ಒತ್ತಡವಿಲ್ಲದಿರೆ ದಕ್ಷರು ಎಂದು ಉದಾಹರಿಸಲು..ಕುಮಟಾ ಪೋಲೀಸ ನಿಜವಾಗಿ ಯೋಗ್ಯರು.ಕುಂಭೇಶ್ವರ ಭಟ್ಟರ ಕೊಲೆ..ಅದನ್ನು ಬೆನ್ನಟ್ಟಿ..ಹಸಿವು..ನೀರಡಿಕೆ ನಿದ್ದೆ ಬಿಟ್ಟು ಶ್ರಮಿಸಿ ಜನರಿಗೆ ತಮ್ಮ ನಿಷ್ಟೆ ತೋರಿಸಿಕೊಟ್ಟುದಕ್ಕೆ ‘ತಿಗಣೇಶ ಮನಃ ಪೂರ್ವಕ ಅಭಿನಂದನೆಗಳು.ಪೋಲೀಸರೇ ತಮ್ಮದು ಕೇವಲ ನೌಕರಿಯಲ್ಲ..ನೀವು ನಿದ್ದೆಬಿಟ್ಟು..

RELATED ARTICLES  ಇಂದಿನ ಮಕ್ಕಳು ಮತ್ತು ಅವರ ಬಾಲ್ಯ ಜೀವನ..ಒಂದಿಷ್ಟು ಚಿಂತನೆ

ಕಾದಿದ್ದಕ್ಕಲ್ಲ ಸುಖವಾಗಿ ನಾವು ನಿದ್ರಿಸುವುದು..ನಮ್ಮ ಕ್ಷೇಮ ಕಾಯುವ ನಿಮ್ಮ ಕುಟುಂಬ ನೆಮ್ಮದಿಯಿಂದಿರಲಿ.ನೀವು ತೊಡುವ ಬಟ್ಟೆ‌ ನಿಮ್ಮಲ್ಲಿಯ ದಕ್ಷತೆಯ ಸಂಕೇತವೆಂದು ತೋರಿಸಿಕೊಟ್ಟಿರಿ..ನಿಮ್ಮ ಸೇವೆ ಸದಾ ಸ್ಮರಣೀಯ..ಬೆಳಗಾದರೆ ಪೋಲೀಸರನ್ನು ಆಡಿಕೊಳ್ಳುವ ಜನರಿಗೆ ತಮ್ಮ ಕೆಲಸದ ಮೂಲಕ ಉತ್ತರಿಸಿದ ನಿಮಗಿದೋ..ಪ್ರಣಾಮ.ನಿಮಗೆ..ನಿಮ್ಮ ಕುಟುಂಬಕ್ಕೆ ದೇವರ ಆಶಿರ್ವಾದ ಸದಾ ಸಿಗಲಿ..ನೂರು ಬಿರುನುಡಿಗಳ ಮೀರಿ..ನಡೆದು ಸೇವೆ ಮಾಡುವ..ನಿಮಗೆ..ನಮ್ಮಂಥವರು ಹೃದಯಪೂರ್ವಕ ಹಾರೈಸುತ್ತೇವೆ..ಸರಕಾರಗಳು ನಿಮ್ಮ ದಕ್ಷತೆ ಗುರುತಿಸಲಿ..ನಾವೆಲ್ಲ ಹೆಮ್ಮೆಯಿಂದ ಹೇಳುತ್ತೇವೆ..ಇವರು “ನಮ್ಮ ಕುಮಟಾ ಪೋಲಿಸ್” ಎಂದು.

RELATED ARTICLES  ತೃಣಕ್ಕೆ ಸಮಾನ ನೀ ಮನುಜ

ನಿಮ್ಮ ಸೇವೆಯನ್ನು ನೆನೆದು.
………ತಿಗಣೇಶ ಮಾಗೋಡ.