ನಿಂತು ಹೋಗುವ ಮಾತುಕತೆಗಳು – 10

ಮಕ್ಕಳು ಏನು ಮಾಡಿದರೂ ಶಿಕ್ಷಿಸದೆ ಎಲ್ಲರೂ ಪ್ರೀತಿ ತೋರುತ್ತಿದ್ದರೆ ಮಕ್ಕಳಿಗೆ ಆಡಿದ್ದೇ ಆಟ ಹೂಡಿದ್ದೇ ಲಗ್ಗೆ ಎಂಬಂತೆ ಆಗುತ್ತದೆ. ಅದಕ್ಕಾಗಿಯೇ ಹೆತ್ತವರಿಗೆ ಮಕ್ಕಳ ಮೇಲೆ ಒಂದು ಕಡೆ ಪ್ರೀತಿಯೂ ಇರಬೇಕು ಹಾಗೆಯೇ ಕೆಟ್ಟ ಕೆಲಸ ಮಾಡಿದರೆ ಅಥವಾ ದಾರಿ ತಪ್ಪಿ ನಡೆದರೆ ಶಿಕ್ಷೆಯೂ ನೀಡಬೇಕು ತಾಯಿ ಪ್ರೀತಿ ತೋರಿದರೆ ತಂದೆಯಾದವನು ಶಿಕ್ಷೆ ನೀಡಬೇಕು. ಅಥವಾ vise versa ಆಗಬಹುದು. ಅಂದರೆ ತಂದೆ ಪ್ರೀತಿ ತೋರಿದರೆ ತಾಯಿ ಶಿಕ್ಷಿಸುವಂತಾಗಬೇಕು ಇದು ಸಾಧ್ಯವಿಲ್ಲದ ಮಾತು. ಅದಕ್ಕಾಗಿಯೇ ತಾಯಿ ಪ್ರೀತಿಗಾದರೆ ತಂದೆ ಶಿಕ್ಷೆಗೆ ಎನ್ನುವುದು. ಮಕ್ಕಳಿಗೆ ಹೆತ್ತವರನ್ನು ಕಂಡರೆ ಪ್ರೀತಿ ಜೊತೆಗೆ ಸ್ವಲ್ಪ ಭಯವೂ ಇರುವಂತೆ ಮಾಡಬೇಕು.

RELATED ARTICLES  ಕಳೆದು ಹೋದ ಎಳೆಯ ದಿನಗಳು (ಭಾಗ 28)

ಶಿಕ್ಷೆ ನೀಡಬೇಕು ಎಂದರೆ ಮಕ್ಕಳನ್ನು ಹೊಡೆಯಬೇಕು ಎಂದೇನಿಲ್ಲ. ಚಿಕ್ಕ ಮಕ್ಕಳಾದರೆ ಹೊಡೆದು ಬುದ್ದಿ ಕಲಿಸಬಹುದು ದೊಡ್ಡವರಾದರೆ ಹೊಡೆಯಲು ಸಾಧ್ಯವಿಲ್ಲ. ಹೆತ್ತವರು ಸಾಕಷ್ಟು ಹೇಳಿದ ನಂತರ ಕೇಳದೇ ಇದ್ದಲ್ಲಿ ಮಾತ್ರ ಅವರಿಗೆ ಪ್ರೀತಿ ಪಾತ್ರರಿಂದ ಬುದ್ದಿವಾದ ಹೇಳಿಸಿ ಸರಿ ದಾರಿಗೆ ತರಬೇಕು. ಆಗ ಹೆತ್ತವರಿಗೂ ಮಕ್ಕಳಲ್ಲಿ ಮಾತು ಕಡಿಮೆಯಾಗುತ್ತಾ ಹೋಗುತ್ತದೆ.

ನಮ್ಮಯ ಮಕ್ಕಳೆಂದು ಏನು ಮಾಡಿದರೂ ಕೇಳದೆ ಇನ್ನೆಲ್ಲಿ ಶಿಕ್ಷಿಸಿದರೆ ಮಕ್ಕಳು ನೊಂದುಕೊಳ್ಳುತ್ತಾರೋ ಅಥವಾ ಮನೆ ಬಿಟ್ಟು ಹೋಗುತ್ತಾರೋ ಎಂಬ ತಪ್ಪು ತಿಳುವಳಿಕೆಯಿಂದ ಮಕ್ಕಳನ್ನು ಅವರು ಹೋಗುವ ದಾರಿಗೆ ಬಿಟ್ಟರೆ ಕೆಡುವುದು ಮಕ್ಕಳೇ. ನಂತರ ನೊಂದು ಕೊಳ್ಳುವುದು ಹೆತ್ತವರು ಮಾತ್ರ.

RELATED ARTICLES  ಯುಗದ ದಾರ್ಶನಿಕ ಸಂತ ಕವಿ ಕನಕದಾಸ

ಮಕ್ಕಳನ್ನು ಸರಿದಾರಿಗೆ ತರಲು ನಿಷ್ಠೂರವಾಗಿ ಮಾತನಾಡಿದರೆ ಅಂತಹ ಸನ್ನಿವೇಶದಲ್ಲಿ ಮಕ್ಕಳು ಹೆತ್ತವರ ಬಳಿ ಮಾತನಾಡುವುದು ಕಡಿಮೆ ಮಾಡಬಹುದು. ಆದರೆ ಬುದ್ದಿ ಮಾತ್ರ ಕಲಿಯುತ್ತಾರೆ.
ಆಗ ಯಾವ ಕೆಲಸ ಮಾಡಲು ಹೋದರೂ ಹೆತ್ತವರ ಬಗ್ಗೆ ಭಯ ಇರುತ್ತದೆ. ಯಾವುದಾದರೂ ಕೆಟ್ಟ ಕೆಲಸ ಮಾಡಲು ಸ್ನೇಹಿತರು ಪ್ರೇರೇಪಿಸಿದಾಗ ತಂದೆ ಅಥವಾ ತಾಯಿ ಬೈಯ್ಯುತ್ತಾರೆಂದು ಅವರ ಸಹಪಾಠಿಗಳಿಗೆ ಹೇಳಿ ಅವರನ್ನು ಸಹ ಒಳ್ಳೆಯ ಇವರ ದಾರಿಗೆ ತರಬಹುದು.

ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)