(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)
ಕೌಸಲ್ಯೆ ಪ್ರಲಾಪ ಮಾಡುತ್ತ, ‘ನನ್ನ ಮಾತಿನ ಮೇಲೆ ನೀನಿರು’ ಎಂದು ಶ್ರೀರಾಮನಿಗೆ ಹೇಳುತ್ತಿರುವಾಗ ಶ್ರೀರಾಮನು ಧರ್ಮದೃಷ್ಟಿಯಿಂದ ತಾಯಿಯನ್ನು ಸಂತೈಸಿದನು.
ನಾಸ್ತಿ ಶಕ್ತಿಃ ಪಿತುರ್ವಾಕ್ಯಂ ಸಮತಿಕ್ರಮಿತುಂ ಮಮ|
ಪ್ರಸಾದಯೇ ತ್ವಾಂ ಶಿರಸಾ ಗಂತುಮಿಚ್ಛಾಮ್ಯಹಂ ವನಂ||
‘ತಂದೆಯ ಆಜ್ಞೆಯನ್ನು ಉಲ್ಲಂಘಿಸಲು ನನಗೆ ಶಕ್ತಿಯು ಸಾಲದು. ತಂದೆಯ ಆಜ್ಞೆಯನ್ನು ಪರಿಪಾಲಿಸುವದು ಧರ್ಮವೆಂದರಿತು ನಾನು ವನಕ್ಕೆ ಹೊರಟಿದ್ದೇನೆ. ನನ್ನನ್ನು ಆಶೀರ್ವದಿಸು. ನಿನಗೆ ಪತಿಯ ಆಜ್ಞೆ ನಡೆಸಿದಂತಾಗುವದು ಮತ್ತು ನನಗೆ ಪಿತ್ರಾಜ್ಞೆ ನಡೆಸಿದಂತಾಗುವದು. ನನಗೆ ನಿನ್ನ ಅನುಜ್ಞೆಯೂ ಆದರೆ ನಾನು ತಾಯಿ-ತಂದೆ ಇಬ್ಬರ ಆಜ್ಞೆಯನ್ನೂ ಪರಿಪಾಲಿಸಿದಂತಾಗುವದು’ ಎಂಬುದಾಗಿ ದೈನ್ಯದಿಂದ ಹೇಳಿಕೊಂಡಿರುವನು.
ಧರ್ಮೋ ಹಿ ಪರಮೋ ಲೋಕೇ ಧರ್ಮೋ ಸತ್ಯ ಪ್ರತಿಷ್ಟಿತಂ| …………………….
ಜಗತ್ತಿನಲ್ಲಿ ಎಲ್ಲಕ್ಕಿಂತಲೂ ಧರ್ಮವೇ ಶ್ರೇಷ್ಟ. ………….
ಯಸ್ಮಿಂಸ್ತು ಸರ್ವೇಸ್ಯು ರಸನ್ನಿವಿಷ್ಟಾ|
ಧರ್ಮೋ ಯತಃ ಸ್ಯಾತ್ತದುಪಕ್ರಮೇತ||
ದ್ವೇಷ್ಯೋ ಭವತ್ಯರ್ಥಪರೋ ಹಿ ಲೋಕೇ|
ಕಾಮಾತ್ಮತಾ ಖಲ್ಪಪಿ ನ ಪ್ರಶಸ್ತಾ||
ಧರ್ಮದ ಅನುಷ್ಟಾನ ನಡೆಯುವಲ್ಲಿ ಸೌಖ್ಯಾತಿಶಯಗಳನ್ನು ಈಯುವ ಎಲ್ಲಾ ಪುರುಷಾರ್ಥಗಳೂ ತಾನಾಗಿ ಕೈಸೇರುವವು. .
ಅಧರ್ಮದಿಂದ ದ್ರವ್ಯವನ್ನು ದುಡಿದವನು ಹಲವು ಬಗೆಯಿಂದ ಸಮಾಜದ ದ್ರೋಹಕ್ಕೆ ಪಾತ್ರಾಗುವನಲ್ಲದೇ ಆ ಹಣವೂ ಸಹ ಹೆಚ್ಚು ಕಾಲ
ಯಶೋ ಹ್ಯಯಂ ಕೇವಲ ರಾಜ್ಯಕಾರಣಾನ್ನ ಪೃಷ್ಟತಃ|
ಕರ್ತುಮಲಂ ಮಹೋದಯಂ ಅದೀರ್ಘಕಾಲೇ ನ ತು| .
ಕೇವಲ ತುಚ್ಛ ರಾಜ್ಯೋಪಭೋಗಕ್ಕಾಗಿ ಮಹಾಫಲರೂಪವಾದ ನನ್ನ ಯಶಸ್ಸನ್ನು ಕಳೆದುಕೊಳ್ಳಲು ನಾನು ಎಂದಿಗೂ ಉದ್ಯುಕ್ತನಾಗೆನು. ಮಿಂಚಿನಂತೆ ಕೆಲಕಾಲ ಹೊಳೆದು ಮೋಸಗೊಳಿಸುವ ಕ್ಷಣ ಬಾಳಿನ ಈ ಜೀವನಲ್ಲಿ ತುಚ್ಛಫಲವನ್ನೀಯುವ ಈ ಪೃಥ್ವೀ ಸಾಮ್ರಾಜ್ಯವನ್ನು ಅಧರ್ಮದಿದ ಆಳಲು ಈ ರಾಮನು ಎಂದೆಂದಿಗೂ ಸಿದ್ಧನಾಗನು. .
ತಿಳಿದಾಗಲೀ, ತಿಳಿಯದಾಗಲೀ ನಾನು ಈವರೆಗೂ ತಾಯಿ-ತಂದೆಗಳಿಗೆ ಅಪ್ರಿಯವೆನಿಸಿದ್ದನ್ನು ಸ್ವಲ್ಪವೂ ಆಚರಿಸಿಲ್ಲ.
ಶ್ರೀರಾಮನ ಈ ಮಾತು, ಈ ಆಚರಣೆ ಅನುಸರಿಸಲು ಮೇಲ್ಪಂಕ್ತಿಯಾಗಿರುವುದಲ್ಲವೇ?
ಆದರ್ಶ ಪುತ್ರನ ಪಾವನ ಚರಿತ್ರವಿದು.