ತಿಗಣೇಶ ಮಾಗೋಡು.

ನಮಸ್ಕಾರ ನನ್ನವರೇ…ಒಂದುದಿನ ನನ್ನ ದೇಹದ ಆರೋಗ್ಯ ರಜೆ ಕೇಳಿತ್ತು..ನಿಮ್ಮ ಕೇಳದೇ ನಾನು ರಜೆ ಪಡೆದೆ..ಕ್ಷಮಿಸಿ ಪಾಪ ನಿಮ್ಮ ತಿಗಣೇಶ.

ನನ್ನ ಏಳನೇ ತರಗತಿಯಲ್ಲಿ ನಡೆದ ಒಂದು ಆರೋಗ್ಯ ಘಟನೆ ಬಹುತೇಕ ನಮ್ಮ ಸಮವಯಸ್ಕರಿಗೆ ತಿಳಿದೇಇದೆ.ಅದನ್ನು ಸಮಮನಸ್ಕರಲ್ಲಿ ಹಂಚುವೆ.

ದೇವರು ಇದ್ದಾನೆ ಎನ್ನುವುದನ್ನು ಸಾಬೀತು ಮಾಡಿತು ಈ ಘಟನೆ. ನನಗೆ ನೆನಪಿದ್ದಷ್ಟು..ಇದು ನನಗೆ ಅಗ ತಿಳಿಯಲಿಲ್ಲ..ನಾನು ಮಾಡಿದ್ದನ್ನು ನೋಡಿದವರು ಹೇಳಿದ್ದು..ಒಂದಿನ ಇದ್ದಕ್ಕಿದ್ದಂತೆ ಅರೋಗ್ಯದಲ್ಲಿ ಬದಲಾವಣೆಯಾಗಿ..ಎದೆ..ಹೊಟ್ಟೆ ಉರಿ ಎಂದನಂತೆ..ಇದ್ದಕ್ಕಿದ್ದಂತೆ..ಮೂರ್ಛೆ..ಅಯಿ ಅಣ್ಣ..ಎಲ್ಲಾ ಕಂಗಾಲು. ಮಂಗ ಕೆಕ್ಕರಿಸಿದ ಹಾಗೆ ಕೆಕ್ಕರಿಸಿ…ತ್ರಾಸಾಗಿ ಎಚ್ಚರ ತಪ್ಪುತ್ತಿತ್ತಂತೆ..ಎಲ್ಲಾ ಡಾಕ್ಟರ ಔಷದಿ ಮಾಡಿದರು.ಅಗ ಬಾಸ್ಕರ ಡಾಕ್ಟರು ಹೊನ್ನಾವರ ಸರಕಾರಿ ಅಸ್ಪತ್ರೆಯಲ್ಲಿದ್ದರು. ‘ಡಿಂಗಾಟಿ ‘ಆಗ ಡ್ರೆಸಿಂಗ್ ಮಾಡುವವ. ಬಾಸ್ಕರಡಾಕ್ಟರ ಆಪ್ತ.ಅಸ್ಪತ್ರೆಯಲ್ಲಿ ವಾರಗಟ್ಳೆ ಇಟ್ಟುಕೊಂಡಿದ್ದರು.ಆಗ ಉಡಪಿ ಹೋಟ್ಳ ಊಟ ಆಸರಿ..ಬಕ್ತನ ಔಷಧ..ಅದರೂ ಕಡಿಮೆಯಾಗಲಿಲ್ಲ.ಎಂಪಿ ಕರ್ಕಿ..ಪಂಡಿತರು..ಕಾರ್ಕಳ..ಒಬ್ಬರೇ..ಇಬ್ಬರೇ…ಭಟ್ಕಳದಲ್ಲಿದ್ದ ಹೆಗಡೆಕಟ್ಟೆ ಡಾಕ್ಟರ..ಎಲ್ಲಾ ಮುಗಿದು..ಮಣಿಪಾಲ ಹೊಗುವರದೆಂದು ನಿಸ್ಚಯವಾಯ್ತು..ನನಗೆ ಹಾಗೆ ಆಗುವಾಗ ಏನೂ ಗೊತ್ತಾಗುತ್ತಿರಲಿಲ್ಲ..ರಲ್ಲಿದ್ದೇನೆ ಎಂದು ತಿಳಿಯತ್ತಿರಲಿಲ್ಲ..ಎಲ್ಲಾ ದೇವಸ್ಥಾನ..ಹರಕೆ..ಎಲ್ಲಾ ಮುಗಿದಿತ್ತು.. ಆಗ ದುಡ್ಡಿಲ್ಲ ಆಯಿ ತೀಡುತ್ತಾ..ಒಂದೆರಡು ಸಾವಿರ ಹಿಡಿದು…ಚಾದರ..ಬಟ್ಳು ತಟ್ಟೆ..ವಸ್ತ್ರಕಪಡ ಕೈಚೀಲದಲ್ಲಿ ಹಾಕಿ ಆಯಿ ಹೊರಟಳು..ಅಜ್ಜನಮನೆ ಹತ್ತಿರದ ಅಮ್ಮನೊರಮನೆ ಬೆಳಿಬಟ್ಟ..ಗಱರಸಪ್ಪೆಲ್ಲಿ ಇದ್ದಾರೆ..ಅವರು ಮಣಿಪಾಲ ನೋಡಿದವರು..ಅವರ ಜೊತೆ ಅಯಿ ನಾನು..ಙಗೆ ತಿಳಿಯುತ್ತಿತ್ತು..ಆದರೆ ಹಾಗೆ ಆಗುವಾಗ ಏನೂ ಇಲ್ಲ..ಬಸ್ಸಿನಲ್ಲಿ ತ್ರಾಸ ಆದಾಗ ಡ್ರೈವರ್ ಅರ್ಧಘಂಟೆ ಬಸ್ ನಿಲ್ಲಿಸಿದ್ದನಂತೆ..ನಾಲ್ಕಾರು ಜನ ಹಿಡಿದರೂ ಎಲ್ಲರನ್ನೂ ಕುಡುಗಿ ಹಾಕುತ್ತಿದ್ದನಂತೆ.ಅಲ್ಲಿಗರ ನಾಲ್ಕೈದು ತಿಂಗಳು ಕೊಟ್ಟ ಔಷದಿ..ಗುಳಿಗೆ..ಯಾವ ಪ್ರಯೋಜನ ಆಗಲಿಲ್ಲ.ಹಾಗಂತ..ಹಾವುದೇ ತೊಂದರೆ ಅಗಲಿಲ್ಲ.ಅದು ದೇವರಾಟ.ಮಣಿಪಾಲಕ್ಕೆ ಹೋದಮೇಲೆ ಅಲ್ಲಿ ಒಂದುವಾರ ಅಯ್ತು..ಏನೂ ಪ್ರಯೋಜನ ಆಗಲಿಲ್ಲ.ಅಲ್ಲಿ ನನ್ನ ಪ್ರೆಮಚಿಕ್ಕಿಯ ಗೆಳತಿ ಗುಲಾಬಿ ನರ್ಸ ಅಗಿದ್ದು ತಿಳಿತು..ನನಗೆ ಎಲ್ಲಾ ಟೆಸ್ಟ ಅಗಿ..ಮಾನಸಿಕ ಎಂದು ತೀರ್ಮಾನಕ್ಕೆ ಕೆಲವರು ಬಂದರು..ಕೊನೆಗೆ ಮಿದುಳು ಪರೀಕ್ಷೆ ಮಾಡಬೇಕು ಆಪರೇಷನ್ ಆಗಬೇಕು ಎಂದು ಮಾತನಾಡಿಕೊಂಡರಂತೆ.

RELATED ARTICLES  ದೇವರು ಇದ್ದಾನೆಯೇ? ಇದಕ್ಕೆ ಶ್ರೀಧರ ಸ್ವಾಮಿಗಳು ಹೀಗೆಂದರು.

ಅದು ಇಂಗ್ಲಿಷನಲ್ಲಿ.ಆಯಿಗೆ ಏನೂ ತಿಳಿಯಲಿಲ್ಲ.ಕುಟ್ನಮಾವ ನನ್ನ ನೋಡಲು ಬಂದಿದ್ದ..ಅವಂಗೆ ಚೂರ್ಪಾರು ಇಂಗ್ಲಿಷು ತಿಳೀತು..”ಅಚ್ಚಿ..ಗಣೇಶನ ತಲೆ ಅಪರೇಷನ್ ಮಾಡ ಹೇಳ್ತಿದ್ದ” ಎಂದಾಗ..ಅಯಿ ಹೆದರಿ..ಡಿಶ್ಚಾರ್ಜ ಮಾಡಿಸುವ ತೀರ್ಮಾನಕ್ಕೆ ಬಂದರು..ಯಾಕೆಂದರೆ ಆಗ ಆಪರೇಶನ್ ಅಂದರೆಅಷ್ಟು ಭಯ.ಮತ್ತು ಅಷ್ಟು ದುಡ್ಡು ಇಲ್ಲ..ಆಯಿ ತೀಡುತ್ತಾ ಮಣಿಪಾಲಕ್ಕೆ ಹೋಗುವಾಗ..ನಮ್ಮನೆ ಅಚೀಚೆ ಎಲ್ಲಾ ಶ್ರೀಮಂತರಾದರೂ ಯಾರು..ಎಷ್ಟು ಬೇಡಿದರು ಹತ್ತು ರುಪಾಯಿ ಕೊಡಲಿಲ್ಲ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಅಬಗುಂಡಿ..ಹಸನಖಾನ..ಕರೆಂಟಭಟ್ಟ..ಹೀಗೆ ಎಲ್ಲರಲ್ಲು ಅಡಿಕೆ ಕೊಡ್ತೆ ಹೇಳಿ ಸಾಲ..ಆದರೆ ತಾರಿದಾಟುವಾಗ ಮಳ್ಳಿಕೇರಿ ಈಶ್ವರ ಭಟ್ಟರು..ತಂಗಿ ತಕ..ಮಾಣಿಗೆ ಹುಷಾರಾಗಲಿ…ಹೇಳಿ ಐದುನೂರು ರೂಪಾಯಿ ಕೊಟ್ಡಿದ್ದರು…ನಿಜವಾಗಿ ಕಷ್ಟಕ್ಕೆ ಆದವರು.ಈಗ ಅವರಿಲ್ಲ..ಅವರ ಮನೆಯ ಮಕ್ಕಳಾದ ಸೂರಿಭಟ್ಟ..ಸುಬ್ರಾಯಭಟ್ಟ…ಹಿರಿಯರ ಪುಣ್ಯದಿಂದ ಚೆನ್ನಾಗಿದ್ದಾರೆ…ಇರಲಿ…ಇರಲೇಬೇಕು….ಇಂದು ಸಂತಸವೆಂದರೆ..ಇಂದು ಸಹಾಯಮಾಡುವ ಅದೆಷ್ಟೋ ಜನ ಇದ್ದರೂ..ಜಗತ್ತು ಹಾಳಾಗಿದೆ..ಅಂದು ಯಾರೋ ಒಬ್ಬಿಬ್ಬರು ದಾನಿಗಳಿದ್ದರೂ..ಆದಿನ ಚೆನ್ನಾಗಿತ್ತು ಎನ್ನುತ್ತಾರೆ…ಅಂದು ನೀಡುವ ಭಾವನೆಗಳು ನಿಸ್ವಾರ್ಥವಾಗಿತ್ತು…
ಮುಂದಿನವಾರ ಮತ್ತಿದೆ..

ನಿಮ್ಮ ತಿಗಣೇಶ..ಮತ್ತೆ ಬರುವೆ ನೆನಪುಹೊತ್ತು.