(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)

ಜೀವನವನ್ನು ದಿನ-ದಿನವೂ ಉಚ್ಚಮಟ್ಟಕ್ಕೆ ಏರಿಸುವದೇ ಮನುಷ್ಯಧರ್ಮ. ಇದೇ ಮಾನವ ಜೀವನದ ವೈಶಿಷ್ಟ್ಯ.
ಮಾನವ ತನ್ನನ್ನು ತಾನೇ ಈ ಉನ್ನತಮಾರ್ಗಕ್ಕಾಗಿ ಪಳಗಿಸಿಕೊಳ್ಳಬಲ್ಲ. ಪರಿಪೂರ್ಣತೆಗಾಗಿ, ಹುಟ್ಟಿನಿಂದ ಹಂಬಲಿಸಿದ ಅಖಂಡ ಸುಖಕ್ಕಾಗಿ ತನ್ನನು್ನ ತಾನೇ ಸಿದ್ಧಪಡಿಸಿಕೊಳ್ಳಬಲ್ಲ.
ಬರೇ ಆಹಾರಾದಿಗಳಲ್ಲೇ ತೊಡಗಿದ ಜೀವನವು ಪಶು-ಪಕ್ಷಿಗಳ ಜೀವನವಾಗಿರುವದು. ಈ ರೀತಿಯ ಜೀವನ ಪ್ರಾಣಿಗಳ ಲಕ್ಷಣ.
ಮನುಷ್ಯ ದೇಹದ ವೈಶಿಷ್ಟ್ಯ ಬರೇ ದೇಹ ಬದುಕಿರುವದಕ್ಕಾಗಲೀ ಅಥವಾ ಕೇವಲ ವ್ಯವಹಾರಿಕ ಜೀವನಕ್ಕಾಗಿಯಾಗಲೀ ಅಲ್ಲ; ಇದಕ್ಕಿಂತ ಹೆಚ್ಚಿನದನು್ನ ಸಾಧಿಸುವುದಕ್ಕಾಗಿಯೇ ಮನುಷ್ಯದೇಹವಿದೆ!
ಶಬ್ಧ, ಸ್ಪರ್ಶ, ರೂಪ, ರಸ, ಗಂಧಗಳೂ, ಆಹಾರ, ನಿದ್ರಾ, ಭಯ, ಮೈಥುನಾದಿಗಳೂ ಎಲ್ಲ ಕಡೆಗೂ ಇರುವ ಸಾಮಾನ್ಯ ಅನುಭವಗಳು. ಇವುಗಳ ವೈವಿಧ್ಯತೆ ಮತ್ತು ಸಂಗ್ರಹವೇ ಮನುಷ್ಯದೇಹದ ಪರಮಕರ್ತವ್ಯವೆಂದು ತಿಳಿಯಕೂಡದು. ‘ಇವೇ ನಮ್ಮ ಜೀವನದ ಧ್ಯೇಯ; ಜೀವನದಲ್ಲಿ ಸಾಧಿಸುವದು ಇದೇ’ ಎಂದು ಎಂದೂ ಭಾವಿಸಬಾರದು.
ದೇಹಸುಖಕ್ಕೆ ಅನುಕೂಲವಾದ ಉಪಕರಣಗಳನ್ನು ಹೆಚ್ಚಿಸುತ್ತಾ ಅವುಗಳ ಸಲುವಾಗಿಯೇ ಪರಿಶ್ರಮಪಡುತ್ತಾ ಆಯುಷ್ಯವನ್ನು ಕಳೆಯುವದು ಮನುಷ್ಯ ಜನ್ಮದ ಲಕ್ಷಣವೆನಿಸುವದಿಲ್ಲ. ಇಂದ್ರಿಯ ಸುಖ ಕ್ಕಿಕಂತಲೂ, ವಿಷಯ ಸುಖ ಕಿಂತಲೂ, ದೇಹಸುಖಕ್ಕಿಕಂತಲೂ ಪದಾರ್ಥಸುಖಕ್ಕಿಂಂತಲೂ ಹೆಚ್ಚಿನದನ್ನು ಸಾಧಿಸುವದೇ ಮನುಷ್ಯಜನ್ಮದ ಗುರಿಯಾಗಿದೆ. ಆ ಹೆಚ್ಚಿನ ಗುರಿಗಾಗಿಯೇ ಮನುಷ್ಯನು ಪ್ರಯತ್ನಮಾಡಬೇಕಾದದ್ದು ಮುಖ್ಯ!

RELATED ARTICLES  10 ತಿಂಗಳ ಗಂಡು ಮಗುವಿನ ಹೊಟ್ಟೆಯಿಂದ ಮೂರು ಭ್ರೂಣ : ಇದೊಂದು ವಿಶೇಷ ಘಟನೆ.