ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 15
ಹೆತ್ತವರು ಮತ್ತು ಮಕ್ಕಳಲ್ಲಿನ ಮಾತುಕತೆಗಳು ಅನೇಕ ಸನ್ನಿವೇಶ ಮತ್ತು ಸಂದರ್ಭಗಳಿಗೆ ತಕ್ಕಂತೆ ದಿನ ಕ್ರಮೇಣ ಕಡಿಮೆಯಾಗುವ ಸಂದರ್ಭಗಳು ಇರುವಂತೆ ಮೊದಲಿನಿಂದ ಕಡೇವರೆವಿಗೂ ಒಂದೇ ರೀತಿ ಮಾತುಕತೆಗಳು ನಡೆದುಕೊಂಡು ಬಂದಿರುವ ಅನೇಕ ನಿದರ್ಶನಗಳುಂಟು. ಒಬ್ಬರು ಇನ್ನೊಬ್ಬರ ರೀತಿಯಲ್ಲಿ ಇರುವುದಿಲ್ಲ. ಹೆತ್ತವರಲ್ಲಿ ಪ್ರೀತಿ ವಿಶ್ವಾಸಗಳನ್ನು ಹೆತ್ತವರು ಇರುವವರೆಗೂ ಒಂದೇ ರೀತಿಯಲ್ಲಿ ಇಟ್ಟುಕೊಂಡಿರುವವರನ್ನೂ ನೋಡಿದ್ದೇವೆ.
ಅದೇರೀತಿ ಹೆತ್ತವರು ಸಹ ಮಕ್ಕಳ ಬಗ್ಗೆ ವಿಶ್ವಾಸ ಅಭಿಮಾನ ಕಡೇವರೆವಿಗೂ ಅಂದರೆ ಹೆತ್ತವರು ಇರುವವರೆಗೂ ಇಟ್ಟುಕೊಂಡಿರುವುದನ್ನು ನೋಡಿದ್ದೇವೆ. ಎಲ್ಲರೂ ಒಂದೇರೀತಿ ಇರುವುದಿಲ್ಲ. ಇಂತಹ ಪ್ರಕರಣಗಳು ಬಹುಶಃ ಕಡಿಮೆ ಇರಬಹುದು ಎನಿಸುತ್ತದೆ.
ಕೆಲವು ಸಂದರ್ಭ ಸನ್ನಿವೇಶಗಳಿಂದ ಒಳ್ಳೆಯವರಾಗಿರುವ ಮಕ್ಕಳು ಕೆಟ್ಟವರಂತೆ ಕಾಣಬಹುದು. ಆದರೆ ಅವರಿಗೆ ಹೆತ್ತವರ ಮೇಲಿನ ವಿಶ್ವಾಸ ಕಡಿಮೆಯಾಗಿರುವುದಿಲ್ಲ. ಕೆಲವೊಮ್ಮೆ ಪರಿಸ್ಥಿತಿಯ ಶಿಶುವಾಗಿ ಆ ರೀತಿ ವರ್ತಿಸಬಹುದು. ಯಾರಾದರೂ ಅನುಸರಿಸಿಕೊಂಡು ಹೋದರೆ ಸರಿಹೋಗಬಹುದು ಆದರೆ ಎಲ್ಲರಿಗೂ ತಮ್ಮದೇ ಆದ ವೈಯುಕ್ತಿಕ ಪ್ರತಿಷ್ಠೆ ಅಡ್ಡಬರುತ್ತದೆ. ಹೆತ್ತವರಿಗೆ ದೊಡ್ಡವರಾದ ನಾವು ನಮಗಿಂತ ಚಿಕ್ಕವರ ಮಾತನ್ನು ಏಕೆ ಕೇಳಬೇಕು? ಮಗನೇ ನಮ್ಮ ದಾರಿಗೆ ಬರಲಿ ಎಂಬ ಮನೋಭಾವ ಇದ್ದರೆ, ಚಿಕ್ಕವರ ಮನಸ್ಸಿನಲ್ಲಿ ಹೆತ್ತವರಿಗೆ ವಯಸ್ಸಾಗಿದೆ ನಮ್ಮ ಮಾತು ಕೇಳಿ ಆರಾಮವಾಗಿರಲಿ ಎಂಬ ಮನೋಭಾವವೂ ಇರುತ್ತದೆ. ಇಂತಹ ಸನ್ನಿವೇಶದಲ್ಲಿ ಯಾರಾದರೂ ಒಬ್ಬರು ಅನುಸರಿಸಿಕೊಂಡು ಹೋದರೂ ಸಂಸಾರಗಳಲ್ಲಿ ಮನಸ್ಥಾಪ ಇರುವುದಿಲ್ಲ. ಇದರಲ್ಲಿ ವೈಯುಕ್ತಿಕ ಪ್ರತಿಷ್ಠೆ ಬಂದರೆ ಮಾತ್ರ ಸಂಸಾರದಲ್ಲಿ ಏರುಪೇರಾಗಬಹುದು
ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)