Home Special News ಇಷ್ಟಕಾಮೇಶ್ವರಿ ದೇವಿಯ ಅನನ್ಯತೆ

ಇಷ್ಟಕಾಮೇಶ್ವರಿ ದೇವಿಯ ಅನನ್ಯತೆ

ಪ್ರತಿಯೊಬ್ಬರಿಗೂ ಆಸೆ ಆಕಾಂಕ್ಷೆಗಳುಂಟು ಮತ್ತು ಅವುಗಳನ್ನು ಪೂರೈಸಿಕೊಳ್ಳುವ ಇಚ್ಛೆಯೂ ಉಂಟು. ಹೀಗೆ ತಮ್ಮಿಚ್ಚೆಗಳನ್ನು ಸಾಕಾರಗೊಳಿಸಿಕೊಳ್ಳುವ ಪ್ರಯತ್ನದಲ್ಲಿ ವೈಯಕ್ತಿಕ ಪ್ರಯತ್ನವನ್ನು ಮಾಡಿ ಸಫಲರೂ ಆಗುತ್ತಾರೆ ಮತ್ತು ಹಲವು ಬಾರಿ ಕೆಲವರ ಆಕಾಂಕ್ಷೆಗಳು ದೈವೇಚ್ಛೆಯಿಂದಲೂ ಪೂರೈಸಲ್ಪಡುತ್ತದೆ. ನಮ್ಮಲ್ಲಿ ಬಹಳಷ್ಟುಜನ ನಮ್ಮ ಇಷ್ಟಾರ್ಥಸಿದ್ಧಿಗಾಗಿ ದೇವಾಲಯಗಳಿಗೆ ಮತ್ತು ತೀರಥಯಾತ್ರೆಗಳಿಗೆ ಹೋಗುತ್ತೇವೆ. ಇಷ್ಟವೆಂದರೆ ‘ಬಯಕೆ ಅಥವಾ ಕಾಮನೆ’. ಸಂಸ್ಕೃತದಲ್ಲಿ ಕಾಮ ಎಂದರೆ ಬಯಕೆ. ಕಾಮಕೋಟಿ ಎಂದರೆ ಕೊಟ್ಯಾನ್ತರ ಬಯಕೆಗಳು ಅಥವಾ ಆಸೆಗಳು.

ನಮ್ಮ ಅಂತಹ ಬಯಕೆಗಳನ್ನು ಪೂರೈಸುವ ದೇವಾಲಯಗಳಲ್ಲಿ ಪ್ರಮುಖವಾದ ದೇವಾಲಯವೆಂದರೆ ಶ್ರೀಶೈಲ ಕ್ಷೇತ್ರದ ‘ಇಷ್ಟಕಾಮೇಶ್ವರಿ’ ದೇವಾಲಯ. ಶ್ರೀಶೈಲಂ ಇಂದ 20 ಕಿ ಮೀ ದೂರದಲ್ಲಿರುವ ‘ಇಷ್ಟಕಾಮೇಶ್ವರಿ’ ದೇವಾಲಯವು ಪುರಾತನ ಕಾಲದಿಂದಲೂ ಪ್ರಸಿದ್ಧವಾಗಿದೆ. ಇಲ್ಲಿನ ವಿಗ್ರಹದ ವಿಶೇಷತೆಯೇನೆಂದರೆ ಇಲ್ಲಿನ ಇಷ್ಟಕಾಮೇಶ್ವರಿ ದೇವಿಯಯ ವಿಗ್ರಹದ ಹಣೆಯ ಭಾಗ ಮೃದುವಾಗಿದೆ ಮತ್ತು ಭಕ್ತರು ಆ ಹಣೆಯಲ್ಲಿ ಕುಂಕುಮವನ್ನಿಡುವಾಗ ಆ ವಿಗ್ರಹದ ಮೃದುತ್ವವನ್ನು ಅನುಭವಿಸುತ್ತಾರೆ. ಇಲ್ಲಿನ ತಾಯಿ ಇಷ್ಟಕಾಮೇಶ್ವರಿ ತನ್ನ ಭಕ್ತರನ್ನು ಮೃದು ಮಂದಹಾಸದಿಂದ ನೋಡುತ್ತಾಳೆ.
ಈ ದೇವಾಲಯಕ್ಕೆ ಬರುವ ಭಕ್ತರಿಗೆ ಹಲವಿಧವಾದ ಅನುಭವಗಳಾಗುತ್ತವೆ. ಬಹಳಷ್ಟು ಭಕ್ತರು ತಮ್ಮ ಮನೋಭೀಷ್ಟೆಗಳೆಲ್ಲಾ ಇಷ್ಟಕಾಮೇಶ್ವರೀ ದೇವಿಯ ದರ್ಶನ ಮತ್ತು ಪೂಜೆಯಿಂದ ಈಡೇರುತ್ತವೆಯಾದ್ದರಿಂದ ಈ ದೇವಾಲಯಕ್ಕೆ ಪದೇಪದೇ ಬರುತ್ತಾರೆ. ಇಲ್ಲಿನ ಪವಾಡಸದೃಶವಾದ ವಿಚಾರಗಳನ್ನು ಇಲ್ಲಿಗೆ ಬಂದು ಸಂತುಷ್ಟರಾದ ಭಕ್ತರು ತಮ್ಮ ಬಂಧು ಮತ್ತು ಸ್ನೇಹಿತರುಗಳಲ್ಲೂ ಪ್ರಚಾರ್ ಮಾಡುತ್ತಾರೆ. ಇಲ್ಲಿರುವ ಮೂರ್ತಿಯ ಕೆತ್ತನೆ ಬಹಳ ಅನನ್ಯವಾಗಿದ್ದು, ಇಂತಹ ಕೆತ್ತನೆಯ ಕೆಲಸ ಭಾರತದಲ್ಲೆಲ್ಲೂ ಕಾಣಸಿಗುವುದಿಲ್ಲವೆಂಬುದೂ ಸಹ ಕೇಳಿಬರುತ್ತದೆ. ಹಾಗಾಗಿ ಈ ದೇವಾಲಯಕ್ಕೆ ಕೇವಲ ಭಕ್ತರು ಮಾತ್ರವಲ್ಲದೆ ಶಿಲ್ಪಕಲೆ ಮತ್ತು ಚರಿತ್ರೆಯಲ್ಲಿ ಬಹು ಸಂಖ್ಯೆಯಲ್ಲಿ ಬರುತ್ತಾರೆ. ಈ ದೇವಾಲಯ ಒಂದು ಗುಹೆಯಲ್ಲಿ ಇರುವುದರಿಂದ ಇದರ ಅನನ್ಯತೆ ಅಧಿಕವಾಗುತ್ತದೆ.

ಪಾರ್ವತಿದೇವಿಯ ಪ್ರತಿರೂಪವಾದ ಇಷ್ಟಕಾಮೇಶ್ವರಿ ದೇವಿಯ ಈ ದೇವಾಲಯವು ಸುಮಾರು 8 ಮತ್ತು 10 ನೆಯ ಶತಮಾನದ ನಡುವೆ ನಿರ್ಮಾಣವಾಗಿರಬೇಕು ಎನ್ನುವುದು ಪುರಾತತ್ವ ಶಾಸ್ತ್ರಿಗಳ ಅಭಿಪ್ರಾಯ.
ಇಷ್ಟಕಾಮೇಶ್ವರಿ ದೇವಿಯ ಸಂಕಲ್ಪವಾಗುವವರೆಗೆ ಯಾವ ಭಕ್ತನೂ ಅಲ್ಲಿಗೆ ಹೋಗಲಾಗುವುದಿಲ್ಲ ಎನ್ನುವುದು ಸಾಮಾನ್ಯ ಜನರ ನಂಬಿಕೆ. ನಲ್ಲಮಲ್ಲ ಕಾಡಿನ ಮಧ್ಯಭಾಗದಲ್ಲಿ ಶ್ರೀಶೈಲ ಕ್ಷೇತ್ರದಿಂದ ಸುಮಾರು 20 ಕಿ ಮೀ ದೂರದಲ್ಲಿರುವ ಈ ದೇವಾಲಯಕ್ಕೆ ತಲುಪಲು ವಾಹನಗಳ ಸೌಲಭ್ಯವಿದೆ.