ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 39
ಯಾರನ್ನೂ ಕೂಡ ನಂಬಿಸಿ ಮೋಸಮಾಡಬಾರದು. ತಿಳಿದೋ ತಿಳಿದದೆಯೋ ವಿಶ್ವಾಸದಿಂದ ಮಾತನಾಡಿಸಿ ಸ್ನೇಹಿತರೆಂದು ಪರಿಗಣಿಸಿ ಆಪ್ತ ಸ್ನೇಹಿತರೆಂದು ಅಥವಾ ಬಂದು ಬಳಗದೊಂದಿಗೆ ತನ್ನ ಮನಸ್ಸಿನ ಭಾರವನ್ನು ಕಡಿಮೆ ಮಾಡಿಕೊಳ್ಳಲು ತನ್ನ ಜೀವನದಲ್ಲಿನ ಕಷ್ಟ ಸುಖಗಳನ್ನು ಹೇಳಿಕೊಳ್ಳಲೇ ಬಾರದು. ಅಕಸ್ಮಾತ್ ಕೆಲವು ಆಪ್ತ ಸ್ನೇಹಿತರ ಜೊತೆ ಹೇಳಿಕೊಂಡರೂ ಪರವಾಗಿಲ್ಲ. ಆದರೆ ಸಂಬಂಧಗಳಲ್ಲಿ ಕಷ್ಟಗಳನ್ನು ಹೇಳಿಕೊಳ್ಳಬಾರದು. ಅಣ್ಣ ತಮ್ಮ ಅಕ್ಕ ತಂಗಿಯರ ಜೊತೆ ಹೇಳಿಕೊಂಡರೂ ಅವರಿಗಿಂತ ಸ್ವಲ್ಪ ದೂರಸಂಬಂಧಿಗಳ ಜೊತೆ ಹೇಳಿಕೊಳ್ಳದಿರುವುದೇ ಕ್ಷೇಮ ಎನಿಸುತ್ತದೆ. ಕೆಲವರು ಜೊತೆಯಾಗಿದ್ದರೆ ಅದನ್ನೇ ಬಂಡವಾಳ ಮಾಡಿಕೊಂಡು ನಂಬಿಸಿ ಮೋಸ ಮಾಡಬಹುದು. ಜೊತೆಗೆ ಬೆಲೆ ಕಡಿಮೆಯಾಗುತ್ತದೆ. ಬೆಲೆ ಇಲ್ಲದಂತೆ ಆಗುತ್ತದೆ
ಕೆಲವರು ಒಳ್ಳೆಯವರು ಇರಬಹುದು ತನ್ನ ಸ್ನೇಹಿತನ ಕಷ್ಟಕ್ಕೆ ಮರುಗಿ ಸಹಾಯ ಮಾಡಲೂಬಹುದು. ಆದರೆ ಇನ್ನೂ ಕೆಲವರು ತನ್ನ ಸ್ನೇಹಿತನ ಕಷ್ಟಗಳನ್ನು ಕೇಳಿ ಸುಮ್ಮನೇ ಇದ್ದರೂ ಸಹ ಒಂದು ರೀತಿಯ ಅನುಕೂಲಮಾಡಿದಂತೆ ಆಗುತ್ತದೆ. ಏಕೆಂದರೆ ಇನ್ನೊಬ್ಬರ ಬಳಿ ಕಷ್ಟ ಹೇಳಿಕೊಂಡಿದ್ದಕ್ಕೆ ಆತನ ಮನಸ್ಸು ಹಗುರವಾಗುತ್ತದೆ. ಆದರೆ ಕಷ್ಟವನ್ನು ಕೇಳಿ ಪರಿಹರಿಸುವುದರ ಬದಲಿಗೆ ಅವರು ಇನ್ನೊಬ್ಬರ ಮುಂದೆ ಹೇಳಿಕೊಂಡು ಅಪಹಾಸ್ಯ ಮಾಡಿದರೆ ಕಷ್ಟದಲ್ಲಿರುವವರ ಸ್ಥಿತಿ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತದೆ. ಆದ್ದರಿಂದ ಆದಷ್ಟೂ ಮನುಷ್ಯ ತನ್ನ ಕಷ್ಟವನ್ನು ಯಾರು ಪರಿಹರಿಸುತ್ತಾರೋ ಅವರ ಮುಂದೆ ಹತ್ತಾರು ಸಲ ಯೋಚಿಸಿ ಹೇಳಿದರೆ ಉತ್ತಮ.
ಎಷ್ಟೇ ವರ್ಷಗಳ ಹಳೆಯ ಸ್ನೇಹವಿದ್ದರೂ ನಂಬಿಕೆ ಹೋದರೆ ಅಲ್ಲಿಗೆ ಆ ಹಳೆಯ ಸ್ನೇಹ ಮುಗಿದಂತೆಯೇ ಆಗಿರುತ್ತದೆ. ದಿನಕಳೆದಂತೆ ಪರಸ್ಪರಲ್ಲಿ ಇರುವ ನಂಬಿಕೆ ಗಟ್ಟಿಯಾಗಲು ಪ್ರಯತ್ನಿಸಬೇಕು. ಆಗ ಮೊದಲಿಗಿಂತ ಹೆಚ್ಚು ವಿಶ್ವಾಸ ಮೂಡಿ ಒಳ್ಳೆಯ ಸ್ನೇಹಿತರಾಗಿರ ಬಹುದು. ನಂಬಿಕೆ ಹೊರಟುಹೋದರೆ ಎದುರಿಗೆ ಸಿಕ್ಕಾಗ ಮಾತನಾಡಿಸುವುದಿಲ್ಲ
ಸಂಬಂಧಗಳಲ್ಲಿ ನಂಬಿಕೆ ಮುಖ್ಯ. ಅನುಮಾನವು ಪತಿ ಪತ್ನಿಯರನ್ನೂ ಕೂಡ ಬೇರ್ಪಡಿಸಬಲ್ಲದು. ಇದಕ್ಕೆ ಹೆತ್ತವರು ಮಕ್ಕಳು ಅಥವಾ ಯಾವ ಸಂಬಂಧಗಳೇ ಇರಲಿ ಅನುಮಾನ ಬಂದಾಕ್ಷಣ ಯಾವ ಸಂಬಂಧಗಳೂ ಉಳಿಯುವುದಿಲ್ಲ. ಅನುಮಾನವು ನಂಬಿಕೆಯನ್ನೇ ಪ್ರಶ್ನಿಸುವಂತೆ ಇರುತ್ತದೆ.
ಎಲ್ಲರಲ್ಲೂ ಮಾತುಕತೆ ನಿಲ್ಲಲು ಬಹುಮುಖ್ಯ ಕಾರಣ ಅನುಮಾನವೆಂದರೆ ತಪ್ಪಾಗಲಾರದು.
ಒಂದು ಸಲ ಅನುಮಾನ ಬಂದರೆ ಕಡೇವರೆವಿಗೂ ಹೋಗುವುದಿಲ್ಲ
ಏನು ಕೆಲಸ ಮಾಡಿದರೂ ಅನುಮಾನದಿಂದಲೇ ನೋಡುವಂತಾಗುತ್ತದೆ (Guilty conscious fix the mind)
ಎನ್ ಮುರಳೀಧರ್ ವಕೀಲರು
ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)