ಅಷ್ಟು ವೃದ್ಧಾವಸ್ಥೆಯಲ್ಲಿಯೂ ಅರಣ್ಯಮಧ್ಯದಲ್ಲಿ ಕಠೋರ ತಪಸ್ಸು ಮಾಡುತ್ತಿರುವಾಗ, ಅವರು ಅದೆಷ್ಟು ಸಹನಶೀಲರಾಗಿರುತ್ತಿದ್ದರು ಎಂಬುದೂ ಕೂಡಾ ಅಷ್ಟೇ ಕಠಿಣ ತಪಸ್ಸಾಗಿದೆ!
(ಮಾತೋಶ್ರೀ ಸಾವಿತ್ರಿ ಭಾಗವತ, ವಾರಣಾಸಿ, ಇವರಿಗೆ ಬರೆದ ಪತ್ರ)

— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

ಓಂ
ಮಗಾ!
ನಮ್ಮ ಹಿಂದಿನ ತ್ಯಾಗಿ – ಮಹಾನ ಪುರುಷರ ನಿರ್ಮೋಹ ಸ್ಥಿತಿ ವಿಚಾರಣೀಯವಾಗಿದೆ. ವಿಚಾರಮಾಡಿ ನೋಡಿದರೆ ಬಹಳ ಆಶ್ಚರ್ಯಕರವಾಗಿದೆ. ಹಿಂದಿನ ರಾಜಮಹಾರಾಜರು ವೃದ್ಧಾವಸ್ಥೆಯಲ್ಲಿ ತಮ್ಮ ಎಲ್ಲ ರಾಜಕೀಯ ಆಡಂಬರ, ಹೆಂಡತಿ-ಮಕ್ಕಳು, ಬಂಧು-ಬಾಂಧವರು, ಇಷ್ಟ-ಮಿತ್ರರು ಮೊದಲಾದ ಎಲ್ಲವನ್ನೂ ಬಿಟ್ಟು, ತಮ್ಮೆಲ್ಲ ಅಂದಿನ ವರೆಗಿನ ಆಯುಷ್ಯ, ವಿಧವಿಧದ ಕೋಮಲ ಭೋಗವಿಲಾಸದಲ್ಲಿ ಕಳೆದಿದ್ದರೂ, ಅವೆಲ್ಲದರ ಮೇಲೆ ತಿಲಾಂಜಲಿ ಬಿಟ್ಟು, ತಾವೊಬ್ಬರೇ ಅರಣ್ಯಕ್ಕೆ ಹೋಗಿ, ಸ್ವಹಸ್ತದಿಂದ ಪರ್ಣಕುಟಿ ನಿರ್ಮಿಸಿಕೊಂಡು, ಅದರಲ್ಲಿ ಅಥವಾ ಯಾವುದೋ ಒಂದು ವೃಕ್ಷದ ನೆರಳಿನಲ್ಲಿ ಬಿದ್ದಿರುತ್ತಿದ್ದರು. ದೇಹ ನಿರ್ವಾಹಣೆಗೆ ಪಾತ್ರೆ-ಪೊಗಡು ತೆಗೆದುಕೊಳ್ಳದೇ, ಸಮಯದಲ್ಲಿ ಸಿಕ್ಕ, ಅರಣ್ಯದಲ್ಲಿನ ಒಣಗಿದ ಎಲೆ ಅಥವಾ ಕಂದಮೂಲಗಳನ್ನು ಸೇವಿಸಿ, ಅದೆಷ್ಟು ಉಗ್ರ ತಪಸ್ಸು ಮಾಡುತ್ತಿದ್ದರು? ನೌಕರ-ಚಾಕರರಂತೂ ಇಲ್ಲ; ಅಷ್ಟಲ್ಲದೇ ಇತರ ಯಾವುದೇ ಸಹಾಯದ ಅಪೇಕ್ಷೆಯನ್ನೂ ಮಾಡುತ್ತಿರಲಿಲ್ಲ ಮತ್ತು ಒಮ್ಮೆ ಅರಮನೆಯಿಂದ ಹೊರಬಿದ್ದ ಮೇಲೆ, ಇವರ ಸುದ್ದಿ ಅವರಿಗೆ ಅಥವಾ ಅವರ ಸುದ್ದಿ ಇವರಿಗೆ ಇರುತ್ತಿರಲಿಲ್ಲವಾಗಿತ್ತು. ಅವರು ಯಾವಾಗಲೂ ಮನ-ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಂಡು, ಪರಮತತ್ವದಲ್ಲೇ ತತ್ಪರರಾಗಿರುವ ಅಭ್ಯಾಸ ಮಾಡುತ್ತಿದ್ದರು.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ಮಗಳೇ! ಈ ರೀತಿ ತ್ಯಾಗಿ ಮತ್ತು ನಿರ್ಮೋಹಿಗಳಾಗಿರುವ ಹೃದಯವದೆಷ್ಟು ಪ್ರಶಂಸನೀಯವಾಗಿದೆ? ಅವರ ನಿರ್ಮೋಹ ಸ್ಥಿತಿ ಹೇಗಿತ್ತು ಎಂಬುದರ ವಿಚಾರ ಮಾಡಿದರೆ ರೋಮಾಂಚನಕಾರಕವಾಗಿದೆ. ಅವರ ಪರಿವಾರದ ಜನರೂ ಅವರ ತ್ಯಾಗ, ನಿರ್ಮೋಹ ಸ್ಥಿತಿಗೆ ಹೋಗುವ ಸಂಕಲ್ಪಕ್ಕೆ ಅಡ್ಡಿ ಮಾಡುತ್ತಿರಲಿಲ್ಲ. ಅಷ್ಟು ವೃದ್ಧಾವಸ್ಥೆಯಲ್ಲಿಯೂ ಅರಣ್ಯಮಧ್ಯದಲ್ಲಿ ಕಠೋರ ತಪಸ್ಸು ಮಾಡುತ್ತಿರುವಾಗ, ಅವರು ಅದೆಷ್ಟು ಸಹನಶೀಲರಾಗಿರುತ್ತಿದ್ದರು ಎಂಬುದೂ ಕೂಡಾ ಅಷ್ಟೇ ಕಠಿಣ ತಪಸ್ಸಾಗಿದೆ!
(ಈ ಪತ್ರದ ಎರಡನೆಯ ಭಾಗ ಮುಂದುವರಿಯುವದು)

RELATED ARTICLES  ಕಳೆದುಹೋದ ಎಳೆಯ ದಿನಗಳು ( ಭಾಗ ೯)