ಮನೆಯಲ್ಲಿದ್ದರೆ ಒಂದು ರೀತಿಯ ಕಟ್ಟು ಪಾಡನ್ನು ಅನುಸರಿಸಬೇಕು. ಇಲ್ಲದಿದ್ದಲ್ಲಿ ಹಿರಿಯರ ನಿಂದನೆಗೆ ಒಳಗಾಗಬೇಕಾಗುತ್ತದೆ ಅದೂ ಅಲ್ಲದೆ ಯಾವ ಕಾರ್ಯಗಳನ್ನೂ ಸಾಧಿಸಲಾಗುವುದಿಲ್ಲ. ಜೀವನದಲ್ಲಿ ತನ್ನ ಗುರಿಯನ್ನು ಮುಟ್ಟಲು ಆಗುವುದಿಲ್ಲ. ತಂದೆ ತಾಯಂದಿರು ಹೇಳಿದಂತೆ ಕೇಳಬೇಕು.. ಬೆಳಿಗ್ಗೆ ಬೇಗ ಏಳಬೇಕು, ಎದ್ದು ಮುಖ ತೊಳೆದು ಕಾಫಿ ಕುಡಿದು ಸ್ನಾನ ಮಾಡಿ, ತಿಂಡಿ ತಿಂದು ನಂತರ ಶಾಲೆ ಕಛೇರಿಗೆ ಹೋಗಿ ಸಂಜೆ ಮನೆಗೆ ಬಂದ ನಂತರ ಕೈಕಾಲು ಮುಖ ತೊಳೆದು ಓದಬೇಕು ನಂತರ ಊಟ ಮಾಡಬೇಕು. ರಾತ್ರಿ ಬಹಳ ಹೊತ್ತಿನವರೆವಿಗೆ ಎದ್ದಿರಬಾರದು. ಬೇಗ ಮಲಗಿ ಬೇಗ ಏಳಬೇಕು ಎಂಬ ಕಟ್ಟುಪಾಡು ವಿಧಿಸಿರುತ್ತಾರೆ. ಆದರೆ ಇಂದು ಟಿ.ವಿ ಮೊಬೈಲ್, ಫೇಸ್ ಬುಕ್, ವಾಟ್ಸಪ್ ಯುಗ ಇದರಲ್ಲಿ ತಲ್ಲೀನರಾಗಿ ಯಾರೂ ಬೇಗ ಮಲಗುವುದೇ ಇಲ್ಲ. ಹೊತ್ತಾದ ನಂತರ ಮಲಗಿ ಸೂರ್ಯ ಹುಟ್ಟಿದ ನಂತರ ಏಳುವ ಅಭ್ಯಾಸವಾಗಿ ಬಿಟ್ಟಿದೆ.

ಒಂದು ಪ್ರದೇಶದಲ್ಲಿ ವಾಸಿಸುವ ಜನರಿಗೆ ಅವರುಗಳೇ ಆದ ಒಂದು ರೀತಿಯ ಕಟ್ಟುಪಾಡನ್ನು ಮಾಡಿಕೊಂಡಿರುತ್ತಾರೆ. ಒಂದು ಪ್ರದೇಶದಲ್ಲಿ ಇದ್ದಾಗ ಒಬ್ಬರಿಗೆ ತೊಂದರೆಯಾಗದಂತೆ ಜೀವನ ನಡೆಸಬೇಕು. ಕಸ ಕಡ್ಡಿಗಳನ್ನು ನಿರ್ದಿಷ್ಠ ಜಾಗದಲ್ಲೇ ಹಾಕಬೇಕು ಹೀಗೆ ಅನೇಕ ಕಟ್ಟುಪಾಡುಗಳನ್ನು ಅನುಸರಿಸುತ್ತಿ ರುತ್ತಾರೆ. ಈಗ ಭಾರತದ ಸನ್ಮಾನ್ಯ ಪ್ರಧಾನ ಮಂತ್ರಿಗಳು ಸ್ವಚ್ಛ ಭಾರತ್ ಅಭಿಯಾನವನ್ನು ಆರಂಬಿಸಿರುವುದರಿಂದ ನಗರಗಳಲ್ಲಿ ನಿಗದಿತ ಸ್ಥಳದಲ್ಲಿಯೇ ಕಸವನ್ನು ಹಾಕಬೇಕೆಂದು ಕಟ್ಟು ಪಾಡು ಮಾಡಿದ್ದಾರೆ. ಇದು ಮೊದಲಿನಿಂದಲೂ ದೇಶದಲ್ಲಿ ಬಂದಿದ್ದರೆ ಈ ವೇಳೆಗೆ ನಮ್ಮ ದೇಶವೂ ಕೂಡಾ ಸ್ವಚ್ಛತೆಯಲ್ಲಿ ಬೇರೆ ದೇಶಗಳೊಡನೆ ಪೈಪೋಟಿ ನಡೆಸಬಹುದಿತ್ತು. ಎಲ್ಲವೂ ಸ್ವಾರ್ಥದಿಂದ ನಾವು ಹಾಕುವ ಕಸದ ಮದ್ಯದಲ್ಲಿಯೇ ವಾಸಿಸುವಂತಾಗಿದೆ. ನಮ್ಮ ಮನೆಯನ್ನು ಸ್ವಚ್ಛವಾಗಿಡುವಂತೆ ಎಲ್ಲರೂ ಮನಸ್ಸುಮಾಡಿ ಅವರವರು ವಾಸಿಸುವ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿದರೆ ಎಲ್ಲಾ ಪ್ರದೇಶಗಳು ಸ್ವಚ್ಛವಾಗಿರುತ್ತವೆ. ನಮ್ಮ ಮನೆಮುಂದೆ ಚೆನ್ನಾಗಿದ್ದರೆ ಸಾಕು ಬೇರೆಯ ಪ್ರದೇಶಗಳ ಸಮಾಚಾರ ನಮಗೇಕೆ? ಎಂದು ಉದಾಸೀನ ಮಾಡಿದರೆ ಇನ್ನುಮುಂದೆಯೂ ಸಹ ಕಸದ ಮದ್ಯದಲ್ಲಿಯೇ ವಾಸಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಯಾರೂ ಕೂಡ ಸ್ವಚ್ಛವಾಗಿರಬೇಡ ಎಂದು ಹೇಳುವುದಿಲ್ಲ. ಎಲ್ಲವೂ ಸ್ವಚ್ಚವಾಗಿದ್ದರೆ ನೋಡಲು ಬಹಳ ಆನಂದವಾಗಿರುತ್ತದೆ. ಮನಸ್ಸು, ಮನೆ, ವಾಸಿಸುವ ಪ್ರದೇಶಗಳು ಎಲ್ಲವನ್ನೂ ಸ್ವಚ್ಛವಾಗಿಡಲು ಕಟ್ಟುನಿಟ್ಟಿನ ಕ್ರಮ ಅಗತ್ಯವಾಗಿದೆ. ಈಗ ಎಲ್ಲರೂ ಬುದ್ದಿವಂತರಾಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಪ್ರಪಂಚವು ಅತಿ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ವಿಜ್ಞಾನವು ಅನೇಕಾನೇಕ ಅವಿಷ್ಕಾರಗಳನ್ನು ಮಾಡಿ, ಅಂಗೈಯಲ್ಲಿಯ ಮೊಬೈಲ್‍ನಿಂದ ಪ್ರಪಂಚದ ಆಗುಹೋಗುಗಳನ್ನು ತಿಳಿಯಬಹುದು. ಟಿ.ವಿಮಾದ್ಯಮಗಳು ಪೇಪರ್ ಮಾದ್ಯಮಗಳು ಸಾಮಾಜಿಕ ಜಾಲತಾಣಗಳು ಇರುವುದರಿಂದ ಎಲ್ಲಾ ಸುದ್ದಿಗಳು ಕ್ಷಣ ಮಾತ್ರದಲ್ಲಿ ತಲುಪುತ್ತವೆ. ಇದರಿಂದ ದೇಶದಲ್ಲಿ ಸ್ವಚ್ಛತೆ ಬಗ್ಗೆ ಜನಗಳಲ್ಲಿ ಅರಿವು ಮೂಡಿಸುವಂತಹ ಕಾರ್ಯವನ್ನು ಮಾಡಬೇಕಿದೆ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ಹೆಣ್ಣುಮಕ್ಕಳಿಗೆ ಒಂದು ರೀತಿಯ ಕಟ್ಟುಪಾಡು ಇರುತ್ತದೆ. ಹಿಂದೂ ಧರ್ಮದಲ್ಲಿ ಅವರುಗಳ ಆಚಾರ ವಿಚಾರಗಳಿಗೆ ಒಂದು ರೀತಿಯ ಕಟ್ಟುಪಾಡು, ಬಟ್ಟೆಗಳನ್ನು ಉಡುವ ತೊಡುವ ಬಗ್ಗೆ ಕಟ್ಟುಪಾಡನ್ನು ಮಾಡಿರುತ್ತಾರೆ. ಈಗ ಎಲ್ಲವೂ ಫ್ಯಾಷನ್ ಆಗಿದೆ. ಎಲ್ಲರೂ ಅವರವರದೇ ರೀತಿಯಲ್ಲಿ ಉಡುಗೆ ತೊಡುಗೆಗಳನ್ನು ಹಾಕುತ್ತಾರೆ. ಇವೆಲ್ಲವೂ ನಮಗೆ ನಾವೇ ಬೇಲಿ ಹಾಕಿಕೊಂಡಂತೆ ಇರುತ್ತದೆ.

ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗವೇ ಕಟ್ಟು ಪಾಡು ವಿಧಿಸಿದೆ. ಚುನಾವಣೆ ಪ್ರಕ್ರಿಯೆಗೆ ಒಂದು ರೀತಿಯ ಕಟ್ಟುಪಾಡು ವಿಧಿಸಲಾಗುತ್ತದೆ. ಚುನಾವಣೆ ದಿನಾಂಕ ಘೋಷಣೆಯಾದರೆ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತದೆ. ಚುನಾವಣೆ ಮುಗಿಯುವವರೆಗೂ ಸರ್ಕಾರವು ಜನಗಳಿಗಾಗಿ ವಿಶೇಷ ಯೋಜನೆಗಳನ್ನು ಪ್ರಕಟಿಸುವಂತಿಲ್ಲ. ಚುನಾವಣಾ ಅಯೋಗ ವಿಧಿಸಿರುವ ಕಟ್ಟುಪಾಡನ್ನು ಉಲ್ಲಂಘಿಸಿದರೆ ಚುನಾವಣಾ ಅಯೋಗ ವಿಧಿಸುವ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಬಸ್ಸು, ರೈಲು, ಏರೋಪ್ಲೇನ್‍ಗಳಲ್ಲಿ ಸಂಚರಿಸುವಾಗ ಒಂದು ರೀತಿಯ ಕಟ್ಟುಪಾಡು ಬಸ್ಸಿನಲ್ಲಿ ಮಹಿಳೆಯರಿಗೆ ಮೀಸಲಿರಿಸಿರುವ ಸೀಟಿನಲ್ಲಿ ಕುಳಿತುಕೊಳ್ಳಬಾರದು, ಟಿಕೆಟ್ ಪಡೆಯಲೇ ಬೇಕು ಹೀಗೆ ಹಲವಾರು ನಿಯಮಗಳು ಇದನ್ನು ಉಲ್ಲಂಘಿಸಿದರೆ ಅದಕ್ಕೆ ತಕ್ಕಂತೆ ದಂಡ ವಿಧಿಸಲಾಗುತ್ತದೆ.
ಇದೇರೀತಿ ಮನೆಗಳಲ್ಲಿ ಹಬ್ಬ, ಮದುವೆ ಇತರೆ ಸಮಾರಂಭಗಳಲ್ಲಿ ಅವರದೇ ಆದ ನಿಯಮಗಳು ಇರುತ್ತದೆ. ಇದನ್ನು ಮೀರಿದರೆ ವ್ಯವಹಾರಿಕವಾಗಿ ಏನೂ ಆಗುವುದಿಲ್ಲ ಆದರೆ ಮಾನಸಿಕವಾಗಿ ಎಲ್ಲರಿಗೂ ಬೇಸರವಾಗುತ್ತದೆ. ಕೆಲವು ತಂದೆತಾಯಿಯರಿಗೆ ತಮ್ಮ ಮಕ್ಕಳು ತಾವು ಹೇಳಿದ ವರ ಅಥವಾ ವಧುವನ್ನೇ ವಿವಾಹವಾಗಬೇಕೆಂದು ಬಯಸಿ ಅದಕ್ಕೆ ತಕ್ಕಂತೆ ಕಟ್ಟುಪಾಡು ವಿಧಿಸಿರುತ್ತಾರೆ. ಅದರೆ ಮಕ್ಕಳು ಪ್ರೀತಿ ಎಂಬ ವ್ಯಾಮೋಹಕ್ಕೆ ಒಳಗಾಗಿ ತಮಗೆ ಇಷ್ಟವಾದವರನ್ನು ಪ್ರೀತಿಸಿ ಮದುವೆಯಾಗಲು ಹಠ ಹಿಡಿದಿದ್ದಲ್ಲಿ ಹೆತ್ತವರು ಕಟ್ಟುಪಾಡು ವಿಧಿಸಿ ಏನೂ ಪ್ರಯೋಜನ ಇಲ್ಲದಂತೆ ಆಗುತ್ತದೆ. ಯಾವುದೇ ಕಟ್ಟುಪಾಡುಗಳು ಮನುಷ್ಯನ ಜೀವನಕ್ಕೆ ಕಷ್ಟವಾಗಿ ಮನಸ್ಸಿಗೆ ಭಾಧಕವಾಗಬಾರದು.

RELATED ARTICLES  ಮೋದಿಗೆ ಬಯ್ಯೋ ಮೊದಲು ಇಲ್ಲಿ ಗಮನಿಸಿ.

ಹೀಗೆ ಮನುಷ್ಯನು ಕಟ್ಟುಪಾಡುಗಳೆಂಬ ಬೇಲಿಯನ್ನು ತನ್ನ ಸುತ್ತಲೂ ತಾನೇ ಕಟ್ಟಿಕೊಂಡು ಶಿಸ್ತುಬದ್ದ ಜೀವನವನ್ನು ನಡೆಸುತ್ತಾ ಇದ್ದಾನೆ.
ಇದೇರೀತಿ ದೇವರ ಸಾನಿಧ್ಯ ಪಡೆಯಲು ಅನೇಕ ರೀತಿಯ ಕಟ್ಟುಪಾಡು ಇರುತ್ತದೆ. ನಿಶ್ಚಲ ಭಕ್ತಿ, ಎಲ್ಲ ಪ್ರಾಣಿ ಮನುಷ್ಯರಲ್ಲಿ ಪ್ರೀತಿ ಹೊಂದುವುದು, ಎಲ್ಲರನ್ನೂ ಸಮನಾಗಿ ಕಾಣುವುದು. ಬಡವರ ಸೇವೆಯನ್ನು ಮಾಡುವುದು ದೇವರಿಗೆ ಮಾಡುವ ಪ್ರಿಯವಾದ ಸೇವೆ. “Seಡಿviಛಿe ಣo ಣhe ಊumಚಿಟಿiಣಥಿ is Seಡಿviಛಿe ಣo ಉoಜ “ ಬಡವರಿಗೆ ಮಾಡುವ ಸೇವೆಯು ನೇರವಾಗಿ ದೇವರಿಗೆ ಮಾಡುವ ಸೇವೆಯಂತೆ ಅದನ್ನು ದೇವರು ನೇರವಾಗಿ ಸ್ವೀಕರಿಸುತ್ತಾನೆ.

ಒಬ್ಬ ಮನುಷ್ಯ ಕಟ್ಟುಪಾಡು ಮೀರಿದ ಎಂದರೆ ಬೇಲಿ ಹಾರಿದ ಎನ್ನುತ್ತಾರೆ. ಬೇಲಿ ಹಾರಿ ಅಥವಾ ನಿಯಮಗಳನ್ನು ಮೀರಿ ನಡೆದರೆ ಸಮಾಜದಲ್ಲಿ ಗೌರವ ಕಡಿಮೆಯಾಗುವುದರಲ್ಲಿ ಸಂಶಯವೇ ಇಲ್ಲ. ಅದಕ್ಕೆ ಜಾಗರೂಕರಾಗಿ ಒಳ್ಳೆಯ ರೀತಿಯಲ್ಲಿ ನಡೆಯಬೇಕು. ಮನುಷ್ಯ ತನ್ನ ಜೀವನದಲ್ಲಿ ಶಿಸ್ತುಬದ್ದಿನ ಕಟ್ಟು ಪಾಡಿನ ಜೀವನ ನಡೆಸಿದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು.
ಎಷ್ಟೇ ದೊಡ್ಡ ವ್ಯಕ್ತಿಯಾದರೂ ಕಟ್ಟು ಪಾಡನ್ನು ಮೀರುವಂತಿಲ್ಲ. ಇದನ್ನು ಅನುಸರಿಸಿ ಶಿಸ್ತಿನಿಂದ ನಡೆದರೆ ಸಮಾಜಕ್ಕೆ ಒಳ್ಳೆಯ ವ್ಯಕ್ತಿಯಾಗುತ್ತಾರೆ.

ಮುರಳಿಮಂಗಲಧರೆ