ನಿಂತು ಹೋಗುವ ಮಾತು ಕತೆಗಳು – 5

ಹಲವಾರು ಪ್ರಕರಣಗಳಲ್ಲಿ ಜವಾಬ್ದಾರಿ ತೆಗೆದುಕೊಂಡು ವ್ಯವಹಾರಗಳನ್ನು ನೋಡಿಕೊಂಡು ಹೋಗಲು ಹೇಳಿದರೂ ಆ ಮಾತನ್ನು ಕೇಳದೆ ಉಢಾಫೆ ಮಾಡಿಕೊಂಡು ನೀನಿದ್ದೀಯಲ್ಲಾ ನೋಡಿಕೊಂಡು ಹೋಗು ಆಮೇಲೆ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾ ಇದ್ದರೆ ಎಂತಹ ತಂದೆಗಾದರೂ ಕೋಪ ಬಂದು ಮಾತನಾಡುವುದನ್ನು ಕಡಿಮೆ ಮಾಡಬಹುದು.

RELATED ARTICLES  ಮಾನವೀಯತೆ

ಹೆತ್ತವರಿಗೂ ಮಕ್ಕಳಿಗೂ ಮಾತು ನಿಲ್ಲುವುದಕ್ಕೆ ಬಹುಮುಖ್ಯವಾದ ಕಾರಣ ವಿವಾಹದ ವಿಚಾರ. ಹೆತ್ತವರು ಹೆಣ್ಣು ಅಥವಾ ಗಂಡನ್ನು ಮದುವೆಗಾಗಿ ನೋಡುತ್ತಿದ್ದಾಗ ಮಕ್ಕಳು ಅದಕ್ಕೆ ಒಪ್ಪದೆ ತಾನೇ ನೋಡಿಕೊಂಡಿದ್ದೇನೆ ಎಂದಾಗ ಹೆತ್ತವರಿಗೆ ಸಹಜವಾಗಿ ಕೋಪ ಬರುತ್ತದೆ. ಹೆತ್ತವರ ಆಶಯಕ್ಕೆ ವಿರುದ್ಧವಾಗಿ ವಿವಾಹ ಮಾಡಿಕೊಂಡಾಗ ತಾನಾಗಿಯೇ ಹೆತ್ತವರಿಗೂ ಮಕ್ಕಳ ಮದ್ಯೆ ಮಾತು ನಿಂತು ಹೋಗಿ ಮಕ್ಕಳು ಮನಬಿಟ್ಟು ಹೋಗಬಹುದು.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ಎರಡನೇ ವಿಚಾರ ಆಸ್ತಿಗೆ ಸಂಬಂಧಪಟ್ಟಿರಬಹುದು. ಮಕ್ಕಳು ಆಸ್ತಿಯಲ್ಲಿ ಭಾಗ ಕೇಳಿದಾಗ ನೀಡದೆ ಮಕ್ಕಳು ಕೋರ್ಟ್ ಮುಖಾಂತರ ಭಾಗ ಪಡೆಯಲು ಮುಂದಾದಾಗ ಸಹಜವಾಗಿ ಮಾತು ನಿಲ್ಲಬಹುದು.

ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)