(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)

ಕೋ ಅದಾ್ಧ ವೇದ ಕ ಇಹ ಪ್ರವೋಚತ್
ಕುತ ಅಜಾತಾ ಕುತ ಇಯಂ ವಿಸೃಷ್ಟಿಃ
ಅರ್ವಾಗ ದೇವಾ ಅಸ್ಯ ವಿಸರ್ಜನೇನಾಥಾ
ಕೋ ವೇದ ಯತ ಆ ಬಭೂವ
‘ಸೃಷ್ಟಿಯು ಹೇಗೆ ಆಯಿತು? ಇದಕ್ಕೆ ಯಾವುದು ನಿಮಿತ್ತವು? ಯಾವುದರಿಂದ ಇದು ಆಯಿತು?’ ಎಂಬುದನ್ನು ನಿಶ್ಚಯವಾಗಿಯೂ ಯಾವಾತನು ತಾನೇ ತಿಳಿಯುವನು? ಇದು ಹೀಗೇ ಎಂಬುದಾಗಿ ಯಾವಾತನು ತಾನೇ ಸಾರುವನು? ದೇವತೆಗಳೂ ಸಹ ಸೃಷ್ಟಿಯ ನಿರ್ಮಾಣದ ಅನಂತರವೇ ಹುಟ್ಟಿದವರು ಎಂದಾದ ಮೇಲೆ ಈ ಸೃಷ್ಟಿಯು ‘ಎಲ್ಲಿಂದ ಹೇಗೆ ಆಯಿತು?’ ಎಂಬುದನ್ನು ಯಾವಾತನು ತಾನೇ ಗುರುತಿಸುವನು? ಯಾರಿಗೆ ಇದು ಸಾಧ್ಯ?

RELATED ARTICLES  ಜಿಗಿಯುವ ಮುನ್ನ ಜಾಗರೂಕತೆ ಇರಬೇಕು ಎಂದರು ಶ್ರೀಧರರು.


ಇಯಂ ವಿಸೃಷ್ಟಿರ್ಯತ ಆ ಬಭೂವ ಯದಿ ವಾ ದಧೆ ಯದಿ ವಾ ನ
ಯೋ ಅಸ್ಯಾಧ್ಯಕ್ಷಃ ಪರಮೇ ವ್ಯೋಮನ್ ತ್ಸೋಅಂಗ ಯದಿ ವಾ ನ ವೇದ
‘ಈ ಸೃಷ್ಟಿಯು ಎಲ್ಲಿಂದ ಆಯಿತು? ಇದು ನಿಜವಾಗಿ ಆಗಿದ್ದು ಸತ್ಯವೋ ಅಥವಾ ಆದದೇ್ದ ಅಸತ್ಯವೋ?’ ಎಂಬುದನ್ನು ಬ್ರಹ್ಮ- ಯಾವಾತ ಬಾಹ್ಯಾಕಾಶವನ್ನೂ ಮೀರಿರುವನೋ, ಯಾವನು ತನ್ನ ಮನಸ್ಸಿನಿಂದಲೇ ಈ ಸೃಷ್ಟಿಯನ್ನುಂಟುಮಾಡುವನೋ- ಆತನಿಗೂ ಸಂಪೂರ್ಣವಾಗಿ ಗೊತ್ತಿದೆಯೋ ಇಲ್ಲವೋ? ಏಕೆಂದರೆ, ಬಹ್ಮದೇವನಿಗೂ ಸೃಷ್ಟಿನಿರ್ಮಾಣಕ್ಕಾಗಿ ಆವಶ್ಯಕ ಜ್ಞಾನ – ವೇದ – ಪರಮಾತ್ಮನಿಂದಲೇ ಪ್ರಾಪ್ತವಾಯಿತೆಂದು ತೋರಿಬರುವದು.

RELATED ARTICLES  ಬಿಜೆಪಿ ಒಳಜಗಳ, ಶಾರದಾ ನಿರಾಳ


‘ಯಸ್ಸರ್ವಜ್ಞಃ ಸರ್ವವಿತ್’ ಇತ್ಯಾದಿ ವಾಕ್ಯಗಳ ಆಧಾರದಿಂದ ಆ ಪರಮಾತ್ಮನಿಗೆ ಮಾತ್ರ ಇದೆಲ್ಲವೂ ಗೊತ್ತಿರುವದು ಸಹಜವಾಯಿತು! ಈ ಎಲ್ಲವನ್ನೂ ತಿಳಿಸುವವನೂ ಒಬ್ಬನೇ ಪರಮಾತ್ಮ! ಮತ್ತು ಅವನ ‘ವಾಕ್’ ರೂಪ- ‘ವೇದ’!