‘ಪಾಪದ ಸ್ವತ್ತು ನಾಯಿ-ನರಿ ಪಾಲಾಯ್ತು’ ನನ್ನ ಆಜ್ಞೆ ಮುರಿದು, ಧನ ಮೋಹದಿಂದ, ವೇಳೆ ಪ್ರಸಂಗ ಬಂದಾಗ ನನ್ನನ್ನೂ ಕಳಂಕಕ್ಕೀಡುಮಾಡಿ, ಸಂಗ್ರಹಿಸಿದ ಆ ಹಣ, ಹಾಗೇ ಯಾರಾದರೂ ನಿನಗೆ ಮೋಸಮಾಡಿ, ಕೊಳ್ಳೆ ಹೊಡೆಯಬಹುದು. ಜೀವಕ್ಕೂ ಅದರಿಂದ ಅಪಾಯವಿದೆ ………..

………….. ಹುಚ್ಚಪ್ಪಾ! ನನಗೆ ಏನು ಕಡಿಮೆ ಇದೆ?

(ಶ್ರೀ ಬಾಳಕೃಷ್ಣಬುವಾ ಅಷ್ಟೇಕರ, ಪುಣೆ, ಅವರಿಗೆ ಬರೆದ ಪತ್ರದ ನಾಲ್ಕನೆಯ ಭಾಗ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

‘ನಾನು ಸಾಲ ತೀರಿಸುತ್ತೇನೆ, ಎಂದು ಸಾಯುವ ಕಾಲದಲ್ಲಿ ತಂದೆಗೆ ಕೊಟ್ಟ ವಚನ ಯಾವ ದಿವಸ ಪೂರ್ಣಗೊಳ್ಳುತ್ತದೆಯೋ, ಆ ದಿವಸದಿಂದ ನಾನು ಅಖಂಡ ಗುರುಸೇವೆಯಲ್ಲಿದ್ದು ಮೋಕ್ಷದ ಸಾಧನೆ ನಡೆಸುತ್ತೇನೆ. ಈ ಸಾಲ ನನ್ನನ್ನು ಮುಳ್ಳಿನಂತೆ ಪೀಡಿಸುತ್ತಿದೆ. ಆ ಕಡೆಗೇ ನನ್ನ ಲಕ್ಷ ಪುನಃ ಪುನಃ ಎಳೆಯುತ್ತಿದೆ. ಹಣ ಬೇಕು ಎಂದು ಅನಿಸುತ್ತಿದೆ. ಪರಮಾರ್ಥದಲ್ಲಿ ಮನಸ್ಸು ಹತ್ತುತ್ತಿಲ್ಲ.’ ಹೀಗೆ ನೀನು ಹೇಳಿದ್ದರಿಂದ ಆ ಅಡಚಣಿ ದೂರಮಾಡಿ, ನಮ್ಮ ಸಂಗಡ ನಿನ್ನನ್ನು ಇಟ್ಟುಕೊಳ್ಳಬೇಕೆಂದು, ತಿರುಗಾಟದಲ್ಲಿ ಅಲ್ಲಲ್ಲಿಯ ಹಣ ಕೊಡಿಸಿದೆ. ಸಾಲದ ಆರು ಸಾವಿರ ರೂಪಾಯಿ ತುಂಬಿಸಿದೆ. ಇದರ ನಂತರ ಮಾತ್ರ ಹಣವನ್ನು ನೀನು ಮುಟ್ಟಬೇಡ ಎಂದು ಹೇಳಿ ಹದಿನೈದು ದಿನಗಳೊಳಗೆ ಸಜ್ಜನಗಡಕ್ಕೆ ನಿನ್ನ ಸಾಮಾನು ತೆಗೆದುಕೊಂಡು ಬಾ ಎಂದು ನಿನ್ನನ್ನು ಸಾಗರಕ್ಕೆ ಕಳುಹಿಸಿದೆ. ನನ್ನ ದರ್ಶನಕ್ಕೆ ಬರುವಾಗ ಸಾಲ ಹಿಂತಿರುಗಿಸಿಯೇ ಬರಬೇಕು ಎಂದು ನಿರ್ದಿಷ್ಟವಾಗಿ ಹೇಳಿದ್ದೆ.
ನಿನ್ನ ಕಣ್ಣಿನ ಮುಂದೆ ಹಣದ ಹೊಗೆ ಹಬ್ಬಿಕೊಂಡಿದೆ. ನನ್ನ ಆಜ್ಞೆಯ ಬೆಲೆ ನಿನಗೆ ತಿಳಿಯುವದಿಲ್ಲ. ಸ್ವಹಿತವೂ ಕಾಣದಾಗಿದೆ. ಪಾದ್ಯಪೂಜೆ ಮೊದಲಾದವುಗಳನ್ನು ಮಾಡಿಸಿಕೊಂಡಿದ್ದರಿಂದ ಆ ಮನ್ನಣೆಯ ಅಮಲು ಏರಿದೆ. ಸ್ವಸಾಮರ್ಥ್ಯದ ಮದ ಬಂದಿದೆ. ನಿನಗೆ ನನ್ನ ದರ್ಶನ ಹೇಗಾಗುವದು?
‘ನಿನ್ನನ್ನು ಮಾಯೆ ಕೆಡಿಸಿತು| ಅವಿದ್ಯೆಯು ಮುತ್ತಿಕೊಂಡಿತು||’
ಕಂದಾ, ಈ ಪತ್ರದಿಂದಾದರೂ ಎಚ್ಚತ್ತು ನನ್ನ ಬಳಿ ಬಾ!!

RELATED ARTICLES  ಕಳೆದುಹೋದ‌ ಎಳೆಯ ದಿನಗಳು ಭಾಗ ೧೪

ಸಾಯುತ್ತಿರುವವರ ಗಂಟಲಲ್ಲಿ ಎಷ್ಟೇ ದಿವ್ಯೌಷದಿ ಸುರಿದರೂ ಗಂಟಲ ಕೆಳಗೆ ಇಳಿಯುವದಿಲ್ಲ. ಅದೇ ರೀತಿ ನಿನ್ನ ಸ್ಥಿತಿಯಾಗಬಾರದು ಮತ್ತು ಈ ಉಪದೇಶದ ಯೋಗ್ಯ ಉಪಯೋಗ ಆಗಲಿ ಎಂದು ಶ್ರೀದತ್ತನಲ್ಲಿ ಪ್ರಾರ್ಥನೆ ಮಾಡುತ್ತೇನೆ.
ನೀನು ಎಷ್ಟು ಕೆಳಗಿಳಿದಿರುವೆಯೋ ಅದನ್ನು ಅಷ್ಟಕ್ಕೇ ನಿಲ್ಲಿಸಿ, ಈಗಲಾದರೂ, ಈ ಪತ್ರ ತಲುಪಿದ ಕೂಡಲೇ, ತಪಾಚರಣೆಗಾಗಿ ನನ್ನ ಬಳಿ ಬಂದು, ನೀನು ನಿನ್ನ ಜನ್ಮ ಸಾರ್ಥಕ ಮಾಡಿಕೊಳ್ಳಲೆಂದು ಶ್ರೀಚರಣದಲ್ಲಿ ಬೇಡಿಕೆ ಕೇಳಿಕೊಳ್ಳುತ್ತೇನೆ.

RELATED ARTICLES  ಆದದ್ದೆಲ್ಲಾ ಒಳಿತೇ ಆಯಿತು

‘ಪಾಪದ ಸ್ವತ್ತು ನಾಯಿ-ನರಿ ಪಾಲಾಯ್ತು’
ನನ್ನ ಆಜ್ಞೆ ಮುರಿದು, ಧನ ಮೋಹದಿಂದ, ವೇಳೆ ಪ್ರಸಂಗ ಬಂದಾಗ ನನ್ನನ್ನೂ ಕಳಂಕಕ್ಕೀಡುಮಾಡಿ, ಸಂಗ್ರಹಿಸಿದ ಆ ಹಣ, ಹಾಗೇ ಯಾರಾದರೂ ನಿನಗೆ ಮೋಸಮಾಡಿ, ಕೊಳ್ಳೆ ಹೊಡೆಯಬಹುದು. ಜೀವಕ್ಕೂ ಅದರಿಂದ ಅಪಾಯವಿದೆ. ಈ ಹನ್ನೆರಡು ಸಾವಿರದ ಪರಿಸ್ಥಿತಿಯೂ, ಹಿಂದೆ ಸಾವಿರ ರೂಪಾಯಿಗೆ ಆದ ಹಾಗೆ ಆಗಲಿಲ್ಲ ಎಂದರೆ ಆಯಿತು!!
ನನ್ನ ಅಭಿಪ್ರಾಯದಂತೆ ಹಣ ಬೇಂಕಿನಲ್ಲಿ ನಿನ್ನದೇ ಹೆಸರಿನಲ್ಲಿ ಇಟ್ಟುಬಿಟ್ಟು, ನೀನು ನನ್ನ ಬಳಿ ಕೂಡಲೇ ಹೊರಟು ಬರಬೇಕು. ಇನ್ನು ನನ್ನನ್ನು ಬಿಟ್ಟು ಸಮಾಜದಲ್ಲಿ ಇದ್ದರೆ ‘ಮುಳುಗಿದವನ ಕಾಲು ಇನ್ನೂ ಆಳಕ್ಕೆ’ ಎಂಬಂತೆ ನೀನು ಹೆಚ್ಚೆಚ್ಚು ಅಧಃಪತನಕ್ಕೆ ಹೋಗಬಹುದು. ತಪಾಚರಣೆಯಿಂದ ನಿನ್ನ ಬುದ್ಧಿ ತಿಳಿಯಾಗುವದು.

‘ನಿನ್ನ ಹಣದ ಬಾಬತ್ತು ನನಗೆ ಏನೂ ಬೇಡ,’ ಇದನ್ನು ನಾನು ಪುನಃ ನಿನಗೆ ಹೇಳುತ್ತಿದ್ದೇನೆ. ನಿನ್ನ ಹಿತದ ಹೊರತಾಗಿ ಈ ಉಪದೇಶದಲ್ಲಿ ಎರಡನೆಯ ಯಾವುದೇ ನನ್ನ ಸ್ವಾರ್ಥವಿಲ್ಲ.
ಹುಚ್ಚಪ್ಪಾ! ನನಗೆ ಏನು ಕಡಿಮೆ ಇದೆ?
ಶ್ರೀಧರ