ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 20

ಮಕ್ಕಳಿಗೆ ಸ್ವತಂತ್ರ ನೀಡುವುದರ ಜೊತೆಗೆ ಜೀವನದಲ್ಲಿ ಜವಾಬ್ದಾರಿ ಕಲಿಸಬೇಕು. ಇದನ್ನು ಉದಾಸೀನ ಮಾಡಬಾರದು. ಇನ್ನೂ ಚಿಕ್ಕವರು ಮುಂದೆ ಕಲಿಯುತ್ತಾರೆ ಈಗಿನಿಂದಲೇ ಜೀವನದ ಜವಾಬ್ದಾರಿ ಹೊತ್ತುಕೊಂಡರೆ ಬೇಸರಪಟ್ಟುಕೊಳ್ಳುತ್ತಾರೆ. ನಾವಿನ್ನೂ ಗಟ್ಟಿಯಾಗಿದ್ದೇವೆ.

ದೊಡ್ಡವರಾದ ಮೇಲೆ ಅವರೇ ಕಲಿಯುತ್ತಾರೆ ಸಂಸಾರದ ನೊಗ ಹೊತ್ತನಂತರ ಎಲ್ಲವೂ ತಾನಾಗಿಯೇ ಬರುತ್ತದೆ ಎಂಬ ಧೋರಣೆ ಹೊಂದಿ ಮಕ್ಕಳಿಗೆ ಯಾವುದೇ ಜವಾಬ್ದಾರಿ ಕೊಡದೆ ಮಕ್ಕಳು ಅವರಿಷ್ಟ ಬಂದಂತೆ ಬಿಟ್ಟರೆ ಬುದ್ದಿವಂತರಾದ ಮಕ್ಕಳು ಜವಾಬ್ದಾರಿ ಕಲಿಯಬಹುದು ಅಥವಾ ಕಲಿಯದೇ ಇರಬಹುದು.

ಹೆಣ್ಣು ಮಕ್ಕಳು ಜವಾಬ್ದಾರಿ ಕಲಿಯದಿದ್ದರೆ ಹೆತ್ತವರ ಮನೆಯಲ್ಲಿ ಚೆನ್ನಾಗಿರಬಹುದು. ಆದರೆ ಗಂಡನ ಮನೆಯಲ್ಲಿ ಹೊಂದಿಕೊಂಡು ಹೋಗಲು ಬಹಳವೇ ಕಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ. ಗಂಡನ ಮನೆಯವರು ಶ್ರೀಮಂತರಾಗಿದ್ದರೆ ಹೆತ್ತವರ ಮನೆಯಲ್ಲಿರುವಂತೆ ಇರಬಹುದು. ಏಕೆಂದರೆ ಕೆಲಸ ಮಾಡಲು ಕೆಲಸಗಾರರು ಇರುತ್ತಾರೆ. ಖರ್ಚು ಮಾಡಲು ಹೇರಳ ಹಣ ಇರುತ್ತದೆ. ಇದರಿಂದ ಸಂಸಾರದ ಕಷ್ಟಗಳು ಅಷ್ಟಾಗಿ ತಿಳಿಯುವುದಿಲ್ಲ. ಹಾಗೂ ತಿಳಿದುಕೊಳ್ಳಲು ಹೋಗುವುದಿಲ್ಲ.

RELATED ARTICLES  ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಮಕ್ಕಳಿಗೆ ಪರಿಸರ ಅಧ್ಯಯನ ಶಿಬಿರ

ಗಂಡನ ಮನೆಯವರೇನಾದರೂ ಮದ್ಯಮವರ್ಗದವರಾಗಿದ್ದು ಅಥವಾ ಆರ್ಥಿಕಸ್ಥಿತಿ ಉತ್ತಮವಾಗಿಲ್ಲದಿದ್ದರೆ ಬರುವ ಸಂಬಳದಲ್ಲಿ ಸಂಸಾರ ನಡೆಸಬೇಕಾಗಿದ್ದಲ್ಲಿ  ಹೆಂಡತಿಯಾದವಳು ಹೊಂದಿಕೊಂಡು ಹೋಗುವ ಸನ್ನಿವೇಶ ಬರುತ್ತದೆ. ರೀತಿಯ ಸನ್ನಿವೇಶ ಹಲವಾರು ಕಾರಣಗಳು ಇರಬಹುದು. ಪ್ರೇಮ ವಿವಾಹವಾದಲ್ಲಿ ಗಂಡಿನವರು ಸುಳ್ಳು ಹೇಳಿ ವಿವಾಹವಾಗಿದ್ದರೆ, ಅಥವಾ ವಿವಾಹವಾದಾಗ ಆರ್ಥಿಕ ಸ್ಥಿತಿ ಉತ್ತಮವಾಗಿದ್ದು ನಂತರದ ದಿನಗಳಲ್ಲಿ ನಷ್ಟಸಂಭವಿಸಿ ಆರ್ಥಿಕ ಕಷ್ಟಕ್ಕೆ ಸಿಲುಕಿದರೂ ಹಾಗೆಯೇ ಅನೇಕ ಕಾರಣಗಳಿಂದ ಗಂಡನು ಕಷ್ಟಕ್ಕೆ ಸಿಲುಕಿದ್ದರೆ ಅಂತಹ ಸಂದರ್ಭಗಳಲ್ಲಿ ಪತ್ನಿಯಾದವಳಿಗೆ ಹೊಂದಿಕೊಂಡು ಹೋಗಲು ಮನಸ್ಸಿಲ್ಲದೆ ಇದ್ದರೆ ಯಾವುದಾದರು ಕುಂಟು ನೆಪವೊಡ್ಡಿ ತವರು ಮನೆಗೆ ಮರಳಬಹುದು. 

ವಿವಾಹವಾದ ಮಗಳು ಇದ್ದಕ್ಕಿದ್ದಂತೆ ಹೆತ್ತವರ ಮನೆಗೆ ವಾಪಸ್ ಬಂದರೆ ಮೊದಲೆರಡು ದಿನ ಸುಮ್ಮನಿರಬಹುದು ಎಷ್ಟು ದಿನಗಳಾದರೂ ತವರಿಗೆ ಬಂದ ಮಗಳು ಗಂಡನ ಮನೆಗೆ ವಾಪಸ್ ಹೋಗದಿದ್ದರೆ ಹೆತ್ತವರಿಗೆ ಅನುಮಾನ ಬಂದು ನಿಜ ಕಾರಣ ಕೇಳಿದಾಗ ಆಘಾತಕ್ಕೆ ಒಳಗಾಗಬಹುದು. ಆದರೂ ಸಮಾಧಾನದಿಂದ ಹಿತನುಡಿಗಳನ್ನು ಹೇಳಿ ಸಂಸಾರದ ಕಷ್ಟಸುಖಗಳನ್ನು ಮನದಟ್ಟು ಮಾಡಿ ಪುನಃ ಗಂಡನ ಮನೆಗೆ ಹೋಗುವಂತೆ ಪ್ರೇರೇಪಿಸಬಹುದು. ಮಕ್ಕಳು ಹೆತ್ತವರು ಹೇಳಿದಂತೆ ಕೇಳಿ ಪುನಃ ಗಂಡನ ಮನೆಗೆ ಹೋಗಿ ಸಂಸಾರದಲ್ಲಿ ಹೊಂದಿಕೊಂಡು ಹೋದರೆ ಮಾತ್ರ ಬಂದ ಸಮಸ್ಯೆ ಸುಲಭವಾಗಿ ಬಗೆಹರಿಯುತ್ತದೆ. ಇದು ಏನಾದರೂ ವ್ಯತಿರಿಕ್ತವಾದರೆ ಮಕ್ಕಳ ಸಂಸಾರ ಸರಿಹೋಗುವುದಿಲ್ಲ. ಹೆತ್ತವರಿಗೆ ಬೇಸರವಾಗ ಮಾತನಾಡುವುದು ಕಡಿಮೆಯಾಗುತ್ತಾ ಹೋಗುತ್ತದೆ. ಮಕ್ಕಳಿಗೆ ಚಿಕ್ಕಂದಿನಿಂದಲೂ ಜವಾಬ್ದಾರಿ ಕಲಿಸದೇ ಇರುವ ಪ್ರತಿಫಲವೇ ಇದಾಗಿರುತ್ತದೆ. ಜವಾಬ್ದಾರಿ ತಿಳಿಯದ ಮಕ್ಕಳು ಸ್ವಲ್ಪ ಕಷ್ಟವಾದರೂ ಸಹಿಸಿಕೊಳ್ಳಲು ಆಗುವುದಿಲ್ಲ. 

RELATED ARTICLES  ರೈತರ ಬದುಕಿನ ನೈಜತೆಯ ಅನಾವರಣ "ವರ್ತಮಾನ"- ಕಿರು ಚಿತ್ರ

ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)