ಮುದ್ದಾಗಿ ಮಾತಾಡಿ
ಸದ್ದಿಲ್ಲದೆ ಸೋಕಿ
ನಗುತಾ ಹೋದವಳು

ಬಿರುಬಿಸಿಲ ಬೇಗೆಯಲೂ
ಮೈಗೊರಗಿ ಕುಳಿತು
ತಂಗಾಳಿಯಾದವಳು

ಕಡುಗಪ್ಪು ರಾತ್ರಿಯಲೂ
ಪೌರ್ಣಮಿಯ ಬೆಳಕನ್ನು
ನನ್ನೆದೆಗೆ ತಂದವಳು

RELATED ARTICLES  ದಿನದ ದೀವಿಗೆ

ಸಿಹಿಯಾದ ನಿದ್ರೆಯಲೂ
ಕನಸಾಗಿ ನನ್ನ
ಕಣ್ಣೆದುರಿಗೆ ಬಂದವಳು

ಬೊಗಸೆಯಲಿ ನನ್ನ
ಮೊಗವನ್ನು ಹಿಡಿದು
ನವಿರಾಗಿ ಚುಂಬಿಸಿದವಳು

ಒಲವಿಂದ ನನ್ನ
ಬಿಗಿಯಾಗಿ ಅಪ್ಪಿ
ತುಸು ನಾಚಿ ನಕ್ಕವಳು

RELATED ARTICLES  ನಿಜ ಸುಖ ಯಾವುದು?

• ಜನಾರ್ದನ ಗೊರ್ಟೆ