ನನ್ನ ಅಂಗಳದಲ್ಲಿ
ರಂಗೋಲಿ ಇಡಲಿಕ್ಕೆ
ದೊಣ್ಣೆ ನಾಯಕನ
ಹಂಗೇಕೆ?
ನನ್ನ ಬಾಳ ಬೆಳಗುವ
ಪುಟ್ಟ ಹಣತೆಗೆ
ಯಾರ
ಸಹಿಯ ಪಡೆಯಲೇಕೆ…
ನೀ ಹಾಕುವ ತಿಂಗಳು
ಕರೆನ್ಸಿಯಲ್ಲಿ
ತುಂಬದೇ
ಬಡವನ ಹೊಟ್ಟೆ
ನಿನ್ನ ಸ್ವಾರ್ಥವ
ಮರೆಮಾಚಲು
ನಮ್ಮ ಬೆಳಕನೇಕೆ
ದಾನ ಕೊಟ್ಟೆ
ಹಬ್ಬ ಮಾಡುವ ಮನಕೆ
ಬೆಂಕಿ ಹಚ್ಚುವರುಂಟು
ಕಂಡಿಲ್ಲವೇ
ನಾನವರ ಗಡ್ಡ
ಬಯಸುವುದಾದರೆ ಸಮತೆ
ಒಡೆಯದಿರು ಹಣತೆ
ಬೆಂಕಿ ಇಡುವವರ ಗಡ್ಡಕ್ಕೆ
ಬೆಂಕಿ ಇಡು ದಡ್ಡ…
ರಕ್ತ ಚೆಲ್ಲುವುದ ಕಂಡೂ
ಜಾಣ ಮೌನದಲಿದ್ದು
ಬೆಳಗುವ ಹಣತೆಯ
ನಂದಿಸುವರ
ದುರ್ಬುದ್ದಿ ಆರಲಿ…
ಬೆಂಕಿ ಇಡುವವರ ಬಿಟ್ಟು
ಹಣತೆ ಹಚ್ಚುವವರ…
ಬೆಳಕು ನಂದಿಸುವವರಿಗೆ
ದಿನವೂ ದಿಕ್ಕಾರವಿರಲಿ…
✍ಉಮೇಶ ಮುಂಡಳ್ಳಿ ಭಟ್ಕಳ