರತೆಯಿಂದ ಉದ್ದೇಶಪೂರ್ವಕವಾಗಿ ಸ್ಪರ್ಧೆಯಿಂದ ಹಿಂದೆ ಸರಿಯಬಹುದು. ಯಾರು ಹಿಂದೆ ಸರಿದರೇನು? ಯಾರಾದರೂ ಒಬ್ಬರು ಗೆದ್ದೇ ಗೆಲ್ಲುತ್ತಾರೆ.

ದೂರಕ್ಕೆ ಅಥವಾ ಹಿಂದಕ್ಕೆ ಸರಿದರೆ.

RELATED ARTICLES  ಸಿಹಿ ಸಿಹಿ ಮಾವಿನ ಕಾಲ:

ಮಂಗಲಧರೆ
9902772278