ವಿನಯ ಕಬ್ಬಿನಗದ್ದೆ , ಹೆಸರಿಗೆ ತಕ್ಕುದಾಗಿ ವಿನಯವಂತನೇ … ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು ಕಲ್ಲಬ್ಬೆ ಗ್ರಾಮದಲ್ಲಿ 6-4-1987 ಶ್ರೀ ರಾಮನವಮಿಯಂದು ಜನನವಾಯಿತು . ಶ್ರೀ
ಎಸ್. ಜಿ ಭಟ್ ಮತ್ತು ಶ್ರೀಮತಿ ವಿಜಯಲಕ್ಷ್ಮಿ ದಂಪತಿಗಳ ಸುಪುತ್ರನಾದ ವಿನಯನ
ಬಾಲ್ಯಶಿಕ್ಷಣ- ಹೊನ್ನಾವರ ತಾಲ್ಲೂಕಿನ ಹಡಿನಬಾಳದ ಶ್ರೀವಿಷ್ಣುಮೂರ್ತಿ ದೇವಾಲಯದ ಬಳಿಯ ಅಂಗನವಾಡಿಯಲ್ಲಿ ಪ್ರಾರಂಭವಾಯಿತು . ಮುಂದೆ
ಪ್ರಾಥಮಿಕ ಶಿಕ್ಷಣ- ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಡಿನಬಾಳ, ಹೊನ್ನಾವರ ಇಲ್ಲಿ 1ನೇ ತರಗತಿಯಿಂದ 4ನೇ ತರಗತಿವರೆಗೆ ,
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿರ್ವತ್ತಿಕೊಡ್ಲು, ಕವಲಕ್ಕಿ ಹೊನ್ನಾವರ ಇಲ್ಲಿ 5 ರಿಂದ 7 ನೇ ತರಗತಿಯವರೆಗೆ ,
ಪ್ರೌಢ ಶಿಕ್ಷಣ- ಶ್ರೀಸುಬ್ರಹ್ಮಣ್ಯ ವಿದ್ಯಾಸಂಸ್ಥೆ ಕವಲಕ್ಕಿ ಹೊನ್ನಾವರ ಇಲ್ಲಿ 8 ರಿಂದ 10 ನೇ ತರಗತಿ ವರೆಗೆ ,
ಶ್ರೀಸುಬ್ರಹ್ಮಣ್ಯ ಪದವಿಪೂರ್ವ ಮಹಾವಿದ್ಯಾಲಯ ಕವಲಕ್ಕಿ, ಹೊನ್ನಾವರ ಇಲ್ಲಿ ಪಿಯುಸಿ ಶಿಕ್ಷಣ , ಕರ್ನಾಟಕ ಚಿತ್ರಕಲಾ ಪರಿಷತ್ತು ಬೆಂಗಳೂರು ಇಲ್ಲಿ ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ(ಬಿವಿಎ)ನಲ್ಲಿ ಪದವಿ ಶಿಕ್ಷಣ , Art ಫೌಂಡಿಷನ್ ಶಿಕ್ಷಣ
ಡಿ .ಎಂ. ಎಸ್ .ಲಲಿತಕಲಾ ಮಹಾಸಂಸ್ಥಾನಂ ಮೈಸೂರು ಇಲ್ಲಿ ಬ್ಯಾಚುಲರ್ ಆಫ್ ಫೈನ್ ಆರ್ಟ (ಬಿಎಫ್‍ಎ) ಅನ್ವಯಿಕ ಕಲೆಯಲ್ಲಿ ಪದವಿ A Grade ನೊಂದಿಗೆ ಮುಕ್ತಾಯ ,
ನಂತರ ಡಿ .ಎಂ .ಎಸ್ .ಲಲಿತಕಲಾ ಮಹಾಸಂಸ್ಥಾನಂ ಮೈಸೂರು ಇಲ್ಲಿ ಮಾಸ್ಟರ್ ಆಫ್ ಫೈನ್ ಆರ್ಟ (ಎಂಎಫ್‍ಎ) ಜಾಹೀರಾತು ಮತ್ತು ಸಂವಹನದಲ್ಲಿ ಸ್ನಾತಕೋತ್ತರ ಪದವಿ A Grade ನೊಂದಿಗೆ ,ತದನಂತರ
ಮೈಸೂರು ವಿಶ್ವವಿದ್ಯಾಲಯದಲ್ಲಿ Art History ಯಲ್ಲಿ ಎಂಫಿಲ್ …..ಬೆಂಗಳೂರಿನ Eye density design & disply company ಯಲ್ಲಿ ಉದ್ಯೋಗ ವನ್ನು ಮಾಡುತ್ತಿದ್ದಾನೆ .

IMG 20180617 WA0019
ಇದಲ್ಲದೇ ನೂರಾರು ಚಿತ್ರಕಲಾ ಕಲಾವಿದರಿಗೆ ಮಾರ್ಗದರ್ಶನ ಮತ್ತು ಸಹಾಯವನ್ನು ಮಾಡಿರುವ ವಿನಯ ಅನಾಥ ಮಕ್ಕಳ ಕೇಂದ್ರದ ವಿದ್ಯಾರ್ಥಿಗಳಿಗೆ ಉಚಿತ ಚಿತ್ರಕಲಾ ತರಬೇತಿಯನ್ನೂ ನೀಡುತ್ತಿದ್ದಾನೆ .
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸುದ್ಧಿ ಚಿತ್ರಗಳ ಸಂಗ್ರಹದಲ್ಲಿ ದಾಖಲೆಯನ್ನು ನಿರ್ಮಿಸಿರುವ ವಿನಯನ ಸಾಧನೆ ಬಹು ದೊಡ್ಡದು . ಶ್ರೀರಾಮಚಂದ್ರಾಪುರಮಠದ ಸೇವಾಬಿಂದು ,ಧರ್ಮಭಾರತೀ ಮಾಸಪತ್ರಿಕೆ , ಉಲ್ಲೇಖ ವಿಭಾಗದ ಸೇವಾಬಿಂದುವೂ ಹೌದು .
1999 ನೇ ಇಸವಿಯಲ್ಲಿ “ಶ್ರೀಗುರು ಚಿತ್ರ ಭಾರತೀ”ಯ ಆರಂಭ (ಶ್ರೀಶ್ರೀಗಳ ಮತ್ತು ಶ್ರೀಮಠದ ಸಮಗ್ರ ಸುದ್ಧಿಚಿತ್ರಗಳ ಸಂಗ್ರಹ),
2000 ನೇ ಇಸವಿಯಲ್ಲಿ “ಚಿತ್ರಭಾರತೀ ಸಮೂಹ ಸಂಸ್ಥೆ” ಆರಂಭ( ಚಿತ್ರಕಲಾಶಿಕ್ಷಣ, ಸಾಂಸ್ಕೃತಿಕ),
2012 ನೇ ಇಸವಿಯಲ್ಲಿ “ಚಿತ್ರಭಾರತೀ ಪ್ರಕಾಶನ” ದ ಆರಂಭ (ಹತ್ತಾರು ಪುಸ್ತಕ, ಧ್ವನಿ ಮುದ್ರಿಕೆಗಳ ಅನಾವರಣ), 2015 ನೇ ಇಸವಿಯಲ್ಲಿ “ಚಿತ್ರಭಾರತೀ ಡಿಸೈನ್ ಸೊಲ್ಯೂಷನ್ಸ್ ಸಂಸ್ಥೆ ಆರಂಭ( ವಿನ್ಯಾಸ ಸಲಹೆ, ಜಾಹಿರಾತು ವಿನ್ಯಾಸ, ಗ್ರಾಫಿಕ್ ಡಿಸೈನಿಂಗ್ ) , ನೂರಾರು ವೇದಿಕೆಗಳ ಅಲಂಕಾರ, ಮಂಟಪಗಳ ನಿರ್ಮಾಣ ,
ಶ್ರೀರಾಮಚಂದ್ರಾಪುರಮಠದಲ್ಲಿ ನಡೆದ ಶ್ರೀರಾಮೋತ್ಸವದ ಕಲೋತ್ಸವದಲ್ಲಿ ” ಚಿತ್ರಭಾರತೀ ಸಂಗ್ರಹ ಪ್ರದರ್ಶನ ” . ಇದೆಲ್ಲದಕ್ಕೂ ಕಲಶಪ್ರಾಯವೆಂಬಂತೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳವರಿಂದ ಸನ್ಮಾನವನ್ನೂ , ಅನುಗ್ರಹವನ್ನೂ ಪಡೆದ ಧನ್ಯ ವಿನಯನೆಂದರೆ ತಪ್ಪಲ್ಲ .ಗೋಕರ್ಣದಲ್ಲಿ ಸಂಪನ್ನವಾದ ಮಹಾಶಿವರಾತ್ರಿ ಉತ್ಸವದಲ್ಲಿ ಚಿತ್ರಭಾರತೀ ಪ್ರದರ್ಶನವೂ ನಡೆದು ಜನರಿಂದ ಪ್ರಶಂಸೆಯ ಮಹಾಪೂರದ ಸುರಿಮಳೆ !!
IMG 20180617 WA0015
2018 ರಲ್ಲಿ ಡಾಕ್ಟರೇಟ್ ಪದವಿಯ ಅಧ್ಯಯನದ ಆರಂಭವನ್ನೂ ಮಾಡಿರುವ ವಿನಯನ ಸಾಧನೆ ಅಪಾರ .ಚಿತ್ರಕಲೆ, ಸಮಾಜಸೇವೆ, ಗುರುಸೇವೆ, ಸಾಂಸ್ಕೃತಿಕ ಕಾರ್ಯಗಳು ಎಂದರೆ ಅಚ್ಚುಮೆಚ್ಚು .
ಚಿತ್ರಕಲಾ ಪರಿಷತ್ ನಡೆಸುವ ಚಿತ್ರಸಂತೆಯಲ್ಲಿ ಚಿತ್ರಕಲಾ ಪ್ರದರ್ಶನವನ್ನೂ ನಡೆಸಿರುತ್ತಾನೆ .
ಚಿತ್ರಕಲಾ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ವಿನಯನ ಬಹು ದೊಡ್ಡ ಕನಸು ನನಸಾಗಲೆಂದು ನಾವೆಲ್ಲರೂ ಹಾರೈಸೋಣವಲ್ಲವೇ ?
IMG 20180617 WA0014
ಚಿತ್ರಭಾರತೀಯ ಸಾಧನೆಯನ್ನು ಗುರುತಿಸಿದ ಶ್ರೀ ಲೀಲಾಗಣಪತಿ ಚ್ಯಾರಿಟೇಬಲ್ ಟ್ರಸ್ಟ್ ಇವರಿಂದ ಗಣಕಯಂತ್ರವನ್ನು ಕೊಡುಗೆಯಾಗಿ ನೀಡಿರುತ್ತಾನೆ .
ಅಜ್ಜ ಪೂಜ್ಯ ಶ್ರೀ ಗಣಪತಿ ಭಟ್ ಕಬ್ಬಿನಗದ್ದೆಯವರು ಆರಂಭಿಸಿದ ಕಬ್ಬಿನಗದ್ದೆ ಗಣೇಶೋತ್ಸವಕ್ಕೆ ಕಳೆದ 17 ವರ್ಷಗಳಿಂದ ಮಂಟಪವಿನ್ಯಾಸದ ಸೇವೆಯನ್ನು ಮಾಡುವುದರ ಜೊತೆ ಜೊತೆಗೇ ಪ್ರತಿನಿತ್ಯ ಕೆಂಪು ಗಣಪತಿಯ ಆರಾಧನೆಯೂ ನಡೆಯುತ್ತಿದೆ . ತನ್ನೊಂದಿಗೆ ಸಂಚರಿಸುವ ಆರಾಧ್ಯ ಗಣಪತಿ !!
ಚಿತ್ರಭಾರತೀ ತಮ್ಮ ಮೇಲೆ ಇಟ್ಟಿರುವ ಭಕ್ತಿಯನ್ನು ಕಂಡು ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ಶ್ರೀರಾಮೋತ್ಸವದಲ್ಲಿ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ವಿನಯನ ಜನ್ಮದಿನದಂದು ತಮ್ಮ ಪಾದುಕೆಯನ್ನೇ ನೀಡಿ ಹರಸಿರುವುದು ಶ್ರೀಗುರುಗಳ ವಿಶೇಷವಾದ ಅನುಗ್ರಹವೇ .
IMG 20180617 WA0017
ಸಿಂಡಿಕೇಟ್ ಇನ್ಸ್ಟಿಟ್ಯೂಟ್ ಆಫ್ ರೂರಲ್ ಡೆವಲಪ್‍ಮೆಂಟ್ ಸಂಸ್ಥೆಯಿಂದ ಪೋಟೋಗ್ರಫಿ ಮತ್ತು ವಿಡಿಯೋಗ್ರಫಿಯಲ್ಲಿ ಅಧ್ಯಯನ ಮಾಡಿರುವ ವಿನಯ ರಚಿಸಿರುವ
‘ಹೂವಿನಲ್ಲಿ ಒಂದು ಮುಖ’ ಚಿತ್ರಕ್ಕೆ “ಅಂತರಾಷ್ಟ್ರೀಯ ಗೌರವ ” ದೊರೆತಿರುವುದರ ಜೊತೆಗೆ
Art World ಹೈದರಾಬಾದ್ ಇವರಿಂದ ಚಿನ್ನದ ಪದಕ ಹಾಗೂ Art Centre ದೆಹಲಿ ಇವರಿಂದ ಚಿನ್ನದಪದಕ ದೊರೆತಿರುವುದು .
IMG 20180617 WA0016

RELATED ARTICLES  ಕಂಪನಿಯ ವಹಿವಾಟಿನ ಅಂತರಂಗ

ವೇದಗಣಿತ ಅಧ್ಯಯನ ವೇದಿಕೆ(ರಿ) ಕುಂದಾಪುರ ಇವರು ನಡೆಸಿದ ವೇದಗಣಿತ ಪರಿಚಯದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ,
Koras Colours India Ltd ಇವರು ನಡೆಸಿದ Colour funs ಅಂತರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಯ ಬೆಳ್ಳಿಪದಕವನ್ನು ತಮ್ಮದಾಗಿಸಿರುವ ವಿನಯ
ಧರ್ಮಸ್ಥಳದ ಧರ್ಮಾದಿಕಾರಿಗಳಾದ ಪೂಜ್ಯಶ್ರೀ ವಿರೇಂದ್ರ ಹೆಗ್ಗಡೆ ಇವರಿಂದ ಪ್ರಶಂಸೆಯನ್ನೂ ,
ನ್ಯಾಯಮೂರ್ತಿ ಎನ್ ಸಂತೋಷ ಹೆಗ್ಡೆ, ಮಾಜಿ ಮುಖ್ಯಮಂತ್ರಿ ಬಿ.ಯಸ್ .ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವ ಬಸವರಾಜಹೊರಟ್ಟಿ, ಪದ್ಮಶ್ರೀಚಿಟ್ಟಾಣಿ ರಾಮಚಂದ್ರ ಹೆಗಡೆ, ಯಕ್ಷಗುರು ಹೊಸ್ತೋಟಾ ಮಂಜುನಾಥ ಭಾಗವತರು, ಶ್ರೀವಿದ್ಯಾಭೂಷಣರು, ಶಶಿಧರ್ ಕೋಟೆ, ಬಿ ಕೆ ಎಸ್ ವರ್ಮಾ, ಹೀಗೆ ಅನೇಕ ಮಹನೀಯರುಗಳಿಂದ, ವಿವಿಧ ಮಠಾಧೀಶರಿಂದ ಪ್ರಶಂಸೆಯನ್ನು ಗಳಿಸಿರುತ್ತಾನೆ . ವಿನಯನ ಸಾಧನೆಯ ಬಗ್ಗೆ E TV ಯಲ್ಲಿ ವಿಶೇಷ ಸಂದರ್ಶನವನ್ನೂ ಮಾಡಿರುತ್ತಾರೆ .
ಆಧ್ಯಾತ್ಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವನನ್ನು ವಿವೇಕಯುಗ ಫೌಂಡೇಷನ್ ,ಬೆಂಗಳೂರು ಇವರಿಂದ ವಿವೇಕ ಪ್ರಶಸ್ತಿ ,
ವಿವೇಕಾನಂದ ವೇದಿಕೆ, ಧಾರವಾಡ ಇವರಿಂದ ಪ್ರಶಸ್ತಿ
ವಿವೇಕಾನಂದ ವೇದಿಕೆ ,ಬೆಂಗಳೂರು ಇವರಿಂದ ಚಿನ್ನದ ಪದಕ
ಶ್ರೀಸುರಸರಸ್ವತಿ ಸಭಾ ಇವರಿಂದ ಪ್ರಶಸ್ತಿ ,
ಭಾರತ ಸಂಸ್ಕ್ರತಿ ಪ್ರತಿಷ್ಠಾನ , ಬೆಂಗಳೂರು ಇವರಿಂದ ಪ್ರಶಸ್ತಿ ,ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ,ಬೆಂಗಳೂರು , ಇವರಿಂದ ‘ ಮೆಡಿಕಲ್ ಪ್ಲಾಂಟ್ ಮತ್ತು ಹೋಲಿ ಪೋರೆಸ್ಟ್’ ಮಹಾಪ್ರಬಂಧಕ್ಕೆ ಪ್ರಶಸ್ತಿ ,
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ಸ್, ಧಾರವಾಡ ಇವರು ನಡೆಸಿದ ಪ್ರತಿಭಾ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯೊಂದಿಗೆ ಚಿನ್ನದ ಪದಕ ,
ನಾಟ್ಯಶ್ರೀ ಸಾಂಸ್ಕೃತಿಕ ವೇದಿಕೆಯಿಂದ ಸನ್ಮಾನ ,
ರೋಟರಿ ಕ್ಲಬ್ ಹೊನ್ನಾವರ ಇವರಿಂದ ಪ್ರಶಸ್ತಿ,ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ಸ್ ,ಧಾರವಾಡ ಇವರಿಂದ ಬೆಳ್ಳಿ ಪದಕ ,ಅಂತರಾಷ್ಟ್ರೀಯ ವಿಜ್ಞಾನ ಪರೀಕ್ಷೆಯಲ್ಲಿ ಪ್ರಶಸ್ತಿ, ಪ್ರತಿಭೋದಯ ಪ್ರಶಸ್ತಿ, ಶ್ರೀಸುಬ್ರಹ್ಮಣ್ಯ ವಿದ್ಯಾಸಂಸ್ಥೆ ,ಕವಲಕ್ಕಿ ಇವರಿಂದ ಪ್ರಶಸ್ತಿ, ಚಿತ್ರಕಲಾ ಶಿಕ್ಷಕರ ಬಳಗ ಇವರಿಂದ ‘ಕಲಾಬಿಂದು’ ಪ್ರಶಸ್ತಿ, ಕಲಾವೇದಿಕೆ , ಬೆಂಗಳೂರು ಇವರಿಂದ ‘ಚಿತ್ರಕಲಾಶ್ರೀ’ ಪ್ರಶಸ್ತಿ, ಶ್ರೀಚಿತ್ತ ಪ್ರಕಾಶನ, ಬೆಂಗಳೂರು ಇದರ ಸದಸ್ಯನಾಗಿರುವ ವಿನಯ.
IMG 20180617 WA0018
ಶ್ರೀಶಂಭುಲಿಂಗೇಶ್ವರ ದೇವಾಲಯ, ಹಡಿನಬಾಳ ಇದರ ಪುನರ್ ನಿರ್ಮಾಣ ಸಮಿತಿಯ ಗಣಕೀಕರಣ ವಿಭಾಗದ ಸದಸ್ಯ, ರಾಗಶ್ರೀ ಸಂಗೀತ ವಿದ್ಯಾಲಯ , ಹಡಿನಬಾಳ ಇದರ ಸದಸ್ಯ, ಕಬ್ಬಿನಗದ್ದೆ ಉತ್ಸವದ ಸದಸ್ಯ ಹಾಗೂ ಉಸ್ತುವಾರಿಯ ಜವಾಬ್ದಾರಿಯೂ ಇದೆ .

RELATED ARTICLES  ಮದುವೆ ಮನೆಯಲ್ಲಿ ವಧು ವರರು ಗನ್ ಹಿಡಿದರು : ಮುಂದೆ ನಡೆದಿದ್ದು ಅನಾಹುತ.

ಚಿತ್ರಭಾರತೀ ದಾಖಲೆಗಳು ಗಿನ್ನಿಸ್ ವರ್ಡ್ ರೆಕಾರ್ಡ ಬುಕ್ ಸದ್ಯದಲ್ಲೇ ಸೇರಲಿರುವುದು ವಿಶೇಷ ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಲಕ್ಷಕ್ಕೂ ಹೆಚ್ಚು ಭಾವಚಿತ್ರ ಸಂಗ್ರಹದ ಜೊತೆಗೆ
ಶ್ರೀ ರಾಮಚಂದ್ರಾಪುರ ಮಠದ ಸಮಗ್ರ ಸುದ್ಧಿ ಚಿತ್ರಸಂಗ್ರಹವೂ ಇದೆ .

” ನಾವಿದ್ದೇವೆ ನಾವಿದ್ದೇವೆ ಶ್ರೀಗಳ ಜೊತೆಗೆ ನಾವಿದ್ದೇವೆ ” ಬಳಗದ ಸಂಸ್ಥಾಪಕ ಸದಸ್ಯನಾದ ವಿನಯನದ್ದು ಸರಳ, ಸಜ್ಜನ, ವಿನಯ ಗುಣ .ಈ ಗುಣಗಳನ್ನೇ ತನ್ನ ಜೀವನದ ಧ್ಯೇಯವಾಗಿಸಿಕೊಂಡಿದ್ದಾನೆ .
‘ತನಗೆ ಕೇಡನ್ನು ಬಯಸುವವರಿಗೂ ಒಳ್ಳೆಯದನ್ನು ಹಾರೈಸುವುದು’ ಈತನ ಗುಣ .
IMG 20180617 WA0021
ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಮತ್ತು ಗಣಪತಿ ಈತನ ಹೃದಯ ಕಮಲದ ಆರಾಧ್ಯ ದೇವರು .
ನಾಟಕ, ಚಲನಚಿತ್ರದಲ್ಲಿಯೂ ನಟನೆಯನ್ನು ಮಾಡಿರುವ ಇವನಿಗೆ ಯಕ್ಷಗಾನ ಮತ್ತು ಸಂಗೀತ ಎಂದರೆ ತುಂಬಾ ಪ್ರೀತಿ.
ಯಕ್ಷಗಾನ ವಿಡಿಯೋ ಸಂಗ್ರಹ ಮಾಡುವುದೂ ಇವನ ಹವ್ಯಾಸದಲ್ಲಿ ಒಂದು.
IMG 20180617 WA0013
ಮಾತೆಯರ ಮಾತೆಯಾದ ಗೋವು, ಹಸಿರುಗಳೆಂದರೆ ವಿನಯನಿಗೆ ಪಂಚಪ್ರಾಣ . ವಿನಯ ಅದೆಷ್ಟೇ ಸಾಧನೆಯನ್ನು ಮಾಡಿದರೂ ವಿನಯವಂತನಾಗಿಯೇ ಇರಲಿ . ಇನ್ನಷ್ಟು ಸಾಧನೆಯನ್ನು ಮಾಡಿ ನಮ್ಮೆಲ್ಲರಿಗೂ ಕೀರ್ತಿಯನ್ನು ,ಹೆಮ್ಮೆಯನ್ನು ತರಲಿ ಎಂದು ಆಶಿಸೋಣವೇ ?

ಲೇಖನ : ಸುವಿಚಾರ.