muralidhar 2

ಮುಂದುವರಿದಿದೆ…

ಗಂಡ ಹೆಂಡತಿ ವಿಷಯಕ್ಕೆ ಬಂದಾಗ ಪರಸ್ಪರ ಪ್ರೀತಿ ವಿಶ್ವಾಸ ಅನ್ಯೋನ್ಯತೆಯಿಂದ ಜೀವನ ನಡೆಸಿಕೊಂಡು ಹೋದರೆ ಯಾವ ತಪ್ಪು ಆಗುವುದಿಲ್ಲ. ಆದರೆ ಗಂಡನಾದವನು ತನ್ನಪತನಿಗೆ ದಿನವೂ ಕಿರುಕುಳ ನೀಡಿ ಹೊಡೆದು ಬಡಿದು ತೊಂದರೆ ಕೊಡುವ ಮಂದಿ ಒಂದೆಡೆಯಾದರೆ ಸಂಜೆಯಾದೊಡನೆ ಕುಡಿದು ಬಂದು ಹೆಂಡತಿ ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಮಂದಿ ಇದ್ದು, ಅಥವಾ ಇದಕ್ಕೆ ವಿರುದ್ದವಾಗಿ ಹೆಂಡತಿ ತನ್ನ ಗಂಡನನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರೆ ಹೀಗೆಯೇ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದರೆ ಇವೆಲ್ಲವೂ ಒಂದೇ ರೀತಿಯ ತಪ್ಪಾಗಿದ್ದು, ಪರಸ್ಪರ ದಂಪತಿಗಳು ಅನ್ಯೋನ್ಯತೆಯಿಂದ ಇರಲಿಲ್ಲವೆಂದು ಹೇಳುತ್ತಾರೆ. ಯಾವ ರೀತಿಯಲ್ಲಿ ತಪ್ಪು ಮಾಡಿದರೂ ಅದು ತಪ್ಪೇ ಆಗಿರುತ್ತದೆ. ಹಸುವಿನ ಸಗಣಿ ಒಂದು ಕಡೆ ಇದ್ದು, ಅದನ್ನು ಇಬ್ಭಾಗ ಮಾಡಿದಾಗ ಅದರ ಗುಣದಲ್ಲಿ ವ್ಯತ್ಯಾಸವಾಗುವುದಿಲ್ಲ. ಎರಡನ್ನೂ ಸಹ ಹಸುವಿನ ಸಗಣಿ ಎಂದೇ ಹೇಳುತ್ತಾರೆ. ಅದೇ ರೀತಿ ಉದ್ದೇಶ ಒಂದೇ ಇದ್ದು, ವಿಧಾನ ಬೇರೆ ಬೇರೆ ಇದ್ದರೆ ಒಂದೇ ರೀತಿಯ ತಪ್ಪು ಮಾಡಿದ್ದಾರೆ ಎಂದು ಹೇಳುತ್ತಾರೆ.

ಹೆತ್ತವರು, ಮಕ್ಕಳು ಮತ್ತು ಪತಿ ಪತ್ನಿಯರು ತಮ್ಮ ತಮ್ಮ ಕರ್ತವ್ಯದಿಂದ ವಿಮುಖರಾದರೆ ಜೀವನದಲ್ಲಿ ಸರಿಪಡಿಸಲಾಗದಂತಹ ತಪ್ಪುಗಳಾಗುತ್ತದೆ. ಇದೇ ರೀತಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಭೋಧನೆ ಮಾಡುವುದರಲ್ಲಿ ನಿರ್ಲಕ್ಷ ತೋರಿದರೆ ವಿದ್ಯಾರ್ಥಿಗಳಿಗೆ ಜೀವನದಲ್ಲಿ ತುಂಬಲಾರದ ನಷ್ಟ ಉಂಟಾಗುತ್ತದೆ. ವಿದ್ಯಾರ್ಥಿಗಳು ಸಹ ಸೋಮಾರಿಗಳಾಗದೆ ಕಠಿಣವಾಗಿ ಆಭ್ಯಸಿಸಿದರೆ ಜೀವನದಲ್ಲಿ ತಮ್ಮ ಗುರಿಯನ್ನು ಸಾಧಿಸಿ ಮುಂದೆ ಬರಬಹುದು. ಇಲ್ಲದಿದ್ದಲ್ಲಿ ತಮ್ಮ ಅಮೂಲ್ಯವಾದ ಜೀವನವೇ ಹಾಳಾಗುವ ಸಂಭವ ಇರುತ್ತದೆ.
ಮನುಷ್ಯ ತನ್ನ ಜೀವನದಲ್ಲಿ ಯಾವ ಕ್ಷೇತ್ರದಲ್ಲಿಯೇ ಇರಲಿ ಆ ಕ್ಷೇತ್ರಗಳಲ್ಲಿ ಕರ್ತವ್ಯ ಲೋಪವೆಸಗಿದರೆ ಇದರ ಜೊತೆಗೆ ಇವರನ್ನು ನಂಬಿಕೊಂಡವರಿಗೂ ನಷ್ಟ ಉಂಟಾಗುತ್ತದೆ. ಕೆಲವೊಮ್ಮೆ ತನಗೆ ಅರಿವಿಲ್ಲದಂತೆ ತಪ್ಪಾಗಬಹುದು. ಇದನ್ನು ಅರಿತ ತಕ್ಷಣ ಸರಿಪಡಿಸಿಕೊಂಡರೆ ಯಾವ ಅಪಾಯಗಳಿಗೂ ಸಿಲುಕುವುದಿಲ್ಲ.

RELATED ARTICLES  ಎಲ್ಲರ ಅಮ್ಮ ಮಾರಿಯಮ್ಮ ವಿಶೇಷ ಲೇಖನ- ಉಮೇಶ ಮುಂಡಳ್ಳಿ ಭಟ್ಕಳ

ಮನುಷ್ಯ ತನ್ನ ಜೀವನದಲ್ಲಿ ತಿಳಿದೋ ತಿಳಿದದೆಯೋ ಕೆಲವೊಮ್ಮೆ ಪರಿಸ್ಥಿತಿಯ ಶಿಶುವಾಗಿ ತಪ್ಪನ್ನು ಮಾಡಬಹುದು. ಆದರೆ ಮನುಷ್ಯ ತನ್ನ ಜೀವನದಲ್ಲಿ ಮಾಡಿರುವ ತಪ್ಪುಗಳಿಗೆ ಯಾವಾಗ ಪಶ್ಚಾತ್ತಾಪ ಪಡಬಹುದು? ಪಶ್ಚಾತ್ತಾಪಪಟ್ಟು ತನ್ನ ತಪ್ಪನ್ನು ಸರಿಪಡಿಸಿಕೊಂಡು ಬದುಕು ಸಾಗಿಸಿದರೆ ಉತ್ತಮ ಜೀವನ ನಡೆಸಬಹುದು
ಮನುಷ್ಯ ತನ್ನ ತಪ್ಪಿಗೆ ಯಾವಾಗ ಪಶ್ಚಾತ್ತಾಪ ಪಡುತ್ತಾನೆ ಎಂದರೆ ತಾನು ಮಾಡಿದ ತಪ್ಪಿನಿಂದ ತನಗೆ ಅಥವಾ ತನ್ನ ಮಕ್ಕಳಿಗೆ ನಷ್ಟವಾದರೆ ಮಾತ್ರ ಈ ರೀತಿ ಮಾಡಬಾರದಿತ್ತು ಎಂದು ಪಶ್ಚಾತ್ತಾಪ ಪಡುತ್ತಾನೆ. ಅಂದರೆ ತಾನು ಮಾಡಿದ ತಪ್ಪನ್ನು ಸಮರ್ಥಿಸಿಕೊಂಡು, ಬೇರೆ ರೀತಿಯಲ್ಲಿ ಮಾಡಬೇಕಿತ್ತು ಇದರಿಂದ ನನಗೇ ತೊಂದರೆಯಾಯಿತು ಬೇರೆ ರೀತಿಯಲ್ಲಿ ಮಾಡಿದ್ದರೆ ನನಗೆ ತೊಂದರೆಯಾಗುತ್ತಿರಲಿಲ್ಲ ಎಂದು ತನ್ನ ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡದೆ ಆ ತಪ್ಪನ್ನೇ ಬೇರೆ ರೀತಿಯಲ್ಲಿ ಮಾಡಬೇಕಿತ್ತು ಎಂದು ಹೇಳುವವರು ಕ್ಷಮೆಗೆ ಅರ್ಹರಾಗುವುದಿಲ್ಲ. ಮನುಷ್ಯ ತಾನು ಮನೆಯನ್ನು ಕಟ್ಟಿಸುವಾಗ ಮರಳು ಕಲ್ಲು ಅಕಸ್ಮಾತ್ ದಾರಿಯಲ್ಲಿ ಹಾಕಿದ್ದು, ಅದನ್ನು ಬೇರೆಯವರು ಎಡವಿ ಬಿದ್ದರೆ ಏನೂ ಅನ್ನಿಸುವುದಿಲ್ಲ. ಬೇರೆ ಕಡೆಯಿಂದ ಹೋಗಬಾರದಿತ್ತೆ ಎಂಬ ಉತ್ತರ ಬರುತ್ತದೆ. ಆದರೆ ತಾನೇ ಅಥವಾ ತನ್ನ ಕುಟುಂಬಸ್ತರು ಬಿದ್ದರೆ ಮಾತ್ರ ಬೇರೆ ಕಡೆ ಹಾಕಿಸಬೇಕಿತ್ತು ಎಂದು ತನ್ನ ತಪ್ಪಿನ ಅರಿವಾಗುತ್ತದೆ. ಇಲ್ಲದಿದ್ದಲ್ಲಿ ಸಾಲು ಸಾಲು ತಪ್ಪಾಗುತ್ತಿದ್ದರೂ ತನ್ನ ಅರಿವಿಗೆ ಬರುವುದಿಲ್ಲ. ಅಕಸ್ಮಾತ್ ಬಂದರೂ ಯೋಚಿಸಲೂ ಹೋಗುವುದಿಲ್ಲ.

RELATED ARTICLES  ಭರತನ ಪ್ರಶ್ನೆಗೆ, ಜಾಬಾಲಿಗಳ ವಾದಕ್ಕೆ ಶ್ರೀರಾಮನ ಸಮಾಧಾನ

ಮನುಷ್ಯ ಯಾವುದಾದರೂ ಒಂದು ಕೆಟ್ಟ ಕೆಲಸ ಮಾಡಲು ಹೊರಟರೆ ಅದರಿಂದ ತೊಂದರೆಗೆ ಸಿಲುಕುತ್ತೇನೆಂದು ತಿಳಿದಿರುತ್ತದೆ. ಮಾಡುತ್ತಿರುವ ಕೆಲಸ ತಪ್ಪು ಎಂದು ತಿಳಿದಿದ್ದರೂ ಸಹ ಅಂತಹ ಕೆಲಸವನ್ನು ಮಾಡಲು ಹೋಗುತ್ತಾನೆ ಅದರಿಂದ ತಾನು ಹೇಗೆ ಕಾನೂನಿನಿಂದ ತಪ್ಪಿಸಿಕೊಳ್ಳಬಹುದೆಂದು ಎಂಬ ದೂರಾಲೋಚನೆ ಮಾಡುತ್ತಾನೆ. ವಿನಃ ಆ ಕೆಲಸವನ್ನು ಮಾಡುವುದು ಬೇಡ ಎಂದೆನಿಸುವುದಿಲ್ಲ. ಏನು ಕೆಟ್ಟ ಕೆಲಸ ಮಾಡಿದರೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಕಸ್ಮಾತ್ ಸಿಕ್ಕಿಕೊಂಡರೆ ಮಾತ್ರ ಬೇರೆ ರೀತಿಯಲ್ಲಿ ಪ್ರಯತ್ನಿಸಬಹುದಿತ್ತು ಎಂದು ಹೇಳಬಹುದು ಏನು ಮಾಡಿದರೂ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎನಿಸುವುದಿಲ್ಲ. ತಾನು ಮಾಡಿದ ತಪ್ಪಿಗೆ ಶಿಕ್ಷೆಯಾದರೆ, ಶಿಕ್ಷೆ ಕೊಡಿಸಿದವರ ವಿರುದ್ದ ಸೇಡು ತೀರಿಸಿಕೊಳ್ಳಬಹುದು.

ಆದರೆ ತನ್ನ ತಪ್ಪಿನಿಂದ ಬೇರೆಯವರಿಗೆ ತೊಂದರೆಯಾದರೂ ಅಥವಾ ತೊಂದರೆಯಾಗುತ್ತಿದ್ದರೂ ಅದಕ್ಕೆ ತಲೆ ಕೆಡೆಸಿಕೊಳ್ಳುವುದಿಲ್ಲ. ಬೇರೆಯವರು ಬಂದು ತೊಂದರೆಯಾಗುತ್ತಿದೆ ಎಂದು ಹೇಳಿದರೂ ಸಹ ನನ್ನಿಷ್ಟ ನಾನು ಏನು ಬೇಕಾದರೂ ಮಾಡುತ್ತೇನೆ ಎಂಬ ಉದ್ಧಟತನ ತೋರಬಹುದು. ಅದರಲ್ಲೂ ಶ್ರೀಮಂತನಿಂದ ಬಡವನಿಗೆ ತೊಂದರೆಯಾಗುತ್ತಿದ್ದರೆ ಅದು ಕಿವಿಗೆ ಬೀಳುವುದಿಲ್ಲ. ಹೆಚ್ಚಿಗೆ ಕೇಳಿದರೆ ಕೋರ್ಟ್‍ಗೆ ಹೋಗು ಎಂಬ ಉತ್ತರ ಬರುತ್ತದೆ. ಪಾಪ ಬಡವ ಕೋರ್ಟ್‍ಗೆ ಹೋಗಿ ಶ್ರೀಮಂತರ ವಿರುದ್ದ ಹೋಗಲು ಸಾಧ್ಯವೇ? ಅಕಸ್ಮಾತ್ ಹೋದರೂ ಸಹ ಅವನನ್ನು ಹೆದರಿಸಿ ಬೆದರಿಸಿ ಕೇಸ್ ವಾಪಸ್ ಪಡೆಯುವಂತೆ ಒತ್ತಾಯ ಮಾಡಬಹುದು.