Home Health ಅಪಾರ ಔಷಧಿಗುಣ ಹೊಂದಿರುವ ‘ಅಮೃತ ಬಳ್ಳಿ’

ಅಪಾರ ಔಷಧಿಗುಣ ಹೊಂದಿರುವ ‘ಅಮೃತ ಬಳ್ಳಿ’

ಎಲ್ಲಾ ಕಡೆ ಸುಲಭವಾಗಿ ದೊರಕುವ ‘ಅಮೃತ ಬಳ್ಳಿ’ ಆಯುರ್ವೇದದಲ್ಲಿ ಬಹು ಜನಪ್ರಿಯ ಔಷಧವಾಗಿದೆ.  ಅನೇಕ ಔಷಧಿಗುಣಗಳಿಂದ ಮತ್ತು ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ.ಭಾರತದ ಎಲ್ಲಾ ಕಡೆ ದೊರೆಯುತ್ತದೆ.ಇಂದಿನ ದಿನಗಳಲ್ಲಿ ಔಷಧಿಯಾಗಿ ಅಪಾರ ಬೇಡಿಕೆ ಆಗಿರುವುದರಿಂದ ಬೇಸಾಯ ಬೆಳೇಯಾಗಿ ಇದನ್ನು ಕೃಷಿ ಮಾಡುತ್ತಿದ್ದಾರೆ.

ಈ ಅಮೃತ ಬಳ್ಳಿಯ ಕಾಂಡ ಭಾಗ ಮೃದುವಾಗಿದ್ದು ಇದರ ಮೇಲ್ಬಾಗದ ಸಿಪ್ಪೆಯು ತೆಳುವಾಗಿದ್ದು; ಮಾಸಲು ಬಣ್ಣದಿಂದ ಕೂಡಿದೆ. ಇದು ವೀಳ್ಯೆದೆಲೆಯನ್ನು ಹೋಲುತ್ತದೆ. ಕಾಯಿಗಳು ಹಸಿರಾಗಿದ್ದು, ಹಣ್ಣಾದ ಮೇಲೆ ಆಕರ್ಷಕ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಕಾಂಡದ ಮೇಲೆ ಪೊರೆಯನ್ನು ತೆಗೆದರೆ ಅದರಲ್ಲಿ ಲೋಳೆಯಂತೆ ಅಂಟುದ್ರವ್ಯ ಕಂಡುಬರುತ್ತದೆ.

ಅಮೃತ ಬಳ್ಳಿಯು ಕಹಿ, ಒಗರು ರಸಗಳನ್ನು ಒಳಗೊಂಡಿದೆ. ವಾತ ಹಾಗು ಕಫ ದೋಷಗಳನ್ನು ಶಮನ ಮಾಡುತ್ತದೆ. ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಶರೀರದ ಧಾತುಗಳ ವರ್ಧನೆಗೆ ಹಾಗೂ ಪೋಷಣೆಗೆ ಸಹಾಯಕ.

ಮಧುಮೇಹ, ಚರ್ಮರೋಗ, ಕೆಲವು ಸಂಧಿಗಳ ರೋಗಗಳು, ಕ್ರಿಮಿ, ಜ್ವರ, ಕೆಮ್ಮು ಇತ್ಯಾದಿ ರೋಗಗಳನ್ನು ಶಮನ ಮಾಡುತ್ತದೆ.

ಔಷಧೀಯ ಗುಣಗಳು

  • ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಸಂಜೀವಿನಿಗೆ ಸಮನಾದ ಒಂದು ವನಸ್ಪತಿ ಎಂದು ಪರಿಗಣಿಸಿದೆ. ಖಾರ,ಕಹಿ,ಒಗರು ರಸಗಳಿಂದ ಕೂಡಿರುವ ಇದು, ಉಷ್ಣವಿರ್ಯವುಳ್ಳದಾಗಿದ್ದು ದೀಪದ, ಪಾಚನ,ಗ್ರಾಹೀ ಗುಣವನ್ನು ಹೊಂದಿದೆ.
  • ವಾತ ಪಿತ್ತ, ಕಫದೋಷಗಳನ್ನು ಸಮಸ್ಥಿತಿಯಲ್ಲಿಡುವ ಇದು-ಜ್ವರ, ಕುಷ್ಟ, ಕಾಮಾಲೆ, ಮಧುಮೇಹ, ಕೆಮ್ಮು, ದಮ್ಮು, ರಕ್ತಹೀನತೆ, ಆಮವಾತ, ರಕ್ತಪಿತ್ತ, ಸ್ತನ್ಯ ಶೋಧಕ, ದಾಹ… ಇಂತಹ ಹತ್ತು ಹಲವು ರೋಗಗಳಿಗೆ ಉತ್ತಮ ಔಷಧವಾಗಬಲ್ಲ ಇದೊಂದು ಶ್ರೇಷ್ಠ ರಸಾಯನ.ಇದರ ಸೇವನೆಯಿಂದ ರೋಗ ನಿವಾರಣೆಯಲ್ಲದೆ; ಆರೋಗ್ಯ ನಿರ್ವಹಣೆಗೂ ಸಹಾಯವಾಗುತ್ತದೆ.
  • ಇದನ್ನು ಒಂದು ವರ್ಷದವರೆಗೂ ಉಪಯೋಗಿಸಬಹುದು. ಅನಂತರ ಇದರ ಸತ್ವ ಕಡಿಮೆ ಆಗುತ್ತದೆ. ತಾಜಾ ಅಮೃತಬಳ್ಳಿಯಿಂದ ವಿಶೇಷವಾಗಿ ತಯಾರಿಸಿದ ಅಮೃತಸತ್ವ ಅಥವಾ ಗುಡೂಚಿಸತ್ವ ಅನೇಕ ರೋಗಗಳಿಗೆ ಉಪಯೋಗವಾಗುವ ಒಂದು ಅಮೂಲ್ಯ ಔಷಧ.
    ಅಮೃತಬಳ್ಳಿ ಬಾಯಿಗೆ ಕಹಿಯಾದರೂ ಉದರಕ್ಕೆ ಸಿಹಿ. ಇದರ ಸೇವನೆಯಿಂದ ಆಯುóಯ, ಆರೋಗ್ಯ ವೃದ್ಧಿಯಾಗುತ್ತದೆ.
  • ಪ್ರತಿನಿತ್ಯ ಎರಡು ಚಮಚ ಅಮೃತ ಬಳ್ಳೀಯ ರಸಕ್ಕೆ ಒಂದು ಅಥವಾ ಎರಡು ಚಮಚ ಜೇನುತುಪ್ಪವನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಮೂರು ತಿಂಗಳು ಸೇವಿಸುತ್ತಾ ಬಂದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
  • ರಕ್ತದೊತ್ತಡ, ಬೊಜ್ಜು, ಅಜೀರ್ಣ, ಅಗ್ನಿಮಾಂದ್ಯಗಳು ದೂರವಾಗುತ್ತವೆ. ತಾಜಾ ಅಮೃತಬಳ್ಳಿಯ ರಸ ದೊರಕದಿದ್ದಾಗ ಒಣಗಿದ ಅಮೃಥ ಬಳ್ಳಿಯ ಕಷಾಯವನ್ನು ಸೇವಿಸಬಹುದು.
  • ಅಮೃತಬಳ್ಳಿ ಆಡುಸೋಗೆ ಎಲೆ ಹಾಗೂ ಸೋಗದಬೇರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ತಯಾರಿಸಿದ ಕಷಾಯ ವಿಷಮ ಶೀತಜ್ವರ, ಮಲೇರಿಯಾ ಜ್ವರಗಳಿಗೆ ಉತ್ತಮ ಔಷಧ.
  • 15-30 ಮಿ.ಲೀಟರ್ ಕಷಾಯಕ್ಕೆ 1-2 ಚಮಚ ಜೇನು ಸೇರಿಸಿ ದಿನಗಳಲ್ಲಿ 3-4 ಬಾರಿ ಕೊಡಬಹುದು. ಶೀತ ಮತ್ತು ಕಫ, ಜ್ವರದಲ್ಲಿ ಅಮೃತಬಳ್ಳಿ, ತುಳಸಿ ಮತ್ತು ಆಡುಸೋಗೆ ಎಲೆಗಳಿಂದ ತಯಾರಿಸಿದ ಕಷಾಯ ಶ್ರೇಷ್ಠ ಔಷಧ.