(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)

ಒಮ್ಮೆ ನಮ್ಮ ಸುತ್ತಲಿನ ಪ್ರಪಂಚದ ಕಡೆಗೆ ವಿಮರ್ಶಕ ದೃಷ್ಟಿಯನ್ನು ಬೀರಬೇಕು. ಆಗ ನಮಗೆ ಕಂಡುಬರುವದೇನು?
ಎತೆ್ತತ್ತಲೂ ಬಗೆಹರಿಯದ ಗೊಂದಲವೇ ಗೊಂದಲ! ಅನಂತ ಜೀವಿಜಾಲವೆಲ್ಲ ನಿರಂತರ ಕೆಲಸದಲ್ಲಿ ತೊಡಗಿದೆ; ಅವ್ಯಾಹತ ಹೋರಾಟದಲ್ಲಿ ಮಗ್ನವಾಗಿದೆ; ಕ್ಷಣ ಬಿಡದೆ, ಬಿಡುವು ಕಾಣದೆ, ಶ್ರಮವೆಣಿಸದೆ ಎಲ್ಲರೂ ಜೀವನ ಹೋರಾಟದಲ್ಲಿ ನಿರತರೇ.

RELATED ARTICLES  “ ದೇವರ ಇರುವಿಕೆಗೆ ಶ್ರುತಿ-ಸ್ಮ್ರತಿ ಆಧಾರ”( ಶ್ರೀಧರಾಮೃತ ವಚನಮಾಲೆ’).


ಯಾರಿಗೂ ಶಾಂತಿಯಿಲ್ಲ; ನಿಶ್ಚಿಂತೆಯಿಲ್ಲ; ನಿಲುಗಡೆಯಿಲ್ಲ; ಕೆಲಸವೇ ಕೆಲಸ. ಓಡಾಟವೇ ಓಡಾಟ; ನೂಕು ನುಗ್ಗಾಟವೇ ನುಗ್ಗಾಟ.
‘ನಿಮಗೆ ಅಲ್ಲ, ನಮಗೆ ಬೇಕು’ ಎಂಬ ಕೂಗಾಟ ಚೀರಾಟಗಳೂ ಜತೆಗೆ ಸೇರಿವೆ. ಇದೆಲ್ಲ ಏಕೆ? ಜಗದ ತುಂಬ ಜಂಜಾಟವು ನಡೆದುದೇಕೆ? ಈ ಜಂಜಾಟದ ಮರ್ಮವೇನು?


ಇದನ್ನೆಲ್ಲಾ ವಿಚಾರಮಾಡಿದರೆ ನಮಗೆ ಮುಖ್ಯವಾಗಿ ದೊರಕುವ ಉತ್ತರ ‘ಎಲ್ಲಾ ಜೀವಿಗಳೂ ಇದೆಲ್ಲಾ ಮಾಡುವದು ಜೀವನಕ್ಕಾಗಿಯೇ’ ಎಂದು!
ಮನುಷ್ಯರಲ್ಲಿ ನೋಡಿದರೂ ತಿರುಕರು ಭಿಕ್ಷೆ ಬೇಡುವದೂ ಜೀವನಕ್ಕಾಗಿ; ಕಳ್ಳರು ಕನ್ನಹಾಕುವದು, ರಾಜಕಾರಣಿಗಳ ಗತ್ತುಗಾರಿಕೆಯೂ ಜೀವನಕ್ಕಾಗಿ. ಪಕ್ಷ-ಪಂಗಡಗಳ ರಚನೆ, ಸಮಾಜ ನಿರ್ಮಾಣ ಸ್ಪರ್ಧೆ, ಹೋರಾಟವೂ ಜೀವನಕ್ಕಾಗಿಯೇ.

RELATED ARTICLES  ಯುದ್ದದ ಬಗ್ಗೆ ಆಗುತ್ತಿರುವುದೇನು?


ಆದರೆ ಈ ಜೀವನ ಏತಕ್ಕಾಗಿ? ಸುಮ್ಮನೆ ಕೆಲಕಾಲ ಉಂಡು ತಿಂದು ಮೆರೆದು ಮರೆಯಾಗುವದಕೋ್ಕ?