ನಮಸ್ಕಾರ ನನ್ನವರೇ..ಮತ್ತೆ ಬಂದೆ ನಿಮ್ಮ ತಿಗಣೇಶ.ಬಾಲ್ಯದ ಸವಿನೆನಪಿನ ಬುತ್ತಿ ಹೊತ್ತು..
ನಾವೆಲ್ಲ ಹಿಪ್ಪಿ ಕಂಡವರಲ್ಲ..ಕೆಲಸಿ ವಿಷ್ಣು ಮಾಡಿದ್ದೇ ಪ್ಯಾಷನ್ನು.ಬೊಡ್ಡು ಕತ್ತರಿ ಹಲ್ಲುಮುಕ್ಕು ಹಣಿಗೆ..ಕೂಪು ಒಂದು ಒಡಕು ಕನ್ನಡಿ ..ಚೊಟ್ಟಹುಸಿದ ಚೀಲದಲ್ಲಿ ಹಾಕಿ..ಬೀಡಿ ಸೇದುತ್ತ ವಿಷ್ಣು ರವಿವಾರ ಕಾಕೆ ಹೇಲು ತಿನ್ನುವುದರೊಳಗೆ..ಮನೆ ಕಟ್ಟೆಮೇಲೆ ಬಂದು ಕುಳಿತುಕೊಳ್ಳುತ್ತಿದ್ದ.ಬಾಳೆಕೀಳೆಯಲ್ಲಿ ಎರಡು ದೋಸೆ.. ಬೆಲ್ಲ..ಚಾಕಣ್ಣು ಕುಡಿದು..ಹೊಗೆಸಪ್ಪಿನ ಕವಳ ಕೊಟ್ಟಮೇಲೆ ಜಗದು ತೂಪಿ..ದೊಡ್ಡಪ್ಪ ಕೊಟ್ಟ ಬೀಡಿ ಕಿವಿಗೆ ಸಿಕ್ಕಿಸಿ.”.ಮಾಣಿ ಬರ್ರ..” ಎಂದು ಮನೆಹಿತ್ಲಿಗೆ ಹೋಗುತ್ತಿದ್ದ..ನಾವು ಒಂದು ಗೆರಟೆಚಂಬಿನಲ್ಲಿ ನೀರು ತೆಗೆದುಕೊಂಡು ತೆಂಗಿನ ಮರದ ಬುಡಕ್ಕೆ ಕುಂಡೆ ಅಡಿಗೆ ಹೆಡೆಪೆಂಟೆ ಹಾಕಿ ಕುಳಿತಾಗ ವಿಷ್ಣು ನಮ್ಮ ಮಂಡೆ ಹೊಡೆಯುತ್ತಿದ್ದ.ನಾವು ಸುಮಾರು ಏಳನೇತ್ತಿವರೆಗೆ ದುಂಡಗೆ ಹೋಗಿ ಕುಳಿತುಕೊಳ್ಳುವುದೇ..ಏಕೆಂದರೆ ಮೈಲಿಗೆ ತೆಗೆಯಬೇಕಿತ್ತು.ಅಂಗಾಕಾರ ಇಲ್ಲದ ಕಟಿಂಗ.ಅವನದ್ದೇ ಪ್ಯಾಷನ್.ಬಹುತೇಕ ಮಂಡೆ ಹೊಡೆವಾಗ ತೀಡುತ್ತಿದ್ದೆವು.ಯಾಕೆಂದರೆ ತಲೆಮೇಲೆ ಕಾಯಮ್ ಕಜ್ಜಿ.ಕತ್ತರಿ ತಾಗಿ ನೆತ್ತರ ಬರುತ್ತಿತ್ತು.ಅದಕ್ಕೆ ಕಜ್ಜಿಯಾದ ಜಾಗಬಿಟ್ಟು ಮಂಡೆ ಹೊಡೆಯುತ್ತಿದ್ದ.ಅದಕ್ಕೆ ಅಲ್ಲಲ್ಲಿ ಉಬ್ಬು ತಗ್ಗು ಇರುವುದೇ.ಮಂಡೆ ನೆರೆಯುವ ವರೆಗೆ ಎಲ್ಲರೂ ಚಾಳಿಸುವವರೇ.ಕೂಪು ಹಾಕುವಾಗ ನಮಗೆ ಗಿಕ್ಕಳಿಸಿದಂತೆ ಆಗುವುದು.ಆಗ ಹಂದುವುದರಿಂದ ಕೂಪು.ಕಿವಿಚೊಟ್ಟೆಗೆ ತಾಗಿದ್ದಿದೆ.ನಾವೇ ಸಾಬು ತೆಗೆದುಕೊಂಡು ಹೋಗಬೇಕು.ಅಯಿಗೆ ನಮ್ಮ ಮಂಡೆ ಸಣ್ಣವಾದಷ್ಟೂ ಕಡಿಮೆ.ಚೌಳು ಹಿಡಿದು ನಿಂತು ಮಂಡೆಹೊಡೆಸುತ್ತಿದ್ದಳು. ಕೆಲಸಿವಿಷ್ಣುಗೆ ಕೊಡಲೂ ದುಡ್ಡು ಇರುತ್ತಿರಲಿಲ್ಲ.ಅದಕ್ಕಾಗೆ ಮಂಡೆ ನೆರೆದಿದ್ದು ಇದೆ.

RELATED ARTICLES  ಸಮಸ್ಥ ಜನರ ಪ್ರಯೋಜನಕ್ಕಾಗಿಯೇ ಶ್ರೀಸಮರ್ಥರು ಎಂದ ಶ್ರೀಧರರು.

ನಾವು ಹಂಡೆ ಮುಟ್ಟುವ ಹಾಗಿಲ್ಲ.ಬಾಲ್ಡಿಯಲ್ಲಿ..ನೀರುತೋಡಿ ಸಗಣಿ ಮುದ್ದೆ ಹಾಕುತ್ತಿದ್ದರು.ಮೈ ವದ್ದೆ ಆದಮೇಲೆ ಹಂಡೆ ಮುಟ್ಟುವುದು.ಆಗ ಸಾಬು ಬಳಸುವುದು ಕಡಿಮೆ.ಅಟ್ಳಕಾಯಿ ಹಿಟ್ಟು ಹಾಕಿ ಮೀಸುತ್ತಿದ್ದಳು ಆಯಿ.ಬಟ್ಟೆಸಾಬು ಹಾಕಿ ಮಿಂದವರು ನಾವು.ಅಪ್ಪ ಗಡ್ಡ ಮಾಡಿದ್ದೂ 501 ಸಾಬೂನಿನಲ್ಲೇ. ಮಶಿಕೆಂಡದಲ್ಲಿ ಹಲ್ಲುತಿಕ್ಕುವುದು..ಕೋಲ್ಗೇಟ ಪೌಡರ್ ಮಾತ್ರ ಬಂದಿತ್ತು.ಅದನ್ನು ನಾವು ತಿಕ್ಕಿದ್ದಕ್ಕಿಂತ ತಿಂದದ್ದೇ ಹೆಚ್ಚು.ಬ್ರೆಷ್ ಇತ್ತು.ಒಂದು ಎಳೆ ಹಿಡಿದುಕೊಂಡು ಇರುವವರೆಗೂ ತಿಕ್ಕುತ್ತಿದ್ದೆವು.ನಾವು ಒಳಗೊಂದು..ಹೊರಗೊಂದು ಚಡ್ಡಿ ಹಾಕಿದವರಲ್ಲ..ಯಾಕೆಂದರೆ..ಒಂದಕ್ಕೇ ತುಟ್ಟಿಕಾಲ.ಅದೂ ಕುಂಡೆ ಹರಿದದ್ದು.ಇಡೀ ಊರಲ್ಲಿ ಒಂದೇದರ್ಜಿ.ಬೀನಗೋಡಿನಲ್ಲಿ ಕೃಷ್ಣನ ಅಂಗಡಿ ಹೊಳ್ಳಿಮೇಲೆ..ದರ್ಜಿ ಇದ್ದ.ಎಲ್ಲರಿಗೂ ಅವನೇ ಪ್ಯಾಚನ್ ಡಿಸಾಯ್ನರ್.ಅವ ಹೊದ್ದದ್ದೇ ಹೊಲಿಗೆ.ನಮಗೆಲ್ಲಾ ಅಂಗಿಚೆಡ್ಡಿ ದೊಗಳೆ ಹೊಲಿಸುತ್ತಿದ್ದರು.ಯಾಕೆಂದರೆ ಒಂದು ವರ್ಷ ಹಾಕಬೇಕು.ಮೊಳಕಾಲು ಮುಚ್ಚುವ ಚಡ್ಡಿಯನ್ನು ತೊಡೆ ಕಳಿಯುವವರೆಗೆ ಹಾಕುತ್ತಿದ್ದೆವು. ನಾಲ್ಕಾರು ಪಿನ್ನು ಚಡ್ಡಿಗೆ ಇರುತ್ತಿತ್ತು..ಯಾಕೆಂದರೆ ಬಟ್ಟಣ್ಣ ಯಾವಾಗಲೂ ಇರುತ್ತಿರಲಿಲ್ಲ.

ಪಿನ್ನು ಹೆಟ್ಟಿ ಅಸಲುಗಂಟಿಗೆ.. ಗಾಯವಾದದ್ದೆಲ್ಲಾ ಇದೆ.ಚಡ್ಡಿಗೆ ಬಾರ ಇರುತ್ತಿತ್ತು.ಅದನ್ನು ಹೆಗಲಿಗೆ ಕತ್ರಿಯಾಗಿ ಹಾಕಿ ಮುಂದೆ ಚೊಟ್ಟಿಗೆ ಎಳೆದು ಕಟ್ಟುವ ರೀತಿಯ ಬಾರ.ಬನಿಯನ್ನು ಗುತ್ತೇ ಇಲ್ಲ.ಶಾಲೆಯಲ್ಲಿ ಖಾಕಿವಾರು ಚಡ್ಡಿ..ಬಿಳಿ ಅಂಗಿ.ಆ ಜಡ್ಡಿಮಾತ್ರ ಹಿಂದೆ ಅಜೀಬಾತ್ ಹರೀತಿರಲಿಲ್ಲ..ಇನ್ನು ಎಲ್ಲಾರು ಬೇಂಚಿನ ಮೊಳೆಗೆ ತಾಗಿ ಹರಿದರೆ ಮಾತ್ರ.ಚಪ್ಪಲ್ಲು ಕಂಡವರೇ ಅಲ್ಲ.ಮಾಸ್ತರು ಕಾಣದಾಗ ಅವರ ಚಪ್ಪಲ್ಲು ಹಾಕಿ ನಡೆದ ನೆನಪಿದೆ.ಯಾರಾದರೂ ದೊಡ್ಡ ನೆಂಟರು ಬಂದರೆ ಅವರ ಚಪ್ಪಲ್ಲು ಹಾಕಿ ಚಟ ತೀರಿಸಿಕೊಂಡವರು ನಾವು.ನಾವೆಲ್ಲಾ ಕನ್ನಡಿಯಲ್ಲಿ ಮುಖ ನೋಡಿದ ದಾಖಲೆಯೇ ಇಲ್ಲ.ಇಡೀ ಮನೆಗೆ ಎರಡುಬಾಯಿಯ ಒಂದೇಹಣಿಗೆ. ನಮ್ಮ ತಲೆಯಲ್ಲೂ ಹೇನು ಆಗುತ್ತಿತ್ತು.ಚಿಮಣಿ ಬುರುಡೆ ಇಟ್ಟು ಆಯಿ ನಮ್ಮ ತಲೆ ಬಗ್ಗಿಸಿ ಹೇನಿನ ಹಣಿಗೆಯಲ್ಲಿ ಬಾಚುತ್ತಿದ್ದರು.ಇಡೀ ವರ್ಷನೂ ತಲೆಯಲ್ಲಿ ಸಿಗರು ಆಗುತ್ತಿತ್ತು.ಪಡಸಾಲಿ ಇಟ್ಳನ ಹತ್ತಿರ ತಂದ ಮರದ ಉದ್ದ ಇರುವ ಸಿಗರುಹಣಿಗೆಯಲ್ಲಿ ಬಾಚುತ್ತಿದ್ದಳು ಆಯಿ.ಬಗ್ಗಿ..ಬಗ್ಗಿ..ಬುರುಡೆಯಲಗಲ್ಲಿ ಮಂಡೆಸುಟ್ಟುಕೊಂಡವರು.ಹೇನು ಹೆಬ್ವಬೆರಳಿನ ಉಗುರಿನಲ್ಲಿ ವರೆದಾಗ ಚಟ್ ಎನ್ನು ಆವಾಜು.ಈಗಲೂ ನೆನಪಿದೆ. ಈಗ ಮಂಡೆಬಾಚುವ ಆಯಿ..ಮುದುಕಾಗಿದ್ದಾಳೆ..ನನ್ನ ತಲೆ ಹೇನು ಜಾರಿಬೀಳುವಷ್ಟು ನುಣುಪಾಗಿದೆ..ನಮಸ್ಕಾರ ಮತ್ತೆ ಬರುವೆ..ನಿಮ್ಮ ತಿಗಣೇಶ..ನಿಮ್ಮ ನೆನಪಿನಂಗಳದಲ್ಲಿ ಈಸಲು..

RELATED ARTICLES  ಅಮ್ಮನ ಕಥೆಯಂತೆ ಅನ್ನದ ಕಥೆ

…ತಿಗಣೇಶ ಮಾಗೋಡು…