ಲೇಖನ :ತಿಗಣೇಶ ಮಾಗೋಡು.

ನಮಸ್ಕಾರ ..ನನ್ನವರೇ..
ನಿಮ್ಮವನಾಗಿಸಿಕೊಂಡಿರುವುದಕ್ಕೆ..ಮತ್ತೆ..ಮತ್ತೆ..ಬರುವೆ..ಬೆರೆವೆ……ಬರೆವೆ..

ಆ ಹಳೆಯ ದಿನಗಳೇ ಹಾಗೆ..ಬಣ್ಣವಿಲ್ಲದ ಬದುಕಾದರೂ..ಬಣ್ಣದ ಕನಸಲ್ಲೇ..ಬದುಕಲ್ಲಿ ಬಣ್ಣಕಂಡೇವೆಂಬ..ಸಂತಸ ನಮ್ಮದು..ನನ್ನ ಆರನೇ ತರಗತಿ..ಮಳ್ಳಿಕೇರಿ ಶಾಲೆಯಲ್ಲಿ..ಕರ್ಕಿಯ ಬಟ್ಟಮಾಸ್ತರ್ರು..ವೀಣಕ್ಕೋರು..ಭಂಡಾರ್ಕರ ಮಾಸ್ತರು..
ಮೂರು ಮಾಸ್ತರ್ರಿಗೆ..ಮುನ್ನೂರು ಮಕ್ಕಳು.ನುಕ್ಕಿಬರ್ಲು..ಮಾಸ್ತರ್ರ ಅರ್ಧಕೆಲಸ ಹಗುರ ಮಾಡ್ತಿತ್ತು..ಭಂಡಾರ್ಕರ ಮಾಸ್ತರ್ರು..ಕವಳ ಹಾಕುತ್ತಿದ್ದರು..ಭಟ್ಟಮಾಸ್ತರ್ರು..ಚಂಚಿಯನ್ನು ಖುರ್ಚಿಗೇ ಇಟ್ಟುಕೊಳ್ಳುತ್ತಿದ್ದರು..ಎಲ್ಲಾದರೂ ಹೋಗಿ ಬಂದಾಗ..ಅಂಗಿ ಕಳಚಿ..ಖುರ್ಚಿಗೆ ಸಿಕ್ಕಿಸಿ..ತಾ….ಡಿ ಮಲಗುತ್ತಿದ್ದರು..ಭಟ್ಟಮಾಸ್ತರ್ರು.ನಾನು ಆರನೆತ್ತಿಲ್ಲಿರುವಾಗ..ಶಾಲೆಯಲ್ಲಿ..ನಾಟಕ ಮಾಡಿದ್ದರು.
‘ಯಮನ ನ್ಯಾಯ ಮಂದಿರ’
ನಾಟಕದ ಹೆಸರು.ನನ್ನದು ನಾರದನ ಪಾರ್ಟು..ಕೋಣ ಮಂಜುನಾಥ ಯಮ..ಶಂಬು ಚಿತ್ರಗುಪ್ತನ ಪಾರ್ಟ ಮಾಡಿದ್ದ..ಶಂಬು..ಹಾಕಲು ಕರಿ ಅಂಗಿಯಿಲ್ಲದೇ..ಭಂಡಾರ್ಕರ ಮಾಸ್ತರ ಮಗಳು ವಂದನಾಳ ಕಪ್ಪು ಪಲಕು ಹಾಕಿದ್ದ..ಅವನಿಗೆ ವಂದನನ ಪಲಕು ಹಾಕಿದ್ದ..ಎಂದು..ವರ್ಷಗಟ್ಟಲೆ ಚಾಳಿಸುತ್ತಿದ್ದರು..ಅದೇ ನಾಟಕದ ನಂತರ ನಾನು ಡ್ಯಾನ್ಸ ಮಾಡಿದ್ದೆ..’ಏನು ಹೇಳಲಿ ಇವರ.. ಬಡಿವಾರ. ಬದಲಾಗಿದೆ ನೋಡಣ್ಣ..ಕಲಿಕಾಲದ ಮೈಬಣ್ಣ..’ ಎನ್ನುವ ಹಾಡಿಗೆ ವೀಣಕ್ಕೋರು ಕಲಿಸಿದ್ದರು.
ಅಗ..ಒಂದೋ..ಎರಡೋ ರೂಪಾಯಿ ಬಹುಮಾನ ಬಂದಿತ್ತು..ಮೈಕೋದಲ್ಲಿ…ಹೆಸರು ಹೇಳಿದಹಾಗೆ..ಹೆಂಡ ಕುಡಿದವರು ಮತ್ತೆ..ಮತ್ತೆ ಬಹುಮಾನ ಹೇಳುತ್ತಿದ್ದರು.
ಅವರ ಹೆಸರು ಹೇಳಿದಾಗ ಅವರ ಖದರೇ..ಬೇರೆ.ಮರುದಿನ‌ ಕೆಲಸಕ್ಕೆ ಬರುವಾಗ ಸ್ವಲ್ಪ..ಏರಿಕೊಂಡೇ..ಬರುತ್ತಿದ್ದರು..ಒಂದೆರಡು ದಿನ ಮೇಲಿನಹೊಳ್ಳಿಮೇಲೆ ಕುಳಿತು ಕೊಳ್ಳುತ್ತಿದ್ದರು..ಮತ್ತೆ ಪಗಾರ ತಕೊಳ್ಳುವ ದಿನ..ಕೆಳಗಿನಹೊಳ್ಳಿಗೆ..ಹೋಗುತ್ತಿದ್ದರು.ಸಾಲ ಬೇಕಾದಾಗಂತೂ..ಅಂಗಳದ ಕಟ್ಟೆಯ ಮೇಲೇ. ಶಾಲೆಯಲ್ಲಿ. ಆರನೆತ್ತಿಗೆ ದೊಡ್ಡ ಬೇಂಚು..ಎತ್ತರಕ್ಕೆ ಕುಳಿತುಕೊಳ್ಳುವುದು.ಡೆಸ್ಕಲ್ಲ ಇಲ್ಲ.ಆಗೆಲ್ಲ ಪ್ಲಾಸ್ಟಿಕ್.. ಬಗಲಚೀಲ..

RELATED ARTICLES  ವಯಸ್ಸು ಚಿಕ್ಕದು ಸಾಧನೆ ದೊಡ್ಡದು: ಪವನ್ ಕುಮಾರ್ ಎನ್.ಆರ್ ಎಂಬ ಅದ್ಭುತ ಶಕ್ತಿ!

ಅಂದರೆ ಈಗಿನ
ಸಾಹಿತಿಗಳ ಬಗಲಲ್ಲಿರೋ ರೂಪದ್ದು.ಕೃಷ್ಣಮೂರ್ತಿ..ಭಟ್ಟ(ಇಂದಿನ ವಿಜಯವಾಣಿ ವರದಿಗಾರ..ಹೊನ್ನಾವರ..) ಕುಳ್ಳ..ಅವನಿಗೆ ಬೇಂಚಿನ ಮೇಲೆ ಕುಳಿತರೆ ಕಾಲು ನೆಲಕ್ಕೆ ತಾಗುತ್ತಿರಲಿಲ್ಲ..ಅವನು ಕಾಲು ಆಡಿಸುತ್ತಿದ್ದ..ವೀಣಕ್ಕೋರು.’.”ಅಪ್ಪಂಗೆ ಸಾಲ ಆಗ್ತು ಮಾಣಿ ಕಾಲು ಅಲ್ಲಾಡ್ಸದ'”
ಎಂದು ಬಯ್ಯುತ್ತಿದ್ದರು..ಅದರೆ ಅವನಿಗೆ ಅಪ್ಪ ಇರಲಿಲ್ಲ..
ನಾವು ಏನ ಮಾಡಿದರೂ ಕಾಲು ಅಲುಗಾಡಿಸ್ತಾ..ಇರಲಿಲ್ಲ.ಅದರೆ ನಮ್ಮಪ್ಪ ಇನ್ನೂ ಸಾಲಗಾರನೇ. ನಮಗೆ ಶಿಕ್ಷೆ..ಎಂದರೆ ಉಟಾಬಸ್ಸು..ಕೆಮಿಚೊಟ್ಟೆ ತಿರ್ಪುವುದು..ಅದನ್ನು ಕಾನ್ತಿರ್ಪು ಎನ್ನುತ್ತಿದ್ದರು..ಕಾಲಮೇಲೆ ಶಮೆ ಬೆದಿರಿನಲ್ಲಿ ಹೊಡಿತಿದ್ದರು..ಮೇಜಿನಮೇಲೆ..ಕೈ ಇಟ್ಟು ರೋಲ ಕಟ್ಟಿಗೆ ಹೊಡೆತ.ಹೆಣ್ಣುಮಕ್ಕಳ ಹತ್ತಿರ ..ನಮ್ಮ ಮೂಗು ಹಿಡಿಸಿ ಕೆನ್ನೆಗೆ ಹೊಡೆಯುತ್ತಿದ್ದರು..ಒಂದು ಮಜಾ ಎಂದರೆ..ಹೊಡೆವಾಗ ಹೆಣ್ಣುಮಕ್ಕಳು..ಅಳುತ್ತಿದ್ದರು..ನಾವು ನಗುತ್ತಿದ್ದೆವು..ಹಾಗೆ..ಬೇರೆಯಾರ್ಯಾರು ನಗುತ್ತಿದ್ದಾರೆ..ನೋಡಿಟ್ಟುಕೊಂಡು..ವಂದಕ್ಕೆ ಬುಟ್ಟಾಗ..ಅವರಿಗೆ ಪರಾನಪುರಿ..ಹೊಡೆಯು
ತ್ತಿದ್ದೆವು. ಆರನೆತ್ತಿಯಲ್ಲಿ..ನಮಗೆ ರಜೆಚೀಟಿ ಸುರುವಾಗಿತ್ತು.ನಾವು..ನಸಲ್ಕೆದು ರಜೆಚೀಟಿಯನ್ನು ಅಯಿ ಹತ್ತಿರ ಹಟಮಾಡಿ..ಅಪ್ಪನ ಹತ್ತಿರ ಬರೆಸಿಟ್ಟುಕೊಳ್ಳುತ್ತಿದ್ದೆವು.ಶಾಲೆಯ ಕಿಡಕಿ ಬಾಗಿಲ ವಟ್ಟೆಯಲ್ಲಿ ತುರುಕಿ ಇಡುತ್ತಿದೆವು.ಶಾಲೆಯ ಸುತ್ತಲು ಓಡಿಸುತ್ತಿದ್ದರು..ಇದು ನಮ್ಮ ಪ್ರೀತಿಯ ಶಿಕ್ಷೆ.ಗೋವೆಬೀಜ ಆಗುವಾಗ ನಾವು ಪದೇಪದೇ ಶಾಲೆ ಸುತ್ತುವ ಶಿಕ್ಷೆ ಕೇಳಿ ಪಡೆಯುತ್ತಿದ್ದೆವು..ಯಾಕೆಂದರೆ ಶಾಲೆ ಕೀಬ್ಳಲ್ಲಿ ಗೋವೆಹಣ್ಣು ಬೀಳುತ್ತಿತ್ತು.ಮತ್ತು ದರೆಮೇಲೆ ಕರಚೂಜಿ ಗಿಡ ಇತ್ತು.ಗಡಬಡೆಯಲ್ಲಿ ಬಾಚಿ ಕೊಯ್ಯುವಾಗ ಕೈ ಗೀರಿ..ರಕ್ತ ಬಂದು..ಸಿಕ್ಕಾಕಿಕೊಂಡದ್ದೇ ಬಹಳ.ಒಂಟಿಕಾಲಲ್ಲಿ ನಿಲ್ಲಿಸುತ್ತಿದ್ದರು..ಬರೆಯದ ದಿನ ನಾವು ಎರಡು..ಮೂರುಅಂಗಿ ಹಾಕುತ್ತಿದ್ದೆವು..ಅಂಗಿ ಕೊಲರು..ಎರಡುಮೂರು ಕಂಡಾಗಲೆ ಅಕ್ಕೋರಿಗೆ ಕಳ್ಳರು ಯಾರು ಎಂದು ಗೊತ್ತಾಗುತ್ತಿತ್ತು.ಬೆಂಚಿನ ಮೇಲೆ ನಿಲ್ಲುಸುತ್ತಿದ್ದರು..ಅಗ ನಾವುಎಲ್ಲರಿಗಿಂತ ಎತ್ತರ..ಪರಪರೆ ಕೈಗೆ ಸಿಗುತ್ತಿತ್ತು..ಅದರ ಕೆಂಪಿಬಣ್ಣದ ಪರಪರೆ ಕದ್ದು..ಹರಿದು..ಒದ್ದೆಮಾಡಿ..ಉಗುರಿಗೆ ಹಚ್ಚುತ್ತಿದ್ದೆವು.ರಾಶಿ ಪಟಿಂಗತನ ಮಾಡಿದರೆ..ಹೆಡಮಾಸ್ತರ ರೂಮಿಗೆ ಕಳಿಸುತ್ತಿದ್ದರು..ಭಂಡಾರಕರ ಮಾಸ್ತರ್ರು ಹೊಡೆಯುತ್ತಿರಲಿಲ್ಲ..ಬರೇ..”ಹಂಗ”ಎಂದು ಬಯ್ಯುತ್ತಿದ್ದರು..ಕವಳ ಬಾಯಲ್ಲಿರುತ್ತಿತ್ತು..ಅದಕ್ಕೆ ಅವರು ಹೇಳುವ ಮಂಗ..ನಮಗೆ ಹಂಗ ಎಂದು ಕೇಳುತ್ತಿತ್ತು…
ಬಹಳವಾಯ್ತು..ಮುಂದಿನಾರ ಮತ್ತೆ ಬಾಲರಾಗೋಣ..
ನಮಸ್ಕಾರ..

RELATED ARTICLES  ಭವಿಷ್ಯದ ಸೋಲು