ಬರಹ: ವಿನಾಯಕ ಬ್ರಹ್ಮೂರು

ಹನುಮಂತ ಅಜರಾಮಾರ ಎಂದು ಎಲ್ಲರಿಗೂ ತಿಳಿದ ವಿಷಯ. ಅಲ್ಲದೇ ಹನುಮಂತ ಜೀವಂತವಾಗಿದ್ದಾನೆ ಎಂಬುವುದಕ್ಕೆ ಅನೇಕ ಪಾದದ ಕುರುಹುಗಳು ಸಿಕ್ಕಿವೆ. ದೇವರು ಕಣ್ಣಿಗೆ ಕಾಣಿಸುವುದಿಲ್ಲ, ಅವೆಲ್ಲಾ ಅವರವರ ನಂಬಿಕೆಗೆ ಬಿಟ್ಟಿದ್ದು ಅಂತೇಳುವ ಮಂದಿಯೂ ಕೂಡ ಅಚ್ಚರಿ ಪಡಲೇಬೇಕಾದ ಸಂಗತಿ ಇದು.

ತೇತ್ರಾಯುಗದಲ್ಲಿ ರಾಮನ ಅವತಾರ ಮುಗಿಯುವ ಸಂದರ್ಭದಲ್ಲಿ ಕೇಸರಿ ತನಯ ರಾಮಬಂಟನಾದ ಹನುಮಂತನಿಗೆ ವಿಶೇಷ ವರವೊಂದನ್ನು ಕರುಣಿಸುತ್ತಾನಂತೆ. ಅದೇನೆಂದರೆ ರಾಮಯಾಣ ಮಹಾಗ್ರಂಥದ ಕಥೆ ಜನರ ಬಾಯಿಯಲ್ಲಿ ಎಷ್ಟು ಸಮಯ ಭೂಮಿಯಲ್ಲಿ ಉಳಿದುಕೊಳ್ಳುತ್ತೋ ಅಷ್ಟು ಸಮಯ ಹನುಮಂತನಿಗೆ ಜೀರಂಜೀವಿಯ ವರವನ್ನು ಕರುಣಿಸಿದ ಎಂದು ಪುರಾಣದ ಕಥೆಗಳು ಹೇಳುತ್ತೆ. ಪುರಾಣವನ್ನು ಕೆದಕುತ್ತಾ ಹೋದರೆ ದ್ವಾಪರಯುಗದಲ್ಲಿ ನಡೆದ ಮಹಾಭಾರತದ ಕಥೆಯಲ್ಲಿ ಹನುಮಂತನ ಪಾತ್ರವನ್ನು ಕೂಡ ನಾವು ಕೇಳಿದ್ದೇವೆ ಅಲ್ವೇ?. ಪುರಾಣದ ಕಥೆಗಳು ಒಂದು ಕಡೆಯಾದರೆ ಆಧುನಿಕ ಕಂಪ್ಯೂಟರ್ ಯುಗದಲ್ಲಿ ಹನುಮನ ಭಕ್ತರ ಸಾಲಿಗೇನು ಕೊರತೆಯಿಲ್ಲ. ಹೌದು.. ಕಳೆದ ೨೦೧೧ರ ವಿಶ್ವಕಪ್‌ನ್ನು ಜಯಿಸಿದ ನಂತರ ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ಒಂದು ಮಹಾಸತ್ಯ ಬಿಚ್ಚಿಟ್ಟಿದ್ದರು. ಅದೇನೆಂದರೆ ತಾನು ಹನುಮಾನ್ ಚಾಲೀಸ್‌ನ್ನು ಪ್ರತಿನಿತ್ಯ ಬೆಳಗ್ಗೆ ಕೇಳುತ್ತೇನೆಂದು, ಅಲ್ಲದೇ ತನ್ನಲ್ಲಿರುವ ಅಧ್ಯಾತ್ಮದ ಬಗೆಗಿರುವ ಒಲವನ್ನು ತೋಡಿಕೊಂಡಿದ್ದಾರೆ. ಇದು ನಮ್ಮ ದೇಶದ ಸೆಲೆಬ್ರಿಟಿಯ ಕಥೆಯಾದರೆ ಇನ್ನು ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತನ್ನ ಜೇಬಿನಲ್ಲಿ ಕಿರು ಹನುಮಂತನ ಪ್ರತಿಮೆಯನ್ನು ಇಟ್ಟುಕೊಂಡು ಒಡಾಡುತ್ತಾರೆ, ಇದು ಒಬಾಮ ಹನುಮಂತನಲ್ಲಿ ಇಟ್ಟಿರುವ ಅಪಾರವಾದ ನಂಬಿಕೆ ಎಂದರೆ ಇದನ್ನು ನೀವು ನಂಬಲೇಬೇಕಾಗಿರುವ ಸತ್ಯ ಸಂಗತಿ. ಹಿಂದೂ ಪುರಾಣದ ಪ್ರಕಾರ ಜನ್ಮ ಮತ್ತು ಪುನರ‍್ಜನ್ಮದ ಬಗ್ಗೆ ಅಪಾರವಾದ ನಂಬಿಕೆಯನ್ನು ಹೊಂದಿದ್ದಾರಲ್ಲದೇ ಒಬ್ಬ ಮನುಷ್ಯ ಮರಣಹೊಂದಿದ ನಂತರ ಅವನ ಆತ್ಮಕ್ಕೆ ಸಾವಿಲ್ಲ, ಅದು ಮರುಹುಟ್ಟು ಪಡೆಯುತ್ತೇ ಅನ್ನೋದೇ ನಂಬಿಕೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಆತ್ಮಕ್ಕೆ ಸಾವಿಲ್ಲ ಅದು ಮರುಹುಟ್ಟು ಪಡೆಯುತ್ತೆ ಎಂಬುವುದರ ಬಗ್ಗೆ ಬಹಳ ಚೆನ್ನಾಗಿ ಹೇಳುತ್ತಾ ಹೋಗುತ್ತಾನೆ. ಆದರೆ ಈ ಜನ್ಮ ಜನ್ಮಾಂತರದ ಕಥೆಗಳನ್ನು ಈಗಿನ ಪ್ರಸ್ತುತ ಸಮಾಜ ನಂಬುತ್ತೋ ಇಲ್ವೋ ಗೊತ್ತಿಲ್ಲಾ.. ಆದರೆ ಇಲ್ಲಿ ಹನುಮಂತನ ಬಗ್ಗೆ ಕುತೂಹಲಕಾರಿಯಾದ ಸಂಗತಿ ಕೇಳಿದರೆ ಅಚ್ಚರಿಯಾಗುತ್ತದೆ.

ರಾಮಾಯಣದಲ್ಲಿ ರಾಮನ ಬಂಟನಾಗಿ ಲಂಕೆಯನ್ನು ಸುಟ್ಟು ಸೀತಾ ಮಾತೆಯನ್ನು ಕರೆತಂದ ಹನುಮಂತ ಅಜರಾಮಾರ ಎಂದು ಎಲ್ಲರಿಗೂ ತಿಳಿದ ವಿಷಯ. ಅಲ್ಲದೇ ಹನುಮಂತ ಜೀವಂತವಾಗಿದ್ದಾನೆ ಎಂಬುವುದಕ್ಕೆ ಅನೇಕ ಪಾದದ ಕುರುಹುಗಳು ಸಿಕ್ಕಿ, ಅದನ್ನು ನಾವು ಇಂದಿಗೂ ಪೂಜಿಸುತ್ತಿದ್ದೇವೆ ಕೂಡ. ತೇತ್ರಾಯುಗದಲ್ಲಿ ನಡೆದ ರಾಮಯಾಣದ ಹನುಮಂತ ದ್ವಾಪರಯುಗದಲ್ಲಿ ನಡೆದ ಮಹಾಭಾರತದಲ್ಲಿ ಇದ್ದನಲ್ಲದೇ, ಕಲಿಯುಗದಲ್ಲೂ ಇದ್ದಾನೆ ಎಂದರೆ ಹೇಗೆ ಸಾಧ್ಯ ಎಂದು ಕೆಲವರ ಪ್ರಶ್ನೆ. ಯಾಕಂದರೆ ಒಂದು ಜೀವಿ ಭೂಮಿಯಲ್ಲಿ ಜನ್ಮತಾಳಿದ ನಂತರ ಸಾವು ನಿಶ್ಚಿತ. ಆದರೆ ಈ ಮೂರು ಯುಗದಲ್ಲಿ ಅಂಜನಾದೇವಿ ಪುತ್ರ ಅಂಜನೇಯ ಇನ್ನೂ ಈ ಭೂಮಿಯಲ್ಲಿ ಕಾಣಸಿಗುತ್ತಾರೆ ಎಂದರೆ ದೈವೀ ಶಕ್ತಿಯನ್ನು ಹಿಮ್ಮೆಟ್ಟಿ ನಿಲ್ಲಲು ಯಾರಿಂದ ಸಾಧ್ಯ ಹೇಳಿ.. ಇದಕ್ಕೆ ಸಾಕ್ಷಿಯಾಗಿ ಕೆಲ ಸಾಧು ಸಂತರರಿಗೆ ಕಲಿಯುಗದಲ್ಲಿ ಮಹಾಕಾಯನಾದ ಭಜರಂಗಬಲಿ ಕಾಣಿಸಿಕೊಂಡಿದ್ದಾರೆ. ಶ್ರೀ ಮಧ್ವಚಾರ್ಯರು ತನ್ನ ೧೩ನೇ ಶತಮಾನದಲ್ಲಿ ಹನುಮಾನದಲ್ಲಿ ಭೇಟಿಕೊಟ್ಟಿರುವ ಬಗ್ಗೆ ಹೇಳಿಕೊಂಡಿದ್ದಾರೆ. ತದನಂತರದಲ್ಲಿ ತುಳಸಿದಾಸರು ೧೬೦೦ರ ಆರಂಭದಲ್ಲಿ ಭೇಟಿಯಾಗಿದ್ದಲ್ಲದೇ ಅಂಜನೇಯನಿಂದ ಪ್ರೇರಿತಗೊಂಡು ಹಿಂದಿ ರಾಮಾಯಣವನ್ನು ಬರೆದಿದ್ದು, ಅವಧಿ ಭಾಷೆಯಲ್ಲಿ ಹನುಮಾನ್ ಚಾಲೀಸ್ ಅನ್ನು ಬರೆದು ಹನುಮಂತನ ಶಕ್ತಿ ಸಾಮಥ್ರ್ಯವನ್ನು ಕೊಂಡಾಡಿದ್ದಾರೆ ಕೂಡ. ಅಲ್ಲದೇ ರಾಮದಾಸ್ ಸ್ವಾಮಿ, ರಾಘವೇಂದ್ರ ಸ್ವಾಮಿ ಮತ್ತು ಸ್ವಾಮಿ ರಾಮ್‌ದಾಸ್ ಶ್ರೀ ಅಂಜನೇಯನ್ನು ಭೇಟಿ ಮಾಡಿ ದರ್ಶನ ಭಾಗ್ಯ ಪಡೆದಿದ್ದಾರೆ ಎಂದು ನಾವು ಕೇಳಿದ್ದೇವೆ. ಹಾಗಿದ್ದರೆ ಅಂಧಕಾರವನ್ನು ಹೊಗಲಾಡಿಸಿ ಸತ್ಯದೆಡೆಗೆ ಕೊಂಡೊಯ್ಯುವ ದೇವರ ದೇವ ಭಜರಂಗಬಲಿ ಪ್ರಸ್ತುತ ಎಲ್ಲಿದ್ದಾರೆ ಎಂಬುವುದು ಗೊತ್ತೇ..? ಹನುಮಂತ ಭಾರತದ ತಮಿಳುನಾಡಿನ ಗಂಡ್‌ಮದನ ಪರ್ವತದಲ್ಲಿ ವಾಸ್ತವ್ಯ ಹೊಂದಿದ್ದಾನೆ ಎಂಬುವುದು ಕೆಲವರ ಅಭಿಪ್ರಾಯ. ಇನ್ನೂ ಕೆಲವರ ಪ್ರಕಾರ ಚಿರಂಜೀವಿಯಾಗಿರುವ ಹನುಮಂತ ಹಿಮಾಲಯದ ತಪ್ಪಲಿನಲ್ಲಿ ವಾಸಿಸುತ್ತಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಹಾಗಾಗಿ ಅಗೋಚರವಾಗಿ ಹನುಮಂತ ತನ್ನ ಭಕ್ತರನ್ನು ಸಲಹುತ್ತಾನೆ ಎಂಬುವುದು ಭಕ್ತರ ನಂಬಿಕೆ. ಅಗೋಚರ ರೀತಿಯಲ್ಲಿ ಭಕ್ತರನ್ನು ಸಲಹುತ್ತಾನೆ ಎಂದರೆ ನಂಬಬಹುದು ಆದರೆ ಯಾವಾಗ ತನ್ನ ಭಕ್ತರಿಗೆ ನಿಜರೂಪದಲ್ಲಿ ಬಂದು ದರ್ಶನಕೊಡುತ್ತಾನೆ ಎಂದರೆ ಒಂದು ಕ್ಷಣ ದಂಗಾಗುವುದಂತೂ ಖಚಿತ. ಹೌದು ಇದೆಲ್ಲಾ ಸಾಧ್ಯವಾಗುವುದು ಕೇವಲ ಒಂದು ಮಂತ್ರದಿಂದ. ಆ ಒಂದು ಮಂತ್ರದ ಪಠನೆಯಿಂದ ಪ್ರತ್ಯಕ್ಷ ರೂಪದಲ್ಲಿ ಕಾಣಸಿಗುತ್ತಾನಂತೆ ಅಂಜನೇಯ. “ಕಾಲತಂತು ಕರೇಚರಂತಿ ಏನರ್ ಮರಿಷ್ಣು, ರ್ನಿಮುಕ್ತೇರ್ ಕಾಲೇತ್ವಾಂ ಅಮರಿಷ್ಣು” ಇದನ್ನು ಆತ್ಮನ್‌ಜ್ಞಾನ ಎಂದು ಕರೆಯಲಾಗುತ್ತದೆ. ಈ ಮಂತ್ರದಲ್ಲಿ ಕೆಲವು ಷರತ್ತುಗಳು ಕೂಡ ಇವೆ, ಆ ಷರತ್ತನ್ನು ಪಾಲಿಸಿದರೆ ಹನುಮಂತನ ದರ್ಶನವಾಗುತ್ತಂತೆ. ಈ ಮಂತ್ರ ಪಠಿಸುವಾಗ ದೇವರೊಂದಿಗೆ ಆತ್ಮ ಸಂಬಂಧವನ್ನು ಹೊಂದಿರಬೇಕು. ಮಂತ್ರವನ್ನು ಪಠಿಸುವ ವ್ಯಕ್ತಿ ಮಂತ್ರಿಸುವ ಜಾಗದಿಂದ ೯೮೦ ಮೀಟರ್ ಒಳಗೆ ಇದ್ದು ದೇವರನ್ನು ಸಂಪರ್ಕಿಸಲು ಸಾಧ್ಯವಾಗದೇ ಇದ್ದರೇ ಮೊದಲನೇಯ ಷರತ್ತನ್ನು ಪಾಲಿಸಬೇಕು ಎಂಬುವುದು ಇದರಲ್ಲಿರುವ ಷರತ್ತು. ಈ ರಹಸ್ಯವಾದ ಮಂತ್ರವನ್ನು ದೇವರ ದೇವನೆಂದೆನಿಸಿದ ಹನುಮಂತ ಶ್ರೀಲಂಕಾದ ಪಿದುರ ಪರ್ವತದಲ್ಲಿ ವಾಸಿಸುವ ಆದಿವಾಸಿಗಳಿಗೆ ಉಪದೇಶಿಸಿದ ಎಂದು ಹೇಳಲಾಗುತ್ತಿದೆ. ಯಾವಾಗ ರಾಮನ ಅವತಾರದ ಅವಧಿ ಮುಗಿದಾಗ ಹನುಮಂತ ಅಯೋಧ್ಯಕ್ಕೆ ಮರಳಿದನಂತರ ಒಂದು ದಟ್ಟ ಕಾಡಿನಲ್ಲಿ ವಾಸಿಸಲು ಶುರುಮಾಡಿದನಂತೆ. ಆ ಸಂದರ್ಭದಲ್ಲಿ ವಿಭೀಷಣ ಆಳ್ವಿಕೆಯಲ್ಲಿದ್ದ ಲಂಕಾಕ್ಕೆ ಭೇಟಿ ನೀಡಿದ ಹನುಮಂತನಿಗೆ ಅಲ್ಲಿನ ವಾಸಿಗಳು ಆರೈಕೆ ಮಾಡುತ್ತಿದ್ದರೆಂದು ಹೇಳಲಾಗುತ್ತೆ. ಈ ಪ್ರಕಾರ ಆತ್ಮನ್‌ಜ್ಞಾನ ಮಂತ್ರವನ್ನು ಅಲ್ಲಿನ ವಾಸಿಗಳಿಗೆ ಉಪದೇಶಿಸಿದ ಹೇಳಿದ ಹನುಮಂತ, “ನಾನು ನಿಮ್ಮ ಸೇವೆ ಮತ್ತು ಭಕ್ತಿಗೆ ಸಂತುಷ್ಟನಾಗಿದ್ದೇನೆ. ನಿಮಗೆ ಯಾವಾಗ ನನ್ನನ್ನು ನೋಡಬೇಕು ಎಂದು ಅನಿಸುತ್ತದೆಯೋ  ಈ ಮಂತ್ರವನ್ನು ಪಠಿಸಿ ಆಗ ಶರವೇಗದಲ್ಲಿ ಬಂದು ನಿಮ್ಮನ್ನು ಭೇಟಿಯಾಗುತ್ತೇನೆ” ಎಂದು ಹೇಳಿದ. ಆಗ ಇದಕ್ಕೆ ಪ್ರತ್ಯುತ್ತರವಾಗಿ ಈ ಮಂತ್ರವನ್ನು ನಮಗೆ ರಹಸ್ಯದಿಂದ ಕಾಪಾಡುತ್ತೇವೆ ಆದರೆ ಇದನ್ನು ಬೇರೆಯವರು ದುರುಪಯೋಗ ಪಡಿಸಿಕೊಂಡರೆ ಏನು ಮಾಡುವುದು ಎಂದು ಅಲ್ಲಿನ ಆದಿವಾಸಿಯ ನಾಯಕನೊಬ್ಬರು ಕೇಳಿದಾಗ ಇದಕ್ಕೆ ಉತ್ತರ ನೀಡಿದ ಅಂಜನೇಯ “ಇದಕ್ಕೆ ಭಯಭೀತರಾಗುವುದು ಬೇಡ, ಈ ಮಂತ್ರವನ್ನು ಮಂತ್ರ ಪಠಿಸುವಾಗ ನನ್ನೊಂದಿಗೆ ಆತ್ಮ ಸಂಬಂಧವನ್ನು ಹೊಂದಿದ್ದರೆ ಮಾತ್ರ ನನ್ನನ್ನು ತಲುಪಲು ಸಾಧ್ಯ” ಎಂದು ಹೇಳಿದ. ಅದಕ್ಕೆ  ಆದಿವಾಸಿ ನಾಯಕ, ದೇವನೇ, ನೀವು ನಮಗೆ ನೀಡಿರುವ ಈ ಆತ್ಮನ್‌ಜ್ಞಾನದಿಂದ ನಾವು ನಿಮ್ಮೊಂದಿಗೆ ಆತ್ಮಸಂಬಂಧದ ಸಂಪರ್ಕವನ್ನು ಹೊಂದಿದ್ದೇವೆ. ಹಾಗಾಗಿ ನಮಗೆ ನಮ್ಮ ಪೂರ್ವಜನ್ಮ ಮತ್ತು ನಾವು ಸತ್ತಾಗ ನಮ್ಮ ಆತ್ಮ ಎಲ್ಲಿ ಹೋಗುತ್ತೆ ಎಂದು ನಮಗೆ ತಿಳಿದಿದೆ. ಆದರೆ ನಮ್ಮ ಮುಂದಿನ ಮಕ್ಕಳಿಗೆ ಈ ಬಗ್ಗೆ ತಿಳಿದಿಲ್ಲ ಹಾಗಾಗಿ ಇದು ಅವರನ್ನು ತಲುಪಲು ಸಾಧ್ಯವಾಗುದಿಲ್ಲವೇ ಎಂದಾಗ ಉತ್ತರಿಸಿದ ಹನುಮಂತ, ನಾನು ನಿಮಗೆ ಮಾತೊಂದನ್ನು ನೀಡುತ್ತೇನೆ, ಅದೇನೆಂದರೆ ನಾನು ನಿಮ್ಮ ಜನಾಂಗದವರೊಂದಿಗೆ ಪ್ರತಿ ೪೧ ವರ್ಷಗಳಲ್ಲಿ ಬಂದು ನಿಲ್ಲುತ್ತೇನೆ ಹಾಗಾಗಿ ಈ ಆತ್ಮನ್‌ಜ್ಞಾನವನ್ನು ನಿಮ್ಮ ಮುಂದಿನ ಪೀಳಿಗೆಗೆ ನೀಡಿ ಎಂದಿದ್ದಾನೆ ಎಂಬುದು ಉಲ್ಲೇಖವಿದೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಈ ಪ್ರಕಾರ ಇದೀಗ ಈ ಜನಾಂಗದ ಆದಿವಾಸಿ ಜನರು ಶ್ರೀಲಂಕಾದ ಹಳ್ಳಿಗಾಡು ಪ್ರದೇಶದಲ್ಲಿ ನೆಲೆಸಿದ್ದಾರೆ. ಅಲ್ಲದೇ ಈ ಜನಾಂಗ ಆಧುನಿಕ ಜಗತ್ತಿನಿಂದ ಈಗಲೂ ದೂರ ಉಳಿದಿದೆ. ಆದರೆ ಇಲ್ಲಿನ ಜನತೆ ಹನುಮಂತನೊಂದಿಗೆ ಸಂಪರ್ಕ ಹೊಂದಿರುವುದಲ್ಲದೇ, ಇಲ್ಲಿ ನಡೆಯುವ ಅಸಾಮಾನ್ಯ ಚಟುವಟಿಕೆಗಳ ಬಗ್ಗೆ ಕಳೆದ ವರ್ಷ ಕೆಲ ಪರಿಶೋಧಕರು ಮಾಹಿತಿ ನೀಡುವರೆಗೂ ಈ ಒಂದು ವಿಷಯ ಯಾರಿಗೂ ಗೊತ್ತೇ ಇರಲಿಲ್ವಾ ಅನ್ನೋದೇ ಒಂದು ಪ್ರಶ್ನೆ.

RELATED ARTICLES  ಶಾಶ್ವತ ಸುಖ

ಈ ಅಸಾಮಾನ್ಯ ಚಟುವಟಿಕೆಗಳಲ್ಲಿ ‘ಚರಣ್ ಪೂಜಾ’ ಎನ್ನುವ ಆಚರಣೆ ಪ್ರತಿ ೪೧ ವರ್ಷಗಳಿಗೊಮ್ಮೆ ನಡೆಯುತ್ತಿದ್ದು, ಅಲ್ಲಿಗೆ ಶ್ರೀ ಹನುಮಾನ್ ಬಂದು ಭೇಟಿ ನೀಡುತ್ತಿರುವುದು ಯಾರಿಗೂ ತಿಳಿದಿರದ ವಿಚಾರ. ಪರಿಶೋಧಕರ ಪ್ರಕಾರ ಹನುಮಂತ ಕಳೆದ ೨೦೧೪ರ ಮೇ ೨೭ರಂದು ಈ ಒಂದು ಜನಾಂಗದ ಪ್ರದೇಶಕ್ಕೆ ಭೇಟಿ ನೀಡಿದ್ದಾರೂ ಕೂಡ ಆ ಸಂದರ್ಭದಲ್ಲಿ ಅಲ್ಲಿನ ಜನಾಂಗಕ್ಕೆ ಮಾತ್ರ ಹನುಮಂತನ ದರ್ಶನವಾಗುತ್ತೆ,  ಅದನ್ನು ಬಿಟ್ಟರೆ ಯಾರಿಗೂ ಅಂಜನೇಯ ಕಾಣಸಿಗೊದಿಲ್ಲ. ಇನ್ನು ೪೧ ವರ್ಷಗಳ ಲೆಕ್ಕದ ಪ್ರಕಾರ ಹನುಮಂತನ ದರ್ಶನವಾಗಬೇಕಾದರೆ ಮುಂದಿನ ೨೦೫೫ರವರೆಗೆ ಕಾಯಲೇಬೇಕು. ಆಗ ಈ ಆತ್ಮನ್‌ಜ್ಞಾನದ ಪಠಣೆಯಿಂದ ಹನುಮಂತನ ದರ್ಶನವನ್ನು ಪಡೆಯುತ್ತಾರೆ ಇಲ್ಲಿನ ಆದಿವಾಸಿಗಳು.

ಹನುಮಂತ ಭೇಟಿ ನೀಡಿದ ಸಂದರ್ಭದಲ್ಲಿ ಏನು ಹೇಳುತ್ತಾರೋ ಅದನ್ನು ಒಂದು ಲೋಗ್‌ಬುಕ್‌ನಲ್ಲಿ ಬರೆಯಬೇಕು ಎಂದು ಜನಾಂಗದ ನಾಯಕ ಹೇಳಿದ್ದರಿಂದ ಆ ನಿಯಮ ಇಂದಿಗೂ ನಡೆಯುತ್ತಿದೆ. ೨೦೧೪ರಲ್ಲಿ ಬಂದು ದರ್ಶನ ನೀಡಿದ ಹನುಮಂತನ ಬಗ್ಗೆ ಈ ಪುಸ್ತಕದಲ್ಲಿ ವಿವರವಾಗಿ ಬರೆಯಲಾಗಿದೆ. ಈ ಒಂದು ಲೋಗ್‌ಬುಕ್‌ನ್ನು ಸೇತು ಏಷಿಯಾ ಎನ್ನುವ ಆಧ್ಯಾತ್ಮ ಸಂಸ್ಥೆಯು ಸ್ವಾಧೀನಪಡಿಸಿಕೊಂಡಿದ್ದಾರೆ. ಇದನ್ನು ಸೇತು ಮಾಸ್ಟರ್ ಎನ್ನುವವರು ಈ ಲೋಗ್‌ಬುಕ್‌ನ್ನು ಓದಿ ಈವರೆಗೆ ಕಳೆದ ೬ ತಿಂಗಳಿಂದ ೩ ಅಧ್ಯಾಯಗಳನ್ನು ಬರೆದು ಮುಗಿಸಿದ್ದರಲ್ಲದೇ, ಉಳಿದ ಅಧ್ಯಾಯವನ್ನು ಪಿದುರದಲ್ಲಿ ಇರುವ ತಮ್ಮ ಆಶ್ರಮದಲ್ಲಿ ಬರೆಯುತ್ತಿದ್ದಾರೆ.

ಅದೇಷ್ಟೊ ಭಕ್ತರು ಆಧ್ಯಾತ್ಮ ಕ್ಷೇತ್ರದಲ್ಲಿ ತಮ್ಮದೇ ಆದ ನಿಲುವನ್ನು ಹೊಂದಿದ್ದು, ಅದರಲ್ಲಿ ಪರಿಪೂರ್ಣತೆಯನ್ನು ಕಾಣಬೇಕೆಂದು ಸತತ ಪ್ರಯತ್ನಗಳೂ ನಡೆಯುತ್ತಲೇ ಇರುತ್ತೆ. ಇದೆಲ್ಲಾ ಹಿಂದಿನ ಕಾಲಕ್ಕೆ ಮಾತ್ರ ಸೂಕ್ತ, ಆದರೆ ಅದು ಕಲಿಯುಗದಲ್ಲಿ ನಡೆಯಲು ಸಾಧ್ಯವಿಲ್ಲ ಎಂದುಕೊಂಡವರಿಗೆ ಈ ಒಂದು ವಿಷಯದಿಂದ ದೇವರನ್ನು ನಮ್ಮಲಿಗೆ ಕರೆ ತರಲು ಸಾಧ್ಯ ಎಂದು ತಿಳಿಯುತ್ತೆ. ಅಗೋಚರ ಶಕ್ತಿಗಳು ಸಮಯದ ತಂತಿಗಳ ಹಿಂದೆ ಇರುವ ದೇವರ ಅಭೂತಪೂರ್ವ ಶಕ್ತಿಯನ್ನು ತಿಳಿಯದೇ ದೇವರೇ ಇಲ್ಲ ಎಂದು ಮೊಂಡು ವಾದವನ್ನು ಮಾಡಲು ಹೇಗೆ ಸಾಧ್ಯ ಹೇಳಿ. ಆಧ್ಯಾತ್ಮದ ಶಕ್ತಿಯನ್ನು ಒಂದು ಸಲ ತಿಳಿದುಕೊಂಡರೇ ದೇವರ ಸಾಕ್ಷತ್ಕಾರವನ್ನು ಪಡೆಯಲು ಸಾಧ್ಯ ಎನ್ನುವುದಕ್ಕೇ ಇದೇ ಸಾಕ್ಷಿ.

ಭಕ್ತರ ಕಾಯುವ ಆಂಜನೆಯ ಇನ್ನೂ ಬದುಕಿದ್ದಾನೆ, ೪ ವರ್ಷಗಳ ಹಿಂದೆ ಕಣ್ಣಿಗೆ ಕಂಡಿದ್ದ ಅನ್ನೋದು ಹಲವರ ಅಭಿಪ್ರಾಯ. ೪೧ ವರ್ಷಕ್ಕೊಮ್ಮೆ ಜನರ ಕಣ್ಣಿಗೆ ಕಾಣ್ತಾನೆ ೨೦೫೫ರಲ್ಲಿ ಮತ್ತೊಮ್ಮೆ ಹನುಮನನ್ನ ನೋಡ್ತೀವಿ ಅನ್ನೋದು ಜನ್ರ ನಂಬಿಕೆ. ಆದ್ರೆ ಇದು ನಂಬಲಸಾಧ್ಯವಾದರೂ ತಳ್ಳಿ ಹಾಕುವಂತದ್ದೂ ಅಲ್ಲ. ಅದೇನೇ ಇರಲಿ ಪುರಾಣಗಳು, ಐತಿಹಾಸಿಕ ಕುರುಹುಗಳನ್ನು ಗಣನೆಗೆ ತೆಗೆದುಕೊಂಡ್ರೆ ನಂಬಿದರೆ ನಿಜ ಎಂಬುದಷ್ಟೇ ನಿರ್ಣಾಯಕವಾಗುತ್ತೆ.