ಶ್ರೀಗುರುದೇವರು ನಿನ್ನ ಆತ್ಮಸ್ವರೂಪದಲ್ಲೇ ಇದ್ದಾರೆ. ಸದ್ಗುರುಚರಣಾರವಿಂದದಲ್ಲಿಯೇ ಐಕ್ಯವಾಗುವದಿದ್ದರೆ, ದೇಹೇಂದ್ರಿಯದ ಉಪಾಧಿ ಬದಿಗೆ ಸರಿಸಿದಾಗಲೇ, ಅದು ಶಕ್ಯವಿದೆ. ನಿನ್ನದೇ ಆತ್ಮಸ್ವರೂಪಿ ಸದ್ಗುರುವನ್ನು ಗೌರವಪೂರ್ವಕ ಇರಗೊಡುವದಿದ್ದರೆ ಗುರುವಿನ ಶುದ್ಧತೆ ಮತ್ತು ಪವಿತ್ರತೆಯ ಮಹಿಮೆ ಅರಿತು ಉಪಾಸನೆ ಮಾಡಬೇಕು.
(ಮಾತೋಶ್ರೀ ಸಾವಿತ್ರಿ ಭಾಗವತ, ವಾರಣಾಸಿ, ಇವರಿಗೆ ಬರೆದ ಪತ್ರ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
|| ಶ್ರೀರಾಮ ಸಮರ್ಥ ||
ಮಗಳೇ!
ಆತ್ಮದೃಷ್ಟಿಯಿಂದ ಇಲ್ಲಿ ಸ್ವಲ್ಪವೂ ಭೇದವಿರುವದಿಲ್ಲ. ಆತ್ಮಸ್ವರೂಪ ನಿತ್ಯ ಶುದ್ಧ ಸಚ್ಚಿದಾನಂದಘನವಾಗಿದೆ; ನೀನು ಆ ಶುದ್ಧ ಪ್ರಕಾಶಮಯ ಆತ್ಮವನ್ನು ದೇಹದಲ್ಲಿ ತುಂಬಿಕೊಂಡುಬಿಡು. ಈ ದೇಹವಾದರೋ ಅತ್ಯಂತ ತುಚ್ಛ ಮತ್ತು ಅಪವಿತ್ರವಾಗಿದೆ. ದೇಹಾತ್ಮಬುದ್ಧಿಯ ನಿರಾಕರಣ ಮಾಡಿ ಸ್ವಸ್ವರೂಪದಲ್ಲಿ ಸ್ಥಿತವಾಗಿರಬೇಕು. ಶ್ರೀಗುರುದೇವರು ನಿನ್ನ ಆತ್ಮಸ್ವರೂಪದಲ್ಲೇ ಇದ್ದಾರೆ. ಸದ್ಗುರುಚರಣಾರವಿಂದದಲ್ಲಿಯೇ ಐಕ್ಯವಾಗುವದಿದ್ದರೆ, ದೇಹೇಂದ್ರಿಯದ ಉಪಾಧಿ ಬದಿಗೆ ಸರಿಸಿದಾಗಲೇ, ಅದು ಶಕ್ಯವಿದೆ. ನಿನ್ನದೇ ಆತ್ಮಸ್ವರೂಪಿ ಸದ್ಗುರುವನ್ನು ಗೌರವಪೂರ್ವಕ ಇರಗೊಡುವದಿದ್ದರೆ ಗುರುವಿನ ಶುದ್ಧತೆ ಮತ್ತು ಪವಿತ್ರತೆಯ ಮಹಿಮೆ ಅರಿತು ಉಪಾಸನೆ ಮಾಡಬೇಕು.
ಪವಿತ್ರ ಆತ್ಮಭಾವದ ಹೊರತು ಗುರುದೇವರನ್ನು ನಮ್ಮ ಅಪವಿತ್ರ ದೇಹದಿಂದ ಸ್ಪರ್ಷ ಮಾಡಬಾರದು. ಮತ್ತು ಅದರಲ್ಲೂ ಸ್ತ್ರೀದೇಹ ಅತಿಶಯ ಅಪವಿತ್ರ ಎಂದು ಅನಿಸಿಕೊಳ್ಳಲ್ಪಡುತ್ತದೆ.
ಮಗಳೇ! ದೇಹದೃಷ್ಟಿಯಂತೂ ಅತ್ಯಂತ ಕೆಳಗಿನ ಸ್ಥರದ ವಿಷಯವಾಗಿದೆ. ಆತ್ಮದ ಸ್ಫುರಣ, ದೇಹದ ಸ್ಫುರಣ, ಜಗತ್ತಿನ ಸ್ಫುರಣ ಅಂದರೆ, ಅಹಂಬ್ರಹ್ಮಾಸ್ಮಿ, ಸರ್ವಾಹಮ್, ವಿಶ್ವರೂಪೋಹಮ್, ದೇಹೋಹಮ್ ಇತ್ಯಾದಿ ಎಲ್ಲ ವಿಷಯಗಳು ಮನಸ್ಸಿನ ಚಂಚಲ ವೃತ್ತಿಯೇ ಆಗಿದೆ. ಅಜ್ಞಾನದ ಎಲ್ಲ ಕಾರ್ಯಗಳ ಪ್ರಕಾಶಕ, ನಿತ್ಯ-ನಿಶ್ಚಲ, ನಿತ್ಯ-ನಿರಾಭಾಸ, ನಿತ್ಯ-ನಿರ್ವಿಕಲ್ಪ, ತನ್ನ ಚಿದ್ಘನ ಸ್ವರೂಪದಿಂದ ಸ್ವಯಮೇವ ವಿರಾಜಮಾನನಾಗುವ ‘ಅಹಂಬ್ರಹ್ಮಾಸ್ಮಿ’ ಯ ಸ್ಫೂರ್ತಿಗೂ ಕೂಡಾ ನಮ್ಮಲ್ಲಿ ಆಶ್ರಯ ಕೊಡದೇ, ಅಲ್ಲಿ, ಸರ್ವಶ್ರೇಷ್ಠ ವಸ್ತುವಿಗಿಂತಲೂ ಅತ್ಯಂತ ಶ್ರೇಷ್ಠ, ಅಸಂಗರೂಪ, ನಿರಂತರ ಸ್ವಯಂಪ್ರಕಾಶರೂಪ ಆನಂದಘನ ಆತ್ಮಸ್ವರೂಪವೇ ಇದೆ.
(ಈ ಪತ್ರದ ಎರಡನೆಯ ಭಾಗ ಮುಂದುವರಿಯುವದು)