muralidhar 2
ಮನುಷ್ಯನ ಜೀವನದಲ್ಲಿ ಕಷ್ಟ ಸುಖ ನೋವು ನಲಿವು ಎಲ್ಲವೂ ಇದೆ. ಆದರೆ ಅದಕ್ಕೆ ತಕ್ಕಂತೆ ಮನುಷ್ಯನೂ ನಡೆದುಕೊಂಡು ಶಾಂತಿಯಿಂದ ಜೀವನ ನಡೆಸಿಕೊಂಡು ಹೋದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಕ್ಷಣಿಕವಾದ ಲಾಭಕ್ಕಾಗಿ ತಿಳಿದೂ ತಪ್ಪು ಮಾಡಿ ಕಷ್ಟಕ್ಕೆ ಸಿಲುಕಿಕೊಳ್ಳುವಂತಾಗಬಾರದು.

ಮನುಷ್ಯ ತನ್ನ ತಪ್ಪಿಗೆ ಯಾವಾಗ ಪಶ್ಚಾತ್ತಾಪ ಪಡುತ್ತಾನೆ? ಈ ಪ್ರಶ್ನೆ ಮನುಷ್ಯನು ತಾನು ತಪ್ಪು ಮಾಡಿದ್ದೇನೆಂದು ಅವನಿಗೆ ಅನ್ನಿಸಿದಾಗ ಮಾತ್ರ ಉಧ್ಬವಿಸುತ್ತದೆ. ಇಲ್ಲದಿದ್ದಲ್ಲಿ ಎಷ್ಟೇ ತಪ್ಪು ಮಾಡಿದ್ದರೂ ಸಹ ಅದನ್ನೇ ಮುಂದುವರೆಸಿಕೊಂಡು ಹೋಗುತ್ತಾ ಇರುತ್ತಾನೆ. ಮನುಷ್ಯ ತಪ್ಪು ಮಾಡಿ ತನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟರೆ ಅಂತಹ ಮನುಷ್ಯನ ಮನಸ್ಸು ಪರಿವರ್ತನೆಯಾಗಿದೆ ಕ್ಷಮೆಗೆ ಅರ್ಹನಾಗಿದ್ದಾನೆ ಎನ್ನುತ್ತಾರೆ. ಆದರೆ ಇದು ಎಲ್ಲಾ ತಪ್ಪುಗಳಿಗೆ ಅನ್ವಯಿಸುವುದಿಲ್ಲ. ಕಂಡು ಅಥವಾ ಕಾಣದೆ ಮಾಡುವ ಕೆಲವು ಸಣ್ಣ ಪುಟ್ಟ ತಪ್ಪುಗಳಿಗೆ ಮಾತ್ರ ಅನ್ವಯಿಸಬಹುದು. ಆದರೆ ದೊಡ್ಡ ತಪ್ಪುಗಳ ಅಥವಾ ಅಪರಾಧಗಳಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗುತ್ತದೆ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಬಹುದು.

ನಡೆಯುವ ಕಾಲು ಎಡವುದಿಲ್ಲವೇ? ಎಂಬ ಮಾತಿನಖತೆ ಮನುಷ್ಯನಾದವನು ತನ್ನ ಜೀವಿತ ಕಾಲದಲ್ಲಿ ಅನೆಕ ರೀತಿಯ ತಪ್ಪುಗಳನ್ನು ಮಾಡಿರುತ್ತಾನೆ. ಇದರಲ್ಲಿ ಹಲವಾರು ತಪ್ಪುಗಳು ಬೆಳಕಿಗೆ ಬಂದಿರುವುದಿಲ್ಲ. ತಪ್ಪು ಮಾಡದೇ ಇರುವ ಮನುಷ್ಯ ಸಿಗುವುದೇ ಇಲ್ಲ ಎನ್ನಬಹುದು. ಮನುಷ್ಯನು ಅಡಿಗಡಿಗೂ ಮಾಡುವ ತಪ್ಪುಗಳನ್ನು ಹೇಳುತ್ತ ಹೋದರೆ ಅದಕ್ಕೆ ಕೊನೆಯೇ ಇರುವುದಿಲ್ಲ. ಒಂದು ದೊಡ್ಡ ಪಟ್ಟಿಯೇ ಬೆಳೆಯುತ್ತದೆ. ಎಲ್ಲರೂ ಒಂದೇ ರೀತಿಯ ತಪ್ಪನ್ನು ಮಾಡುತ್ತಾರೆ ಎಂದು ಹೇಳಲು ಬರುವುದಿಲ್ಲ. ಒಬ್ಬರು ಮಾಡುವ ತಪ್ಪಿಗೂ ಬೇರೆಯವರು ಮಾಡುವ ತಪ್ಪಿಗೂ ಕೆಲವೊಮ್ಮೆ ಸಾಮ್ಯತೆ ಇರುತ್ತದೆ. ಆದರೆ ತಪ್ಪು ಮಾಡಿರುವ ಉದ್ದೇಶ ಮಾತ್ರ ಒಂದೇ ಆಗಿರುತ್ತದೆ. ಉದಾಹರಣೆಗೆ ಒಬ್ಬ ಮನುಷ್ಯ ಅಥವಾ ಬೇರೆ ಕೆಲವರು ಕಳ್ಳತನ ಮಾಡಿದ್ದರೂ ಅದು ಬೇರೆ ರೀತಿಯಲ್ಲಿದ್ದರಬಹುದು ಆದರೆ ಹಣ ಪಡೆಯುವ ಉದ್ದೇಶ ಒಂದೇ ಆಗಿರುತ್ತದೆ. ಆದರೆ ವಿಧಾನಗಳು ನಾನಾ ರೀತಿಯಲ್ಲಿ ಇರುತ್ತದೆ. ಜೀವನದಲ್ಲಿ ತನ್ನ ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳದಿರುವುದು ಮೊದಲನೇ ತಪ್ಪು. ಈ ತಪ್ಪು ಹಲವರು ರೀತಿಯಲ್ಲಿ ನಡೆಯಬಹುದು. ಆದರೆ ಈ ರೀತಿಯ ತಪ್ಪುಗಳಲ್ಲಿ ಹೆಚ್ಚು ಕಡಿಮೆ ಸಾಮ್ಯತೆ ಇರುತ್ತದೆ. ಕೆಲವರು ಹೆತ್ತವರನ್ನು ಸಾಕಲಾರದೆ ವೃದ್ದಾಶ್ರಮಕ್ಕೆ ಸೇರಿಸಬಹುದು, ಇನ್ನೂ ಕೆಲವರು ಸಮಾಜಕ್ಕೆ ಅಂಜಿ ಹೆತ್ತವರನ್ನು ಮನೆಯಲ್ಲಿಯೇ ಇಟ್ಟುಕೊಂಡು ಊಟ ಬಟ್ಟೆಗೆ ಆರೋಗ್ಯದ ವಿಚಾರದಲ್ಲಿ ಸರಿಯಾಗಿ ನೋಡದೆ ಇರಬಹುದು. ಇನ್ನೂ ಕೆಲವರು ಹೆತ್ತವರಿಗೆ ಮನಸ್ಸಿಲ್ಲದೆ ಊಟ ಬಟ್ಟೆ ಕೊಟ್ಟು ಕಡೇಗಾಲಕ್ಕೆ ಪ್ರೀತಿಯನ್ನು ತೋರಿಸದೆ ತಿರಸ್ಕಾರಭಾವದಿಂದ ನೋಡಬಹುದು.

RELATED ARTICLES  ಕುಮಟಾದಲ್ಲಿಯೂ ತರಕಾರಿ ಬೆಲೆ ಗಗನಕ್ಕೆ.

ಅನ್ನ ಬಟ್ಟೆ ಕೊಟ್ಟಿದ್ದೇನೆ ಎಂದು ಉದಾಸೀನ ಮಾಡಿದರೆ ವಯಸ್ಸಾದ ಜೀವಗಳು ವಿಧಿ ಇಲ್ಲದೆ ಜೀವ ಇರುವವರೆಗೂ ಬದುಕಲೇ ಬೇಕೆಂಬ ಅನಿವಾರ್ಯ ಪರಿಸ್ಥಿತಿಯಿಂದ ಬದುಕಬೇಕಾಗುತ್ತದೆ. ದಿನವೂ ದೇವರಲ್ಲಿ ಬೇಗ ಈ ಸಂಸಾರದಿಂದ ಮುಕ್ತಿ ಕೊಡಬಾರದೆ? ಹಾಗೂ ಈ ಹಾಳು ಜೀವ ಎಂದಿಗೆ ಹೋಗುವುದೋ? ಎಂದು ಹಂಬಲಿಸುತ್ತಾ, ಇದ್ದರೆ ಮಕ್ಕಳು ಸಹ ತನ್ನ ಹೆತ್ತವರು ಇನ್ನೂ ಹೋಗಲಿಲ್ಲ ಹೋಗಿದ್ದರೆ ಒಂದು ಜವಾಬ್ದಾರಿ ತಪ್ಪುತ್ತಿತ್ತು ಎಂದು ಮಕ್ಕಳು ಪರಿತಪಿಸುತ್ತಿದ್ದರೆ ಅಂತಹ ಮಕ್ಕಳು ಮಾಡುವುದು ಒಂದೇ ರೀತಿಯ ತಪ್ಪು. ಅದೇ ತನ್ನ ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳದಿರುವ ತಪ್ಪು. ನೋಡಿದವರಿಗೆ ಎಂತಹ ಮಕ್ಕಳು ಹೆತ್ತವರನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ, ಎಂಬ ಶಹಬ್ಬಾಸ್‍ಗಿರಿ ಪಡೆಯಬಹುದು. ಆದರೆ ಒಳಹೊಕ್ಕು ನೋಡಿದರೆ ನಿಜಬಣ್ಣ ತಿಳಿಯುತ್ತದೆ. ಇದೆಲ್ಲವೂ ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಸಾಯುವ ಕಾಲಕ್ಕೆ ಮಕ್ಕಳು ಪ್ರೀತಿತೋರಲಿಲ್ಲ ಎಂಬ ಒಂದೇ ತಪ್ಪು ಎನಿಸುವುದು. ಇದೇರೀತಿ ಮಕ್ಕಳ ವಿಷಯಕ್ಕೆ ಬಂದರೂ ಸಹ ಮಕ್ಕಳನ್ನು ಸರಿಯಾಗಿ ಸಾಕದೆ ಸರಿಯಾಗಿ ನೋಡಿಕೊಳ್ಳದಿರುವುದೂ ತಪ್ಪಾಗಿರುತ್ತದೆ. ಇವೆಲ್ಲವೂ ಸಹ ವಿಭಿನ್ನ ರೀತಿಯಲ್ಲಿ ಇರಬಹುದು. ಮಕ್ಕಳನ್ನು ಸರಿಯಾಗಿ ಸಾಕದೆ ಅವಕಾಶವಂಚಿತರನ್ನಾಗಿ ಮಾಡಿದರೆ ಹೆತ್ತವರು ಸರಿಯಾಗಿ ಪ್ರೀತಿ ತೋರದೆ ವಂಚಿತರನ್ನಾಗಿ ಮಾಡಿದರೂ ಸರಿಯಾಗಿ ವಿದ್ಯೆ ಕೊಡಿಸದೆ ಮಕ್ಕಳನ್ನು ಹದ್ದುಬಸ್ತಿನಲ್ಲಿಡದೆ ಕೆಟ್ಟ ಚಟಗಳಿಗೆ ಬಲಿಯಾಗಿ ಎಲ್ಲರಿಂದಲೂ ನಿಂದಿಸಿಕೊಳ್ಳುವಂತಾದರೆ ಮಕ್ಕಳನ್ನು ನೋಡಿಕೊಳ್ಳಲಿಲ್ಲ ಎಂಬ ಒಂದೇ ತಪ್ಪು ಮನಗಾಣುತ್ತದೆ. ತಂದೆಯು ಮೊದಲನೇ ಹೆಂಡತಿ ಸತ್ತ ನಂತರ ಎರಡನೇ ವಿವಾಹವಾಗಿ ಆ ಮಲತಾಯಿಯ ಮಕ್ಕಳ ಮೇಲೆ ಸರಿಯಾಗಿ ಪ್ರೀತಿ ತೋರದೆ ಇದ್ದರೆ ಇವೆಲ್ಲವೂ ಸಹ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂದು ಹೇಳುತ್ತಾರೆ. ಇಲ್ಲಿಯೂ ಸಹ ಅಪರಾಧ ಒಂದೇ ಆಗಿರುತ್ತದೆ. ಆದರೆ ವಿಧಾನ ಮಾತ್ರ ಬೇರೆಯಾಗಿರುತ್ತದೆ.

RELATED ARTICLES  ಜಗವ ಗೆಲ್ಲಲಿ ಮಾತು

ಮುಂದುವರಿಯಲಿದೆ…