ನಮಸ್ಕಾರ..ವಾರಕಳೆದಿದೆ ನೆನಪು ಮಾಸುತ್ತಿರಬಹುದು.
ಆದರೆ ಅದನ್ನು ನೀರು ಚಿಮುಕಿಸಿ ಹಸಿರಿಸುವಂತೆ ಮಾಡಲು ಮತ್ತೆ ಬಂದ ತಿಗಣೇಶ…
ಚೌತಿ ಹಬ್ಬದಲ್ಲಿ ಹೆಕ್ಕಿ ತಂದ ಗಣಪತಿಗೆ ದಿನಾಲೂ ಪೂಜೆ..ಯಾರ ಮನೆಯ ಮಕ್ಕಳಿಗೆ ಮುಳುಗಿಸಿದ ಗಣಪತಿ ಸಿಗಲಿಲ್ಲವೋ ಅವರು ಸುಮ್ಮನೆ ಕೂರುತ್ತಿರಲಿಲ್ಲ. ಯಾವುದಾದರೊಂದು ರೀತಿಯಲ್ಲಿ ಕಿರುಕಳ ಕೊಡುತ್ತಿದ್ದರು.ಒಂದೇ ನಾನು ಏಳುವದಕ್ಕಿಂತ ಮೊದಲೆದ್ದು ಎಲ್ಲಾ ಹೂ ಕೊಯ್ದು ಪೂಜೆಗೆ ಹೂ ಇಡುತ್ತಿರಲಿಲ್ಲ..ಹೂವಿನಗಿಡದ ಟೊಂಗೆ ಮುರಿದು ನಮಗೆ ಬೈಸುತ್ತಿದ್ದರು.ದಿನಾ ಗಣಪತಿ ತಲೆಮೇಲೆ ನೀರು ಹಾಕಿ..ಗಣಪತಿ ನೆನೆದು ಮುರಿಯುವಂತೆ ಮಾಡುತ್ತಿದ್ದರು
ಇಲಿ ಹಾವು ಕಿತ್ತುಕೊಂಡು ಹೋಗುತ್ತಿದ್ದರು. ದಿನಾ ಬೆಳಿಗ್ಗೆ ಎದ್ದು ಮೊದಲು ಗಣಪತಿ ನೋಡೋದೇ..ನೆಂಟರ ಮನೆಗೆ ಹೋಗುತ್ತಿರಲಿಲ್ಲ..ಆದರೂ ಯಾವುದಾದರೊಂದು ರೀತಿಯಲ್ಲಿ ಗಣಪತಿ ಮುರಿದು ಹಾಕುತ್ತಿದ್ದರು..ಕೈ ಬೆರಳು ಮುರಿದು ಬಿನ್ನಾದ ಗಣಪತಿ ಪೂಜೆ ಮಾಡಬಾರದೆಂದು ಹೇಳಿ ಅದನ್ನು ಮುಳುಗಿಸಿ ಬರುವಂತೆ ಮಾಡುತ್ತಿದ್ದರು.
ಯಾರು ಹೇಳಿಕೊಟ್ಟರೋ ಅವರೇ ಮುರಿದವರಾಗಿರುತ್ತಿದ್ದರು.ಅವರಿಗೆ ಮರುದಿನ ಪರಾನಪುರಿ ಹೊಡೆಯುತ್ತಿದ್ದೆವು.ಹಾಗೆಹೀಗೆ ನವರಾತ್ರಿ ಬರುತ್ತಿತ್ತು.ನಮ್ಮನೆಯಲ್ಲಿ ಒಂಬತ್ತು ದಿನಾನೂ ಹಬ್ಬ..ತೀರಾ ಬಡತನವಿತ್ತು..ದೇವರು ಹಬ್ಬ ಎಲ್ಲವನ್ನು ನನ್ನ ಹೆಡ್ಡ ಅಪ್ಪನಿಗೆ ಪಾಲಿಗೆ ಕೊಟ್ಟು..ಉತ್ಪನ್ನದ ಭೂಮಿಯನ್ನು ಇಲ್ಲವಾಗಿಸಿದ್ದರು..ಆಗಿನ ಗ್ರಾಸ್ತವಳಿಕೆನೇ ಹಾಗೆ . ಇದ್ದವರ..ಪಕ್ಷವಹಿಸಿ ಒಬ್ಬರನ್ನು ತುಳಿಯುತ್ತಿದ್ದರು.ಏನೇ ಇರಲಿ..ಹಬ್ಬ ಮಾಡುತ್ತಿದ್ದರು..ಸಾಲ..ಕಡ ಮಾಡಿ..ಸಾಮಾನು ತಂದದ್ದು ನೆನಪಿದೆ.ಒಂಬತ್ತುದಿನ ಹಗಲಿಗೆ ಅಪ್ಪ..ಆಯಿ ಉಣ್ಣುತ್ತಿರಲಿಲ್ಲ. ಪೂಜೆ ಮಾಡಿದ ಮೇಲೆ ನೈವೇದ್ಯ ಮಾಡಿದ ಬಾಳೆಹಣ್ಣನ್ನು ಅಯಿ ಉಗ್ಗಿಸಿಡುತ್ತಿದ್ದರು..ಮರುದಿನ ಮದ್ಯಾನ್ಹ ಅದೇ ಬಾಳೆಹಣ್ಣುತಿಂದು ಅವಲಕ್ಕಿ ಉಳಿಸುತ್ತಿದ್ದರು..ನಕ್ತಕ್ಕೆ ತಿನ್ನಲು ಏನೂ ಇಲ್ಲದ ದಿನವಿರುತ್ತಿತ್ತು.ಕೆಲವು ಸಲ ಉಗ್ಗಿಸಿಟ್ಟ ಬಾಳೆಹಣ್ಣು ಕದ್ದು ತಿಂದಿದ್ದು ನಾನೇ..ಈಗ ನೆನಪಾದರೆ ಕಣ್ಣೀರು ಬರುತ್ತದೆ..ಅಪ್ಪ..ಆಯಿಯ ಉಪವಾಸಕ್ಕೆ ಕಾರಣನಾದವ ಎಂದು.ಅದರೂ ಹಬ್ಬ ನಡೆಯುತ್ತಿತ್ತು..ಸಾಮಾನು ಅಂಗಡಿಯವರಿಗೂ ಹೇಳಿಕೊಟ್ಟು ನಮ್ಮ ಹಬ್ಬ ಕಸಿದವರಿದ್ದಾರೆ..ಅದರೆ ಇಂದು ಅವರ ಮನೆಗಳಲ್ಲಿ..ಮೃಷ್ಟಾನ್ನಮಾಡುವ ಯೋಗ್ಯತೆ ಇದೆ.ಅದರೆಹಬ್ಬ ಮಾಡುವ..ಹುಳ ಹುಟ್ಟಲೇ ಇಲ್ಲ.ನಮಗೆ ಯಾರಾದರೂ ಊಟಕ್ಕೆ ಕರೆದರೆ..ಅವರ ಮನೆಯ ಮೆಟ್ಟಿಲು ತಳೆಯುತ್ತಿದ್ದೆವು.ನಮ್ಮನೆಯಲ್ಲಿ ತನ್ನೆ ಉಂಡದ್ದು ನೆನಪಿದೆ.ನಮ್ಮನೆಯಲ್ಲಿ ಉಣ್ಣಲು ತಿನ್ನಲು ಹಟ ಮಾಡುವವ ನಾನೇ.ನನ್ನ ತಮ್ಮ ಹಾಕಿದ್ದು ತಿನ್ನುತ್ತಿದ್ದ..ಈಗಲೂ ನನಗೆ ಬುದ್ದಿ ಬರಲೇ ಇಲ್ಲ.ಶಾರದೆ ಕೂರಿಸುವ ದಿನ ನಮ್ಮ ಪಾಟಿ..ಪುಸ್ತಕ ಇಡುತ್ತಿದ್ದರು..
ನಾವು ಎಲ್ಲ ಪುಸ್ತಕ ಇಡುತ್ತಿದ್ದೆವು.ಯಾಕೆಂದರೆ ಮೂರ್ನಾಲ್ಕು ದಿನ ಓದುವುದು ಇರಬಾರದೆಂದು.ಕೊನೆಯದಿನ ಕದರುಹಸ್ತ…ಅಂದರೆ ಭತ್ತದ ತೆನೆ ಪೂಜೆ ಮಾಡಿ..ಅದರ ಭತ್ತ ಸುಲಿದು..ಹೊಸ್ತು ಎಂದು..ಕಾಯಿಗಂಜಿ ಮಾಡುತ್ತಿದ್ದರು..ಅದು ಈಗೂ ಇದೆ..ರಾತ್ರೆ ತೆನೆಯನ್ನು ಕೋಳಿಗೆ ಕಟ್ಟಿದಮೇಲೆ ನವರಾತ್ರೆ ಮುಗಿಯುತ್ತಿತ್ತು..
ಪಾರಾಯಣ ಓದಿದ ಬಟ್ಟರಿಗೆ ಎಷ್ಟೋದಿನದ ಮೇಲೆ ದಕ್ಷಿಣೆಯ ದುಡ್ಡುಕೊಡುತ್ತಿದ್ದರು…
ಆಗ ನಮ್ಮ ಗದ್ದೆಯ ತೆನೆ..ಈಗ ಗದ್ದೆಯೂ ಇಲ್ಲ..ತೆನೆಗಾಗಿ ಯಾರದೋ ಗದ್ದೆ..ಅದರೂ ಹಬ್ಬವಿದೆ..ಪಂಚಾಮೃತಕ್ಕಾಗಿ ಬಡಿದಾಡುವ ಮಕ್ಕಳಿಲ್ಲ..ಜವಟೆಗಾಗಿ ಹೊಡೆದಾಟವಿಲ್ಲ..ಬಾಳೆಹಣ್ಣು ಯಾರಿಗೂ ಬೇಡ.ಆದರೆ ಆಯಿ ಆ ಬಾಳೆ ಹಣ್ಣು ಕಂಡು ಹಳೆಯ ನೆನಪು ಮಾಡುವಾಗ ನೋವಾಗುತ್ತದೆ..ಆಗ ಹಸಿವಿಗೆ.ನಕ್ತಕ್ಕೆಊಟವಾದ ಬಾಳೆಹಣ್ಣು ದೇವರಾಗಿಯೇ ಕಾಣುತ್ತದೆ..
ನಮಸ್ಕಾರ..ನೋವು ನೆನಪಿಸಿ ನೋಯಿಸಿಬಿಟ್ಟೆ..ಹಬ್ಬದ ಸಂಭ್ರಮ ಹಾಳಾಯಿತೆನ್ನಬೇಡಿ..ಆಗ ಇಂಥ ಹಬ್ಬಮಾಡಿದ ಸಾವಿರಾರು ಕುಟುಂಬಗಳು..ಸುಖವಾಗಿವೆ..ನೋವನ್ನು ನೆನೆದು.
……ತಿಗಣೇಶ ಮಾಗೋಡ
……(9343596619)