.‘ನಾನು ಮಾಡುತ್ತಿರುವದು ಎಲ್ಲರ ಹಿತಕ್ಕೇ ಇದೆಯಲ್ಲಾ?’ ಎಂದುಕೊಂಡು ಬೇಸರಪಟ್ಟುಕೊಳ್ಳದೇ ದಕ್ಷತೆಯಿಂದ ಎಲ್ಲವನ್ನೂ ಮಾಡುತ್ತಿದ್ದೇನೆ. ನಾನು ಎಲ್ಲರ ಪರಿಪೂರ್ಣರೂಪನಾಗಿದ್ದೇನೆ. ಹೀಗಿರುವಾಗ, ಇದೆಲ್ಲದರಲ್ಲಿ ನನಗೆಲ್ಲಿಯ ಚಿಂತೆ?

— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

||ಶ್ರೀರಾಮ ಸಮರ್ಥ||
ವದ್ದಳ್ಳಿ
ಚಿ.ದತ್ತನಿಗೆ ಆಶೀರ್ವಾದ,
ಬೇರೆ ಯಾರಾದರೂ ಆಗಿದ್ದರೆ ಈ ಚಾತುರ್ಮಾಸದಲ್ಲಿ ಮಲಗೇ ಬಿಡುತ್ತಿದ್ದರೇನೋ? ಮೊದಲೇ ಶರೀರ ಜರ್ಜರಿತವಾಗಿದೆ. ಅದರಲ್ಲಿ ಈ ದುಷ್ಟ ದೇವತೆಗಳು ಶರೀರವನ್ನು ವಿಕ್ಷಿಪ್ತ ಮಾಡಿ ಬಿಡುತ್ತವೆ. ಸಾಕೋ ಸಾಕಪ್ಪಾ ಆಗಿಬಿಟ್ಟಿದೆ. ಇಂದಲ್ಲ ನಾಳೆ ಅನುಕೂಲ ದಿನ ಬರಬಹುದು ಮತ್ತು ಜಗತ್ತಿನ ಕಾರ್ಯವಾಗಬಹುದು ಎಂದುಕೊಂಡೇ ಎಲ್ಲ ಆಪತ್ತುಗಳನ್ನು ಎದುರಿಸಿ ಆತ್ಮನಿಷ್ಠೆಯ ಬಲದಿಂದ ಶರೀರ ಧರಿಸಿದ್ದೇನೆ. ಬೇರೆಯವರ ಶರೀರವಾಗಿದ್ದರೆ ಅದನ್ನು ಈ ದುಷ್ಟ ದೇವತೆಗಳು ಧೂಳೀಪಟ ಮಾಡಿಬಿಡುತ್ತಿದ್ದರು. ‘ಜಗತ್ತಿನಲ್ಲಿ ಇವನೇನು ಮಾಡಿಬಿಡುವನೋ? ಯಾರಿಗೆ ಗೊತ್ತು?’ ಎಂದು ಶ್ರೀರಾಮಾದಿ ಮಹಾನ ದೇವರೂ ಸಹ, ನನ್ನ ತಪಃಸಾಮರ್ಥ್ಯಕ್ಕೂ, ಸರಪಳಿ ಸುತ್ತಿ ಎಳೆದು ಹಿಡಿದುಕೊಂಡಿದ್ದಾರೆ. ಇವರ ಸಹಾಯವಂತೂ ಇಲ್ಲ ಆದರೆ ಇದಕ್ಕೆ ವಿರುದ್ಧವಾಗಿ ನನಗೇ ಪ್ರತಿಬಂಧ. ಅದಲ್ಲದೇ ಸಂಪೂರ್ಣ ಜಗತ್ತಿನ ಮುಸಲ್ಮಾನರು, ಕ್ರಿಶ್ಚನರು ತಮ್ಮ ಧರ್ಮದ ದುಷ್ಟ ದೇವತೆಗಳೊಂದಿಗೆ, ತಮ್ಮ ಸರತಿಯೆಂದು ಸಂಚು ಹಾಕಿ ಕುಳಿತುಕೊಂಡಿದ್ದಾರೆ. ಕಲಿಯಂತೂ ಹಲ್ಲು ಕಡಿಯುತ್ತಿದ್ದಾನೆ. ಕಾಮಾದಿಕರಿಗೆ ನಾನು ಶತ್ರುವಾಗಿ ಕಾಣುತ್ತಿದ್ದೇನೆ. ಅವರೂ ತಮ್ಮಿಂದ ಆದಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಅದರಂತೆ ದುಷ್ಟ ದೇವತೆಗಳೊಡಗೂಡಿ ಹಗಲು-ರಾತ್ರಿ ಎಲ್ಲಿ ಇವನನ್ನು ರಸಾತಳಕ್ಕೆ ಕಳಿಸಲಿಕ್ಕೆ ಬರುತ್ತದೆ ಎಂದು ಕಣ್ಣಲ್ಲಿ ಎಣ್ಣೆಯಿಟ್ಟು ಕುಳಿತಿದ್ದಾರೆ. ಈ ಎಲ್ಲರಿಗೆ ಚೂರು-ಪಾರು, ಹರಿದ-ಮುರಿದ ಸಾಮಗ್ರಿಗಳಿಂದಲೇ ನಾನು ಒಬ್ಬನೇ ಎದುರಿಸುತ್ತಿದ್ದೇನೆ. ಜಗತ್ತಿನ ಸಂಕಟಗಳನ್ನು ನಿವಾರಿಸುತ್ತ, ದೇವರ ಕಲೆಯನ್ನು ಹೆಚ್ಚಿಸುತ್ತ, ತೀರ್ಥ-ಕ್ಷೇತ್ರ-ದೇವಸ್ಥಾನಾದಿಗಳಲ್ಲಿರುವ ಬ್ರಹ್ಮರಾಕ್ಷಸಾದಿಗಳ ಬಾಧೆ ಕಳೆಯುತ್ತ, ಅವುಗಳನ್ನು ಶುದ್ಧೀಕರಿಸುತ್ತ ಒಂದೇ ಒಂದು ಆತ್ಮನಿಷ್ಠೆಯ ಬಲದಿಂದ ಘರ್ಷಿಸುತ್ತಿದ್ದೇನೆ.
ಎಲ್ಲ ದೇವರೂ ತಮ್ಮ ತಮ್ಮ ಕಾರ್ಯಗಳನ್ನು ಮಾಡಿಸಿಕೊಳ್ಳುತ್ತಾರೆ. ಆದರೆ ನನಗೆ ಯಾವುದೇ ಒಂದು ದುಷ್ಟ ಶಕ್ತಿ ಬರುವದಿದೆ ಎಂಬುದರ ಸೂಚನೆಯನ್ನೂ ಕೊಡುವದಿಲ್ಲ. ಹೌದು! ಇರಲಿ!!

RELATED ARTICLES  ವಿಜ್ರಂಭಣೆಯಿಂದ ನಡೆಯಿತು ಚಂದಾವರ ಫೆಸ್ಟ್..!

‘ನಾನು ಮಾಡುತ್ತಿರುವದು ಎಲ್ಲರ ಹಿತಕ್ಕೇ ಇದೆಯಲ್ಲಾ?’ ಎಂದುಕೊಂಡು ಬೇಸರಪಟ್ಟುಕೊಳ್ಳದೇ ದಕ್ಷತೆಯಿಂದ ಎಲ್ಲವನ್ನೂ ಮಾಡುತ್ತಿದ್ದೇನೆ.
ನಾನು ಎಲ್ಲರ ಪರಿಪೂರ್ಣರೂಪನಾಗಿದ್ದೇನೆ. ಹೀಗಿರುವಾಗ, ಇದೆಲ್ಲದರಲ್ಲಿ ನನಗೆಲ್ಲಿಯ ಚಿಂತೆ?
ಶ್ರೀಧರ

RELATED ARTICLES  ವೃತ್ತಿಶೂನ್ಯ ನಿರ್ವಿಕಲ್ಪವಾದ ನಮ್ಮ ಸ್ಥಿತಿಯಲ್ಲಿರದೇ ಕ್ಷುದ್ರ ಭಾವನೆ ಮಾಡುವದರಲ್ಲೇನು ಪ್ರಯೋಜನ?