ಮನಸ್ಸಿನ ಏಕಾಗ್ರತೆಯಲ್ಲಿ ಮತ್ತು ಉತ್ಕಟತೆಯಲ್ಲೇ ಎಲ್ಲವೂ ಇದೆ. ಅದು ಎಷ್ಟು ಹೆಚ್ಚು ಆವರಿಸಿರುತ್ತದೆಯೋ ಅಷ್ಟು ಶೀಘ್ರಾತಿಶೀಘ್ರ ಕಾಲದಲ್ಲಿ ದೃಷ್ಟಾಂತವಾಗುತ್ತದೆ, ದೇವರ ಕೃಪೆಯೂ ಆಗುತ್ತದೆ.
(ಕು. ಬಾಳಿ ಮತ್ತು ಶಾಮಿ ಕರಾಡ ಅವರಿಗೆ ಬರೆದ ಪತ್ರ)

— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

|| ಶ್ರೀರಾಮ ಸಮರ್ಥ||
ಚಿ. ಬಾಳಿಗೆ ಆಶೀರ್ವಾದ,

ಮಗಾ! ಮನಸ್ಸು ಎಷ್ಟು ಉತ್ಕಟತೆಯಿಂದ ಏಕಾಗ್ರವಾಗುತ್ತದೆಯೋ, ಎಷ್ಟು ಸತತವಾಗಿ ನಿದಿಧ್ಯಾಸವಾಗುತ್ತದೆಯೋ ಅಷ್ಟು ಅನುಷ್ಠಾನ ಶೀಘ್ರಫಲದಾಯಿಯಾಗುತ್ತದೆ. ಮೌನಾದಿ ನಿಯಮಗಳಿಂದ ಉತ್ಕಟತೆ ಹೆಚ್ಚುತ್ತದೆ. ಪುನಃ ಪುನಃ ಮನಸ್ಸು ಧ್ಯೇಯಾಕಾರವಾಗುತ್ತದೆ. ಆರೋಗ್ಯ ಕಾದುಕೊಂಡು ಬಾಹ್ಯನಿಯಮ ಹೆಚ್ಚು ಇಟ್ಟುಕೊಂಡಷ್ಟೂ ಉತ್ತಮವೇ. ನಿಯಮದಲ್ಲಿ ಯಾವುದೇ ಕಾರಣದಿಂದ ಸ್ವಲ್ಪಕೂಡಾ ಭಂಗವಾಗದಂತೆ ನೋಡಿಕೊಳ್ಳಬೇಕು. ಯಾವುದರದ್ದೇ ಅವರೋಧ ಮನಸ್ಸಿನಲ್ಲಿ ಇಲ್ಲದಿದ್ದರೆ ಉತ್ತಮ. ಧ್ಯೇಯದ ಮೇಲಿನ ಲಕ್ಷ ಸದೋದಿತ ಸ್ಥಿರವಾಗಿಡಬೇಕು. ಮನಸ್ಸಿಗೆ ಎಲ್ಲಿಯ ಸೆಳೆತವೂ ಇರಬಾರದು. ಯಾರಮೇಲಾದರೂ ಸ್ವಲ್ಪ ಪ್ರೇಮ ಹೆಚ್ಚು ಇಟ್ಟರೆ ಮನಸ್ಸು ಧ್ಯೇಯ ಬಿಟ್ಟು ಅಲ್ಲೇ ಪುನಃ ಪುನಃ ಹೋಗಹತ್ತುತ್ತದೆ. ಸಣ್ಣ ಛಿದ್ರವೂ ಪಾತ್ರೆಯನ್ನು ಬರಿದುಮಾಡಿಬಿಡುತ್ತದೆ – ಇದು ಲಕ್ಷದಲ್ಲಿರಬೇಕು!

RELATED ARTICLES  ಸೂರ್ಯನ ಬೆಳಕಿನಂತೆ ಜೀವನ ಪ್ರಕಾಶಿಸಿದರೆ?

ಹದಿಮೂರು ದಿವಸಗಳ ಅನುಷ್ಠಾನ ಎಷ್ಟು ಕಡುತರವೋ ಅಷ್ಟು ಉತ್ತಮ. ನಿನ್ನ ಅನುಷ್ಠಾನವೇ ನಿನ್ನ ಪ್ರಶ್ನೆಗಳ ಉತ್ತರಗಳನ್ನು ಕೊಡಲು ಸಮರ್ಥವಾಗುವದಿದೆ ಎಂಬುದನ್ನು ಅರಿತು ದಕ್ಷತೆ ಅನುಸರಿಸು. ಸಂಧಿ ಕಳೆದುಕೊಳ್ಳಬೇಡ.

ಶ್ರೀಸಮಾಧಿಯಿಂದ ಬಂದವರು ಬೇರೆ ಯಾರು? ಶ್ರೀಸಮರ್ಥರೇ. ‘ಅಹೋ, ಈ ಹುಡುಗಿಯ ಮೌನವಿದೆಯಲ್ಲ?’ ಎಂಬ ಪ್ರಶ್ನೆ ಯಾವ ಅರ್ಥದಲ್ಲಿ ಅವರು ಮಾಡಿದ್ದಾರೆ ಅಂದರೆ, ಅದರ ಅರ್ಥ, ನಿನ್ನ ಮೌನವೃತ ಸರಿಯಾಗಿ ಪಾಲಿಸಲ್ಪಡುತ್ತಿಲ್ಲ, ಪರಂಪರೆಯಂತೆ ಹೇಗೆ ಎಲ್ಲ ಅನುಷ್ಟಾನವೂ ಆಗಬೇಕೋ ಹಾಗೆ ಆಗುತ್ತಿಲ್ಲ ಎಂದು ಸೂಚಿತವಾಗುತ್ತದೆ.
ಯಾರೊಂದಿಗೂ ತಪ್ಪಿ ಕೂಡಾ ಮಾತನಾಡಬೇಡ. ನಿಯಮಗಳನ್ನು ಕಡುತರವಾಗಿ ಪಾಲಿಸು. ಸತತ ಮನಸ್ಸನ್ನು ತದಾಕಾರ ಇಡು. ಮನಸ್ಸಿನ ಏಕಾಗ್ರತೆಯಲ್ಲಿ ಮತ್ತು ಉತ್ಕಟತೆಯಲ್ಲೇ ಎಲ್ಲವೂ ಇದೆ. ಅದು ಎಷ್ಟು ಹೆಚ್ಚು ಆವರಿಸಿರುತ್ತದೆಯೋ ಅಷ್ಟು ಶೀಘ್ರಾತಿಶೀಘ್ರ ಕಾಲದಲ್ಲಿ ದೃಷ್ಟಾಂತವಾಗುತ್ತದೆ, ದೇವರ ಕೃಪೆಯೂ ಆಗುತ್ತದೆ. ಹೆಚ್ಚು ಅಂಧಃಪ್ರೇಮ ಇಟ್ಟುಕೊಳ್ಳುವವರ ಸಾನಿಧ್ಯದಲ್ಲಿ ಕಡುತರ ಅನುಷ್ಟಾನವಾಗುವದಿಲ್ಲ. ಅಂಥ ಜನರಲ್ಲೂ ಕಡುತರ ಆಚರಣೆ ಇಟ್ಟುಕೊಂಡರೆ ಸಾಧ್ಯವಾಗುತ್ತದೆ, ಇಲ್ಲದಿದ್ದರೆ ಶಕ್ಯವಾಗುವದಿಲ್ಲ. ಎಷ್ಟು ಕಡುತರ ಅನುಷ್ಟಾನವಿದ್ದರೂ ನಿಯಮಿತ ಊಟ-ತಿಂಡಿ ಎಷ್ಟು ಪೋಷಕವೋ ಅಷ್ಟು ಇಟ್ಟುಕೊಳ್ಳಬೇಕು. ಆರೋಗ್ಯದ ಬಗ್ಗೆ ದೃಷ್ಟಿ ಇಡಬೇಕು. ಮನಸ್ಸು ಯಾವಾಗಲೂ ಪ್ರಸನ್ನವಾಗಿರಬೇಕು. ದಿನ-ದಿನವೂ ಉತ್ಸಾಹ ಹೆಚ್ಚಾಗುತ್ತಿರಬೇಕು. ಹೃದಯದಲ್ಲಿ ಶಾಂತತೆಯ ವಾತಾವರಣವಿರಬೇಕು. ಮನಸ್ಸು ಪವಿತ್ರವಾಗಿರಬೇಕು. ಸತತ ಆನಂದ ದೃವಿಸುತ್ತಿರಬೇಕು. ವಿಶ್ವಾಸ ದೃಢವಾಗುತ್ತಿರಬೇಕು. ಪ್ರೇಮದ ಅವಿಚ್ಛಿನ್ನ ಪ್ರವಾಹ ಉಪಾಸನೆಯ ದಿವ್ಯ ಮೂರ್ತಿಯೆಡೆ ಸತತ ಹರಿಯುತ್ತಿರಬೇಕು. ಉಳದೆಲ್ಲದರ ಮರೆವು ಆಗಬೇಕು.

RELATED ARTICLES  ಬೆಳಕಿನೆಡೆಗೆ….

ಅವರವರಿಗೆ ಬರೆದ ಪತ್ರ ಅವರವರು ಸುರಕ್ಷಿತ ಇಟ್ಟುಕೊಳ್ಳಬೇಕು. ಅದು ಅವರ ಸಂಪತ್ತಾಗಿದೆ.
ಶ್ರೀಧರ