ಲೇಖನ : ವಿನಾಯಕ ಬ್ರಹ್ಮೂರು


ನೋಟಿಗೊಂದುಓಟು ನಿಯಮದಡಿ ಪ್ರಜೆಗಳ ಜೇಬಿಗೆ ಪುಡಿಗಾಸು ಬೀಸಾಡಿ ರಾಜಕೀಯದ ಚುಕ್ಕಾಣ ಹಿಡಿದು ಮುಂದೇ ಅದೇ ಪ್ರಜೆಗಳನ್ನು ಯಾಮಾರಿಸಿ `ಉಂಡೂ ಹೋದಕೊಂಡೂ ಹೋದ’ ಎಂಬಂತೆ ಎಲ್ಲವನ್ನೂ ನುಂಗಿ ನೀರು ಕುಡಿದು ಎಂಟೆದೆ ಭಂಟನಂತೆ ಬೀಗಿ, ವ್ಯವಸ್ಥೆಯನ್ನು ಸರ್ವನಾಶ ಮಾಡುವ ಜನಪ್ರತಿನಿಧಿಗಳು ಮೂರ್ಖರಾ?ಅಥವಾ ಒಮ್ಮೆ ಸಿಗುವ ಆಮಿಷಕ್ಕೆ ಒಳಗಾಗಿ ಭ್ರಷ್ಟರ ಕೈಗೆ ಆಡಳಿತವನ್ನು ಧಾರೆಯೆಳೆದು ಸಮಾಜವನ್ನು ಕ್ಲೀನ್‍ ಕ್ರಷ್ಣಪ್ಪ ಮಾಡಿಸೋಕೆ ಪರೋಕ್ಷ ಕಾರಣರಾಗುವ ಪ್ರಜೆಗಳು ಮೂರ್ಖರಾ?


ಕೂದಲು ಕಿತ್ತೋಗೋ ತನಕ ತಲೆ ಕೆರ್ಕೊಂಡು, ಮೈ ಪರಚ್ಕೊಂಡು, ಕೆಡೋಕೆ ಜಾಗ ಇಲ್ದಿದ್ದಂಗೆಯಕ್ಕುಟ್ಟಿ ಹೋಗಿರುವ ನಮ್ಮ ಆಡಳಿತ ವ್ಯವಸ್ಥೆನಾ ಉದ್ಧಾರ ಮಾಡ್ತೀನಿ ಅನ್ನೋನು ಮೂರ್ಖನಾ?


ಗೊಂದಲ ಮೂಡಿಸುವ ಪ್ರಶ್ನೆಗಳು ಇಂತವಲ್ಲಿ ಹಲವಿದೆ.ಒಬ್ಬ ಆ ಥರ.ಇನ್ನೊಬ್ಬ ಈ ಥರ.ಈ ಥರಥರಗಳನ್ನು ಎದುರಿಸಿ ತಮ್ಮ ಬದುಕನ್ನು ನ್ಯೂಟ್ರಲ್ ನಲ್ಲಿಕೊಂಡೊಯ್ಯಬೇಕಾಗಿರುವುದು ಹಲವರ ದುಃಸ್ಥಿತಿ.ನ್ಯಾಯ, ಅನ್ಯಾಯಗಳೆಂಬ ಎರಡೂ ಆಯಾಮಗಳಲ್ಲಿ ಕಾಲಿಟ್ಟುಕೊನೆಯಲ್ಲಿ ಬೆಪ್ಪಾಗುವಂತಾಗಿದೆ ಎಷ್ಟೋ ಜನರ ಪರಿಸ್ಥಿತಿ.
ಹೌದು, ಅನಿವಾರ್ಯದಿಂದಲೋ, ಮೋಹದಿಂದಲೋ, ಅತಿಯಾಸೆಯಿಂದಲೋ ವ್ಯಕ್ತಿಯೊಳಗೊಬ್ಬ ಭ್ರಷ್ಟ ಉದ್ಭವಿಸುತ್ತಿದ್ದಾನೆ. ಗಾದೆ ಮಾತು ಓದಲಷ್ಟೇ ಚೆಂದ ಎಂಬಂತೆ ನ್ಯಾಯಕ್ಕೆ ಜಯವಿದೆ ಎಂಬ ಮಾತು ಹೇಳಲೋ ಕೇಳಲೋ ಸುಂದರವೆನಿಸಿದೆಯಾದರೂ ನ್ಯಾಯಮಾರ್ಗದಲ್ಲಿ ನಡೆಯುವವನು ಇಂದಿನ ಸಮಾಜ ವ್ಯವಸ್ಥೆಯಲ್ಲಿಉದ್ಧಾರವಾಗಲಾರಎಂಬುದನ್ನೂಯಾಕೋ ಅಲ್ಲಗಳೆಯಲು ಸಾಧ್ಯವಾಗುತ್ತಿಲ್ಲ. ಪ್ರತಿಭೆ, ಬುದ್ಧಿವಂತಿಕೆ ನಮ್ಮದೇಶಕ್ಕೆ ಬೇಕಿಲ್ಲ. ವಿಪರ್ಯಾಸವೆಂದರೆ ನಮ್ಮದೇಶದವರುಗುರುತಿಸದಅದೆಷ್ಟೋ ಬುದ್ಧಿಶಾಲಿಗಳು ಇಂದು ವಿದೇಶಗಳಲ್ಲಿ ಸಾಫ್ಟ್ ವೇರ್ ಕಂಪನಿಗಳನ್ನು ನಡೆಸಿದ್ದಾರೆ, ಸಂಶೋಧನೆಗಳಲ್ಲಿ ಹೆಸರು ಮಾಡುತ್ತಿದ್ದಾರೆ. ನಮ್ಮದೇಶಕ್ಕೂ ಹೊರ ದೇಶಗಳಿಗೂ ಒಂದೇ ವ್ಯತ್ಯಾಸ. ಅವರು ಬುದ್ಧಿವಂತರನ್ನುಸೃಷ್ಟಿಸುತ್ತಾರೆ, ಹಾಗೇ ಪ್ರತಿಭೆಇರುವವರಿಗೆ ಅವಕಾಶ ಕೊಡುತ್ತಾರೆ. ಆದರೆ ನಾವು ಬುದ್ಧಿವಂತರನ್ನು ತುಳಿತೀವಿ. ಹೊರಗೆ ತಳ್ತೀವಿ. ಲಂಚ ಕೊಟ್ಟರೆಎಂತಹಅಯೋಗ್ಯನಿಗೂ ಕೆಲಸ ಕೊಡ್ತೀವಿ, ಗೌರವ ಪುರಸ್ಕಾರಗಳನ್ನು ನೀಡ್ತೀವಿ.ಅಷ್ಟೇ ಯಾಕೆ?ಎಂತೆಂತಹಅ ಯೋಗ್ಯರನ್ನು ರಾಜ್ಯದ ಚುಕ್ಕಾಣ ಹಿಡಿಯುವಂತೆ ಮಾಡ್ತೀವಿ!!ಇದೆಲ್ಲವನ್ನು ಮಾಡುವುದು ನಾವುಗಳೇ.

RELATED ARTICLES  ಮನದ ಮಾತು…….


ಕಾಲಕ್ಕೆ ತಕ್ಕಂತೆ ಬದಲಾಗಬೇಕುಅಂತಾರೆ. ಹೌದು ಜನಗಳು ಬುದ್ಧಿವಂತರು. ಅನಾವಶ್ಯಕವಾಗಿ ಕಿರಿಕಿರಿಗಳನ್ನು ಯಾಕೆ ಮೈಮೇಲೆಳೆದುಕೊಳ್ಳಬೇಕು ಅಂತ ಸಮಾಜದ ವ್ಯವಸ್ಥೆ ಎಷ್ಟೇ ಕೆಟ್ಟ ಸ್ಥಿತಿಯಲ್ಲಿದ್ದರೂ ಬೇಗ ಅದಕ್ಕೆಒಗ್ಗಿಕೊಂಡು ಬಿಡ್ತೀವಿ.ಅನ್ಯಾಯ ನಡಿತಿದೆಅಂತ ಒಳಗೊಳಗೆ ಮಾತಾಡ್ಕೊಂಡು ಸುಮ್ಮನಾಗೋ ನಾವುಗಳು ವಿರೋಧಿಸೋಗೋಜಿಗೆ ಹೋಗುವುದೇಇಲ್ಲ.
ಹಾಗಾದರೆ ಮೂರ್ಖ ನಾನೇ ಎಂದುಹೆಮ್ಮೆಯಿಂದ ಹೇಳೋಣ ಅಲ್ಲವೇ?

RELATED ARTICLES  ಬದುಕಿಗೆ ಬಣ್ಣ ತುಂಬಿದವರು


ಮತ್ತೆ ಬಂದಿದೆ ಹಣೆಬರಹ ಬರೆದುಕೊಳ್ಳೋ ಸಮಯ!
ಹೌದು. ಮುಂದಿನ ಐದು ವರ್ಷಗಳ ನಮ್ಮ ನಮ್ಮ ಹಣೆಬರಹವನ್ನು ಬರೆದುಕೊಳ್ಳುವ ಸಮಯ ಇದೀಗ ಮತ್ತೆಬಂದಿದೆ.ನಮ್ಮ ಹಣೆಬರಹವನ್ನ ನಾವೇ ಬರೆದೊಕೊಳ್ಳೋದು ಕೇವಲ ಚುನಾವಣೆಯಲ್ಲಿ ಮಾತ್ರ. ಹಾಗೆಯೇ ಹಣೆಬರಹವನ್ನು ಒಂದೇ ಒಂದು ನೋಟುಬದಲಾಯಿಸಬಹುದು. ಜನ ಪ್ರಜ್ಞಾವಂತರಾಗಿದ್ದಾರೆ ಎಂಬ ಮಾತು ಕೇವಲ ಭಾಷಣಗಳಿಗಷ್ಟೇ ಸೀಮಿತವಾಗದೇ ಈ ಬಾರಿಯ ಚುನಾವಣೆಯಲ್ಲಿ ಸಾಬೀತಾಗಬೇಕು. ಇಲ್ಲವಾದರೆ ಭವಿಷ್ಯದ ಕೆಟ್ಟ ಪರಿಣಾಮಗಳನ್ನುಎದುರಿಸಲು ಸಜ್ಜಾಗಬೇಕು.


ನೌಕರಿ ಮಾಡುವವರೊಂದೇ ಅಲ್ಲ, ಕೂಲಿ ಕಾರ್ಮಿಕರು ಕೂಡ ದಿನಕ್ಕೆ 500ರೂ ಸಂಪಾದನೆಯನ್ನು ಬಯಸುತ್ತಾರೆ.ಆದರೆ ಚುನಾವಣೆ ಪ್ರಚಾರದ ಸಮಯದಲ್ಲಿ 500ರೂ.ತೆಗೆದುಕೊಂಡು 5 ವರ್ಷವನ್ನದೂಡುತ್ತಿದ್ದಾರಲ್ಲ, ಅದನ್ನ ಯೋಚಿಸುವಷ್ಟು ಬುದ್ಧಿಮಟ್ಟತೆ ಬಂದರೂ ಸಾಕು, ಜನ ಪ್ರಜ್ಞಾವಂತರಾಗ್ತಿದ್ದಾರೆ ಎಂದೇ ಅರ್ಥ.