ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 11
ಈಗಿನ ಸನ್ನಿವೇಶದ ಸಂಸಾರಗಳಲ್ಲಿ ಹೆತ್ತವರು ಮತ್ತು ಮಕ್ಕಳಲ್ಲಿ ಎಷ್ಟೇ ಪ್ರೀತಿ ವಿಶ್ವಾಸಗಳಿದ್ದರೂ ಸಹ ಕೆಲಸದ ಆನ್ವೇಷಣೆ, ಕೆಲಸದ ಒತ್ತಡ, ಕೆಲಸ ಮಾಡುವ ಸ್ಥಳಗಳ ಕಾರಣಗಳಿಂದ ಹಾಗೂ ಈಗ ಮುಂದುವರೆದಿರುವ ಟೆಕ್ನಾಲಜಿಯ ವಾಟ್ಸಪ್ ಫೇಸ್ ಬುಕ್ ಅಂತರ್ಜಾಲಗಳ ಅನ್ವೇಷಣೆಯಿಂದ ಟಿವಿಗಳಿಂದ ಸಾಮಾನ್ಯವಾಗಿ ಎಲ್ಲಾ ಮಾತುಕತೆಗಳು ಮುಕ್ಕಾಲು ಭಾಗ ನಿಂತುಹೋಗಿವೆ ಎಂದು ಹೇಳಿದರೆ ತಪ್ಪಾಗಲಾರದು. ಮೊದಲಿಗೆ ಐಟಿ ಬಿಟಿ ಗಳು ಇರಲಿಲ್ಲ ಇಂಜಿನಿಯರಿಂಗ್ ಡಾಕ್ಟರ್ ವಕೀಲರುಗಳ ಶಿಕ್ಷಕ ಮತ್ತು ಅನೇಕ ವೃತ್ತಿಗಳಿದ್ಧರೂ ವೃತ್ತಿ ಇದ್ದರೂ ನಿಯಮಿತ ಅವಧಿಯಲ್ಲಿ ಕೆಲಸ ಮುಗಿಸಿ ಬೇರೆ ಯಾವುದೇ ಮನರಂಜನೆಯಾಗಲೀ ಅಥವಾ ಹೆಚ್ಚಾಗಿ ಬೇರೆ ಕೆಲಸವಾಗಲೀ ಇಲ್ಲದೇ ಇದ್ದುದ್ದರಿಂದ ಮನೆಗಳಲ್ಲಿ ಎಲ್ಲರೊಡನೆ ಒಡನಾಟ ಮಾತು ಕತೆಗಳು ನಡೆಸುತ್ತಾ ಕಾಲ ಕಳೆಯುತ್ತಿದ್ದರು ಆದರೆ ಈಗಿನ ಕಾಲವೇ ಬಹಳವಾಗಿಯೇ ಬದಲಾವಣೆಯಾಗಿ ಹೋಗಿದೆ ಇದಕ್ಕೆಲ್ಲಾ ಕಾರಣ ಮುಂದುವರೆದಿರುವ ಹೈ ಫೈ ಟೆಕ್ನಾಲಜಿ. ಸಂಚಾರ ದಟ್ಟಣೆ ಮತ್ತು ಇತರೆ ಕಾರಣಗಳಿಂದ ಮನೆಗಳಲ್ಲಿ ಮಾತುಕತೆಗಳು ಮುಕ್ಕಾಲು ಪಾಲು ನಿಂತು ಹೋಗಿದೆ ಎನ್ನಬಹುದು.
ಪಟ್ಟಣದ ಜನಗಳಲ್ಲಿ ಒಂದು ರೀತಿಯಲ್ಲಿ ಕಡಿಮೆಯಾಗಿದ್ದರೆ ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ನಗರ ಜೀವನದ ಪ್ರಭಾವದಿಂದ ನಿಂತು ಹೋಗಿವೆ ಎಂದರೆ ತಪ್ಪಾಗಲಾರದು.
ಇದರಲ್ಲಿ ಅತಿ ಮುಖ್ಯವಾಗಿ ಹೆತ್ತವರು ಮತ್ತು ಮಕ್ಕಳ ನಡುವಿನ ಮಾತುಕತೆಗಳು ಅನೇಕ ಕಾರಣಗಳಿಂದ ಕಡಿಮೆಯಾಗಿದೆ.
ಮೊದಲನೆಯದಾಗಿ ಕೆಲಸದ ಒತ್ತಡದ ಬಗ್ಗೆ ಹೇಳುವುದಾದರೆ ಮಕ್ಕಳಾಗಲೀ ಅಥವಾ ಹೆತ್ತವರಾಗಲೀ ನಗರಗಳಲ್ಲಿ ಮನೆಯಿಂದ ಕಛೇರಿ ತಲುಪಲು ಹರ ಸಾಹಸ ಪಡಬೇಕು. ಬೆಂಗಳೂರು ಅಥವಾ ಇತರೆ ಬೃಹತ್ ನಗರಗಳಿಗೆ ಹೋಲಿಸಿದರೆ ಇತರೆ ನಗರ ಪಟ್ಟಣ ಪ್ರದೇಶಗಳಲ್ಲಿ ಒತ್ತಡ ಸ್ವಲ್ಪ ಕಡಿಮೆ ಎನ್ನಬಹುದು. ಆದರೂ ಅವರದ್ದೇ ಆದ ಒತ್ತಡಗಳಿರುತ್ತದೆ.
ಏಕೆಂದರೆ ನಗರಗಳಲ್ಲಿರುವ ಕಛೇರಿಗಳಾಗಲೀ ಐಟಿ ಬಿಟಿ ಕಂಪನಿ ಇತರ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುವವರೆಲ್ಲರೂ ನಗರಗಳಲ್ಲಿಯೇ ವಾಸಮಾಡಲು ಸಾಧ್ಯವಿಲ್ಲ. ಕಾರಣ ಅತಿಯಾದ ಮನೆ ಬಾಡಿಗೆ, ಬಾಡಿಗೆ ಮನೆಗಳ ಕೊರತೆ ನಗರದಲ್ಲಿನ ಜೀವನ ಮಟ್ಟ ಹೀಗೆ ಅನೇಕ ಕಾರಣಗಳಿವೆ
ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)