ಹೇಗೆ ಹಗ್ಗದಲ್ಲಿ ಭ್ರಮೆಯಿಂದ ಹಾವಿನ ಭಾಸವಾಗಿದ್ದರೂ, ಅಲ್ಲಿ ಹಾವು ಎಂದೂ ಇಲ್ಲವಾಗಿತ್ತು, ಅಷ್ಟೇ ಅಲ್ಲ, ಇರುವದೇ ಇಲ್ಲವೋ, ಹಾಗೆಯೇ ಈ ನಿನ್ನ ನಿಜಸ್ವರೂಪಸ್ಥಿತಿಯಿದೆ.
(ಮಾತೋಶ್ರೀ ಸಾವಿತ್ರಿ ಭಾಗವತ, ವಾರಣಾಸಿ, ಇವರಿಗೆ ಬರೆದ ಪತ್ರ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
|| ಶ್ರೀರಾಮ ಸಮರ್ಥ ||
ಮಗಾ!
ಕೃಪಾರೂಪದ ಈ ಜ್ಞಾನದ ಕತ್ತರಿ ಕೈಯಲ್ಲಿ ತೆಗೆದುಕೋ, ಅಂದರೆ ಗ್ರಂಥಿ ಕತ್ತರಿಸಿ ಹೋಗುತ್ತದೆ. ಯಾವಾಗ ತುಂಡೆರಡು ಬೇರೆಯಾಗಿ, ಕೇವಲ ಚಿಜ್ಜಡವಾಗೇ ಉಳಿದುಕೊಳ್ಳುವದೋ ಅದೇ ಸಹಜಸ್ಥಿತಿಯು; ಪೂರ್ಣಸ್ಥಿತಿಯು. ಅದರಲ್ಲಿ ಜೀವೇಶ್ವರರ ಕಲ್ಪನೆಯೂ ಇರುವದಿಲ್ಲ. ಅಲ್ಲಿ ಜೀವಭಾವದ ಭ್ರಮೆಯೂ ಇರುವದಿಲ್ಲ. ಅಲ್ಲಿ ಮಾಯೆ-ಅವಿದ್ಯೆಗಳ ಹೇಳಹೆಸರಿಲ್ಲ. ಅಲ್ಲಿ ಕೇವಲ ನಿತ್ಯ, ಶುದ್ಧ, ಬುದ್ಧ, ಸಚ್ಚಿದಾನಂದಘನ, ಸ್ವತಃಸಿದ್ಧ, ಸ್ವಯಂಪ್ರಕಾಶೀ ಆತ್ಮಸ್ವರೂಪ ಮಾತ್ರ ಉಳಿಯುತ್ತದೆ. ಹೇಗೆ ಹಗ್ಗದಲ್ಲಿ ಭ್ರಮೆಯಿಂದ ಹಾವಿನ ಭಾಸವಾಗಿದ್ದರೂ, ಅಲ್ಲಿ ಹಾವು ಎಂದೂ ಇಲ್ಲವಾಗಿತ್ತು, ಅಷ್ಟೇ ಅಲ್ಲ, ಇರುವದೇ ಇಲ್ಲವೋ, ಹಾಗೆಯೇ ಈ ನಿನ್ನ ನಿಜಸ್ವರೂಪಸ್ಥಿತಿಯಿದೆ.
ಇತಿಶಮ್
ನಿನ್ನದೇ ಪ್ರಿಯ ಆತ್ಮ
ಶ್ರೀಧರ
೧೩೬. ಈ ರೀತಿ ನಿಶ್ಚಲ, ನಿರ್ವಿಕಲ್ಪ, ಆನಂದರೂಪದ ಮೂಲಕ, ನೀವೆಲ್ಲಾ ತೃಪ್ತ ಮತ್ತು ಕೃತಕೃತ್ಯರಾಗಿ, ನಿಮ್ಮ ಜೀವನ ಸಫಲಮಾಡಿಕೊಳ್ಳಿರಿ. ಈ ಅವಿಚಲವಾದ ಆನಂದದ ಪ್ರಾಪ್ತಿ ನಿಮಗೆಲ್ಲರಿಗೂ ಆಗಲಿ.
(ಮಾತೋಶ್ರೀ ಸಾವಿತ್ರಿ ಭಾಗವತ, ವಾರಣಾಸಿ, ಇವರಿಗೆ ಬರೆದ ಪತ್ರ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
|| ಶ್ರೀ ಗುರವೇ ನಮಃ ||
‘ಸರ್ವ ಖಲ್ವಿದಂ ಬ್ರಹ್ಮ’
ಮಕ್ಕಳೇ,
ನೀವೆಲ್ಲರೂ ಸರ್ವಸ್ವರೂಪಾಕಾರವಾದ ಅನಂತಾನಂತ ಆನಂದದ ಸಾಕಾರವಾದ ಭಿನ್ನ ಭಿನ್ನ ಪ್ರತಿಮೆಗಳೇ. ಆನಂದ ಮಾತ್ರವೇ ಸರ್ವ ವಿಶ್ವದ ಸತ್ಯರೂಪವಾಗಿದೆ. ಮನುಷ್ಯ ಅಜ್ಞಾನಾವಸ್ಥೆಯಲ್ಲಿ ಇರುವಾಗ ದೇಹದ ಆಕಾರ ನೋಡಿ ಅದನ್ನೇ ಹೇಗೆ ‘ನಾನು ಇದೇ ಆಗಿದ್ದೇನೆ’ ಎಂದು ಒಪ್ಪಿಕೊಳ್ಳುತ್ತಾನೋ, ಅದೇ ರೀತಿ ಆನಂದರೂಪವನ್ನು ಗುರುತಿಸಿದಾಗ ಅವನು ‘ನಾನು ಇದೇ ಆಗಿದ್ದೇನೆ’ ‘ಆನಂದರೂಪವೇ ನಾನಿದ್ದೇನೆ’ ಎಂದು ಮನ್ನಿಸುತ್ತಾನೆ.
ಆನಂದದ ಹೊರತು ವಿಶ್ವದ ಉಳಿದ ಯಾವುದೇ ತಾತ್ವಿಕ ಸ್ವರೂಪ ಉತ್ಪನ್ನವಾಗಲಿಕ್ಕೆ ಶಕ್ಯವೇ ಇಲ್ಲ.
‘ಆನಂದೋ ಬ್ರಹ್ಮೇತಿ ವ್ಯಜಾನಾತ್’ ಆನಂದವೇ ಏಕಮೇವ ಪರಮಾತ್ಮನಿದ್ದಾನೆ.
‘ಆನಂದಾದ್ಯೇವ ಖಲ್ವಿಮಾನಿ ಭೂತಾನಿ ಜಾಯಂತೇ’
‘ಆನಂದೇನೈವ ಜಾತಾನಿ ಜೀವಂತಿ’ ‘ಆನಂದ ಪ್ರಯತ್ನಭಿಸಂವಿಶಂತಿ’
‘ಎಲ್ಲ ಪ್ರಾಣಿಮಾತ್ರರು ಆನಂದದಿಂದಲೇ ಜೀವಿತವಾಗಿದ್ದಾರೆ. ತಿಳಿದೋ ತಿಳಿಯದೆಯೋ ಆ ಆನಂದದ ಕಡೆಗೆ ಎಲ್ಲ ಪ್ರಾಣಿಮಾತ್ರರೂ ಆಕರ್ಷಿತರಾಗುತ್ತಾರೆ ಮತ್ತು ಅದರ ಪ್ರಾಪ್ತಿಯ ಇಚ್ಛೆ ಹೊಂದಿ ಸಾಧನೆ-ಅನುಷ್ಠಾನಗಳಿಂದ ಅದರ ಪ್ರಾಪ್ತಿಯಾದ ಮೇಲೆ ಈ ಎಲ್ಲ ಪ್ರಾಣಿಜಾತರು ಅದರಲ್ಲೇ ಏಕರೂಪವಾಗಿ ವಿಲೀನವಾಗುತ್ತಾರೆ.’ ಹೀಗೆ ತನ್ನ ಸೊಂಟದ ಮೇಲಿನ ಮಕ್ಕಳಿಗೆ ಶ್ರುತಿಮಾತೆಯ ಉಪದೇಶವಿದೆ. ಆನಂದಸ್ವರೂಪದ ಅಭಿಲಾಶೆಯೇ ಭಕ್ತಿ-ಜ್ಞಾನ-ವೈರಾಗ್ಯವಾಗಿದೆ. ಇದಕ್ಕೇ ಧ್ಯಾನಯೋಗವೆನ್ನುತ್ತಾರೆ. ಒಂದೇ ಒಂದು ಆನಂದರೂಪದ ಆ ಅನುಭೂತಿಯೇ ಇರಬೇಕು; ಆ ಆನಂದಾನುಭವದ ಹೊರತು ಇತರ ಯಾವುದೇ ವೃತ್ತಿಯ ಉದ್ಗಮವಾಗಲು ಕೊಡದಿರುವದೇ ಆತ್ಮಾನಾತ್ಮವಿವೇಕದ ಕಾರ್ಯವು. ಆನಂದಮಾತ್ರ ಸ್ಥಿತಿಯೇ ನಿಜವಾಗಲೂ ಆತ್ಮಸ್ಥಿತಿಯು. ಈ ಭಾವರೂಪ ಆನಂದದಲ್ಲಿ ಒಂದೇ ಒಂದು ಆನಂದದ ಹೊರತು ಉಳಿದ ಯಾವುದರದ್ದೇ ಅಸ್ತಿತ್ವ ಇರಲಿಕ್ಕೆ ಶಕ್ಯವಿಲ್ಲ. ಇದೇ ಪ್ರಾಚೀನವಾದ ವಿಶ್ವದ ಮಂಗಲಮಯ ಸತ್ಯರೂಪವಾಗಿದೆ. ಈ ರೀತಿ ನಿಶ್ಚಲ, ನಿರ್ವಿಕಲ್ಪ, ಆನಂದರೂಪದ ಮೂಲಕ, ನೀವೆಲ್ಲಾ ತೃಪ್ತ ಮತ್ತು ಕೃತಕೃತ್ಯರಾಗಿ, ನಿಮ್ಮ ಜೀವನ ಸಫಲಮಾಡಿಕೊಳ್ಳಿರಿ. ಈ ಅವಿಚಲವಾದ ಆನಂದದ ಪ್ರಾಪ್ತಿ ನಿಮಗೆಲ್ಲರಿಗೂ ಆಗಲಿ.
‘ಸರ್ವೇ ಜನಾಃ ಸುಖಿನೋ ಭವಂತು’
ನಿಮ್ಮೆಲ್ಲರ ಆನಂದಾತ್ಮ
ಶ್ರೀಧರ