ನಿಮ್ಮ ವಿಷಯದಲ್ಲಿ ನಾನು ಶ್ರೀಸಮರ್ಥರನ್ನು ವಿಚಾರಿಸಿದರೆ, ಅವರು ನಿಮ್ಮ ಬಗ್ಗೆ ಜಾಮೀನು ಇರಬೇಕು ಆ ರೀತಿ ಮತ್ತು ಅವರೇ ನಿಮ್ಮ ಬಗ್ಗೆ ಮನಗಾಣಿಸಿ ಸಾಕ್ಷಿಯನ್ನು ಹೇಳಬೇಕು ಹಾಗೆ, ನೀವು ನಡೆಯಿರಿ; ಅನುಷ್ಠಾನ ಮಾಡಿ; ಭಕ್ತಿ-ಜ್ಞಾನ-ವೈರಾಗ್ಯ ಹೆಚ್ಚಿಸಿರಿ.
(ಕು. ಬಾಳಿ ಮತ್ತು ಶಾಮಿ ಕರಾಡ ಅವರಿಗೆ ಬರೆದ ಪತ್ರ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

|| ಶ್ರೀರಾಮ ಸಮರ್ಥ ||
ಚಿ. ಬಾಳಿ ಮತ್ತು ಶಾಮಿಗೆ ಆಶೀರ್ವಾದ,
ಮಕ್ಕಳೇ!
ಪ್ರತಿಯೊಬ್ಬರ ಭವಿತವ್ಯ ಅವರ ಅನುಷ್ಟಾನದಲ್ಲಿರುವ ಸರ್ವೋತ್ಕೃಷ್ಟ ಸಾಧನೆಯ ಮೇಲೆಯೇ ಇದೆ.
‘ಮೊದಲು ಕಷ್ಟ ನಂತರ ಫಲ| ಕಷ್ಟವೆಂದೂ ನಿಷ್ಫಲವಾಗದು||’
ಸಾಧನೆಯ ಕಷ್ಟ ಸಹಿಸಿಯೇ ಸಿದ್ಧನಾಗುತ್ತಾನೆ.

‘ಕಬ್ಬಿಣದ ಕಡಲೆ ತಿನ್ನು ನೀ ಮೊದಲು| ಕೊನೆಗಿದೆ ಬ್ರಹ್ಮಪದದಾ ನಲಿವು||’
‘ಯಾರು ಸಂಸಾರ ದುಃಖದಲಿ ನೊಂದನೋ| ತ್ರಿವಿಧ ತಾಪದಿ ಬೆಂದನೋ| ಅವನೇ ಅಧಿಕಾರಿಯಾದನೋ| ಪರಮಾರ್ಥಕ್ಕೇ||’
ಆ ರೀತಿಯ ವಿರಕ್ತ ಮಾತ್ರ ಪರಮಾರ್ಥದ ಅಧಿಕಾರಿಯಾಗುತ್ತಾನೆ. ಅದರಲ್ಲೂ ನಿವೃತ್ತಿ ಮಾರ್ಗದ ಅವಲಂಬಿಸುವದೆಂದರೆ ಏನೂ ಸಾಮಾನ್ಯವಲ್ಲ.
‘ಕಶ್ಚಿತ್ತ ಧೀರಃ’ ಎಂದು ಶ್ರುತಿ ಹೇಳುತ್ತದೆ. ಯಾರಾದರೂ ಒಬ್ಬಿಬ್ಬರು ಅಂತಹ ಶೂರರಿರುತ್ತಾರೆ.
‘ಈ ಅತಿ ಕಡುತರ ಬಿಗುವಿನ ವಿಷಯ| ಅದೆಂತು ಶಕ್ಯವು ಅಶಕ್ತನಿಗೆ||’
ಅದರಲ್ಲೂ ಯಾರು ಸ್ವಾಭಾವಿಕವಾಗಿಯೇ ‘ಅಬಲೆ’ ಎಂದು ಹೇಳಿಸಿಕೊಳ್ಳುತ್ತಾರೋ, ಅವರಿಗೆ ಆ ಪರಮಾತ್ಮನ ಬಗ್ಗೆ ಅದೆಷ್ಟು ಬಲಿಷ್ಟ ಆಗಬೇಕಾಗುತ್ತದೆ, ಎಂಬುದರ ವಿಚಾರ ಮಾಡಬೇಕಾಗುತ್ತದೆ.

RELATED ARTICLES  ಜಗತ್ತೆಲ್ಲವೂ ಪರಮಾತ್ಮನೇ

‘ಪುರುಷರಿಗಿಂತಲೂ ಎಂಟುಪಟ್ಟು| ಸ್ತ್ರೀಯರಿಗೆ ಈಶ್ವರನ ಕೊಡುಗೆ|’
ಪುರುಷರಿಗೆ ಕಾಮಾದಿ ವಿಕಾರಗಳನ್ನು ಗೆಲ್ಲಲು ಎಷ್ಟು ಪ್ರಯತ್ನ ಮಾಡಬೇಕಾಗುವದೋ, ಅದರ ಎಂಟುಪಟ್ಟು ಅಧಿಕ ಪ್ರಯತ್ನ ಸ್ತ್ರೀಯರಿಗೆ ಆವಶ್ಯಕವಾಗುತ್ತದೆ, ಇದನ್ನು ಲಕ್ಷದಲ್ಲಿಡಬೇಕಾಗುತ್ತದೆ. ಆಗಬೇಕಾದ ಈ ರೀತಿಯ ಇಷ್ಟು ಪ್ರಯತ್ನ ನಿಧಾನಿಸಿತೆಂದಾದರೆ ಎಲ್ಲವೂ ವ್ಯರ್ಥವಾಗುವದು, ಈ ಬಗ್ಗೆಯೂ ಲಕ್ಷವಿಡಬೇಕು. ಯಾರು ನಾಲಿಗೆ ಗೆದ್ದಿದ್ದಾರೋ ಅವನೇ ಕಾಮವನ್ನು ಗೆಲ್ಲಲು ಅಧಿಕಾರಿಯಾಗುತ್ತಾನೆ. ಯಾರ ಮನಸ್ಸು ಹೂವು-ಹಣ್ಣಿನ ಕಡೆ ಸೆಳೆಯಲ್ಪಡುವದಿಲ್ಲವೋ, ಯಾರು ಗಾಯನದಿಂದ ಮುಗ್ಧನಾಗುವದಿಲ್ಲವೋ, ಸುರಸ ಪಕ್ವಾನ್ನ, ಒಪ್ಪ ಅಲಂಕಾರ, ಸುಂದರ ವಸ್ತ್ರ, ವಿಪುಲ ಧನ ಇವನ್ನೆಲ್ಲಾ ನೋಡುತ್ತಿದ್ದಾಗಲೂ ಯಾರ ಮನಸ್ಸು ವಿಚಲಿತವಾಗುವದಿಲ್ಲವೋ, ಯಾರಿಗೆ ಕೀರ್ತಿಯೆಂಬುದು ಬೆಲೆಯಿಲ್ಲದಾಗಿರುವದೋ, ಯಾವನು ತುಂಬು ತಾರುಣ್ಯದಲ್ಲೂ ದೇಹದ ಅಭಿಮಾನದಿಂದ ಮಂತ್ರಮುಗ್ಧನಾಗುವದಿಲ್ಲವೋ, ತಪ್ಪಿ ಕೂಡಾ ಸೌಂದರ್ಯಾದಿ ಯಾವುದೇ ಕಲ್ಪನೆಯ ಜಾಳದಲ್ಲಿ ಸಿಕ್ಕು ಕಾಮಾದಿಕಗಳ ಬಲಿ ಬೀಳುವದಿಲ್ಲವೋ, ಯಾವುದೇ ಕಠಿಣ ಪರಿಸ್ಥಿತಿಯಲ್ಲಿ ಯಾರ ಧೈರ್ಯ ಸ್ವಲ್ಪವೂ ಕುಸಿಯುವದಿಲ್ಲವೋ, ಮನುಷ್ಯನೇ ಏಕೆ ಬ್ರಹ್ಮಾದಿ ದೇವತೆಗಳೂ ಭ್ರಷ್ಟವಾಗಿಸಲು ಸೆಣಸಿ ಪ್ರಯತ್ನ ಮಾಡುತ್ತಿರುವಾಗಲೂ ಯಾವನು ಒಂದು ಕ್ಷಣವೂ ಕೂಡಾ ಅಲುಗಾಡುವದಿಲ್ಲವೋ, ಯಾರು ಯಾವುದೇ ದುಷ್ಟ ಶಕ್ತಿಯ ಬಾಯಿಗೆ ಬೀಳುವದಿಲ್ಲವೋ, ಈ ರೀತಿ ಸರ್ವತೋಪರಿ ಬಲಿಷ್ಟ, ನಿಜವಾಗಲೂ ತೇಜಸ್ವಿಯಾದ, ಆ ಆತನೊಬ್ಬನೇ ನಿವೃತ್ತಿಮಾರ್ಗದ ಅಧಿಕಾರಿಯು! ಇದನ್ನೆಲ್ಲಾ ಲಕ್ಷದಲ್ಲಿಟ್ಟುಕೊಂಡು ನಂತರ ಅದೇನೆಂದು ತೀರ್ಮಾನ ಮಾಡಿ. ಮೇಲೆ ಹತ್ತುತ್ತಿರುವವನ ಕಾಲು ಎಷ್ಟೆಂದು ಎತ್ತಿ ಹಿಡಿಯಲು ಶಕ್ಯವಿದೆ? ಕಟ್ಟಿ ಕೊಟ್ಟ ಬುತ್ತಿ ದೀರ್ಘ ಪ್ರವಾಸದಲ್ಲಿ ಎಷ್ಟು ದಿವಸ ಸಾಕಾಗುತ್ತದೆ? ಬೇರೆಯವರ ಆಧಾರದಿಂದಲೇ ಬದುಕುವವನು ಕಾಲಕ್ರಮಿಸಿದಂತೆ ಕುಸಿಯುತ್ತಾನೆ. ಸ್ವಂತ ಕಾಲ ಮೇಲೆ ನಿಂತುಕೊಂಡವರ ಕೊರಳಿಗೇ ಯಶಸ್ಸಿನ ಮಾಲೆ ಬೀಳುತ್ತದೆ. ಸದ್ಗುರುವಿನ ಕೃಪೆ ಎಂದರಾದರೂ ಏನು?

RELATED ARTICLES  ಶಾಕುಂತಲದ ಶ್ಲೋಕಚತುಷ್ಟಯ, ಕಾವ್ಯಾವಲೋಕನ-೫

‘ಸದ್ಗುರುವಿನ ಕೃಪೆ ಯಾರಿಗಾಗುವದೋ| ಅವನು ಹುಡುಕುವನು ತನ್ನನ್ನು|’
ಮೂರು ಗಂಟೆಗೆ ಎದ್ದು ಒಂದು ತಾಸು ಧ್ಯಾನದಲ್ಲಿ ಕುಳಿತುಕೊಳ್ಳಿ! ನಂತರ ಮನೆಕೆಲಸ ಮಾಡಿ ಸ್ನಾನ ಮಾಡಿ. ಸಾಧನೆ ರಭಸದಿಂದ ನಡೆಸುತ್ತಿರಿ. ಸೋಮಾರಿತನಕ್ಕೆ ಅವಕಾಶ ಕೊಡಬೇಡಿ. ಕೆಲವು ಶಾಂತಿ ಮತ್ತು ಪ್ರಾಯಶ್ಚಿತ್ತವಾದ ಹೊರತು ಪೂಜೆ-ನೈವೇದ್ಯ ಮಾಡಲಾಗುವದಿಲ್ಲ ಎಂದು ಚಿ. ಖರೆಯವರಿಗೆ, ನಿಮ್ಮಿಂದ ಅದನ್ನು ಮಾಡಿಸಿಕೊಳ್ಳಲು, ತಿಳಿಸಿದ್ದೇನೆ. (ಪರಮಾರ್ಥದ ಪ್ರಗತಿಗಾಗಿ ಶಾಸ್ತ್ರೀಯ ಶುದ್ಧಾಚರಣ ಆವಶ್ಯಕವಿರುತ್ತದೆ) ಈ ಚಾತುರ್ಮಾಸದಲ್ಲಿ ಹೆಚ್ಚೆಚ್ಚು ಶ್ರೀದಾಸಬೋಧ ಪಾರಾಯಣ, ಜಪ ಮಾಡಿರಿ. ನಿಮ್ಮ ವಿಷಯದಲ್ಲಿ ನಾನು ಶ್ರೀಸಮರ್ಥರನ್ನು ವಿಚಾರಿಸಿದರೆ, ಅವರು ನಿಮ್ಮ ಬಗ್ಗೆ ಜಾಮೀನು ಇರಬೇಕು ಹಾಗೆ, ಅವರೇ ನಿಮ್ಮ ಬಗ್ಗೆ ಮನಗಾಣಿಸಿ ಸಾಕ್ಷಿಯನ್ನು ಹೇಳಬೇಕು ಹಾಗೆ, ನೀವು ನಡೆಯಿರಿ; ಅನುಷ್ಠಾನ ಮಾಡಿ; ಭಕ್ತಿ-ಜ್ಞಾನ-ವೈರಾಗ್ಯ ಹೆಚ್ಚಿಸಿರಿ. ಚಿ. ಗಂಗಕ್ಕನ ಹತ್ತಿರ ನಿಮ್ಮ ವಿಷಯದಲ್ಲಿ ಕೇಳದೇ, ನಿಮ್ಮ ಮಾರ್ಗ ನಿವೃತ್ತಿಯೋ ಅಥವಾ ಪ್ರವೃತ್ತಿಯೋ ಎಂಬುದನ್ನು ನಿಶ್ಚಯ ಮಾಡುವ ನಿರ್ಧಾರ ಈಗ ಶ್ರೀಸಮರ್ಥರೇ ತೆಗೆದುಕೊಳ್ಳುತ್ತಾರೆ.
ನಿಮ್ಮ ಆತ್ಮ
ಶ್ರೀಧರ