ಭಸ್ಮ ಕಳಿಸಿದ್ದೇನೆ. ದಿನವೂ ಸ್ವಲ್ಪ-ಸ್ವಲ್ಪ ತಾಯಿತದ ನೀರಿನಿಂದ ಅಥವಾ ‘ನಮಃ ಶಾಂತಾಯ …’ ಈ ಮಂತ್ರದಿಂದ ಅಭಿಮಂತ್ರಿತ ಮಾಡಿದ ತೀರ್ಥದಿಂದ ತೆಗೆದುಕೊಳ್ಳುತ್ತಾ ಹೋಗು ಮತ್ತು ಅದೇ ಮಂತ್ರ ಹೆಚ್ಚು ಮಾಡುತ್ತಿರು……..ಎಲ್ಲ ಸುಖಗಳು ಲಭಿಸುತ್ತವೆ. ನಿಃಶ್ಶಂಕನಾಗಿರು.
(ಶ್ರೀ ಪ್ರಥ್ವೀರಾಜ ಭಾಲೇರಾವ, ಪುಣೆ ಅವರಿಗೆ ಬರೆದ ಪತ್ರ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
|| ಓಂ ||
|| ಶ್ರೀರಾಮ ಸಮರ್ಥ ||
ವದ್ದಳ್ಳಿ
ಅಶ್ವೀನ ವ|೪
ಚಿ. ಪೃಥ್ವೀರಾಜನಿಗೆ ಆಶೀರ್ವಾದ,
ಚಿನ್ನವೆಂದ ಮೇಲೆ ಅದಾವುದೋ ಕಬ್ಬಿಣ| ಎಂದಿಗೂ ಆಗಲಾರದು|
ಹಾಗೆಯೇ ಗುರುದಾಸ ಸಂಶಯೀ| ಆಗಲಾರನು ಎಂದಿಗೂ||
ಗಂಗೆಯಲಿ ಸೇರಿದ ನೀರು | ಸೇರಿದೊಡನೆಯೆ ಆಯ್ತು ಗಂಗಾಜಲ|
ನಂತರ ಬೇಕಾದರೆ ಬೇರೆ ಮಾಡಿದರೂ| ಎಂದಿಗೂ ಬೇರೆಯಾಗದು||
ಮಗಾ! ನಿನ್ನಿಂದ ಬಂದ ಪತ್ರ ಚಿ.ದತ್ತನು ಓದಿ ತೋರಿಸಿದನು. ಕೇಳುತ್ತಿರುವಾಗ ಅಂತಃಕರಣ ಸುತ್ತಿ ಕಿತ್ತು ಬಂದಂತಾಯಿತು. ಚಾತುರ್ಮಾಸದಲ್ಲಿ ಯಾವುದೇ ಪತ್ರ ನನ್ನ ವರೆಗೆ ಬರಲಿಕ್ಕೆ ಕೊಡುವದಿಲ್ಲ. ಇದರಲ್ಲಿ ಸ್ವಾಮಿಗಳು ಚಾತುರ್ಮಾಸದಲ್ಲಿ ಪೂರ್ಣ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂಬುದೇ ಭಕ್ತವೃಂದದ ಹೇತುವಾಗಿದೆ. ನಿನ್ನ ಎರಡು ಪತ್ರ ಬಂದು ತಲುಪಿದವು. ಒಂದು ಬಹಳ ಮೊದಲೇ ಬರೆದದ್ದು ಮತ್ತು ಎರಡನೆಯದು ನಿನ್ನೆಯೇ ಬಂದು ತಲುಪಿದ್ದು.
ಶ್ರೀಗುರು ಜೀವಮಾತ್ರದ ಉದ್ಧಾರಕ್ಕಾಗಿಯೇ ಇರುತ್ತಾರೆ. ಅಮೃತದಲ್ಲಿ ಹೇಗೆ ವಿಷದ ಯಾವುದೇ ಅಂಶವೂ ಇರುವದಿಲ್ಲವೋ, ಅದೇ ರೀತಿ ಶ್ರೀಗುರುಸ್ವರೂಪದಲ್ಲಿ ಅಪಾಯಕಾರಕ ಏನೂ ಇರುವದಿಲ್ಲ.
‘ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಮ್|’
ಶ್ರೀಗುರುವಿನ ಧ್ಯಾನದಿಂದ ಇದರ ಪ್ರಮಾಣ ಮನವರಿಕೆಯಾಗುತ್ತದೆ. ನನಗೆ ನಿನ್ನ ಮೇಲೆ ಸಿಟ್ಟು ಬಂದಿಲ್ಲ ಮತ್ತು ಬರುವದೂ ಇಲ್ಲ.
‘ಕಲ್ಪವೃಕ್ಷದ ಕೆಳಗೆ ನಿಂತು ದುಃಖ ಸುರಿಸುವದು…’ ಹೀಗೆ ಮಾತ್ರ ಆಗಗೊಡಬಾರದು.
ಚಿಂತೆ ಮಾಡಬೇಡ. ನನ್ನ ಪೂರ್ಣ ಕೃಪೆ ಇದೆ. ಭಸ್ಮ ಕಳಿಸಿದ್ದೇನೆ. ದಿನವೂ ಸ್ವಲ್ಪ-ಸ್ವಲ್ಪ ತಾಯಿತದ ನೀರಿನಿಂದ ಅಥವಾ ‘ನಮಃ ಶಾಂತಾಯ …’ ಈ ಮಂತ್ರದಿಂದ ಅಭಿಮಂತ್ರಿತ ಮಾಡಿದ ತೀರ್ಥದಿಂದ ತೆಗೆದುಕೊಳ್ಳುತ್ತಾ ಹೋಗು ಮತ್ತು ಅದೇ ಮಂತ್ರ ಹೆಚ್ಚು ಮಾಡುತ್ತಿರು. ‘ಸರ್ವದೇವಾತ್ಮಕೋ ಗುರುಃ’ ‘ಸರ್ವದುಃಖಾರ್ವಧಿ ಗುರುಃ’
ಈ ಎಲ್ಲ ದುಃಖಗಳು ಹೋಗುತ್ತವೆ. ಎಲ್ಲ ಸುಖಗಳು ಲಭಿಸುತ್ತವೆ. ನಿಃಶ್ಶಂಕನಾಗಿರು.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಶ್ರೀಧರ

ಒಂದು ಕವಿ ತನ್ನ ವಾಂಗ್ಮಯ ಭಂಡಾರದ ಮೇಲೆ ತನ್ನ ವಾಂಗ್ಮಯವನ್ನುದ್ದೇಶಿಸಿ ಹೀಗೆ ಬರೆದಿದ್ದನು. ‘ಮಗನೇ, ನೀನು ನಿನ್ನ ಸ್ವಬಲದಿಂದ ಬದುಕಬೇಕು. ನಿನ್ನಲ್ಲಿ ಜಗದುದ್ಧಾರ ಮಾಡುವ ಪವಿತ್ರತೆ ಮತ್ತು ಪಾತ್ರತೆ ಇದ್ದರೆ ನಿನ್ನ ನಾಶ ಯಾರೂ ಮಾಡಲಿಕ್ಕೆ ಶಕ್ಯವಿಲ್ಲ. ಸರ್ವಶಕ್ತಿವಂತ ಪರಮೇಶ್ವರ ನಿನ್ನ ರಕ್ಷಣೆಗೆ ಸದೈವ ಸಿದ್ಧನಿರುತ್ತಾನೆ.’
(ಶ್ರೀ ಪ್ರಥ್ವೀರಾಜ ಭಾಲೇರಾವ, ಪುಣೆ ಅವರಿಗೆ ಬರೆದ ಪತ್ರ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

||ಶ್ರೀರಾಮ ಸಮರ್ಥ||

ಚಿ. ಪೃಥ್ವೀರಾಜನಿಗೆ ಆಶೀರ್ವಾದ,
ಮಗಾ,
ನೀನು ಏಕನಿಷ್ಠ ಗುರುಭಕ್ತನಿರುವೆ, ಇದೊಂದೇ ಆಧಾರದಿಂದ ಮತ್ತು ವಿಶ್ವಾಸದ ಮೇಲೆ, ಏನಾದರೂ ಸಮಾಧಾನಕಾರಕ ಬರೆಯಬೇಕೆಂದು ನಾನು ಮನಸ್ಸಿನಲ್ಲಿ ತಂದೆ. ನಿನ್ನ ಅಚಲ ಗುರುಭಕ್ತಿಯೊಂದೇ ಈ ಪ್ರಸಂಗದಲ್ಲಿ ನಿನ್ನ ಮನಸ್ಸಿಗೆ ಸಾಂತ್ವನ ನೀಡಬಹುದೆಂಬುದು ನನಗೆ ನಿಶ್ಚಯವಿದೆ.
‘ನೋದೇತಿ ನಾಸ್ತಮಾಯಾತಿ ಸುಖದುಃಖೇ ಮನಃಪ್ರಭಾ’
ಮಗಾ, ತತ್ವನಿಷ್ಠೆ ಅಂದರೆ ಈ ರೀತಿ ಇದೆ. ಈ ರೀತಿಯ ತತ್ವನಿಷ್ಠೆ ನಿನ್ನ ಅಂಗಾಂಗಳಲ್ಲಿ ಹಾಸುಹೊಕ್ಕಾಗಿರಲಿ.
‘ನ ಪ್ರಹ್ಯಷ್ಯೇತ್ಪ್ರಿಯಂ ಪ್ರಾಪ್ಯ ನೋದ್ವಿಜೇತ್ಪ್ರಾಪ್ಯ ಚಾಪ್ರಿಯಮ್|
ಸ್ಥಿರಬುದ್ಧಿರಸಂಮೂಢೋ ಬ್ರಹ್ಮವಿದ್ ಬ್ರಹ್ಮಣಿ ಸ್ಥಿತಃ || – ಗೀ. ೫|೨೦|
ಈ ರೀತಿಯ ಬ್ರಹ್ಮನಿಷ್ಠರ ಅವಿಚಲ, ಆನಂದರೂಪತೆ ನಿನಗೆ ಪ್ರಾಪ್ತವಾಗಲಿ. ನಿನ್ನ ಮಕ್ಕಳಿಗೆ ರಕ್ಷೆ ಹಾಕಿದ್ದೇನೆ. ನಾನು ನಿನ್ನ ಬರಹ ನೋಡದಿರುವದರಿಂದ ಮತ್ತು ನೀನೂ ಆ ವಿಷಯದಲ್ಲಿ ಏನೂ ಕಲ್ಪನೆ ಕೊಡದಿದ್ದರಿಂದ ೪-೫ ಸಾವಿರ ಪುಟಗಳ ನಿನ್ನ ಬರಹಗಳು ಇವೆ ಎಂಬುದು, ಇಂದೇ ನಿನ್ನ ಪತ್ರದಿಂದ ನನಗೆ ತಿಳಿಯಿತು. ಮೊದಲೇ ಅದರ ಕಲ್ಪನೆಯಿದ್ದರೆ, ಆ ಭಂಡಾರಕ್ಕೂ ರಕ್ಷೆ ಹಾಕುತ್ತಿದ್ದೆ. ಪತ್ರದ ಹೊರತು ಉಳಿದ ಯಾವುದೇ ನಾಲ್ಕು ಸಾಲಿನ ನಿನ್ನ ಬರಹವನ್ನೂ ನಾನು ನೋಡಿರಲಿಲ್ಲ ಎಂದು ಅನಿಸುತ್ತದೆ. ನಿನ್ನ ವಾಂಗ್ಮಯದ ಶಾಬ್ದಿಕ ಪರಿಚಯ ನಿನ್ನ ಪತ್ರದ ಮೇಲಿಂದ ಇಂದೇ ಆಯಿತು. ಪರಮೇಶ್ವರನ ಮನಸ್ಸಿನಲ್ಲಿ ಬಂದರೆ ಈಗಾದರೂ ಅವನು ಅದರ ರಕ್ಷಣೆ ಮಾಡಿ ನಿನಗೆ ಅದನ್ನು ಚೆನ್ನಾಗಿ ಮಾಡೇ ಕೊಡಬಹುದು. ತುಕಾರಾಮನ ಮುಳುಗಿದ ಟಿಪ್ಪಣಿ ಪುಸ್ತಕಗಳನ್ನು ತಿರುಗಿ ತಂದು ಕೊಡಲಿಲ್ಲವೇ? ಪರಮಾತ್ಮನು ಲೋಕೋಪಕಾರಕ ವಸ್ತುಗಳ ನಾಶ ಆಗಲಿಕ್ಕೆ ಬಿಡುವದಿಲ್ಲ, ಎಂಬ ಸಿದ್ಧಾಂತವಿದೆ. ಶ್ರೀನಾಥ ಭಾಗವತದ ಪಂಚಾಧ್ಯಾಯಿ ಟೀಕೆ ಶ್ರೀಶಂಕರಮಠಾಧಿಪತಿಗಳ ಆಜ್ಞೆಯ ಮೇಲಿಂದ ಗಂಗೆಗೆ ಒಗೆದು ಬಿಟ್ಟಾಗ, ಶ್ರೀಗಂಗಾದೇವಿಯೇ ಅದನ್ನು ಮೇಲೇನೇ ಹಿಡಿದಳು ಎಂದು ಒಂದು ಆಖ್ಯಾಯಿಕೆ ಇದೆ.
ಮಗಾ! ನಿನ್ನ ವಾಂಗ್ಮಯ ಹಾಗೆ ಸಮುಚಿತದ್ದೇ ಆದರೆ ನಿಶ್ಚಯವಾಗೂ ಪರಮಾತ್ಮ ಅದನ್ನು ನಷ್ಟವಾಗಲು ಕೊಡುವದಿಲ್ಲವೆಂದು ಚಿಂತೆ ಬಿಟ್ಟು ಇದ್ದುಬಿಡು. ಶ್ರೀಗಂಗೆಗೆ ನಾಥಭಾಗವತದ ಮಹತ್ವ ಅನಿಸಿತು; ಯಾಕೆ? ಒಂದು ಕವಿ ತನ್ನ ವಾಂಗ್ಮಯ ಭಂಡಾರದ ಮೇಲೆ ತನ್ನ ವಾಂಗ್ಮಯವನ್ನುದ್ದೇಶಿಸಿ ಹೀಗೆ ಬರೆದಿದ್ದನು. ‘ಮಗನೇ, ನೀನು ನಿನ್ನ ಸ್ವಬಲದಿಂದ ಬದುಕಬೇಕು. ನಿನ್ನಲ್ಲಿ ಜಗದುದ್ಧಾರ ಮಾಡುವ ಪವಿತ್ರತೆ ಮತ್ತು ಪಾತ್ರತೆ ಇದ್ದರೆ ನಿನ್ನ ನಾಶ ಯಾರೂ ಮಾಡಲಿಕ್ಕೆ ಶಕ್ಯವಿಲ್ಲ. ಸರ್ವಶಕ್ತಿವಂತ ಪರಮೇಶ್ವರ ನಿನ್ನ ರಕ್ಷಣೆಗೆ ಸದೈವ ಸಿದ್ಧನಿರುತ್ತಾನೆ.’
ಸದೈವ ಅಬಾಧಿತ ಇರುವದೇ ಸಿದ್ಧಾಂತವೆಂದೆನಿಸುತ್ತದೆ. ಉತ್ಕೃಷ್ಟ ವಾಂಗ್ಮಯದ ರಕ್ಷಣೆ ಪರಮೇಶ್ವರನು ತಾನೇ ಮಾಡುತ್ತಾನೆ. ಈ ನಿಯಮವಿರುವದರಿಂದಲೇ ನಿನಗೆ ಶೋಕ ಮಾಡುವ ಕಾರಣವಿಲ್ಲ. ಒಂದಾನುವೇಳೆ, ನಿನಗೆ ಆ ವಾಂಗ್ಮಯ ಕೈಗೆ ಸಿಗದೇ ಹೋದರೂ, ‘ದೇವರ ಮನಸ್ಸಿಗೆ ಬರಲಿಲ್ಲ ಎಂದು ರಕ್ಷಣೆ ಮಾಡಲಿಲ್ಲ; ಯಾವುದು ದೇವರಿಗೆ ಮಾನ್ಯವಿಲ್ಲವೋ ಆ ವಾಂಗ್ಮಯ ಇರುವದಾದರೂ ಏತಕ್ಕೆ? ಹೋಗಿದ್ದೇ ಒಳ್ಳೆಯದಾಯಿತು!’ ಎಂದು ಸಹಜವಾಗಿಯೇ ನಿನಗೆ ಅನಿಸಿ, ಈ ದೃಷ್ಟಿಯಿಂದಲೂ ಶೋಕಕ್ಕೆ ಕಾರಣವಿರುವದಿಲ್ಲ. ಒಬ್ಬ ಮಹಾತ್ಮರ ವಚನವೂ ಈ ರೀತಿ ಇದೆ ‘ನಾವು ಪ್ರತಿಕ್ಷಣ ಕುಶಲರಾಗಿದ್ದು, ಸರಿಯಾಗಿ ವಿಚಾರ ಮಾಡಿ ನೋಡುತ್ತಾ ಇದ್ದರೆ, ಯಾವುದೇ ಪ್ರಸಂಗದಲ್ಲಿಯೂ, ಕಾಮ-ಕ್ರೋಧ-ದುಃಖ-ಶೋಕಗಳ ಬಾಧೆ ಎಂದೂ ಯಾರಿಗೂ ಆಗುವದೇ ಇಲ್ಲ.’
(ಪತ್ರದ ಎರಡನೆಯ ಭಾಗ ಮುಂದುವರಿಯುವದು)

RELATED ARTICLES  ನಿಂದಕರಿರಬೇಕು……!