ಇಲ್ಲಿಯವರೆಗೆ ಮಾಡಿದ ತಪಶ್ಚರ್ಯ ನೀನು ಹನ್ನೆರಡು ಸಾವಿರಕ್ಕೆ ಮಾರಿಬಿಟ್ಟೆ. ಈ ಹನ್ನೆರಡು ಸಾವಿರದ ಮುಂದೆ ಶ್ರೀದತ್ತನ ಬೆಲೆಯೂ ನಿನಗೆ ಅನಿಸದಂತೆ ಆಯಿತು. ಸದ್ಗುರುಸಾನಿಧ್ಯವೂ ನಿನಗೆ ಬೇಡವಾಯ್ತು. ತನ್ನದೇ ಬಡಾಯಿ ಕೊಚ್ಚಿಕೊಳ್ಳುವದರಲ್ಲಿ ದುರ್ದೈವದಿಂದ ನಿನಗೆ ಈಗ ದೊಡ್ಡಸ್ತನ ಅನಿಸಹತ್ತಿದೆ.
(ಶ್ರೀ ಬಾಳಕೃಷ್ಣಬುವಾ ಅಷ್ಟೇಕರ, ಪುಣೆ, ಅವರಿಗೆ ಬರೆದ ಪತ್ರದ ಎರಡನೆಯ ಭಾಗ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

ಬಿಕ್ಕೆ ಬೇಡಲು ಹೊರಟವನಿಗೆ ಮಾರ್ಗದಲ್ಲಿ ಇನ್ನೇನು ನಿಧಿ ಕೈಹತ್ತಬೇಕೆಂದಿರುವಾಗ, ಆ ಗಳಿಗೆಯಲ್ಲೇ, ಕಣ್ಣು ಮುಚ್ಚಿ ಕುರುಡನಂತೆ ಹೋಗಬೇಕೆಂದು ಮನಸ್ಸಿನಲ್ಲಿ ಬರಬೇಕು ಮತ್ತು ಸಿಗುವ ನಿಧಿ ಕೈತಪ್ಪಿ ಹೋಗಬೇಕು, ಅದೇ ರೀತಿ ಆಯಿತು ನಿನ್ನ ಸ್ಥಿತಿ.
ಜನ್ಮದಾರಿದ್ರ್ಯಕ್ಕೆ ಕೃಪೆ ಮಾಡಿ ಒಂದು ಚಿನ್ನದ ನಾಣ್ಯ ಕೊಟ್ಟ ನಾಗನ ಮೋಹದಿಂದ, ದ್ರೋಹ ಸಂಪಾದಿಸಿ, ಆ ಒಂದು ನಾಣ್ಯವನ್ನು ಇಟ್ಟುಕೊಂಡು, ಮುಂದೆ ಸಿಗಲಿರುವ ಅನಂತ ಸಂಪತ್ತನ್ನು ತಪ್ಪಿಸಿಕೊಂಡಂತೆಯೇ, ಹುಚ್ಚಾ, ನಿನ್ನ ಸ್ಥಿತಿಯಾಗಿದೆ. ಬಂದನಂತರ, ರಾಜ್ಯಾಭಿಷೇಕ ಮಾಡಬೇಕೆಂದುಕೊಂಡಿರುವಾಗ, ಕೂಲಿಗೆಂದು ಕಳುಹಿಸಿದ ಹಣದ ಮೋಹದಿಂದ, ‘ಇಷ್ಟು ಈ ಹಣ ನನಗೆ ಸಿಕ್ಕಿತು’ ಎಂದುಕೊಂಡು ಅಷ್ಟರಲ್ಲೇ ಸಂತುಷ್ಟನಾಗಿ, ಅಲ್ಲಿಗೆ ಹೋಗದೇ, ಆ ಅಷ್ಟೇ ಹಣ ಇಟ್ಟುಕೊಂಡಂತೆ ನಿನ್ನ ವಿಷಯದಲ್ಲಾಯಿತು.
ಮೂರ್ಖಪ್ಪನೋ ಮೂರ್ಖ!

RELATED ARTICLES  ಪುಸ್ತಕ ಪ್ರಕಟಿಸಿದ ನಾಲ್ಕು ವರ್ಷದ ಬಾಲಕ : ಗಿನ್ನೀಸ್ ದಾಖಲೆ.

‘ಅನಂತ ಹಸ್ತದಿಂ ಕಮಲಾಕರನು| ಕೊಡುವಾಗ ಅದೆಷ್ಟು ತೆಗೆದುಕೊಳ್ಳುವೆ ಎರಡು ಕೈಗಳಿಂದ||’
ಇಲ್ಲಿಯವರೆಗೆ ಮಾಡಿದ ತಪಶ್ಚರ್ಯ ನೀನು ಹನ್ನೆರಡು ಸಾವಿರಕ್ಕೆ ಮಾರಿಬಿಟ್ಟೆ. ಈ ಹನ್ನೆರಡು ಸಾವಿರದ ಮುಂದೆ ಶ್ರೀದತ್ತನ ಬೆಲೆಯೂ ನಿನಗೆ ಅನಿಸದಂತೆ ಆಯಿತು. ಸದ್ಗುರುಸಾನಿಧ್ಯವೂ ನಿನಗೆ ಬೇಡವಾಯ್ತು. ತನ್ನದೇ ಬಡಾಯಿ ಕೊಚ್ಚಿಕೊಳ್ಳುವದರಲ್ಲಿ ದುರ್ದೈವದಿಂದ ನಿನಗೆ ಈಗ ದೊಡ್ಡಸ್ತನ ಅನಿಸಹತ್ತಿದೆ.
ಅಜಾಮಿಳ ಆಚಾರನಿಷ್ಟ ಬ್ರಾಹ್ಮಣನಿದ್ದಾಗ್ಯೂ, ಮಹಾರಣಿಯ ಸಂಗದಿಂದ ಮಹಾಪಾಪಿಯಾದನು; ಅದೇರೀತಿ ಈ ಸಂಪತ್ತಿನ ಸಂಗದಿಂದ ನಿನಗೆ ಮುಂದೇನಾಗುವದೋ ಯಾರಿಗೆ ಗೊತ್ತು? ಸಿಗರೇಟ ಸೇದುವದಿಲ್ಲ ಎಂದು ನಿನ್ನಿಂದ ಗುರುಚರಣದ ಶಪಥ ತೆಗೆದುಕೊಂಡಿದ್ದಾಗಲೂ ಪುನಃ ಯಾವ ದಿನದಿಂದ ಸೇದಲು ಪ್ರಾರಂಭಿಸಿದೆಯೋ ಆ ದಿನದಿಂದಲೇ ನಿನಗೆ ಅವನತಿಯ ಕಳೆ ಹತ್ತಿತು. ಇಂದು ಅದಕ್ಕಿಂತಲೂ ಮುಂದೆ, ಅದು ಹಣದ ಮೋಹ ಉತ್ಪನ್ನ ಮಾಡಿ, ಸದ್ಗುರುವಿನ ಅವಜ್ಞೆಯನ್ನೂ ಸಂಭಾವ್ಯ ಮಾಡಿಸಿ, ಕಟ್ಟಕಡೆಯ ಪಾತಾಳಕ್ಕೆ ನೂಕಿತು. ಇನ್ನು ಇದರ ನಂತರ ನಿನ್ನ ಮುಂದೆ ಏನು ಬಡಿಸಿಟ್ಟಿದೆಯೋ ನನಗೆ ಹೇಳಲು ಬರುತ್ತಿಲ್ಲ. ಆದ ಅಪರಾಧದ ಬಗ್ಗೆ ದಿನವೂ ೧೦೮ ನಮಸ್ಕಾರ ನನ್ನ ಮುಂದೆ ಹಾಕಬೇಕು ಎಂದು ಶ್ರೀದತ್ತನ ಆಜ್ಞೆ ನಿನಗಾಗಿತ್ತು. ಅದೂ ನಿನ್ನಿಂದ ಪೂರ್ಣವಾಗಲಿಲ್ಲ.
(ಈ ಪತ್ರದ ಮೂರನೆಯ ಭಾಗ ಮುಂದುವರಿಯುವದು)

RELATED ARTICLES  ದೇವರು ಆ ಹುಡುಗು ಬುದ್ಧಿಯ ಶಿಷ್ಯರನ್ನು ಸುಖರೂಪ ಇಡಲಿ.