ಉರಿದು ಬೆಳಕ ನೀಡುವ
ದೀಪದಂತೆ
ತೇದು ತೇದು ಕಂಪಸೂಸುವ
ಚಂದನದಂತೆ
ನಿಸ್ವಾರ್ಥದ ತರು

ಶಿಷ್ಯರೆಂಬ ಬೆಳೆವ ಮೊಳಕೆಗೆ
ನೀರುಣಿಸುತ
ಬಾಳ ಪಥಕೆ ದಾರಿತೋರ್ವ
ನೀತಿಯ ಕುರುಹು

RELATED ARTICLES  WhatsApp ಪರಿಚಯಿಸಿದೆ ವಿಶೇಷ ಫೀಚರ್ : ತ್ವರಿತ ವೀಡಿಯೊ ಸಂದೇಶವನ್ನು ಕಳುಹಿಸುವುದು ಸರಳ : ಏನಿದರ ವಿಶೇಷತೆ?

ಪರರ ಬಾಳ್ವೆಯ ಹಸನು ಮಾಡ್ವ
ನಿಜಮಾಂತ್ರಿಕರು
ಕರಿಯ ಕಲ್ಲ ಶಿಲೆಯಾಗಿಸುವ
ಶಿಲ್ಪಿಗರು

ವರ್ಣ ವರ್ಗ ಭೇದ ಮರೆತು
ಜ್ಞಾನ ಗಂಗೆಯಂತೆ
ಬದುಕ ಪೊರೆವ
ದಿವ್ಯತೇಜರು.

RELATED ARTICLES  ಗಾಳಿಯಂತೆ ನಗು....

✍ರೇಷ್ಮಾ ಉಮೇಶ ಭಟ್ಕಳ
ಶಿಕ್ಷಕರು ಶ್ರೀವಲ್ಲಿ ಪ್ರೌಢಶಾಲೆ ಚಿತ್ರಾಪುರ