ನಿಂತು ಹೋಗುವ ಮಾತು ಕತೆಗಳು – 6

ತಂದೆ ಮಕ್ಕಳ ಮಾತು ಕತೆಗಳು ನಿಲ್ಲಲು ತಂದೆ ಬಗ್ಗೆ ಮೂಡುವ ಉದಾಸೀನತೆ ಈ ಒಂದು ವಿಚಾರವು ಬಹಳ ಅಪರೂಪ ಇರಬಹುದು ಎನಿಸುತ್ತದೆ.
ತಂದೆ ತಾಯಿಗೆ ವಯಸ್ಸಾಗಿದ್ದು
ಯಾವುದೇ ಸಂಪಾದನೆ ಇಲ್ಲದೆ ಮನೆಯಲ್ಲಿ ಇದ್ದರೆ ಮಗನು ಮಾತ್ರ ದುಡಿಯುತ್ತಿದ್ದರೆ ಮಗನ ಮನಸ್ಸಿನಲ್ಲಿ ಬರುವ ಸಂಬಳದಲ್ಲಿ ಹೆಂಡತಿ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳಬೇಕಾಗಿರುವ ಸನ್ನಿವೇಶದಲ್ಲಿ ತಂದೆ ತಾಯಿ ಬಗ್ಗೆ ಅಸಡ್ಡೆ ಮೂಡಿ ಇರುವವರೆಗೆ ನೋಡಿಕೊಳ್ಳೋಣ ಎಂಬ ಭಾವನೆ ಬರಬಹುದು. ಹೆತ್ತವರು ತಾವು ಗಟ್ಟಿಇದ್ದಾಗ ದುಡಿದು ಮಕ್ಕಳನ್ನು ಓದಿಸಿ ಕೆಲಸಕ್ಕೆ ಸೇರಿ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆಂದು ಆಸೆಯಿಂದ ಇದ್ದರೆ, ಮಕ್ಕಳಿಗೆ ಹೆತ್ತವರು ಕಷ್ಟಪಟ್ಟಿರುವುದನ್ನು ಮರೆತು ಬಿಟ್ಟು, ವಯಸ್ಸಾದ ಹೆತ್ತವರನ್ನು ನೋಡಿಕೊಳ್ಳಲು ಉದಾಸೀನ ಮಾಡಿ, ವೃದ್ಧಾಶ್ರಮಕ್ಕೆ ಸೇರಿಸೋಣವೆಂದರೆ ಬೇರೆಯವರು ಏನನ್ನುತ್ತಾರೋ ಎಂಬ ಅಳುಕಾಗಿ ಈ ಕಡೆ ಮನೆಯಲ್ಲಿ ನೋಡಿಕೊಳ್ಳಲಾಗದೆ ಆಕಡೆ ವೃದ್ಧಾಶ್ರಮಕ್ಕೆ ಸೇರಿಸಲು ಆಗದೆ ತೊಳಲಾಡಿ ವಿಧಿ ಇಲ್ಲದೆ ಮನೆಯಲ್ಲಿ ಇಟ್ಟುಕೊಂಡಿರಬಹುದು. ಆಗ ತಂದೆಯ ಬಳಿ ಮಾತನಾಡಲು ಏನೂ ಇಲ್ಲವೆಂದು ಮಾತು ಕಡಿಮೆಯಾಗಬಹುದು ತಂದೆಗೆ ಯಾವುದಾದರು ಖಾಯಿಲೆ ಬಂದು ಹಾಸಿಗೆ ಹಿಡಿದಾಗ ಮಾತನಾಡುವುದನ್ನು ಕಾಲಕ್ರಮೇಣ ನಿಲ್ಲಿಸಬಹುದು.
ಮನೆಯಲ್ಲಿ ತಂದೆ ತಾಯಿಯನ್ನು ನೋಡಿಕೊಳ್ಳಲು ಆಗದೆ ವಿಧಿ ಇಲ್ಲದೆ ವೃದ್ಧಾಶ್ರಮಕ್ಕೆ ಸೇರಿಸಿದಾಗ ಮಾತನಾಡುವ ಸಂದರ್ಭವೇ ಬರುವುದಿಲ್ಲ.

RELATED ARTICLES  ಪರಿಪೂರ್ಣ ವಿಕಾಸದೆಡಗೆ ಸಾಗಿಸಬಲ್ಲ ಶೃದ್ದಾ ಕೇಂದ್ರವೇ ಗುರು

ಮಕ್ಕಳು ಕೆಲಸಕ್ಕಾಗಿ ವಿದೇಶಕ್ಕೆ ಹೋದಾಗ ಸ್ವದೇಶದಲ್ಲಿರುವ ಹೆತ್ತವರನ್ನು ಮುಖತಃ ಮಾತನಾಡಿಸಲು ಆಗುವುದೇ ಇಲ್ಲ. ಈಗಿನ ಟೆಕ್ನಾಲಜಿ ಸಹಾಯದಿಂದ ಸಮಯವಿದ್ದಾಗ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿಸಬಹುದು. ಕೆಲವೊಮ್ಮೆ ಹೆತ್ತವರು ಸತ್ತಾಗ ಮಕ್ಕಳು ಬರಲು ಸಾಧ್ಯವಾಗದೆ ವಿಡಿಯೋ ಮೂಲಕ ತೋರಿಸಿ ಅಂತ್ಯಕ್ರಿಯೆ ಮಾಡಿರುವ ಪ್ರಸಂಗಗಳು ಇದೆ.
ಇದರಲ್ಲಿ ಯಾರನ್ನೂ ದೂರುವಂತಿಲ್ಲ. ಕಾರಣ ಜೀವನವನ್ನು ರೂಪಿಸಿಕೊಳ್ಳಲು ಕೆಲಸಕ್ಕಾಗಿ ವಿದೇಶಕ್ಕೆ ಹೋಗಬೇಕಾದ ಅನಿವಾರ್ಯತೆ ಇರಬಹುದು.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)