ನಮಸ್ಕಾರ ನನ್ನವರೇ..ಮನದ ಮೂಲೆಯಲ್ಲಡಗಿದ..ಮರೆಯಲಾಗದ ಮರೆತ ನೆನಪುಗಳನ್ನು ಮೆಲುಕುಹಾಕಿ ಮನ ಕಲುಕಿಸಿ..ಆನಂದಪಡೋಣ..ಬನ್ನಿ..
ಆಗಿನ ಚಳಿಗಾಲ..ಅದರ ಮಜವೇ ಬೇರೆ.ಮೊದಲೇ ಮಳೆಗಾಲದಲ್ಲಿ ಥಂಡಿಜ್ವರ ತಿಂದು..ತಿಂದು..ಸೋತುಹೋಗುತ್ತಿದ್ದೆವು..ನಮ್ಮಲ್ಲಿ ಏನಾದರೂ..ಹೈಗುಂದ ಡಾಕ್ಟರ ಮದ್ದು..ಚಳಿಗಾಲದಲ್ಲಿ ನಮಗೆ ಹಾಸುಹೊದೆಯಲು ಅಷ್ಟೊಂದು ರಗ್ಗು ಚಾದರ ಇರಲಿಲ್ಲ.ಹೊಗೆಕಂಪಿನ ಕಂಬಳಿ..ಚಾದರ..ಅದೂ ತೆಳ್ಳಗಿಂದು.ಕಿವಿಗೆ ಟುವಾಲುಕಟ್ಟಿ..ಹೊಡಚಲು ಹಾಕುತ್ತಿದ್ದರು.ಅಂಗಳದಲ್ಲಿ ಸೌದಿಕುಂಟೆಗೆ ಬೆಂಕಿ ನಂದುತ್ತಿರಲಿಲ್ಲ.ನಮ್ಮನೆ ಹಳೆಮನೆ..ಬೆಚ್ಚಗೆ ಇತ್ತು.ಬಚ್ಚಲ ಒಲೆಗೆ ಸುತ್ತಲೂ ಎಲ್ಲರೂ ಇರುತ್ತಿದ್ದೆವು.ಮಕ್ಕಳಿಗೆ ದೊಡ್ಡವರು ಕೈಕಾಸಿ “ಉಜ್ಜಾಯಿ ಮಲ್ಲಣ್ಣ..ಗೆಜ್ಜೆಕಟ್ಟು ತಮ್ಮಣ್ಣ” ಎಂದು ಮಕ್ಕಳ ಕೆನ್ನೆಯಮೇಲೆ ಇಟ್ಟು ಬೆಚ್ಚಗೆ ಇಡುತ್ತಿದ್ದರು.
ದೊಡ್ಡವರೆಲ್ಲ..ಆಗಾಗ ಚಾ ಕುಡಿದರೆ..ಮಕ್ಕಳಿಗೆ ಚಾ ಇಲ್ಲ.ನಾವೆಲ್ಲ ಇಪ್ಪತ್ತು ವರ್ಷದ ನಂತರ ಚಾ ಕುಡಿದವರು.ಚಳುಗಾಲದಲ್ಲಿ ಶಾಲೆ ತಡ.ಚಳಿಯಲ್ಲಿ ಅಪ್ಪಗೈ ಹಾಕಿ ಶಾಲೆಗೆ ಹೊಗುತ್ತಿದ್ದೆವು.ಸಿಕ್ಕಾಪಟ್ಟೆ ಹನಿ ಬೀಳುತ್ತಿತ್ತು.ಮನೆ ಮಾಡಿನಿಂದ ನೀರು ಬೀಳುವಷ್ಟು.ಹಿಳ್ಳಿಯಮೇಲೆ ಯಾರೂ ಮಲಗುತ್ತಿರಲಿಲ್ಲ.ಆಗ ಗ್ಯಾಸ್ ಇಲ್ಲ.ಅಡಿಗೆಕಟ್ಟೆ ಇಲ್ಲ.ಒಲೆಕಟ್ಟೆಯಮೇಲೆ ಮನೆಗೊಂದು ಬೆಕ್ಕು ಖಾಯಮ್.ಬಾಳೆಕೀಳೆಯಲ್ಲಿಆಯಿ ದೋಸೆ ಹಾಕುತ್ತಿದ್ದಂತೆ..ನೆಕ್ಕು “ಮ್ಯಾವ್” ಎಂದು ಯಾರಾದರೊಬ್ಬರ ಚಾದರದೊಳಗೆ ಹೊಕ್ಕಿ ಕೂರುತ್ತಿತ್ತು.
ಒಬ್ಬೊಬ್ಬರಿಮದ ಒಂದೊಂದು ಚೂರು ದೋಸೆ ತಿಂದು ನಮಗಿಂತ ದಷ್ಟಪುಷ್ಟವಾಗಿ ಬೆಳೆದಿತ್ತು..ಅದೂ ಬೂರಬೆಕ್ಕು.ದೋಸೆಗೆ ಬೆಲ್ಲ..ತುಪ್ಪ.ನನಗೆ ಕೋವೆ ಆಗುತ್ತುತ್ತು. ಹಾಗಾಗಿ ತುಪ್ಪ ಹಾಕುತ್ತಿರಲಿಲ್ಲ.ಹಿತ್ಲೆವಲೆಮೇಲೆ ಕೊಳೆಅಡಿಕೆ ಒಣಗುತ್ತಿತ್ತು.ಸೌದೆಒಲೆ..ಪಾತ್ರೆ ಮುಟ್ಟಿದಲ್ಲಿ ಮಸಿ.ನಾವೆಲ್ಲ ಅಳ್ಳದತಟ್ಟೆಯಲ್ಲಿ ಬಿಸ್ನೀರು ಕುಡಿದವರು.ದಿನಾಲೂ ಅವಲಕ್ಕಿ.ಉಪ್ಪಿಟ್ಟು..ಆಗಾಗ ದೋಸೆ..ಚಳಿಗಾಲದಲ್ಲಿ ಆಯಿ ಹತ್ತಿರವೇ..ಯಾಕೆಂದರೆ ಆಯಿ ಇಲೆ ಹತ್ತಿರ.ಶಾಲೆಯಲ್ಲಿ ಉಪ್ಪಿಟ್ಟು..ಗೋದಿಕಡಿ.ಉಳ್ಳಾಗಡ್ಡೆ ಹಾಕಿದ ಬಿಸಿಬಿಸಿ ಉಪ್ಪಿಟ್ಟು ಚಳಿಗಾಲದಲ್ಲಿ ಬಿಡುತ್ತಿರಲಿಲ್ಲ.ನಮ್ಮನೆ ಹತ್ತಿರ ಹಸಲರ್ ಕೇರಿ.’ಹೋಟ’ ಯಾವಾಗಲೂ ಮಣ್ಣುಕಮಾಟೆ ಚಾದರ ಹೊದ್ದು ಅಂಗಳದಲ್ಲಿ ಬಿಸಿಲಲ್ಲಿ ಮಲಗುತ್ತಿದ್ದ.ನಮ್ಮನೆಗಳಲ್ಲಿ ಬಿಟ್ಟ ಹರಕುಚಾದರದ ತುಂಡುಗಳನ್ನು ದಬ್ಬಣಕ್ಕೆ ಸೊಣಬೆಹುರಿ ಸುರಿದು ಹೊಲಿಯಯತ್ತಿದ್ದರು.ಬಡಬಗ್ಗರ ಮನೆಯಲ್ಲಿ ಮಕ್ಕಳಿಗೆ ಒಡೆಯನಮನೆ ಮಕ್ಕಳಿಗೆ ಗುಡ್ಡಾದವಸ್ತ್ರ..ಸ್ವೆಟರ್ ಬೇಡಿತಂದು ಹಾಕುತ್ತಿದ್ದರು.
ನಾವು ಎರಡುಮೂರು ಅಂಗಿ ಹಾಕುತ್ತಿದ್ದೆವು.ಪೇಸ್ಟ ಬದಲು ಮಶಿಕೆಂಡ..ಉಪ್ಪು..ವಿಭೂತಿ ಹಾಕಿ ಹಲ್ಲುತಿಕ್ಕುವುದು.ಶಾಲೆಗೆ ಹೋಗುವಾಗ ದರೆಯಮೇಲೆ ಹಬ್ಬಿದ ಹಶಿಜಡ್ಡಿನ ನೇತಾಡುವ ಬೇರಿನಮೇಲೆ ದಪ್ವಾಗಿ ಹಿಡಿದುಕೊಂಡಿರುವ ನೀರನ್ನು ಕಣ್ಣಿಗೆ ಬಿಟ್ಟು ಖುಷಿಪಡುತ್ತಿದ್ದೆವು.ಚಳಿಗಾಲ
ಖುಷಿಯಾದರೂ ಶೀಕು ಬಿಡುತ್ತಿರಲ್ಲ.ಮೂಗಲ್ಲಿ ಖಾಯಮ್ ಸಿಂಬಳ. ಬಚ್ಚಕಕೊಟ್ಗೆಯಲ್ಲಿ ಖಾಯಮ್ ಬಿಸಿನೀರು ಇರುತ್ತಿತ್ತು.ನಮ್ಮನೆದು ಹಳೆ ಹಂಡೆ.ಆಗಾಗ ಸೋರುತ್ತಿತ್ತು.ಅದಕ್ಕೆ ಆಯಿ ಸುಣ್ಣ..ಬೆಲ್ಲ ಕಲಸಿ ಬಡಿದು ಹಂಡೆವಾರೆಮಾಡಿ ನೀರು ತುಂಬುತ್ತಿದ್ದಳು.ಬುಡನ್ ಸಾಯಬ್ರು ತಾಮ್ರದ ಪಾತ್ರ ರಿಪೇರಿ ಮಾಡುತ್ತಿದ್ದರು. ಪಾತ್ರಕಗಕೆ ಕಲಾಯಿ..ಬೆಸಗೆ..ಎಲ್ಲಾ ಅವರದೇ.ಆದರೆ ಬಡವರ ಮನೆಯಲ್ಲಿ ಮಣ್ಣಿನ ಕರಗೆ.ಅಡಿಗೆಗೂ ಮಡಕೆ..ಕುಡಕೆ..ಎಲ್ಲಾ ಸಂಶಿ ಪೇಸ್ತಿನದೇ.ಹಸಲರ್ ಕೇರಿಯಲ್ಲಿ ದಿನಾಲೂ ನಂಬ್ರ..ಸಿಟ್ಟು ಬಂದರೆ ಮೊದಲು ಸಿಟ್ಟು ತೋರಿಸುವುದು ಪಾತ್ರೆಯಮೇಲೆ.ಯಾಕೆಂದರೆ ಅದು ಮಣ್ಣಿನದು.ನಮ್ಮನೆಗೆ ಕರಿಮಗು..ಕುಪ್ಪಿ ಪಾತ್ರ ತಿಕ್ಕಲು ಬರುವಾಗ ಮಕ್ಕಳು..ಚಳಿಯಲ್ಲಿ ಬರೀಮೈ ನಡುಗುತ್ತ ಬರುವವರು.ನಾವೆಲ್ಲ ಅವರಿಗೆ ಇದ್ದದ್ದರಲ್ಲೇ ಅಂಗು ಕೊಡುತ್ತಿದ್ದೆವು.ಆಗ ಆ ಹರಕು ಅಂಗಿಯಾದರೂ ಅವರು ಖುಷಿಯಿಂದ ಹಾಕಿ ನಗುತ್ತಿದ್ದರು ಖುಷಿಯಿಂದ.
ಇಂದು ಚಳಿಯೂ ಇಲ್ಲ.ನಡುಕವಿಲ್ಲ..ಹೊಸಹೊಸ ಬಟ್ಟೆಯಿದ್ದರೂ ನಗುವಿಲ್ಲ..ಯಾಕೆಂದರೆ ಆಸೆ ಹೆಚ್ಚಾಗಿದೆ.ಕನಸುಗಳ ವ್ಯಾಪ್ತಿ
ದೊಡ್ಡದಾಗಿದೆ..ಒಡೆಯದಪಾತ್ರೆಗಳಿವೆ.. ಅದರೆ ಸಂಸಾರ ಒಡೆದಿದೆ.ಬುಸಿನೀರು..ಹೊಸಬಟ್ಟೆ ಯಾವುದರಿಂದಲೂ ಸುಖ ಅನಿಸದಷ್ಟು ಭಾವನಾಹೀನವಾಗಿದೆ ಜಗತ್ತು..ನಮಸ್ಕಾರ..ಮುಂದಿನವಾರ..ಮುಂದಿನದು ಬಾಕಿಸಂಗ್ತಿ.
ತಿಗಣೇಶ ಮಾಗೋಡು