ನಿಂತು ಹೋಗುವ ಮಾತು ಕತೆಗಳು – 7
ಮಾತು ಕತೆಗಳು ನಿಂತು ಹೋಗಲು ಅಥವಾ ಕಡಿಮೆಯಾಗಲು ಇನ್ನೊಂದು ಕಾರಣವೇನೆಂದರೆ:
ಮಕ್ಕಳಿಗೆ ವಿವಾಹವಾದ ನಂತರ ಮನೆಗೆ ಬರುವ ಸೊಸೆಯು ಗಂಡನ ಹೆತ್ತವರನ್ನು ಸರಿಯಾಗಿ ವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದರೆ ಯಾವ ಮನಸ್ಥಾಪವೂ ಬರುವುದಿಲ್ಲ. ಅಕಸ್ಮಾತ್ ಏನಾದರೂ ಸ್ವಲ್ಪ ಭಿನ್ನಾಭಿಪ್ರಾಯ ಬಂದರೆ ಮಾತ್ರ ಕಡೇವರೆವಿಗೂ ಸರಿಹೋಗುವುದೇ ಇಲ್ಲ.
ಮಗನಿಗೆ ಸಂತೋಷದಿಂದ ವಿವಾಹವನ್ನು ಮಾಡಿ ಹೊಸದಾಗಿ ಸೊಸೆ ಮನೆಗೆ ಬಂದಾಗ ಇರುವ ವಿಶ್ವಾಸ ಒಂದೇ ರೀತಿಯಲ್ಲಿ ಇರುತ್ತದೆ ಎಂದು ಹೇಳಲು ಆಗುವುದಿಲ್ಲ. ಹೊಸದರಲ್ಲಿ ಬಹಳ ವಿಶ್ವಾಸದಿಂದ ಮಾತನಾಡುತ್ತಿದ್ದರು ಸಹ ಅಕಸ್ಮಾತ್ ಸೊಸೆಯಾದವಳು ಗಂಡನ ಮನೆಯ ಆಚಾರ ವಿಚಾರ ಮತ್ತು ಸಂಪ್ರದಾಯದ ವಿರುದ್ಧವಾಗಿ ನಡೆದುಕೊಂಡಾಗ ಗಂಡನ ಹೆತ್ತವರು ಸಮಾಧಾನದಿಂದ ಹೇಳಿದರೆ ಅದನ್ನು ಒಪ್ಪಿಕೊಂಡು ನಡೆದರೆ ಯಾವ ರೀತಿಯಲ್ಲೂ ತೊಂದರೆಯಾಗುವುದಿಲ್ಲ. ಏನಾದರೂ ಸೊಸೆಯಾದವಳು ನಾನು ಮಾಡುವುದೇ ಹೀಗೆ ನನಗೆ ಹೇಳಲು ನೀವ್ಯಾರು ಎಂದು ಉದ್ಧಟತನ ತೋರಿ ಅದನ್ನೇ ಮುಂದುವರೆಸಿದರೆ ಮಾತ್ರ ಮನೆಯಲ್ಲಿ ಭಿನ್ನಾಭಿಪ್ರಾಯ ಮೂಡಿ ಮಾತುಕತೆ ಕಡಿಮೆಯಾಗುತ್ತದೆ. ಇದರಿಂದ ಗಂಡನಿಗೆ ಏನು ಮಾಡಲು ತೋಚದೆ ಮೌನಕ್ಕೆ ಶರಣಾಗ ಬೇಕಾಗುತ್ತದೆ. ಆಗ ಮೊದಲಿನಂತೆ ಮಾತನಾಡುವುದಕ್ಕೆ ಹೋಗುವುದಿಲ್ಲ. ಹಂತ ಹಂತವಾಗಿ ಮಾತುಕತೆಗಳು ಕಡಿಮೆಯಾಗುತ್ತಾ ಹೋಗುತ್ತದೆ.
ಅತ್ತೆಯಾದವಳು ತನ್ನ ಸೊಸೆಯನ್ನು ಮಗಳಂತೆ ಪ್ರೀತಿಯಿಂದ ನೋಡಿಕೊಂಡು ಮಾತನಾಡುತ್ತಾ ಇದ್ದರೂ ಅದರಂತೆ ಸೊಸೆಯೂ ಸಹ ತನ್ನ ಅತ್ತೆಯನ್ನು ತಾಯಿಯಂತೆ ವಿಶ್ವಾಸ ಹೊಂದಿ ಜೀವನ ನಡೆಸಿಕೊಂಡು ಹೋಗುತ್ತಿದ್ದರು ಸಹ ಕೆಲವೊಮ್ಮೆ ಬೇರೆಯವರ ಮಾತಿಗೆ ಮರಳಾಗಿ ಅತ್ತೆ ಸೊಸೆಯಲ್ಲಿ ಭಿನ್ನಾಭಿಪ್ರಾಯ ಮೂಡುವಂತಾದರೆ ಇದರಿಂದ ಸೊಸೆ ಏನಾದರೂ ಅತ್ತೆಗೆ ವಿರುದ್ಧವಾಗಿ ನಡೆದುಕೊಂಡರೆ ಅಂದಿನಿಂದಲೇ ಅತ್ತೆ ಸೊಸೆ ಮಾತನಾಡುವುದು ಕಡಿಮೆಯಾಗುತ್ತಾ ಹೋಗಿ ಅಂತಿಮವಾಗಿ ಬೇರೆ ಮನೆ ಮಾಡುವಂತೆ ಗಂಡನಿಗೆ ಬಲವಂತ ಪಡಿಸಿ ಬೇರೆ ಮನೆ ಮಾಡಲು ಗಂಡನು ಒಪ್ಪದಿದ್ದರೆ ಸೊಸೆಯಾದವಳು ತವರು ಮನೆಗೆ ಹೋದರೆ ಅತ್ತೆ ಸೊಸೆ ನಡುವಣ ಮಾತುಗಳು ನಿಂತು ಹೋಗುತ್ತದೆ.
ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)