ನಮಸ್ಕಾರ ನನ್ನವರೇ..ಕಳೆದ ಮೂರುವಾರಗಳಿಂದ ನಿಮ್ಮ ನೆನಪಿನಂಗಳದ ಹೂವನ್ನು ಅರಳಿಸಲು..ನಾನು ಬರಲೇ ಇಲ್ಲ..ನೀವೂ ಮರೆತಿರೇನೋ..ನನ್ನ ಆಯಿಯನ್ನು ಒಂದುವಾರ ಆಸ್ಪತ್ರೆಯಲ್ಲಿರಿಸಿ..ಕರೆತಂದೆ.ಈಗ ಒತ್ತಡವಿಲ್ಲ..ಮತ್ತೆಬಂದೆ.
ಆಯಿ ನನ್ನನ್ನು ಮಣಿಪಾಲದಲ್ಲಿಟ್ಟುಕೊಂಡಷ್ಟು ದಿನ ಊಟ ಮಾಡಿದಳೋ..ಇಲ್ಲವೋ..ಒಂದು ಚಹಾದಲ್ಲಿ ಒಂದುದಿನ ಕಳೆದದ್ದು ನೆನಪಿದೆ.ಆಯಿ ಮಣಿಪಾಲದಲ್ಲಿ ..ಬಹಳದಿನ ನೋಡಲಿಲ್ಲ..ಆಪರೇಷನ್ ಸುದ್ದಿ ತಿಳಿದಕೂಡಲೇ ಡಿಶ್ಚಾರ್ಜ ಮಾಡಿಸುವ ಪ್ರಯತ್ನ ಮಾಡಿದರು.ಡಿಶ್ಚಾರ್ಜು ಆಯ್ತು..ಬರುವಾಗ ಆಯಿಯ ಕೈಲಿ ದುಡ್ಡಿಲ್ಲ..ನಮಗೆ ಆಗ ಬಸ್ ಟಿಕೆಟೂ ಆಡುವುದೇ.ಆಯಿ ನಾನು ಏಳುನೆತ್ತಿಯಾದರೂ ಅರ್ಧ ಟಿಕೇಟ ಮಾಡುತ್ತಿದ್ದರು.ನಮಗೆ ಹೊರಡುವಾಲೇ ನಾಲ್ಕುನೆತ್ತಿ ಎಂದು ಬಾಯಿಪಾಠ ಮಾಡಿಸುತ್ತಿದ್ದರು.
ಟಿಕೇಟ ಆಡುವ ಆಸೆಗೆ ನಾನು ಕಂಡಕ್ಟರ್ ಹತ್ತಿರ ಏಳನೆತ್ತಿ ಎಂದೆ.ಅವ ಇಡೀ ಟಿಕೆಟ ಹೊಡೆದ.ಆಯಿ ದುಡ್ಡಿಲ್ಲದೇ ಪರದಾಡಿದರು.ಈಗ ನನಗೆ ನೋವಾಗುತ್ತದೆ.ಮನೆಗೆ ಬಂದರೆ ನನಗೆ ಶೀಕು ಹಾಗೇ ಇತ್ತು. ಎಲ್ಲಾ ಆಸೆಬಿಟ್ಟು ಕುಳಿತಾಗ..ಗೋರೆ ಗುರುಗಳಲ್ಲಿ ನನ್ನ ಪ್ರೇಮಚಿಕ್ಕಿ ಹೋಗಿಬಂದಳು.ಗುರುಗಳು ಹಳೇ ಹರಕೆ ಇದೆ ಗೇರಸಪ್ಪಾ ಮೂಲ ಹನುಮಂತ ದೇವಸ್ಥಾನಕ್ಕೆ ಐದುನೂರಾ ಒಂದು ರೂಪಯಿ ಹಾಕಿ ಎಂದರು.ಮೂವತ್ತಾರು ವರ್ಷದ ದಿಂದೆ ಐದುನೂರು ರೂಪಾಯಿ ಸುಲಭವಲ್ಲ. ಆದರೂ ಸಾಲ..ಕಡ ಮಾಡಿ ಹರಿಕೆ ತೀರಿಸಿದರು.
ಆಮೇಲೆನನಗೆ ಹಾಗೆ ಆಗಲೇ ಇಲ್ಲ.ಇಂದಿನವರೆಗೂ ಆರಾಮಾಗಿದ್ದೇನೆ.ಗೋರೇ ಸದಾನಂದ ಸ್ವಾಮೀಜಿ..ಇಂದಿಗೂ ನಮ್ಮನ್ನೆಲ್ಲ ಕಾಪಾಡುತ್ತ ಬಂದಿದ್ದಾರೆ..ಕಾಪಾಡುತ್ತಾರೆ…ಮತ್ತೆ ಬರೆವೆ..ಮತ್ತೆ ಬರುವೆ..
……..ತಿಗಣೇಶ ಮಾಗೋಡ.