*ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 17*

ಹೆತ್ತವರಿಗೂ ಮತ್ತು ಹೆಣ್ಣು ಮಕ್ಕಳಿಗೂ ಮನಸ್ಥಾಪ ಬಂದು ಮಾತು ನಿಲ್ಲಲು ಒಂದೊಂದು ಸಲ ಆಸ್ತಿಯ ವಿಚಾರವೂ ಆಗಿರಬಹುದು. ಹೆಣ್ಣು ಮಕ್ಕಳು ಹೆತ್ತವರ ಆಸ್ತಿಯ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಹೆತ್ತವರಿಗೆ ಮತ್ತು  ಜೀವನಾಧಾರವಾಗಿರುವ ಆಸ್ತಿ ನಮಗೆ ಬೇಡ ಎಂಬ ಉದಾರ ಹೃದಯ ಹೊಂದಿರಬಹುದು. ಹೆತ್ತವರಿಗೆ ಆಸ್ತಿ ಕಡಿಮೆ ಇದ್ದು ಸಹೋದರರು ಇದ್ದರೆ ಅವರೇ ಅನುಭವಿಸಿಕೊಂಡು ಹೋಗಲಿ ಎಂಬ ಮನೋಭಾವವೂ ಇರುತ್ತದೆ. ಅವರಿಗೂ ಗೊತ್ತು ನಮ್ಮನ್ನು ಬೆಳೆಸಿ, ಓದಿಸಿ ದೊಡ್ಡವರನ್ನಾಗಿ  ಮಾಡಿ ಕೈಮೀರಿ ಅದ್ದೂರಿಯಾಗಿ ಒಳ್ಳೆಯ ಮನೆಗೆ ವಿವಾಹ ಮಾಡಿಕೊಟ್ಟಿದ್ದಾರೆ ನಾವೇಕೆ ಅವರಲ್ಲಿ ಪಾಲು ಕೇಳಬೇಕೆಂದು ಸುಮ್ಮನಿರಬಹುದು. 

ಕೆಲವು ಸನ್ನಿ.ವೇಶಗಳಲ್ಲಿ ಹೆತ್ತವರೇ ಹೆಣ್ಣು ಮಕ್ಕಳಿಗೆಂದು ಸ್ವಲ್ಪ ಪಾಲು ನೀಡುತ್ತಾರೆ. ಹೆಣ್ಣು ಮಕ್ಕಳೇ ಇದ್ದರೆ ಇಂದಲ್ಲಾ ನಾಳೆ ಹೆತ್ತವರ ಆಸ್ತಿ ತಮಗೇ ಲಭಿಸುತ್ತದೆ ಎಂಬ ನಂಬಿಕೆಯಿಂದ ಹೆತ್ತವರು ಇರುವವರೆಗೂ ಅನುಭವಿಸಿಕೊಂಡು ಹೋಗಲಿ ಎಂದ ಸುಮ್ಮನಿರಬಹುದು. 

RELATED ARTICLES  ಕುಮಟಾದ ಅರಕ್ಷಕ ಬಂಧುಗಳಿಗೊಂದು ಹೆಮ್ಮೆಯ ನಮನ.

 ಆದರೂ ಕೆಲವು ಸಲ ಅನಿವಾರ್ಯ ಕಾರಣಗಳಿಂದ ಮನಸ್ಥಾಪ ಬರಬಹುದು. ಮಕ್ಕಳು ಹೆತ್ತವರ ವಿರೋಧದ ನಡುವೆ ವಿವಾಹವಾಗಿ ಆ ಗಂಡನು ಆರ್ಥಿಕ ಸಂಕಷ್ಟದಲ್ಲಿದ್ದರೆ ಹೆತ್ತವರ ಆಸ್ತಿಯಲ್ಲಿ ಪಾಲು ಕೇಳಬಹುದು. 

ಹೆಂಡತಿಯ ಹೆತ್ತವರು ಆಸ್ತಿ ಹೊಂದಿದ್ದರೂ ಅದರಲ್ಲಿ ಅಷ್ಟಾಗಿ ಹೆಣ್ಣು ಮಕ್ಕಳು ಪಾಲು ಕೇಳಲು ಬರುವುದಿಲ್ಲ. ತನ್ನ ವಿವಾಹಕ್ಕೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಖರ್ಚು ಮಾಡಿದ್ದಾರೆ. ಅವರೇ ಇಟ್ಟುಕೊಂಡು ಜೀವನ ಸಾಗಿಸಲಿ ಎಂಬ ಮನೋಭಾವ ಇದ್ದರೂ ಸಹ ಗಂಡನ ಮನೆಯವರು ಸುಮ್ಮನಿರದೆ ಹೆತ್ತವರ ಆಸ್ತಿಯಲ್ಲಿ ಪಾಲು ತರಬೇಕೆಂದು ಬಲವಂತ ಪಡಿಸಿ, ಹೆತ್ತವರನ್ನು ಕೇಳಬಹುದು.  ಹೆತ್ತವರು ಆ ಆಸ್ತಿಯ ಮೇಲೆ ಸಾಲ ಪಡೆದು ಸಾಲ ತಿರುವವರೆಗೂ ನೀಡುವುದಿಲ್ಲವೆಂದು ಕೊಡದೇ ಹೋದಾಗ  ಗಂಡನ ಮನೆ ಕಡೆಯವರು ಸುಮ್ಮನಿದ್ದರೆ ಎಲ್ಲವೂ ಸಮಾಧಾನವಾಗಿರುತ್ತದೆ ಆದರೆ ಹೆಂಡತಿಯ ಹೆತ್ತವರು ಆಸ್ತಿ ಕೊಡಲಿಲ್ಲವೆಂದು ಹಿಂಸೆ ನೀಡಲು ಶುರುಮಾಡಿದರೆ ಇದನ್ನು ನೋಡಲಾರದೆ ಮಗಳ ರಕ್ಷಣೆಗಾಗಿ ಅವರ ಹೆತ್ತವರು ಆಸ್ತಿಯಲ್ಲಿ ಪಾಲು ನೀಡಬಹುದು ಆಗ ಮಗಳಿಗೂ ಹೆತ್ತವರಿಗೂ ಮನಸ್ಥಾಪ ಇರುವುದಿಲ್ಲ. ಏಕೆಂದರೆ ಇದರಲ್ಲಿ ಮಗಳ ಪಾತ್ರ ಏನೂ ಇಲ್ಲವೆಂದು ತಿಳಿದಿರುತ್ತಾರೆ. ಈ ರೀತಿ ಬಲವಂತವಾಗಿ ಆಸ್ತಿಯಲ್ಲಿ ಪಾಲು ಪಡೆದ ಗಂಡನ ಕಡೆಯವರಿಗೂ ತನ್ನ ಹೆತ್ತವರಿಗೂ ಮನಸ್ಥಾಪ ಬಂದು ಬೀಗರ ನಡುವೆ ಮಾತು ನಿಲ್ಲಬಹುದು. ಜೊತೆಗೆ ಅಳಿಯನಾದವನಿಗೆ ಮೊದಲಿನಂತೆ ತನ್ನ ಹೆಂಡತಿಯ ಹೆತ್ತವರ ಬಳಿ ಮಾತನಾಡಲು ಆಗುವುದಿಲ್ಲ. ಮನಸ್ಸಿನಲ್ಲಿ ಒಂದು ರೀತಿಯ ಅಪರಾಧ ಮನೋಭಾವ ಬರಬಹುದು. ಆದರೆ ಹೆತ್ತವರಿಗೆ ತಮ್ಮ ಮಗಳಿಗೆ ಇನ್ನೆಲ್ಲಿ ತೊಂದರೆ ನೀಡುತ್ತಾರೋ ಎಂಬ ಅಂಜಿಕೆಯಿಂದ ಮನಸ್ಸಿಲ್ಲದಿದ್ದರೂ ಹತ್ತರಲ್ಲಿ ಒಂದು ಅಥವಾ ಎರಡು ಮಾತನಾಡಬಹುದು. 

RELATED ARTICLES  ನನಗಿಂತ ಕೆಡುಕರಿಲ್ಲ

ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)