ನಾನು ಬಾಲಕನಿದ್ದಾಗಿಂದಲೇ ಮನೆ ಬಿಟ್ಟು, ಆಶ್ರಮದೃಷ್ಟಿಯಿಂದ ಸನ್ಯಾಸಿಯಾಗಿದ್ದರೂ, ಹಿಂದಿನ ಕಾಲದ ಗೃಹಸ್ಥರಿಂದ ಒಮ್ಮಿಂದೊಮ್ಮೆಲೇ ಮಾಡಿದ ತ್ಯಾಗ, ಅವರ ನಿರ್ಮೋಹತ್ವ ಮತ್ತು ಅವರ ಕಠಿಣ ತಪಸ್ಸು ನೋಡಿ ನನಗೂ ಕೂಡ ಅತಿಶಯ ಆಶ್ಚರ್ಯವೆನಿಸುತ್ತದೆ.
(ಮಾತೋಶ್ರೀ ಸಾವಿತ್ರಿ ಭಾಗವತ, ವಾರಣಾಸಿ, ಇವರಿಗೆ ಬರೆದ ಪತ್ರದ ಎರಡನೆಯ ಭಾಗ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

ಬಹಳ ಹಿಂದಿನ ಒಂದು ಕತೆ ಇದೆ. ಯಾಜ್ಞವಲ್ಕ್ಯರು ಮೈತ್ರೇಯಿಗೆ ಬ್ರಹ್ಮೋಪದೇಶ ಕೊಟ್ಟು ತಾನು ಸ್ವತಃ ಸನ್ಯಾಸದೀಕ್ಷೆ ಸ್ವೀಕರಿಸಿ ಮನೆಯಿಂದ ಹೊರಗೆ ಬಿದ್ದರು. ಕೆಲ ಕಾಲದ ನಂತರ ಮೈತ್ರೇಯಿಯೂ ಸರ್ವಸ್ವ ತ್ಯಾಗ ಮಾಡಿ ಸನ್ಯಾಸ ದೀಕ್ಷೆ ತೆಗೆದುಕೊಂಡು ಹೊರಟು ಹೋದಳು. ಒಂದು ದಿನ ಅಕಸ್ಮಾತ್ ಯಾಜ್ಞವಲ್ಕ್ಯರಿಗೆ, ಒಂದು ವೃಕ್ಷದ ನೆರಳಲ್ಲಿ ಬಹಿರ್ಮುಖ ದೃಷ್ಟಿಯಿಲ್ಲದೇ, ಸಮಾಧಿಸ್ಥಳಾಗಿ ಕುಳಿತ ಮೈತ್ರೇಯಿ ಕಾಣಿಸಿದಳು. ಅದನ್ನು ನೋಡಿ ಯಾಜ್ಞವಲ್ಕ್ಯರಿಗೆ ತುಂಬಾ ಪ್ರಸನ್ನತೆಯಾಯಿತು ಮತ್ತು ಅವರು ಅವಳ ಹತ್ತಿರ ಹೋಗಿ ‘ಮೈತ್ರೇಯಿ! ಮೈತ್ರೇಯಿ’ ಎಂದು ಕರೆಯುತ್ತಾ, ಅವಳನ್ನು ಅಲುಗಿಸಿ ಎಚ್ಚರಕ್ಕೆ ತಂದರು. ಆದರೆ ಮೈತ್ರೇಯಿಯ ಕಣ್ಣುಗಳು ಅರ್ಧೋನ್ಮಿಲಿತವಾದರೂ, ವೃತ್ತಿ ಬಹಿರ್ಮುಖವಾಗಲಿಲ್ಲ ಮತ್ತು ಅವಳು ಪುನಃ ನಿರ್ವಿಕಲ್ಪ ಸಮಾಧಿ ತಲುಪಿದಳು; ಅವಳಿಗೆ ಯಾಜ್ಞವಲ್ಕ್ಯನ ನೆನಪೂ ಆಗಲಿಲ್ಲ.

RELATED ARTICLES  ದೇಹಸುಖದ ವಾಸನೆಯೇ ಜನ್ಮಕ್ಕೆ ಕಾರಣೀಭೂತವಾಗಿರುತ್ತದೆ!

ಮಗಳೇ! ಪೂರ್ವಕಾಲದಲ್ಲಿ ಯಾವ ತ್ಯಾಗಿ, ಬ್ರಹ್ಮರ್ಷಿ, ರಾಜರ್ಷಿಗಳಿದ್ದರೋ ಅವರ ವಿಷಯದಲ್ಲಿ ವಿಚಾರ ಮಾಡುವಂತಿದೆ. ಅವರ ಅಭ್ಯಾಸ ಮಾಡುವ ಕ್ರಮ, ಅವರ ಧೈರ್ಯ, ದೃಢ ನಿಶ್ಚಯ, ನಿರ್ಮೋಹ ಸ್ಥಿತಿ, ತ್ಯಾಗ, ಆದರ್ಶಜೀವನ, ಪರಮಾರ್ಥ ದಿಗ್ದರ್ಶನ ಈ ಎಲ್ಲಾ ವಿಚಾರ ಅರ್ಥ ಮಾಡಿಕೊಳ್ಳಲು ಯೋಗ್ಯವಾಗಿದೆ.

RELATED ARTICLES  ಕಳೆದುಹೋದ ಎಳೆಯ ದಿನಗಳು (ಭಾಗ5)

ನಾನು ಬಾಲಕನಿದ್ದಾಗಿಂದಲೇ ಮನೆ ಬಿಟ್ಟು, ಆಶ್ರಮದೃಷ್ಟಿಯಿಂದ ಸನ್ಯಾಸಿಯಾಗಿದ್ದರೂ, ಹಿಂದಿನ ಕಾಲದ ಗೃಹಸ್ಥರಿಂದ ಒಮ್ಮಿಂದೊಮ್ಮೆಲೇ ಮಾಡಿದ ತ್ಯಾಗ, ಅವರ ನಿರ್ಮೋಹತ್ವ ಮತ್ತು ಅವರ ಕಠಿಣ ತಪಸ್ಸು ನೋಡಿ ನನಗೂ ಕೂಡ ಅತಿಶಯ ಆಶ್ಚರ್ಯವೆನಿಸುತ್ತದೆ. ನಿಮಗೆ ಗುರುದೇವ ಅಥವಾ ಉಳಿದ ಯಾರಾದರೂ ನಿಸ್ಪ್ರಹರು, ತಪಶ್ಚರ್ಯಗಾಗಿ ಒಬ್ಬರೇ ಗಿರಿಕಂದರದೆಡೆ ಹೋಗಹತ್ತಿದರೆ ಅವರ ಬಗ್ಗೆ ಅದೆಷ್ಟು ಕಾಳಜಿ-ಚಿಂತೆಯಾಗಿ, ನೀವು ಅವರ ಪಯಣಕ್ಕೆ ಪ್ರತಿಬಂಧ ಮಾಡುವ ಪ್ರಯತ್ನ ಮಾಡುತ್ತೀರಿ. ಮಗಳೇ! ಪೂರ್ವಕಾಲೀನ ಋಷಿ-ಮುನಿಗಳಂತೆ ಕಠಿಣ ತಪಸ್ಸು ಮಾಡುವದರಿಂದ ಮನೋವಾಂಛನೆ ಪೂರ್ಣವಾಗುತ್ತದೆ.
‘ತಪಸಾ ಬ್ರಹ್ಮ ವಿಜಿಜ್ಞಾಸಸ್ವ’ ಹೀಗೆ ಶ್ರುತಿಮಾತೆಯ ಆದೇಶವಿದೆ.
ಇತಿಶಮ್
ನಿನ್ನದೇ ಆತ್ಮ
ಶ್ರೀಧರ