ಮಗಾ! ಪರಬ್ರಹ್ಮನು ಆನಂದರೂಪ. ಶ್ರೀಗುರು ಮತ್ತು ಪರಮಾತ್ಮನ ಉಪಾಸನೆ ಅಂದರೆ ಆನಂದರೂಪದ್ದೇ ಉಪಾಸನೆ. ಆ ಆನಂದದಲ್ಲಿ ಏನೂ ಅಂತರ ಬೀಳದೇ ಇರುವದು ಅಂದರೇ ದೇವರ ಅಥವಾ ಗುರುವಿನ ಅಖಂಡ ಧ್ಯಾನದಲ್ಲಿರುವದು.
(ಶ್ರೀ ಪ್ರಥ್ವೀರಾಜ ಭಾಲೇರಾವ, ಪುಣೆ ಅವರಿಗೆ ಬರೆದ ಪತ್ರದ ಮಂದುವರಿದ ಭಾಗ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
ಒಂದು ಸಂತ ಕವಿ ಹೇಳುತ್ತಾನೆ ‘ದೇವಾ, ನಿನ್ನ ಬಗ್ಗೆ ನಾನು ಏನು ಮಾಡಿದ್ದೇನೆ ಎಂದು, ನಾನು ನಿನ್ನ ಮೇಲೆ ಹಕ್ಕಿನಿಂದ ಸಿಟ್ಟು ಮಾಡುವದು? ನಿನಗೆ ಏನು ಕಡಿಮೆಯಿದೆ? ನಾವು ಮಾಡಿದ ಸತ್ಸಾಧನೆಗಳಿಂದ ನೀನು ಸಂತುಷ್ಟನಾಗುತ್ತೀಯೆ, ನಮಗೆ ನಿನ್ನ ಭಕ್ತನೆಂದು ಒಪ್ಪಿಕೊಳ್ಳುತ್ತೀಯೆ ಮತ್ತು ನಮ್ಮ ಉದ್ಧಾರ ಮಾಡತ್ತೀಯೆ, ನಮ್ಮ ಕೀರ್ತಿ ಹೆಚ್ಚಿಸುತ್ತೀಯೆ, ಎಲ್ಲ ಸಂಕಟಗಳಿಂದ ನಮ್ಮ ಸಂರಕ್ಷಣೆ ಮಾಡುತ್ತೀಯೆ, ನಿನ್ನ ದೊಡ್ಡಸ್ಥಿಕೆಗೆ ನಿನ್ನದೇ ಉಪಮೆ ಮಾತ್ರ ಒಪ್ಪುತ್ತದೆ…. ಇತ್ಯಾದಿ. ಇದನ್ನು ಓದಿ ನಾನು ಗದ್ಗದತಿನಾದೆ. ಇದೆಷ್ಟು ಸರಿ ಅಲ್ಲವಾ ನೋಡು?
‘ಮೇಘ ಚಾತಕಾವರಿ ವೋಳೇನಾ| ತರೀ ಚಾತಕ ಪಾಲಟೇನಾ|
ಚಂದ್ರ ವೇಳೇಸಿ ಉಗವೇನಾ| ತರೀ ಚಕೋರ ಅನನ್ಯ||’
ನಮ್ಮೆಲ್ಲರ ಭಕ್ತಿ ಅನನ್ಯವಾಗಿರಬೇಕು. ಶ್ರೀಸಮರ್ಥರು ನಾಲ್ಕನೇ ದಶಕದ ಎಂಟನೇ ಸಮಾಸದಲ್ಲಿ ಭಕ್ತಿಲಕ್ಷಣ ಅತ್ಯಂತ ಚೆನ್ನಾಗಿ ಹೇಳಿದ್ದಾರೆ. ಈ ಸಮಾಸ ಭಕ್ತಿಯೋಗದ ಅಭ್ಯಾಸ ಮಾಡಲಿಕ್ಕೆ ಅತ್ಯಂತ ಉಪಯುಕ್ತವಾಗಿದೆ.
ಮಗಾ! ಪರಬ್ರಹ್ಮನು ಆನಂದರೂಪ. ಶ್ರೀಗುರು ಮತ್ತು ಪರಮಾತ್ಮನ ಉಪಾಸನೆ ಅಂದರೆ ಆನಂದರೂಪದ್ದೇ ಉಪಾಸನೆ. ಆ ಆನಂದದಲ್ಲಿ ಏನೂ ಅಂತರ ಬೀಳದೇ ಇರುವದು ಅಂದರೇ ದೇವರ ಅಥವಾ ಗುರುವಿನ ಅಖಂಡ ಧ್ಯಾನದಲ್ಲಿರುವದು. ನಿರುಪಾಧಿಕ ಆನಂದದಲ್ಲಿ ಸಹಜವಾಗಿ ಯಾವಾಗಲೂ ಸಮರಸವಾಗಿರುವದು ಅಂದರೇ ಬ್ರಹ್ಮೈಕ್ಯ ಅಥವಾ ಆತ್ಮೈಕ್ಯವಾದ ಆನಂದರೂಪ ಸ್ಥಿತಿಯಲ್ಲಿ ಇರುವದು ಅಂದರೇ ಸ್ವರೂಪಸ್ಥಿತಿ. ಈ ಆನಂದರೂಪದಿಂದ, ಅಜ್ಞಾನದಿಂದ ಬೇರೆಯಾದ ನಾನೆಂಬುವುದಕ್ಕೆ ದುಃಖ-ಶೋಕವಾಗುತ್ತದೆ. ‘ನೀನು ಆ ಶಾಶ್ವತ ಆನಂದರೂಪವಗಿದ್ದೀಯೆ’ ಹೀಗೆ ಶ್ರುತಿಯ ಉಪದೇಶ, ಆ ಮೂಲಸ್ವರೂಪದ ಪ್ರಾಪ್ತಿಯಾಗಿ, ದುಃಖಶೋಕಾದಿಗಳ ಸರ್ವದಾ ಆತ್ಯಂತಿಕ ವಿಲಯವಾಗುವದಕ್ಕೇ ಇದೆ.
ಐಸೇ ತೇ ನಿಜ ಠೇವಣೇ| ದಾಪಿ ಪಾಲಟೋ ನೇಣೇ|
ಅಥವಾ ನವ್ಹೇ ಅಧಿಕ ಉಣೇ| ಬಹುತಾ ಕಾಳೇ|| ೧-೯-೯
ಮಹಾವಾಕ್ಯಾಚೇ ಅಂತರ| ತೇ ತೂ ಬ್ರಹ್ಮ ನಿರಂತರ|
ಐಶಿಯಾ ವಚನಾಚಾ ವಿಸರ| ಪಡೋಚಿ ನಯೇ||
ಸೋಹಂ ಆತ್ಮಾ ಜ್ಞಾನಘನ| ಅಜನ್ಮಾ ತೋ ತುಚ ಜಾಣ|
ಹೇಂಚಿ ಸಾಧೂಚೇ ವಚನ| ಸದೃಢ ಧರಾವೇ||
ಆನಂದರೂಪದಲ್ಲೇ ಇರು,
ಶ್ರೀಧರ